ಬೆಂಗಳೂರು, ಆಗಸ್ಟ್.10: ರಾಜಧಾನಿಯಲ್ಲಿ ಸಾವಿರದ ಗಡಿದಾಟಿ ಡೆಂಗ್ಯೂ (Dengue) ಪ್ರಕರಣ ಮುನ್ನುಗುತ್ತಿದೆ. ಅತ್ತ ಡೆಂಗ್ಯೂ ಕಂಟ್ರೋಲ್ಗೆ ಹಲವು ಸರ್ಕಸ್ ಮಾಡಿ ಸುಸ್ತಾದ ಪಾಲಿಕೆ(BBMP), ಇದೀಗ ಕೇಂದ್ರ ಆರೋಗ್ಯ ಸಚಿವಾಲಯದ ಸೂಚನೆಯಂತೆ ಮುಂಬೈ ಮಾದರಿಯಲ್ಲಿ ಸೊಳ್ಳೆಗಳ ಕಂಟ್ರೋಲ್ ಗೆ ಪ್ಲಾನ್ ಮಾಡಿದೆ. ಇಕೋ ಬಯೋ ಟ್ರ್ಯಾಪ್ ಸಾಧನ ಅಳವಡಿಕೆಗೆ ಸಜ್ಜಾಗಿದೆ. ಮುಂಬೈನ ಧಾರವಿ ಸ್ಲಂನಲ್ಲಿ ಅಳವಡಿಸಿರೋ ಈ ಟೆಕ್ನಾಲಜಿ ಬಳಕೆಗೆ ಪ್ಲಾನ್ ಮಾಡಿರೊ ಪಾಲಿಕೆ ಆ ಮೂಲಕ ಡೆಂಗ್ಯೂ ಕಂಟ್ರೊಲ್ ಗೆ ಪ್ಲಾನ್ ಮಾಡಿದೆ.
ಇನ್ನು ಹೂವಿನ ಕುಂಡದ ಮಾದರಿಯಲ್ಲಿರೋ ಈ ಸಾಧನದಲ್ಲಿ ರಾಸಾಯನಿಕ ಮಿಶ್ರಣ ಹಾಕೋ ಮೂಲಕ ಸೊಳ್ಳೆಗಳನ್ನ ಟ್ರ್ಯಾಪ್ ಮಾಡೋ ಪ್ಲಾನ್ ಮಾಡಿರೋ ಪಾಲಿಕೆ, ಡೆಂಗ್ಯೂ ಹಾಟ್ ಸ್ಪಾಟ್ ಏರಿಯಾಗಳಲ್ಲಿ ಪ್ರತಿ 400 ಚದರ ಅಡಿಗೆ ಒಂದು ಬಯೋ ಟ್ರ್ಯಾಪ್ ಅಳವಡಿಸಿ ಸೊಳ್ಳೆಗಳ ಕಂಟ್ರೋಲ್ ಗೆ ಪ್ಲಾನ್ ಮಾಡಿದೆ. ಸದ್ಯ ಈ ಸಾಧನಕ್ಕೆ ತಲಾ 400 ರೂಪಾಯಿ ವೆಚ್ಚ ಬೀಳಲಿದ್ದು, ಆಡುಗೋಡಿ ಸುತ್ತಮುತ್ತ ಪ್ರಯೋಗ ನಡೆಸೋಕೆ ಪಾಲಿಕೆ ಪ್ಲಾನ್ ಮಾಡಿದೆ.
ಇದನ್ನೂ ಓದಿ: ಚಿಕನ್ ಕರಿ ಹೇಳಿದ ಗಂಡನ ಮೆದುಳು ಹೊರಬರುವಂತೆ ಇಟ್ಟಿಗೆಯಿಂದ ಹೊಡೆದು ಕೊಂದ ಪತ್ನಿ
ಸದ್ಯ ಮುಂಬೈನಲ್ಲಿ ಈ ತಂತ್ರದ ಮೂಲಕ ಅತಿ ದೊಡ್ಡ ಸ್ಲಂನಲ್ಲೇ ಡೆಂಗ್ಯೂ ಕಂಟ್ರೋಲ್ ಮಾಡಿದ್ದು, ಇದೀಗ ಈ ಟೆಕ್ನಾಲಜಿ ಮೂಲಕ ಸಿಲಿಕಾನ್ ಸಿಟಿಯಲ್ಲೂ ಡೆಂಗ್ಯೂ ಕಂಟ್ರೋಲ್ಗೆ ತಯಾರಿ ನಡೆಯುತಿದೆ.
ಸದ್ಯ ಬೆಂಗಳೂರಲ್ಲಿ ಎರಡು ಹಾಗೂ ಅದಕ್ಕಿಂತ ಹೆಚ್ಚಿನ ಸಂಖ್ಯೆಯ ಡೆಂಗ್ಯೂ ಪ್ರಕರಣ ಒಂದೇ ಸ್ಥಳದಲ್ಲಿ ಪತ್ತೆಯಾದರೆ ಅದನ್ನು ಡೆಂಗ್ಯೂ ಹಾಟ್ ಸ್ಪಾಟ್ ಎಂದು ಗುರುತಿಸಲಾಗುತ್ತಿದೆ. ಈ ರೀತಿ ನಗರದಲ್ಲಿ ಬರೋಬ್ಬರಿ 25 ಡೆಂಗ್ಯೂ ಹಾಟ್ ಸ್ಪಾಟ್‌ಗಳನ್ನು ಬಿಬಿಎಂಪಿ ಆರೋಗ್ಯಾಧಿಕಾರಿಗಳು ಗುರುತಿಸಿದ್ದಾರೆ. ಈ ಪೈಕಿ ಮಹದೇವಪುರ ವಲಯದಲ್ಲಿಯೇ ಅತಿ ಹೆಚ್ಚು 11 ಹಾಟ್‌ಸ್ಪಾಟ್ ಪತ್ತೆಯಾಗಿವೆ. ಇದೀಗ ಮುಂಬೈನ ಈ ಟೆಕ್ನಾಲಜಿ ಬಳಕೆಗೆ ಚಿಂತನೆ ನಡೀತಿದ್ದು, ಇದು ಎಷ್ಟರ ಮಟ್ಟಿಗೆ ವರ್ಕ್ ಔಟ್ ಆಗುತ್ತೆ ಅನ್ನೋದನ್ನ ಕಾದುನೋಡಬೇಕಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಕಿಕ್ ಮಾಡಿ