ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ BBMPಯಿಂದ 4 ವರ್ಷದಲ್ಲಿ 40 ಕೋಟಿ ರೂ. ಖರ್ಚು

| Updated By: ವಿವೇಕ ಬಿರಾದಾರ

Updated on: Sep 08, 2024 | 7:49 AM

ಬೆಂಗಳೂರಿನಲ್ಲಿ ಬೀದಿನಾಯಿಗಳ ಕಾಟ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಯಾವ ಏರಿಯಾಗೆ ಹೋದರು ಬೀದಿನಾಯಿಗಳು ಬೀಡುಬಿಟ್ಟಿರುವುದನ್ನು ಟಿವಿ9 ವಿಶೇಷ ಅಭಿಯಾನ ಬಯಲು ಮಾಡಿದೆ. ಇತ್ತ ಬೀದಿನಾಯಿಗಳನ್ನು ನಿಯಂತ್ರಣ ಮಾಡಬೇಕಿದ್ದ ಪಾಲಿಕೆ, ಬೀದಿನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆಯ ಹೆಸರಲ್ಲಿ ಕೋಟಿ ಕೋಟಿ ಬಿಲ್ ಮಾಡಿರುವುದು ಬಯಲಾಗಿದೆ.

ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ BBMPಯಿಂದ 4 ವರ್ಷದಲ್ಲಿ 40 ಕೋಟಿ ರೂ. ಖರ್ಚು
ಬಿಬಿಎಂಪಿ
Follow us on

ಬೆಂಗಳೂರು, ಸೆಪ್ಟೆಂಬರ್​ 08: ಬೆಂಗಳೂರು ನಗರದಲ್ಲಿ ಬೀದಿನಾಯಿಗಳ (stray dog) ಹಾವಳಿ ನಿಯಂತ್ರಿಸುವ ನಿಟ್ಟಿನಲ್ಲಿ ಬೃಹತ್​​ ಬೆಂಗಳೂರು ಮಹಾನಗರ ಪಾಲೀಕೆ (BBMP) ನಾಲ್ಕು ವರ್ಷದಲ್ಲಿ ಬರೊಬ್ಬರಿ 40 ಕೋಟಿ ರೂ. ಖರ್ಚು ಮಾಡಿದೆ. ಬೀದಿನಾಯಿಗಳ ಹಾವಳಿ ನಿಯಂತ್ರಣಕ್ಕಾಗಿ ಕೋಟಿ ಕೋಟಿ ಹಣ ಲೆಕ್ಕ ನೀಡಿದರೂ, ಬೀದಿನಾಯಿಗಳು ಮಾತ್ರ ನಗರದಲ್ಲಿ ಕಡಿಮೆಯಾಗಿಲ್ಲ. ಹೀಗಾಗಿ, ಪಾಲಿಕೆ ತೋರಿಸಿರುವ ಲೆಕ್ಕ ಸುಳ್ಳು ಎಂಬ ಆರೋಪ ಕೇಳಿಬಂದಿದೆ.

ರಾಜಧಾನಿಯಲ್ಲಿ ಬೀದಿನಾಯಿಗಳ ಕಾಟ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಯಾವ ಏರಿಯಾಗೆ ಹೋದರು ಬೀದಿನಾಯಿಗಳು ಬೀಡುಬಿಟ್ಟಿರುವುದನ್ನು ಟಿವಿ9 ವಿಶೇಷ ಅಭಿಯಾನ ಬಯಲು ಮಾಡಿದೆ. ಇತ್ತ ಬೀದಿನಾಯಿಗಳನ್ನು ನಿಯಂತ್ರಣ ಮಾಡಬೇಕಿದ್ದ ಪಾಲಿಕೆ, ಬೀದಿನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆಯ ಹೆಸರಲ್ಲಿ ಕೋಟಿ ಕೋಟಿ ಬಿಲ್ ಮಾಡಿರುವುದು ಬಯಲಾಗಿದೆ.

ಕಳೆದ ನಾಲ್ಕು ವರ್ಷಗಳಲ್ಲಿ ಬೀದಿನಾಯಿಗಳನ್ನ ನಿಯಂತ್ರಣ ಮಾಡಲು ಬಿಬಿಎಂಪಿಯಿಂದ ಬರೋಬ್ಬರಿ 40 ಕೋಟಿ ಖರ್ಚಾಗಿದ್ದು, ಇತ್ತ ಬೀದಿನಾಯಿಗಳ ಸಂಖ್ಯೆ ಮಾತ್ರ ಇಳಿಕೆಯಾಗದಿರುವುದು ಹಲವು ಅನುಮಾನ ಹುಟ್ಟುಹಾಕಿದೆ.

ಇದನ್ನೂ ಓದಿ: ನಾಯಿಗಳ ದಾಳಿ: ಕರ್ನಾಟಕದಲ್ಲಿ ಈವರೆಗೂ 12ಕ್ಕೂ ಹೆಚ್ಚು ಜನರು ರೇಬಿಸ್​ಗೆ ಬಲಿ!

ಪಾಲಿಕೆ ನಡೆಗೆ ಪ್ರಾಣಿ ದಯಾ ಸಂಘ ಆಕ್ರೋಶ ಹೊರಹಾಕಿದೆ. ಬಿಬಿಎಂಪಿ ಬೀದಿನಾಯಿಗಳ ಹೆಸರಲ್ಲಿ ದಂಧೆ ಮಾಡುತ್ತಿದೆ. ಬೀದಿನಾಯಿಗಳ ಹಾವಳಿಯನ್ನು ನಿಯಂತ್ರಣ ಮಾಡುವ ನೆಪದಲ್ಲಿ ಕೋಟಿ ಕೋಟಿ ಲೂಟಿ ಮಾಡುತ್ತಿದೆ ಅಂತ ಗಂಭೀರ ಆರೋ-ಪ ಮಾಡಿದೆ.

ಸದ್ಯ ಬೀದಿನಾಯಿಗಳ ಎಬಿಸಿ ಚಿಕಿತ್ಸೆ ಹೆಸರಲ್ಲಿ ಇದುವರೆಗೆ ಹಂತ ಹಂತವಾಗಿ 40 ಕೋಟಿ ಹಣ ಖರ್ಚು ಮಾಡಲಾಗಿದೆ. ಬೀದಿನಾಯಿಗಳ ನಿಯಂತ್ರಣ ಆಗಿದೆಯಾ ಎಂಬುವುದನ್ನು ಪರಿಶೀಲಿಸದೇ ಪಾಲಿಕೆ ನಿದ್ದೆಗೆ ಜಾರಿದೆ. ಇದುವರೆಗೆ ಬೀದಿನಾಯಿಗಳ ಹೆಸರಲ್ಲಿ ಪಾಲಿಕೆ ಖರ್ಚು ಮಾಡಿರುವ ಹಣದ ಲೆಕ್ಕ ಇಲ್ಲಿದೆ.

  • 2019-20ರ ಸಾಲಿನಲ್ಲಿ 4,71,09,664 ಕೋಟಿ ರೂ.
  • 2020-21ರ ಸಾಲಿನಲ್ಲಿ 6,42,42,550 ಕೋಟಿ ರೂ.
  • 2021-22ರ ಸಾಲಿನಲ್ಲಿ 8,64,94,860 ಕೋಟಿ ರೂ.
  • 2022-23ರ ಸಾಲಿನಲ್ಲಿ 8,33,94,780 ಕೋಟಿ ರೂ.
  • 2023-24ರ ಸಾಲಿನಲ್ಲಿ 9,05,55,985 ಕೋಟಿ ರೂ.
  • 2024-25ನೇ ಸಾಲಿನ ಏಪ್ರಿಲ್​ನಿಂದ ಜುಲೈವರೆಗೆ 2,64,46,935 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದು ಬಿಬಿಎಂಪಿ ಲೆಕ್ಕ ನೀಡಿದೆ.

ಸದ್ಯ ಬಿಬಿಎಂಪಿ ಕೋಟಿ ಕೋಟಿ ವೆಚ್ಚದಲ್ಲಿ ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆ ಲೆಕ್ಕ ತೋರಿಸಿದರೇ, ಇತ್ತ ರಾಜಧಾನಿಯ ಗಲ್ಲಿ ಗಲ್ಲಿಯಲ್ಲೂ ಬೀದಿನಾಯಿಗಳ ಹಿಂಡು ಕಂಡುಬರುತ್ತಿರುವುದು ಹಲವು ಪ್ರಶ್ನೆ ಹುಟ್ಟುಹಾಕಿದೆ. ಕೋಟಿ ಕೋಟಿ ಖರ್ಚು ಮಾಡಿದರೂ ನಾಯಿಗಳ ಹಾವಳಿ ನಿಯಂತ್ರಣ ಯಾಕೆ ಆಗಿಲ್ಲ ಎಂಬ ಪ್ರಶ್ನೆಗೆ ಪಾಲಿಕೆ ಏನು ಉತ್ತರ ನೀಡುತ್ತೆ ಎಂಬುವುದನ್ನು ಕಾದುನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ