ಬೆಂಗಳೂರಿನಲ್ಲಿ ಹಾಟ್​ ಡ್ರಿಂಕ್ಸ್​​ಗಿಂತ ಬಿಯರ್​ ಹೆಚ್ಚು ಮಾರಾಟ!

|

Updated on: Oct 21, 2024 | 11:41 AM

ಕೊರೊನಾ ಸಮಯದಲ್ಲಿ ಬೆಂಗಳೂರಿನಲ್ಲಿ ಬಿಯರ್​ ಮಾರಾಟ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿತ್ತು. ಆದರೆ, ಕೊರೊನಾ ನಂತರ ಬೆಂಗಳೂರಿನಲ್ಲಿ ಬಿಯರ್​ ವೇಗವಾಗಿ ಮಾರಾಟವಾಗಿದೆ. ಈ ಹಿಂದಿನ ದಾಖಲೆಗಳು ಉಡಿಸ್​ ಆಗಿವೆ. ವರ್ಷದಿಂದ ವರ್ಷಕ್ಕೆ ಬಿಯರ್ ಮಾರಾಟ ಪ್ರಮಾಣ​ ಶೇ49 ರಷ್ಟು ಏರಿಕೆಯಾಗುತ್ತಿದೆ.

ಬೆಂಗಳೂರಿನಲ್ಲಿ ಹಾಟ್​ ಡ್ರಿಂಕ್ಸ್​​ಗಿಂತ ಬಿಯರ್​ ಹೆಚ್ಚು ಮಾರಾಟ!
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಅಕ್ಟೋಬರ್​ 21: ಬೆಂಗಳೂರು (Bengaluru) ನಗರದಲ್ಲಿ ಬಿಯರ್​ (Beer) ಮಾರಾಟ ಪ್ರಮಾಣ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಶೇ13.03 ರಷ್ಟು ಹೆಚ್ಚು ಬಿಯರ್​ ಮಾರಾಟವಾಗಿದೆ. ಆಶ್ಚರ್ಯವೆನಿಸಿದರು ಸತ್ಯ. ಬಿಯರ್​ ಮಾರಾಟ ವರ್ಷದಿಂದ ವರ್ಷಕ್ಕೆ ಶೇ49 ರಷ್ಟು ಏರಿಕೆಯಾಗುತ್ತಿದೆ. ಆದರೆ, ಭಾರತೀಯ ನಿರ್ಮಿತ ಮದ್ಯ (IML) (ವೋಡ್ಕಾ, ಬ್ರಾಂಡಿ, ರಮ್​ ಮತ್ತು ವಿಸ್ಕಿ) ಮಾರಾಟ ಶೇ4.76ರಷ್ಟು ಮಾತ್ರ ಹೆಚ್ಚಳವಾಗಿದೆ.

ಹೆಚ್ಚು ಬಿಯರ್​ ಮಾರಾಟಕ್ಕೆ ಕಾರಣ

  1. ಬೆಂಗಳೂರಿನಲ್ಲಿರುವ ಪಬ್​ಗಳಲ್ಲಿ ಅತಿಯಾಗಿ ಬಿಯರ್​ ಮಾರಾಟ ಮಾಡುವುದು.
  2. ಬಿಯರ್​ ಅಗ್ಗದ ದರದಲ್ಲಿ ನಗರದ ಎಲ್ಲಕಡೆ ಸಿಗುವುದರಿಂದ.
  3. ಏರುತ್ತಿರುವ ಬಿಸಿಲಿನ ತಾಪಮಾನದಿಂದ ಬಿಯರ್​ ಕುಡಿಯುವವರ ಸಂಖ್ಯೆ ಏರಿಕೆಯಾಗಿದೆ.

ಲಾಕ್​ಡೌನ್​​ನಲ್ಲಿ ಕುಸಿದ ಬಿಯರ್​ ಮಾರಾಟ

ಕೊರೊನಾ ಸಮಯದಲ್ಲಿ ಬಿಯರ್​ ಮಾರಾಟ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿತ್ತು. 2020-21 ಕೊರೊನಾ ಸಂದರ್ಭದಲ್ಲಿ ಬಿಯರ್​ ಮಾರಾಟ ಶೇ 32.13 ರಷ್ಟು ಕುಸಿದಿತ್ತು. ಆ ವರ್ಷ, ನಗರದಲ್ಲಿ ಕೇವಲ 6.05 ಕೋಟಿ ಲೀಟರ್​ ಬಿಯರ್​ ಮಾರಾಟವಾಗಿತ್ತು.

2021-22ರಲ್ಲಿ ಕೊರೊನಾ ಅಲೆ ಅಲ್ಪ ಮಟ್ಟಿಗೆ ಕಡಿಮೆಯಾಗಿದ್ದರಿಂದ ಪಬ್​ ಮತ್ತು ಬಾರ್​ಗಳ ಬಾಗಿಲು ತೆರೆದುಕೊಂಡವು. ಆ ವರ್ಷ, 6.79 ಕೋಟಿ ಲೀಟರ್​​ ಮಾತ್ರ ಬಿಯರ್ ಮಾರಾಟವಾಯ್ತು. ಆದರೆ, 2022-23ರಲ್ಲಿ ಚಿತ್ರಣ ಬದಲಾಯ್ತು. ಆ ವರ್ಷ, ನಗರದಲ್ಲಿ 10.17 ಕೋಟಿ ಲೀಟರ್​ ಬಿಯರ್​ ಮಾರಾಟವಾಯ್ತು. 2020 ಮತ್ತು 21ಕ್ಕಿಂತ 2022-23ನೇ ಸಾಲಿನಲ್ಲಿ ಶೇ49 ರಷ್ಟು ಬಿಯರ್​ ಮಾರಾಟದಲ್ಲಿ ಏರಿಕೆಯಾಯಿತು.

ಮೈಸೂರು ಗ್ರಾಮಾಂತರದಲ್ಲಿ 2022-23 ರಲ್ಲಿ ಬಿಯರ್ ಮಾರಾಟವು ಶೇ 69.9 ರಷ್ಟು ಹೆಚ್ಚಾಗಿದೆ. 2021-22 ರಲ್ಲಿ 2,757 ಕೋಟಿ ರೂ.ನಷ್ಟು ಬಿಯರ್​ ಮಾರಾಟವಾಗಿತ್ತು. 2023-24ರಲ್ಲಿ 5,703 ಕೋಟಿ ರೂ.ನಷ್ಟು ಬಿಯರ್​ ಮಾರಾಟವಾಗಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಬಿಯರ್ ಮಾರಾಟ ಭರ್ಜರಿ ಹೆಚ್ಚಳ: ಅಬಕಾರಿ ಇಲಾಖೆಗೆ ಹರಿದುಬಂತು ಆದಾಯ

ಬ್ರೂವರ್ಸ್ ಅಸೋಸಿಯೇಷನ್ ​​ಆಫ್ ಇಂಡಿಯಾದ ಮಹಾನಿರ್ದೇಶಕ ವಿನೋದ್ ಗಿರಿ ಮಾತನಾಡಿ, ಬೆಂಗಳೂರಿನಲ್ಲಿ ಪಬ್ ಸಂಸ್ಕೃತಿ ಹೆಚ್ಚಾಗಿದೆ. ಬಿಯರ್​ ಅನ್ನು ಹೆಚ್ಚಾಗಿ ಪಬ್‌ಗಳು, ಬಾರ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಸೇವಿಸಲಾಗುತ್ತದೆ. ಆದರೆ ಹಾರ್ಡ್ ಮದ್ಯವನ್ನು ಜನರು ಮನೆಯಲ್ಲಿ ಸೇವಿಸಲು ಇಷ್ಟಪಡುತ್ತಾರೆ ಎಂದು ಹೇಳಿದರು.

ಕೊರೊನಾ ಸಮಯದಲ್ಲಿ, ಜನರು ಹೊರಗೆ ಬರದ ಕಾರಣ ಬಿಯರ್ ಮಾರಾಟವು ಭಾರಿ ಕುಸಿತವನ್ನು ಕಂಡಿತ್ತು. ಇದು ಸ್ವಲ್ಪ ಸಮಯದವರೆಗೆ ಹೀಗೆ ಮುಂದುವರೆಯಿತು. ಆದರೆ ಜನರು ಸಾಮಾಜಿಕವಾದ ಅಂತರ ಕಾಯ್ದುಕೊಂಡು ಖರೀದಿಸಲು ಆರಂಭಿಸಿದಾಗ ಬಿಯರ್ ಮಾರಾಟವು ಮತ್ತೆ ಏರಿತು ಎಂದರು.

ಬಿಯರ್ ಮಾರಾಟದಲ್ಲಿ ಉತ್ತೇಜನಕ್ಕೆ ರಾಜ್ಯದಲ್ಲಿ ಬೇಸಿಗೆಯ ತೀವ್ರತೆಯೇ ಕಾರಣ ಎಂದು ಅಬಕಾರಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ