ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ಹಿಂಸಾಚಾರ ಖಂಡಿಸಿ ಬೀದಿಗಿಳಿದ ಕರ್ನಾಟಕದ ಜನತೆ: ಸೂಕ್ತ ಕ್ರಮಕ್ಕೆ ಆಗ್ರಹ
ಬಾಂಗ್ಲಾದೇಶದಲ್ಲಿ ಮೀಸಲಾತಿ ಕಿಚ್ಚು ಅಶಾಂತಿ ಸೃಷ್ಟಿಯಾಗಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಇದ್ರ ರಾಜಕೀಯ ಅರಾಜಕತೆ ನಿರ್ಮಾಣವಾಗಿದೆ. ಈ ಮಧ್ಯೆ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಹಿಂಸಾಚಾರ ನಡೆಯುತ್ತಿವೆ. ಹಿಂದೂಗಳಿಗೆ ಸಂಬಂಧಿಸಿದ ಆಸ್ತಿ ಪಾಸ್ತಿಗಳು ಸಾಕಷ್ಟು ಹಾನಿಯಾಗಿವೆ. ಸಾಕಷ್ಟು ಹಿಂದೂಗಳಿಗೂ ತೊಂದರೆಯಾಗುತ್ತಿದೆ. ಸದ್ಯ ಇದನ್ನು ಖಂಡಿಸಿ ಇತ್ತ ಕರ್ನಾಟಕದಲ್ಲಿ ಪ್ರತಿಭಟನೆ ಮಾಡಲಾಗುತ್ತಿದೆ.
ಬೆಂಗಳೂರು, ಆಗಸ್ಟ್ 10: ನೆರೆಯ ಬಾಂಗ್ಲಾದಲ್ಲಿ (Bangladesh) ಮೀಸಲಾತಿ ಹೋರಾಟವೂ ರಾಜಕೀಯ ಅರಾಜಕತೆಯನ್ನೇ ಸೃಷ್ಟಿಸಿದೆ. ಕೆಳದೆರಡು ದಿನಗಳಲ್ಲಿ ಪ್ರತಿಭಟನಾಕಾರರು (protest) ದಾಂಧಲೆ ಮಾಡುತ್ತಿದ್ದಾರೆ. ಅಮಾಯಕರು ಜೀವ ಉಳಿಸಿಕೊಂಡರೆ ಸಾಕು ಅಂತಾ ಓಡಿ ಹೋಗುತ್ತಿದ್ದಾರೆ. ಇದರ ಮಧ್ಯೆ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಕೂಡ ಹಿಂಸಾಚಾರ ನಡೆಯುತ್ತಿದೆ. ಪ್ರಧಾನಿ ಶೇರ್ ಹಸೀನಾ ರಾಜೀನಾಮೆ ಬೆನ್ನಲ್ಲೇ ಹಿಂಸಾಚಾರ ಹೆಚ್ಚಾಗಿದ್ದು, ದೇಶದ ಹಲವು ಭಾಗಗಳಲ್ಲಿ ಹಿಂದೂಗಳು, ಅವರಿಗೆ ಸೇರಿದ ಆಸ್ತಿ ಹಾಗೂ ದೇಗುಲಗಳನ್ನು ಧ್ವಂಸಗೊಳಿಸಲಾಗಿದೆ. ಸದ್ಯ ಈ ಹಿಂಸಾಚಾರವನ್ನು ಖಂಡಿಸಿ ಇತ್ತ ಕರ್ನಾಟಕದಲ್ಲಿ ಪ್ರತಿಭಟನೆ ಮಾಡಲಾಗಿದೆ.
ಬಾಂಗ್ಲಾದೇಶದಲ್ಲಿ ಹಿಂದೂಗಳ ವಿರುದ್ಧದ ಕ್ರೂರ ಹಿಂಸಾಚಾರವನ್ನು ಬಲವಾಗಿ ಖಂಡಿಸುವ ಮೂಲಕ ನಾಗರಿಕರು ಬೆಂಗಳೂರಿನ ವಿವಿಧ ಸ್ಥಳಗಳಲ್ಲಿ ಪ್ರತಿಭಟನೆ ಮಾಡಿದ್ದಾರೆ. ನೆಲಮಂಗಲದಲ್ಲಿ ಹಿಂದೂ ಜಾಗೃತ ಸಂಘಟನೆ ಹಾಗೂ ಕೆಲ ಆರ್ಎಸ್ಎಸ್ ಮುಖಂಡರಿಂದ ಪ್ರತಿಭಟನೆ ಮಾಡಲಾಗಿದೆ. ದೊಣ್ಣೆ, ಮಚ್ಚು ಹಿಡಿದುಕೊಂಡು ಆತ್ಮರಕ್ಷಣೆಗೆ ನಿಂತ ಹಿಂದೂಗಳ ನೆರವಿಗೆ ಕೇಂದ್ರ ಸರ್ಕಾರ ಮುಂದಾಗಬೇಕು.
Expressing Solidarity with Hindus in Bangladesh and strongly condemning brutal violence against Hindus in Bangladesh, Citizens staged demonstrations at various places in Bengaluru. #HindusUnderAttackInBangladesh pic.twitter.com/j898so6BDp
— Rajesh Padmar (@rajeshpadmar) August 10, 2024
ಜನಾಂಗೀಯ ಹಿಂಸಾಚಾರ ಸಹಿಸಲ್ಲ ಎಂದ ವಿಶ್ವಸಂಸ್ಥೆಯ ಬಗ್ಗೆಯೂ ದಂಗೆ ಕೋರರು ಡೊಂಟ್ ಕೇರ್ ಎನ್ನುತ್ತಿದ್ದಾರೆ. ಬಾಂಗ್ಲಾದೇಶದಲ್ಲಿ ದೇಶಾದ್ಯಂತ ವ್ಯಾಪಕ ಲೂಟಿ ಮತ್ತು ಗಲಭೆಯಾಗಿ ಮಾರ್ಪಟ್ಟಿದೆ. ಅಲ್ಪಸಂಖ್ಯಾತ ಸಮುದಾಯ, ಮುಖ್ಯವಾಗಿ ಹಿಂದೂಗಳು ದಾಳಿಗೆ ಒಳಗಾಗಿದ್ದಾರೆ. ಶೇಖ್ ಹಸೀನಾ ಭಾರತಕ್ಕೆ ಬಂದಿದ್ದಾರೆ. ನಾವುಗಳು ಅವರಿಗೆ ರಕ್ಷಣೆ ಕೊಟ್ಟಿದ್ದೇವೆ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.
ಭಾರತದೊಳಗೆ ನುಸುಳುಕೋರರು ಬರುವ ಸಾಧ್ಯತೆ ಇದೆ: ಎಂ.ಬಿ ಪುರಾಣಿಕ್
ಮಂಗಳೂರಿನಲ್ಲಿ ಕೂಡ ಪ್ರತಿಭಟನೆ ಮಾಡಲಾಗಿದೆ. ವಿ.ಎಚ್.ಪಿ ಕರ್ನಾಟಕ ಪ್ರಾಂತ ಕಾರ್ಯಧ್ಯಕ್ಷ ಡಾ ಎಂ.ಬಿ ಪುರಾಣಿಕ್ ಪ್ರತಿಕ್ರಿಯಿಸಿದ್ದು, ಹಿಂದೂಗಳಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ವಿಶ್ವ ಹಿಂದೂ ಪರಿಷತ್ ಒತ್ತಾಯಿಸಿದೆ. ಬಾಂಗ್ಲಾದಲ್ಲಿರುವ ಹಿಂದೂ ಅಲ್ಪಸಂಖ್ಯಾತರ ರಕ್ಷಣೆ ಮಾಡಬೇಕಾಗಿದೆ. ಜಿಹಾದಿ ಶಕ್ತಿಗಳು ಪ್ರಚೋದನಗೆ ಒಳಗಾಗಿದೆ. ಬಾಂಗ್ಲಾದೇಶ ಮತ್ತು ಭಾರತ ಸುದೀರ್ಘ ಗಡಿ ಹೊಂದಿದೆ. ಗಡಿ ಮೂಲಕ ಭಾರತದೊಳಗೆ ನುಸುಳಿ ತೊಂದರೆಯಾಗಬಹುದು ಎಂದಿದ್ದಾರೆ.
ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ಮುಂದಿನ ಸೂಚನೆ ಬರುವವರೆಗೆ ವೀಸಾ ಕೇಂದ್ರ ಮುಚ್ಚಿದ ಭಾರತ
ಬಾಂಗ್ಲಾದಲ್ಲಿ 32% ಹಿಂದೂಗಳ ಸಂಖ್ಯೆ 8% ಕ್ಕೆ ಕುಸಿದಿದೆ. ಹಿಂದೂಗಳನ್ನು ಜಿಹಾದಿಗಳು ಟಾರ್ಗೆಟ್ ಮಾಡ್ತಿದ್ದಾರೆ. 100ಕ್ಕೂ ಹೆಚ್ಚು ದೇವಸ್ಥಾನಗಳನ್ನು ಧ್ವಂಸ ಮಾಡಿದ್ದಾರೆ. ಹಿಂದೂ ಕುಟುಂಬಗಳು ಅಭದ್ರತೆಯ ಸ್ಥಿತಿಯಲ್ಲಿದ್ದಾರೆ. ವಿಶ್ವ ಹಿಂದೂ ಪರಿಷತ್ ಇದನ್ನು ಕೈಕಟ್ಟಿ ಕುಳಿತು ನೋಡುವುದಿಲ್ಲ. ಕೇಂದ್ರ ಸರ್ಕಾರ ಅಲ್ಲಿರುವ ಹಿಂದೂಗಳಿಗೆ ತೊಂದರೆಯಾಗದಂತಹ ಕ್ರಮ ಕೈಗೊಳ್ಳಬೇಕು. ಭಾರತದೊಳಗೆ ನುಸುಳುಕೋರರು ಬರುವ ಸಾಧ್ಯತೆ ಇದೆ. ಸರ್ಕಾರ ಎಚ್ಚೆತ್ತು ಇದಕ್ಕೆ ತಡೆ ಹಾಕಬೇಕು ಎಂದು ಆಗ್ರಹಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.