ಬೆಂಗಳೂರು: ಮಹಾಮಾರಿ ಕೊರೊನಾ ಹಿಮ್ಮೆಟ್ಟಿಸಲು ಕೊರೊನಾ ಲಸಿಕೆ ಎಂಬ ಆಯುಧ ಪ್ರಯೋಗಿಸಲಾಗಿದೆ. ಆದ್ರೆ ರಾಜ್ಯದಲ್ಲಿ ಕೊರೊನಾ ಲಸಿಕೆ ಅಭಾವ ಹೆಚ್ಚಾಗಿದೆ. ಇದರ ನಡುವೆ ಸರ್ಕಾರದಿಂದ ಮತ್ತೊಂದು ಅನಾಹುತವಾಗಿದೆ. ಬೆಂಗಳೂರಿನಲ್ಲಿ ಕೊರೊನಾ ಲಸಿಕೆಗಾಗಿ ಜನರು ಪರದಾಡುತ್ತಿದ್ದಾರೆ. ಮೊದಲ ಡೋಸ್ ಪಡೆದವರಿಗೆ 2ನೇ ಡೋಸ್ ಸಿಗುತ್ತಿಲ್ಲ. ಇದರ ಮಧ್ಯೆ ಕೊವಿಡ್ ಲಸಿಕೆ ಮೆಸೇಜ್‌ನಲ್ಲಿ ಬರುವುದರಲ್ಲಿ ಗೊಂದಲ ಉಂಟಾಗಿದೆ.
ಕೊವಿಡ್ ಲಸಿಕೆ 2ನೇ ಡೋಸ್ ತೆಗೆದುಕೊಂಡೇ ಇರಲ್ಲ. ಆದ್ರೂ ಲಸಿಕೆ ಯಶಸ್ವಿಯಾಗಿದೆ ಎಂದು ಮೆಸೇಜ್ ಬರುತ್ತಿದೆ. 1ನೇ ಡೋಸ್ ಲಸಿಕೆ ಪಡೆದ ವೇಳೆ ಕೋವಿನ್ ಪೋರ್ಟಲ್‌ನಲ್ಲಿ ರಿಜಿಸ್ಟರ್ ಮಾಡಿಸಿಕೊಂಡವರಿಗೆ 2ನೇ ಡೋಸ್ ಲಸಿಕೆ ಪಡೆಯದಿದ್ದರು 2ನೇ ಡೋಸ್ ಲಸಿಕೆ ಪಡೆಯುವ ದಿನಾಂಕದಂದು ಕೋವಿನ್ ಪೋರ್ಟಲ್‌ನಿಂದ ಮೊಬೈಲ್ ನಂಬರ್‌ಗೆ 2ನೇ ಡೋಸ್ ಲಸಿಕೆ ಪಡೆದುಕೊಳ್ಳಲಾಗಿದೆ ಎಂದು ಸಂದೇಶ ಬರುತ್ತಿದೆ. ಲಸಿಕೆ ಪಡೆಯದಿದ್ದರೂ ಪಡೆದಿದ್ದಾರೆ ಎಂದು ಸಂದೇಶ ಬರುತ್ತಿದೆ.
ಕೋವಿನ್ ಪೋರ್ಟಲ್‌ನಲ್ಲಿನ ಸಮಸ್ಯೆಯಿಂದ ಈ ರೀತಿ ಮೆಸೇಜ್ ಬರುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೋವಿನ್ ಪೋರ್ಟಲ್ನಲ್ಲಿ ಒಮ್ಮೆ ರಿಜಿಸ್ಟರ್ ಆದರೆ, ಲಸಿಕೆ ಹಾಕಿಸಿಕೊಳ್ಳದಿದ್ದರು 84 ದಿನಕ್ಕೆ ಎರಡನೇ ಡೋಸ್ ಪಡೆಯಲಾಗಿದೆ ಎಂದು ಮೆಸೇಜ್ ಬರುತ್ತಿದೆ. ಇದರಿಂದ ಜನರಿಗೆ ಗೊಂದಲ ಉಂಟಾಗಿದೆ.
ಇದನ್ನೂ ಓದಿ: ಕೊರೊನಾ, ಬ್ಲ್ಯಾಕ್ ಫಂಗಸ್ಗೆ ಹೆದರಿದ ಮಂಗಳೂರು ದಂಪತಿ; ಪೊಲೀಸ್ ಕಮಿಷನರ್ಗೆ ಕರೆ ಮಾಡಿ ಆತ್ಮಹತ್ಯೆಗೆ ಶರಣು