ಪ್ರಯಾಣಿಕರ ಗಮನಕ್ಕೆ: ಬೆಂಗಳೂರಿನ 5 ಮೆಮು ರೈಲುಗಳು ಅಕ್ಟೋಬರ್ 26 ರಿಂದ ನವೆಂಬರ್ 20ರವರೆಗೆ ರದ್ದು

|

Updated on: Oct 23, 2023 | 12:15 PM

ಕಂಟೋನ್ಮೆಂಟ್ ರೈಲು ನಿಲ್ದಾಣದ ಅಭಿವೃದ್ಧಿ ಕಾಮಗಾರಿಗೆ ಪ್ರಧಾನಿ ನರೇಂದ್ರ ಮೋದಿ ಜೂನ್ 20, 2022ರಲ್ಲಿ ಶಂಕುಸ್ಥಾಪನೆ ಮಾಡಿದ್ದರು. ಅತ್ಯಂತ ಹಳೆಯ, ಬ್ರಿಟಿಷರ ಕಾಲದ ರೈಲು ನಿಲ್ದಾಣಗಳಲ್ಲಿ ಒಂದಾದ ಬೆಂಗಳೂರು ಕಂಟೋನ್ಮೆಂಟ್ ರೈಲ್ವೆ ನಿಲ್ದಾಣಕ್ಕೆ ಹೈಟೆಕ್ ಸ್ಪರ್ಶ ಸಿಗಲಿದೆ.

ಪ್ರಯಾಣಿಕರ ಗಮನಕ್ಕೆ: ಬೆಂಗಳೂರಿನ 5 ಮೆಮು ರೈಲುಗಳು ಅಕ್ಟೋಬರ್ 26 ರಿಂದ ನವೆಂಬರ್ 20ರವರೆಗೆ ರದ್ದು
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು ಅ.23: ನೈಋತ್ಯ ರೈಲ್ವೆ (South Western Railway) ವಲಯದ ವ್ಯಾಪ್ತಿಯಲ್ಲಿರುವ ಬೆಂಗಳೂರಿನ ಪುರಾತನ ರೈಲು ನಿಲ್ದಾಣ ಕಂಟೋನ್ಮೆಂಟ್ ರೈಲು (Cantonment railway) ನಿಲ್ದಾಣವಾಗಿದೆ. ಈ ಕಂಟೋನ್ಮೆಂಟ್ ರೈಲು (Train) ನಿಲ್ದಾಣವನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ಹೀಗಾಗಿ ಅಕ್ಟೋಬರ್ 26 ರಿಂದ ನವೆಂಬರ್ 20 ರವರೆಗೆ ಈ ಕೆಳಗಿನ ರೈಲುಗಳನ್ನು ರದ್ದುಗೊಳಿಸಲಾಗಿದೆ.

ರದ್ದಾದ ರೈಲುಗಳು

  1. ರೈಲು ಸಂಖ್ಯೆ 06531/32 ಕೆಎಸ್​ಆರ್​ ಬೆಂಗಳೂರು-ದೇವನಹಳ್ಳಿ-ಕೆಎಸ್​ಆರ್​ ಬೆಂಗಳೂರು ಮೆಮು ವಿಶೇಷ ರೈಲು ರದ್ದಾಗಿದೆ.
  2. ರೈಲು ಸಂಖ್ಯೆ 06533/34 ದೇವನಹಳ್ಳಿ-ಯಲಹಂಕ-ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರೈಲು ರದ್ದಾಗಿದೆ.
  3. ರೈಲು ಸಂಖ್ಯೆ 06535/36 ದೇವನಹಳ್ಳಿ-ಬೆಂಗಳೂರು ಕಂಟೋನ್ಮೆಂಟ್-ದೇವನಹಳ್ಳಿ ಮೆಮು ವಿಶೇಷ ರೈಲು ರದ್ದಾಗಿದೆ.
  4. ರೈಲು ಸಂಖ್ಯೆ 06537/38 ದೇವನಹಳ್ಳಿ-ಬೆಂಗಳೂರು ಕಂಟೋನ್ಮೆಂಟ್-ದೇವನಹಳ್ಳಿ ಮೆಮು ವಿಶೇಷ ರೈಲು ರದ್ದು ಮಾಡಲಾಗಿದೆ.
  5. ರೈಲು ಸಂಖ್ಯೆ 06539/40 ದೇವನಹಳ್ಳಿ-ಯಲಹಂಕ-ದೇವನಹಳ್ಳಿ ಮೆಮು ವಿಶೇಷ ರೈಲು ರದ್ದಾಗಿದೆ.

ಇದನ್ನೂ ಓದಿ: ದಸರಾ ಸಂಭ್ರಮ: ಪ್ರಯಾಣಿಕರ ಅನುಕೂಲಕ್ಕಾಗಿ ಈ 2 ದಿನ ಬೆಂಗಳೂರು-ಬೆಳಗಾವಿಗೆ ವಿಶೇಷ ರೈಲು ಸಂಚಾರ

ಕಂಟೋನ್ಮೆಂಟ್ ರೈಲ್ವೆ ನಿಲ್ದಾಣಕ್ಕೆ ಹೈಟೆಕ್ ಸ್ಪರ್ಶ

ಕಂಟೋನ್ಮೆಂಟ್ ರೈಲು ನಿಲ್ದಾಣದ ಅಭಿವೃದ್ಧಿ ಕಾಮಗಾರಿಗೆ ಪ್ರಧಾನಿ ನರೇಂದ್ರ ಮೋದಿ ಜೂನ್ 20, 2022ರಲ್ಲಿ ಶಂಕುಸ್ಥಾಪನೆ ಮಾಡಿದ್ದರು. ಅತ್ಯಂತ ಹಳೆಯ, ಬ್ರಿಟಿಷರ ಕಾಲದ ರೈಲು ನಿಲ್ದಾಣಗಳಲ್ಲಿ ಒಂದಾದ ಬೆಂಗಳೂರು ಕಂಟೋನ್ಮೆಂಟ್ ರೈಲ್ವೆ ನಿಲ್ದಾಣಕ್ಕೆ ಹೈಟೆಕ್ ಸ್ಪರ್ಶ ಸಿಗಲಿದೆ. ನೈಋತ್ಯ ರೈಲ್ವೆ (SWR) ನೆಟ್‌ವರ್ಕ್‌ನಲ್ಲಿರುವ ಅತ್ಯಂತ ಹಳೆಯ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣವನ್ನು ಎರಡು ಹಂತದಲ್ಲಿ ಬದಲಾವಣೆ ಮಾಡಲಾಗುತ್ತಿದೆ. ಹೆಚ್ಚಿದ ಸಾರಿಗೆ ಅಗತ್ಯಗಳನ್ನು ಪೂರೈಸುವ ಸಲುವಾಗಿ ಗಣನೀಯ ಬದಲಾವಣೆ ಮಾಡಲಾಗುತ್ತಿದೆ ಎಂದು ಭಾರತೀಯ ರೈಲ್ವೆ ಇಲಾಖೆ ತಿಳಿಸಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ