ಬೆಂಗಳೂರು: ಬೈಕ್​ಗೆ ಟಿಪ್ಪರ್​ ಡಿಕ್ಕಿ ಓರ್ವ ವಿದ್ಯಾರ್ಥಿನಿ ಸಾವು

| Updated By: ಕಿರಣ್ ಹನುಮಂತ್​ ಮಾದಾರ್

Updated on: Jan 21, 2023 | 11:32 AM

ಕೆಂಗೇರಿ ಠಾಣಾ ವ್ಯಾಪ್ತಿಯ ನೈಸ್​ ರಸ್ತೆ ಬಳಿ ವಿದ್ಯಾರ್ಥಿನಿಯರಿಬ್ಬರು ಬೈಕ್​ನಲ್ಲಿ ತೆರಳುವಾಗ ಟಿಪ್ಪರ್​ ಲಾರಿ ನಡುವೆ ಡಿಕ್ಕಿಯಾಗಿದ್ದು ಓರ್ವ ವಿದ್ಯಾರ್ಥಿನಿ ಸಾವನ್ನಪ್ಪಿದ್ದು, ಇನ್ನೂಬ್ಬ ವಿದ್ಯಾರ್ಥಿನಿಗೆ ಗಾಯಗಳಾಗಿವೆ.

ಬೆಂಗಳೂರು: ಬೈಕ್​ಗೆ ಟಿಪ್ಪರ್​ ಡಿಕ್ಕಿ ಓರ್ವ ವಿದ್ಯಾರ್ಥಿನಿ ಸಾವು
ಬೈಕ್ ಮತ್ತು ಟಿಪ್ಪರ್​ ನಡುವೆ ಡಿಕ್ಕಿ
Follow us on

ಬೆಂಗಳೂರು: ನೈಸ್​ ರಸ್ತೆ ಬಳಿ ದ್ವಿಚಕ್ರ ವಾಹನಕ್ಕೆ ಟಿಪ್ಪರ್ ಲಾರಿ ಡಿಕ್ಕಿಯಾಗಿ ಬೈಕ್​ನಲ್ಲಿ ತೆರಳುತ್ತಿದ್ದ ಕಾಲೇಜು ವಿದ್ಯಾರ್ಥಿನಿಯರಲ್ಲಿ ಓರ್ವ ವಿದ್ಯಾರ್ಥಿನಿ ಸರಿತಾ (21) ಸಾವನ್ನಪ್ಪಿದ್ದಾಳೆ. ಇನ್ನೂಬ್ಬ ಯುವತಿ ಅನಿತಾ (20) ಎಂಬುವವರಿಗೆ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವಿಜಯನಗರ ಡಿಗ್ರಿ ಕಾಲೇಜಿನಲ್ಲಿ ಇಬ್ಬರು ವಿದ್ಯಾರ್ಥಿನಿಯರು ಓದುತ್ತಿದ್ದರು. ಇನ್ನು ಸರಿತಾ ಎಂಬಾಕೆಗೆ 6 ತಿಂಗಳ ಹಿಂದೆ ಮದುವೆಯಾಗಿದ್ದು, ವಿವಾಹದ ಬಳಿಕವು ಕಾಲೇಜಿಗೆ ಹೋಗುತ್ತಿದ್ದಳು.

ಇಬ್ಬರು ಒಟ್ಟಿಗೆ ಬೈಕ್​ನಲ್ಲಿ ತೆರಳುತ್ತಿದ್ದಾಗ ಕೆಂಗೇರಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯ ನೈಸ್ ರಸ್ತೆ ಬಳಿ ನಿನ್ನೆ(ಜ.20) ಮಧ್ಯಾಹ್ನ 2.30 ಕ್ಕೆ ಟಿಪ್ಪರ್​ ಗುದ್ದಿದೆ. ಬಳಿಕ 10 ಮೀಟರ್ ಎಳೆದುಕೊಂಡು ಹೋಗಿದೆ. ಘಟನಾ ಸ್ಥಳಕ್ಕೆ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಕೆಂಗೇರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸರಗಳ್ಳತನ ಮಾಡಿ ಸ್ಟೇಷನ್ ಪಕ್ಕದಲ್ಲೇ ಮನೆ ಮಾಡಿದ್ದ ಕಳ್ಳ

ಬೆಂಗಳೂರು: ಮಂಜುನಾಥ್ ಅಲಿಯಾಸ್​ ಜಿಮ್ ಮಂಜು ಎಂಬಾತ ಕಳೆದ ಡಿಸೆಂಬರ್ 5 ನೇ ತಾರೀಖು ವಾಕಿಂಗ್ ಮಾಡುವ ವೇಳೆ ರುಕ್ಮಿಣಿ ಎಂಬ ವೃದ್ಧೆಯನ್ನ ತಳ್ಳಿ, 2 ಲಕ್ಷ 20 ಸಾವಿರ ಮೌಲ್ಯದ ಸರ ಕದ್ದು ಪರಾರಿಯಾಗಿದ್ದ
ನಂತರ ಅಲ್ಲಿದ್ದ ಸಿಸಿಟಿವಿಗಳನ್ನ ಪರಿಶೀಲನೆ ನಡೆಸಿದ್ದ ಪೊಲೀಸರು, ಆರೋಪಿಯ ಹೆಜ್ಜೆ ಗುರುತಿನ ಸಿಸಿಟಿವಿ ಫಾಲೋ ಮಾಡಿದಾಗ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಗೆ ಎಂಡ್ ಆಗುತ್ತಿತ್ತು. ಈ ವಿಚಾರವಾಗಿ ಪೊಲೀಸ್ ಇನ್ಸ್ಪೆಕ್ಟರ್ ಉದಯರವಿ ವಿಪರೀತ ತಲೆ ಕೆಡಿಸಿಕೊಂಡಿದ್ದರು.

ಹೆಚ್ಚು ಕಮ್ಮಿ ಒಂದೂವರೆ ತಿಂಗಳ ಬಳಿಕ ಸಿಕ್ಕಿಬಿದ್ದ ಆರೋಪಿ ಜಿಮ್ ಮಂಜು, ವಿಚಾರಣೆ ವೇಳೆ ಸರಗಳವು ಮಾಡಿದ ದಿನ ಹೊಯ್ಸಳದಲ್ಲಿ ಇನ್ಸ್ಪೆಕ್ಟರ್​ನ್ನ ನೋಡಿದ್ದನೆಂದು ಬಾಯ್ಬಿಟ್ಟಿದ್ದಾನೆ. ಕೃತ್ಯ ಎಸಗಿ ಪೊಲೀಸರ ಭಯದಿಂದ 20 ಕೆಜಿ ಸಣ್ಣ ಆಗಿರೋದಾಗಿ ಹೇಳಿದ್ದಾನೆ. ಸ್ನ್ಯಾಚಿಂಗ್ ವೇಳೆ ಹಾಕಿದ್ದ ಬಟ್ಟೆಯನ್ನ ಮನೆಯಲ್ಲೇ ಸುಟ್ಟುಹಾಕಿದ್ದನಂತೆ ಕೊನೆಗೂ ಆರೋಪಿಯನ್ನ ಬಂಧಿಸಿದ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸರು

ಇದನ್ನೂ ಓದಿ:ಬೆಳಗ್ಗೆ ಹಣ್ಣಿನ ವ್ಯಾಪಾರ, ರಾತ್ರಿ ಆಟೋ ಕಳ್ಳತನ -14 ಆಟೋಗಳ ಎಗರಿಸಿದ್ದ ಖದೀಮ ಅಂದರ್ ಆದ ಕತೆಯಿದು!

ಸಾಲ ಕೊಡಿಸುವುದಾಗಿ ವಂಚಿಸುತ್ತಿದ್ದ ಆರೋಪಿ ಪೊಲೀಸರ ವಶಕ್ಕೆ

ಕೋಲಾರ: ನಗರದ ಅಬ್ದುಲ್‌ ಶಹಬಾಷ್ ಎಂಬಾತ ಅಲ್ಪಸಂಖ್ಯಾತರಿಗೆ ಲೋನ್​ ಕೊಡಿಸುವುದಾಗಿ ಹೇಳಿ 20 ಲಕ್ಷ ರೂ. ವಂಚಿಸಿದ್ದ ಇತನನ್ನು ಇದೀಗ ಕೋಲಾರ ನಗರ ಠಾಣೆ ಪೊಲೀಸರು ಬಂಧಿಸಿ. ಆರೋಪಿ ಬಳಿ ಇದ್ದ 82 ಸಾವಿರ ನಗದು, ವಿವಿಧ ಬ್ಯಾಂಕ್​ಗಳ ರಬ್ಬರ್​ ಸ್ಟ್ಯಾಂಪ್​ಗಳನ್ನು ಜಪ್ತಿ ಮಾಡಿದ್ದಾರೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:31 am, Sat, 21 January 23