ಬೆಂಗಳೂರಿನಲ್ಲಿ ವಾಯು ಗುಣಮಟ್ಟ ತೀವ್ರ ಕುಸಿತ: ಉಸಿರಾಟ ಸಂಬಂಧಿತ ಸಮಸ್ಯೆಗೆ ಆಹ್ವಾನ ನೀಡುತ್ತಿರುವ ಸೂಚ್ಯಂಕ

ಬೆಂಗಳೂರಿನಲ್ಲಿ ವಾಯು ಗುಣಮಟ್ಟ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಅದರಲ್ಲೂ ನಗರದಲ್ಲಿ ಅತಿ ಹೆಚ್ಚಿನ ಜನನದಟ್ಟಣೆ ಕಂಡುಬರುವ ಪ್ರದೇಶಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ ಸರಾಸರಿಗಿಂತ ಹೆಚ್ಚಿನ ದಾಖಲಾಗುತ್ತಿದ್ದು, ಜನಸಾಮಾನ್ಯರ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ. ವಾಯುಗುಣಮಟ್ಟ ಕುಸಿಯುತ್ತಿರುವುದು ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಬೆಂಗಳೂರಿನಲ್ಲಿ ವಾಯು ಗುಣಮಟ್ಟ ತೀವ್ರ ಕುಸಿತ: ಉಸಿರಾಟ ಸಂಬಂಧಿತ ಸಮಸ್ಯೆಗೆ ಆಹ್ವಾನ ನೀಡುತ್ತಿರುವ ಸೂಚ್ಯಂಕ
ಬೆಂಗಳೂರಿನಲ್ಲಿ ವಾಯು ಗುಣಮಟ್ಟ ತೀವ್ರ ಕುಸಿತ

Updated on: Jul 12, 2025 | 12:48 PM

ಬೆಂಗಳೂರು, ಜುಲೈ 12: ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ (Bengaluru) ವಾಯು ಮಾಲಿನ್ಯ (Air pollution) ಹೆಚ್ಚಾಗುತ್ತಿದ್ದು, ಮಾಲಿನ್ಯ ನಿಯಂತ್ರಣ ಮಂಡಳಿ ನೀಡುತ್ತಿರುವ ಮಾಹಿತಿ ಕೂಡ ಇದಕ್ಕೆ ಪೂರಕವಾಗಿದೆ. ನಗರದ ಹಲವು ಭಾಗಗಳಲ್ಲಿ ಮಂಡಳಿ ಅಳವಡಿಕೆ ಮಾಡಿರುವ ಏರ್ ಕ್ವಾಲಿಟಿ ಇಂಡೆಕ್ಸ್ ಮಾಪಕಗಳು ನೀಡಿರುವ ಮಾಹಿತಿ ಪ್ರಕಾರ, ಹಲವು ಭಾಗಗಳಲ್ಲಿ ವಾಯು ಗುಣಮಟ್ಟ ಕುಸಿತ ಸರಾಸರಿಗಿಂತ ಹೆಚ್ಚಾಗಿದೆ. ಅದರಲ್ಲೂ ಸಿಲ್ಕ್ ಬೋರ್ಡ್ ಸುತ್ತಮುತ್ತ ಏರ್ ಕ್ವಾಲಿಟಿ ಇಂಡೆಕ್ಸ್ (AQI) ಪ್ರಮಾಣ 125 ಮುಟ್ಟಿದೆ. ಮಾರ್ಗಸೂಚಿಗಳ ಪ್ರಕಾರ 63 ಸರಾಸರಿ AQI ಮಟ್ಟ ಆಗಿದ್ದು, ಮೆಜೆಸ್ಟಿಕ್ ಸಿಟಿ ರೈಲ್ವೆ ನಿಲ್ದಾಣ, ಪೀಣ್ಯ, ಕಸ್ತೂರಿನಗರ, ಮೈಲಸಂದ್ರ ಭಾಗಗಳಲ್ಲಿ ಸರಾಸರಿಗಿಂತ ಹೆಚ್ಚಿನ AQI ದಾಖಲಾಗಿದೆ.

ಬೆಂಗಳೂರಿನ ವಿವಿಧೆಡೆ ಹೇಗಿದೆ ವಾಯುಗುಣಮಟ್ಟ ಸೂಚ್ಯಂಕ ಪ್ರಮಾಣ?

ದಿನಾಂಕ 10-7-2025ರ ಪ್ರಕಾರ ಬೆಂಗಳೂರಿನ ವಿವಿಧ ಪ್ರದೇಶಗಳ ಏರ್ ಕ್ವಾಲಿಟಿ ಇಂಡೆಕ್ಸ್ ಪ್ರಮಾಣವನ್ನು ಇಲ್ಲಿ ನೀಡಲಾಗಿದೆ.

ಸ್ಥಳ – AQI ಪ್ರಮಾಣ

  • ಸಿಲ್ಕ್ ಬೋರ್ಡ್ – 125
  • ಪೀಣ್ಯ – 73
  • ಸಿಟಿ ರೈಲ್ವೆ ನಿಲ್ದಾಣ – 93
  • ಕಸ್ತೂರಿ ನಗರ – 68
  • ಮೈಲಸಂದ್ರ – 72

ಇದನ್ನೂ ಓದಿ: ಬಿಎಂಟಿಸಿಗೆ 148 ಹೊಸ ಎಲೆಕ್ಟ್ರಿಕ್​ ಬಸ್​ಗಳು ಸೇರ್ಪಡೆ: ಇಂದಿನಿಂದ ಸಂಚಾರ ಆರಂಭ, ಮಹಿಳೆಯರಿಗೆ ಉಚಿತ ಪ್ರಯಾಣ

ಇದನ್ನೂ ಓದಿ
ಬಿಎಂಟಿಸಿಗೆ 148 ಹೊಸ ಎಲೆಕ್ಟ್ರಿಕ್​ ಬಸ್​ಗಳು ಸೇರ್ಪಡೆ: ಇಂದಿನಿಂದ ಸಂಚಾರ
ಕರ್ನಾಟಕ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಬಸ್‌ ಭಾಗ್ಯ ಕರುಣಿಸಿದ ಸರ್ಕಾರ
ಶಕ್ತಿ ಯೋಜನೆ: 500 ಕೋಟಿ ತಲುಪಲಿರುವ ಮಹಿಳಾ ಪ್ರಯಾಣಿಕರ ಸಂಖ್ಯೆ
ಕರ್ನಾಟಕದ ಈ ಭಾಗದಿಂದ ಸಿಕಂದರಾಬಾದ್, ಹೈದರಾಬಾದ್​ಗೆ ವಿಶೇಷ ರೈಲು

AQI ಪ್ರಮಾಣ 63 ಸರಾಸರಿಯಾಗಿದ್ದು, ಅದು ದಾಟಿದರೆ ಅನಾರೋಗ್ಯಕರ ಎಂದು ಹೇಳಲಾಗಿದೆ. ಇನ್ನು ಸಿಲ್ಕ್ ಬೋರ್ಡ್ ನಲ್ಲಿ ಈ ಪ್ರಮಾಣ 125 ಮುಟ್ಟಿದ್ದು, ಇದು ಉಸಿರಾಡಲು ಅಪಾಯ ಹಾಗೂ ಉಸಿರಾಟಕ್ಕೆ ಸಂಬಂಧಿಸಿದ ಖಾಯಿಲೆಗಳಿಗೆ ಆಹ್ವಾನ ಎನ್ನಲಾಗಿದೆ. ಹೀಗಾಗಿ ಪರಿಸರ ಇಲಾಖೆ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವಾಯು ಗುಣಮಟ್ಟ ಸುಧಾರಿಸುವತ್ತ ಗಮನ ಹರಿಸಬೇಕಿದೆ.

ವರದಿ: ಲಕ್ಷ್ಮಿ ನರಸಿಂಹ, ಟಿವಿ9 ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:29 pm, Sat, 12 July 25