ಬೆಂಗಳೂರು, ಜುಲೈ.22: ಕೆಆರ್‌ಎಸ್ ಡ್ಯಾಂ (KRS Dam) ತುಂಬಿ 123 ಅಡಿಗೇರಿದೆ. ಒಂದು ಅಡಿ ನೀರು ಬಂದ್ರೂ ರಾಜ್ಯದ ಹೆಮ್ಮೆಯ ಕೃಷ್ಣರಾಜ ಸಾಗರ ಜಲಾಶಯ ಸಂಪೂರ್ಣ ಭರ್ತಿಯಾಗಲಿದೆ. ಜುಲೈ 27ಕ್ಕೆ ಕಾವೇರಿಗೆ ಸಿಎಂ ಸಿದ್ದರಾಮಯ್ಯ (Siddaramaiah) ಬಾಗಿನ ಅರ್ಪಿಸಲಿದ್ದಾರೆ. ಹೀಗಾಗಿ ಇವತ್ತು ಆ ಕಾರ್ಯಕ್ರಮದ ಸಿದ್ಧತೆಯನ್ನ ಜಲಸಂಪನ್ಮೂಲ ಸಚಿವ DK ಶಿವಕುಮಾರ್ ಪರಿಶೀಲಿಸಿದರು. ಇನ್ನು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಕೆಆರ್‌ಎಸ್ ಡ್ಯಾಂಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಗ್ಗೆ ದೆಹಲಿಯಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ವ್ಯಂಗ್ಯವಾಡಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್ ಅವರಿಂದಲೇ ಇಂದು ಡ್ಯಾಂಗಳು ತುಂಬಿ ತುಳುಕುತ್ತಿವೆ. ಗಂಗಾ ಆರತಿ ರೀತಿ ಕಾವೇರಿ ಆರತಿ ಮಾಡಿದ್ರೆ ಒಳ್ಳೆಯ ವಿಚಾರ. 5-6 ದಿನದಿಂದ ತಮಿಳುನಾಡುಗೆ 5,6 ಟಿಎಂಸಿ ನೀರು ಹೋಗ್ತಿದೆ. ಜೂನ್, ಜುಲೈ ತಿಂಗಳಿನ ಪಾಲಿಗಿಂತ ಹೆಚ್ಚು ನೀರು ಹೋಗಿದೆ ಎಂದು ಹೆಚ್ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ತಮಿಳುನಾಡು ಸಿಎಂ ಸ್ಟಾಲಿನ್ಗೂ ನಾನು ಹೇಳಿದ್ದು ಇಷ್ಟೇ. ತಮಿಳುನಾಡು ಸಿಎಂ ಕರ್ನಾಟಕದ ಬಗೆಗಿನ ನಡವಳಿಕೆ ತಿದ್ದುಕೊಳ್ಳಲಿ. ಕರ್ನಾಟಕ ತಮಿಳುನಾಡಿಗೆ ಯಾವತ್ತೂ ಸಮಸ್ಯೆ ಮಾಡಿಲ್ಲ. ನೀರು ಬಳಕೆ ಮಾಡುವ ದೃಷ್ಟಿಯಿಂದ ಮೇಕೆದಾಟು ಯೋಜನೆಗೆ ತಮಿಳುನಾಡು ಒಪ್ಪಬೇಕು. ರಾಜ್ಯ ಸರ್ಕಾರ ಚಿಲ್ಲರೆ ರಾಜಕಾರಣ ಮಾಡುತ್ತಿದೆ. ಕೇಂದ್ರ ಸರ್ಕಾರದ ಮಂತ್ರಿಗಳ ಬಗ್ಗೆ ಲಘುವಾಗಿ ಮಾತನಾಡ್ತಿದ್ದಾರೆ ಎಂದು ದೆಹಲಿಯಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಗಂಗಾರತಿ ಮಾದರಿಯಲ್ಲಿ ಕೆಆರ್‌ಎಸ್ ಜಲಾಶಯದಲ್ಲಿ ಕಾವೇರಿ ಆರತಿ: ಡಿಸಿಎಂ ಡಿಕೆ ಶಿವಕುಮಾರ್ ಘೋಷಣೆ
ಸರ್ಕಾರ ಪ್ರವಾಸೋದ್ಯಮಕ್ಕೆ ಉತ್ತೇಜಿಸಲು ಕಾವೇರಿ ಬೃಂದಾವನ ಉನ್ನತೀಕರಣಕ್ಕಾಗಿ ಯೋಜನೆ ರೂಪಿಸ್ತಿದೆ. ಖಾಸಗಿ ಸಹಭಾಗಿತ್ವದಲ್ಲಿ ಅಮ್ಯೂಸ್‌ಮೆಂಟ್ ಪಾರ್ಕ್ ನಿರ್ಮಿಸಲಾಗ್ತಿದೆ. ಆದರೆ, ಯಾರನ್ನೂ ಒಕ್ಕಲು ಎಬ್ಬಿಸಲ್ಲ ಅಂತಾ ಕೆಆರ್‌ಎಸ್ ಭೇಟಿ ವೇಳೆ ಜಲಸಂಪನ್ಮೂಲ ಸಚಿವ ಡಿಕೆ ಸ್ಪಷ್ಟಪಡಿಸಿದಾರೆ. ಅಲ್ಲದೇ ಗಂಗಾರತಿ ಮಾದರಿಯಲ್ಲೇ ಕಾವೇರಿ ಆರತಿ ಯೋಜನೆಯನ್ನೂ ಜಲಸಂಪನ್ಮೂಲ ಇಲಾಖೆ ಹಾಕಿಕೊಂಡಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 12:34 pm, Mon, 22 July 24