ಬೆಂಗಳೂರು: 4ದಿನಗಳ ಹಿಂದೆ ಬಂಡೇಪಾಳ್ಯ ನಿವಾಸಿ ತೌಹಿದ್ ಎಂಬ ಯುವಕನನ್ನ ಬೈಕ್ನ ಹಣಕ್ಕಾಗಿ ಕಿಡ್ನಾಪ್ ಮಾಡಿದ್ದ ಆರೋಪಿಗಳನ್ನ ಆಡಗೋಡಿ ಪೊಲೀಸರು 2 ಕಿ.ಮೀ ಚೇಸ್ ಮಾಡಿ ಕಿಡ್ನಾಪ್ರ್ನ್ನು ಬಂಧಿಸಿ ಯುವಕನ ರಕ್ಷಣೆ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಗೋಪಿಯನ್ನ ತನಿಖೆಗೆ ಒಳಪಡಿಸಿದ್ದು ಕಿಡ್ನಾಪರ್ಸ್ ವಿಚಾರ ತಿಳಿದು ಪೊಲೀಸರು ಶಾಕ್ ಆಗಿದ್ದಾರೆ. ಹಣವನ್ನ ಕೊಟ್ಟ ಮೇಲೂ ತೌಹಿದ್ನನ್ನ ಬೀಡದೇ ಹಣ ಕೊಡಲು ಬಂದ ಸಂಬಂಧಿ ಹಾಗೂ ಯುವತಿಯ ಮೊಬೈಲ್ ಕಸಿದುಕೊಂಡು ಬಳಿಕ ರಸ್ತೆಯಲ್ಲಿದ್ದ ಆ ಯುವತಿಯ ಫೋಟೋವನ್ನ ಮೊಬೈಲ್ನಲ್ಲಿ ನೋಡಿ ಫೋಟೊದಲ್ಲಿದ್ದ ಹುಡುಗಿ ಬೇಕು ಎಂದು ವರಸೆ ಬದಲಾಯಿಸಿದ್ದರಂತೆ.
ಯುವಕನನ್ನ ರಕ್ಷಣೆ ಮಾಡಿದ್ದ ಬೀಟ್ ಪೊಲೀಸರು
ಹಣಕ್ಕಾಗಿ ತೌಹಿದ್ ಎಂಬ ಯುವಕನನ್ನ ಕಿಡ್ನ್ಯಾಪ್ ಮಾಡಿ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಕೋರಮಂಗಲ 100 ಫೀಟ್ ರಸ್ತೆ ಬಳಿಯ ಚೆಕ್ಪೋಸ್ಟ್ ಬ್ಯಾರಿಕೇಡ್ಗೆ ರಾತ್ರಿ 11.40ರ ಸುಮಾರಿನಲ್ಲಿ ಕಾರು ಡಿಕ್ಕಿ ಹೊಡೆದಿದ್ದು, ಯುವಕ ಕಾಪಾಡಿ ಎಂದು ಕೂಗಿದ್ದಾನೆ. ಈ ವೇಳೆ ಆಡುಗೋಡಿ ಇನ್ಸ್ಪೆಕ್ಟರ್ ಮಂಜುನಾಥ್ ಅಲರ್ಟ್ ಆಗಿದ್ದಾರೆ. ಕೂಡಲೇ ಸಿನಿಮಾ ರೀತಿಯಲ್ಲಿ 2 ಕಿ.ಮೀ. ಚೇಸ್ ಮಾಡಿ ವಾಟರ್ ಟ್ಯಾಂಕ್ ಜಂಕ್ಷನ್ ಬಳಿ ಯುವಕನನ್ನ ರಕ್ಷಿಸಿದ್ದಾರೆ. ನಾಲ್ವರಲ್ಲಿ ಓರ್ವ ಆರೋಪಿ ಗೋಪಿ ಎಂಬುವವನನ್ನ ಬಂಧಿಸಲಾಗಿ ಇನ್ನುಳಿದವರಿಗಾಗಿ ಬಲೆ ಬಿಸಿದ್ದಾರೆ.
ಇದನ್ನೂ ಓದಿ: Nigeria: ಬಂಧೂಕುಧಾರಿಗಳಿಂದ ರೈಲ್ವೆ ನಿಲ್ದಾಣದ ಮೇಲೆ ದಾಳಿ, 30ಕ್ಕೂ ಹೆಚ್ಚು ಮಂದಿಯ ಅಪಹರಣ
ತೌಹಿದ್ನನ್ನ ಕಿಡ್ನಾಪ್ ಮಾಡಿದ್ದ ಕಿಡ್ನ್ಯಾಪರ್ಸ್ ಗೌಪ್ಯ ಸ್ಥಳದಲ್ಲಿರಿಸಿಕೊಂಡು ಕುಟುಂಬಸ್ಥರಿಗೆ 60 ಸಾವಿರ ಹಣ ನೀಡುವಂತೆ ಬೆದರಿಕೆ ಹಾಕಿದ್ದಾರೆ. ಇಲ್ಲವಾದರೆ ತೌಹಿದ್ನನ್ನ ಬೀಡುವುದಿಲ್ಲವೆಂದಿದ್ದಾರೆ. ಜೊತೆಗೆ ಪೊಲೀಸ್ ಠಾಣೆಗೆ ವಿಚಾರ ಮುಟ್ಟಿಸಿದರೆ ಕೊಲೆ ಮಾಡೋದಾಗಿ ಹೆದರಿಸಿದ್ದಾರೆ. ಹಾಗಾಗಿ ನಿನ್ನೆ ಸಂಜೆ 4.30 ಕ್ಕೆ ತೌಹಿದ್ ತಾಯಿ 35 ಸಾವಿರ ಹಣ ನೀಡಿದ್ದಾರೆ. ಹಣ ಕೊಟ್ಟ ಮೇಲೂ ಆರೋಪಿಗಳು ತೌಹಿದ್ನನ್ನ ಬಿಟ್ಟಿಲ್ಲ. ನಂತರ ಈ ಬಗ್ಗೆ ದೂರು ನೀಡಲು ಮಡಿವಾಳ ಠಾಣೆಗೆ ಬಂದಿದ್ದ ಕುಟುಂಬ ಅಷ್ಟರಲ್ಲಾಗಲೇ ಆರೋಪಿಯನ್ನು ಬಂಧಿಸಿದ್ದರು. ಪ್ರಕರಣ ಬಂಡೆಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದರಿಂದ ಬಂಡೆಪಾಳ್ಯ ಪೊಲೀಸ್ ಠಾಣೆಗೆ ಆರೋಪಿಯನ್ನ ಹಸ್ತಾಂತರ ಮಾಡಿದ್ದರು.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:53 am, Fri, 13 January 23