ಬೆಂಗಳೂರು: ನಗರದಲ್ಲಿ ಸಾರ್ವಜನಿಕ ಶೌಚಾಲಯಗಳ ಕೊರತೆ ಹಿನ್ನೆಲೆಯಲ್ಲಿ ಕರ್ನಾಟಕ ಹೈಕೋರ್ಟ್ ಲೆಟ್ಜ್ ಕಿಟ್ ಫೌಂಡೇಶನ್ ಸಲ್ಲಿಸಿದ್ದ ಪಿಐಎಲ್ ವಿಚಾರಣೆಯನ್ನು ನಡೆಸಿತ್ತು. ಇದೀಗ, ಹೈಕೋರ್ಟ್ ನಿರ್ದೇಶನದ ನಂತರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆ ಬಗ್ಗೆ ಕ್ರಮ ಕೈಗೊಂಡಿದೆ. 25 ಶೌಚಾಲಯ ನಿರ್ಮಾಣ ಕಾಮಗಾರಿ ಆರಂಭಿಸಲಾಗಿದೆ. ಇನ್ನೂ 55 ಶೌಚಾಲಯ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ. ಈ ಬಗ್ಗೆ, ಹೈಕೋರ್ಟ್ಗೆ ಬಿಬಿಎಂಪಿ ಪರ ವಕೀಲ ಶ್ರೀನಿಧಿ ಹೇಳಿಕೆ ನೀಡಿದ್ದಾರೆ.
ಬೇರೆ ನಗರಕ್ಕೆ ಹೋಲಿಸಿದರೆ ಬೆಂಗಳೂರಲ್ಲಿ ಶೌಚಾಲಯ ಕಡಿಮೆ ಇದೆ. ಇರುವ ಶೌಚಾಲಯಗಳ ನಿರ್ವಹಣೆಯೂ ಉತ್ತಮವಾಗಿಲ್ಲ ಎಂದು ಲೋಕಲ್ ಸೆಲ್ಫ್ ಗವರ್ನೆನ್ಸ್ ಸಂಸ್ಥೆ ವರದಿಯಲ್ಲಿ ಉಲ್ಲೇಖ ಆಗಿತ್ತು. ಶೌಚಾಲಯ ನಿರ್ಮಾಣದ ಬಗ್ಗೆ ಮತ್ತಷ್ಟು ನಿರ್ದೇಶನ ಅಗತ್ಯ, ಮುಂಬೈ ಹೈಕೋರ್ಟ್ ತೀರ್ಪು ಆಧರಿಸಿ ನಿರ್ದೇಶನ ಅಗತ್ಯ ಎಂದು ಹೈಕೋರ್ಟ್ ವಿಭಾಗೀಯ ಪೀಠ ಅಭಿಪ್ರಾಯ ವ್ಯಕ್ತಪಡಿಸಿತ್ತು.
ಇದನ್ನೂ ಓದಿ: ಕರ್ನಾಟಕದ ಕೆಲವು ಬಿಜೆಪಿ ಸಚಿವರಿಗೆ ಹೊಸ ಸಂಕಷ್ಟ; ಕ್ರಿಮಿನಲ್ ಕೇಸ್ ರದ್ದುಪಡಿಸಲು ಸಾಧ್ಯವಿಲ್ಲ ಎಂದ ಹೈಕೋರ್ಟ್
(BBMP to build 25 new Toilets in Bengaluru calls tender for 55 new Toilets after High Court Order)