AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಎಂಟಿಸಿಗೆ 148 ಹೊಸ ಎಲೆಕ್ಟ್ರಿಕ್​ ಬಸ್​ಗಳು ಸೇರ್ಪಡೆ: ಇಂದಿನಿಂದ ಸಂಚಾರ ಆರಂಭ, ಮಹಿಳೆಯರಿಗೆ ಉಚಿತ ಪ್ರಯಾಣ

ಸಾರಿಗೆ ಸಚಿವ ರಾಮಲಿಂಗರೆಡ್ಡಿ ಇಂದು ಬಿಎಂಟಿಸಿಗೆ ಸೇರ್ಪಡೆಯಾದ 148 ಹೊಸ ಟಾಟಾ ಎಲೆಕ್ಟ್ರಿಕ್ ಬಸ್‌ಗಳಿಗೆ ಹಸಿರು ನಿಶಾನೆ ತೋರಿದ್ದಾರೆ. ಇಂದಿನಿಂದ ಬೆಂಗಳೂರಿನ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ. ಆ ಮೂಲಕ ಮಹಿಳೆಯರಿಗೆ ಬಿಬಿಎಂಟಿಸಿ ಗುಡ್ ನ್ಯೂಸ್​ ಕೊಟ್ಟಿದೆ. ಈ ಎಲೆಕ್ಟ್ರಿಕ್ ಬಸ್​​ಗಳ ವಿಶೇಷತೆಗಳೇನು ತಿಳಿಯಿರಿ.

ಬಿಎಂಟಿಸಿಗೆ 148 ಹೊಸ ಎಲೆಕ್ಟ್ರಿಕ್​ ಬಸ್​ಗಳು ಸೇರ್ಪಡೆ: ಇಂದಿನಿಂದ ಸಂಚಾರ ಆರಂಭ, ಮಹಿಳೆಯರಿಗೆ ಉಚಿತ ಪ್ರಯಾಣ
ಹೊಸ ಎಲೆಕ್ಟ್ರಿಕ್ ಬಸ್
Kiran Surya
| Edited By: |

Updated on:Jul 11, 2025 | 12:33 PM

Share

ಬೆಂಗಳೂರು, ಜುಲೈ 11: ಬಿಎಂಟಿಸಿಗೆ ಹೊಸದಾಗಿ 148 ಟಾಟಾ ಎಲೆಕ್ಟ್ರಿಕ್ ಬಸ್​ಗಳು (Electric bus) ಸೇರ್ಪಡೆಗೊಂಡಿವೆ. ಶಾಂತಿನಗರದಲ್ಲಿ ಶುಕ್ರವಾರ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಹೊಸ ಬಸ್​ಗಳಿಗೆ ಹಸಿರು ನಿಶಾನೆ ತೋರಿದ್ದಾರೆ. ಆ ಮೂಲಕ ಇಂದಿನಿಂದ ಬೆಂಗಳೂರಿನ (bangaluru) ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ. ಒಂದು ಕಿ.ಮೀ. ಗೆ 41.1 ಪೈಸೆ ರೂ. ಗುತ್ತಿಗೆ ಆಧಾರದಲ್ಲಿ ಈ 148 ಬಸ್​ಗಳು ಸಂಚಾರ ಮಾಡಲಿವೆ.

30 ಮಾರ್ಗಗಳಲ್ಲಿ ಸಂಚಾರ

ಸದ್ಯ ಬಿಎಂಟಿಸಿಯಲ್ಲಿ ಎಸಿ ವೋಲ್ವೋ, ಸೇರಿದಂತೆ 6900 ಬಸ್​ಗಳಿದ್ದು, ಈ 148 ಬಸ್​ಗಳು ಸೇರ್ಪಡೆಯೊಂದಿಗೆ ಒಟ್ಟು 7,048 ಬಸ್​ಗಳನ್ನು ಬಿಎಂಟಿಸಿ ಹೊಂದಿದೆ.​ ಈ ಎಲೆಕ್ಟ್ರಿಕ್​ ಬಸ್​ಗಳು 12 ವರ್ಷಗಳ ಕಾಲ ನಗರದಲ್ಲಿ ಸಂಚಾರ ಮಾಡಲಿವೆ. ಈ ಬಸ್​ಗಳಿಗೆ ಕಂಡಕ್ಟರ್ ಬಿಎಂಟಿಸಿ ನಿಗಮದಿಂದ ನೇಮಕ ಮಾಡಿದರೆ, ಡ್ರೈವರ್​ಗಳು ಎಲೆಕ್ಟ್ರಿಕ್ ಬಸ್ ಕಂಪನಿಯಿಂದ ಕೆಲಸ ಮಾಡಲಿದ್ದಾರೆ. ಈ 148 ಬಸ್​ಗಳು ಬೆಂಗಳೂರಿನ 30 ಮಾರ್ಗಗಳಲ್ಲಿ ಸಂಚಾರ ನಡೆಸಲಿವೆ.

ಟಾಟಾ ಎಲೆಕ್ಟ್ರಿಕ್ ಬಸ್​​ಗಳ ವಿಶೇಷತೆಗಳು

  • ಬಹುತೇಕ ಶೂನ್ಯ ಹೊರ ಸೂಸುವಿಕೆ ಹಾಗೂ ಪರಿಸರ ಸ್ನೇಹಿ ಬಸ್​​ಗಳು.
  • 12ಮೀ ಉದ್ದ, 400ಮಿಮೀ ಎತ್ತರ ಹವಾನಿಯಂತ್ರಿತವಲ್ಲದ ವಿದ್ಯುತ್ ಚಾಲಿತ ಬಸ್​ಗಳಾಗಿರುತ್ತವೆ.
  • ಒಂದು ಭಾರಿ ಚಾರ್ಜ್​ಗೆ 200 ಕಿ.ಮೀ ಚಲಿಸುತ್ತವೆ.
  • ಎಲ್ಲಾ 148 ಬಸ್​ಗಳು ಘಟಕ-04 (ಜಯನಗರ) ರಿಂದ ಸಂಚರಿಸಲಿವೆ.

ಇದನ್ನೂ ಓದಿ: ಕರ್ನಾಟಕ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಬಸ್‌ ಭಾಗ್ಯ ಕರುಣಿಸಿದ ಸರ್ಕಾರ

ಇದನ್ನೂ ಓದಿ
Image
ಕರ್ನಾಟಕ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಬಸ್‌ ಭಾಗ್ಯ ಕರುಣಿಸಿದ ಸರ್ಕಾರ
Image
ಶಕ್ತಿ ಯೋಜನೆ: 500 ಕೋಟಿ ತಲುಪಲಿರುವ ಮಹಿಳಾ ಪ್ರಯಾಣಿಕರ ಸಂಖ್ಯೆ
Image
ಕರ್ನಾಟಕದ ಈ ಭಾಗದಿಂದ ಸಿಕಂದರಾಬಾದ್, ಹೈದರಾಬಾದ್​ಗೆ ವಿಶೇಷ ರೈಲು
Image
ಇವಿ ವಾಹನಗಳಿಗೆ ಬೇಡಿಕೆ, ಚಾರ್ಜಿಂಗ್ ಸ್ಟೇಷನ್​ಗಳ ಕೊರತೆ: ಸವಾರರ ಅಸಮಾಧಾನ
  • 35 ಪ್ರಯಾಣಿಕ ಆಸನಗಳ ಸಾಮರ್ಥ್ಯ ಹೊಂದಿದ್ದು, 1 ಗಾಲಿ ಕುರ್ಚಿಗೆ ಅವಕಾಶವಿರುತ್ತದೆ.
  • ಪ್ರಯಾಣಿಕರ ಸುರಕ್ಷತೆಯನ್ನು ಖಾತರಿಪಡಿಸಿಕೊಳ್ಳಲು ಬಸ್​ನ ಒಳಭಾಗದಲ್ಲಿ 3 ಕ್ಯಾಮೆರಾಗಳನ್ನು ಹಾಗೂ ಚಾಲಕರಿಗೆ ಹಿಮ್ಮುಖವಾಗಿ ಚಲಿಸಲು ಅನುಕೂಲವಾಗುವಂತೆ 1 ಕ್ಯಾಮೆರಾವನ್ನು ಬಸ್​​ನ ಹಿಂಬದಿ ಅಳವಡಿಸಲಾಗಿದೆ.
  • 4 ಎಲ್.ಇ.ಡಿ ಬೋರ್ಡ್ ಮತ್ತು ಧ್ವನಿ ಪ್ರಕಟಣೆ ವ್ಯವಸ್ಥೆ ಕಲ್ಪಿಸಲಾಗಿದೆ.
  • ಮಹಿಳೆಯರ ಸುರಕ್ಷತೆಗೆ 10 ತುರ್ತು ಪ್ಯಾನಿಕ್ ಬಟನ್​​ಗಳನ್ನು ಅಳವಡಿಸಲಾಗಿರುತ್ತದೆ.
  • ಅಗ್ನಿ ಅವಘಡಗಳನ್ನು ತಪ್ಪಿಸುವ ಸಲುವಾಗಿ ‘ಅಗ್ನಿ ಪತ್ತೆ ಹಾಗೂ ಎಚ್ಚರಿಕೆ ವ್ಯವಸ್ಥೆ’ (FDAS-Fire Detection and Alarm System) ಒದಗಿಸಲಾಗಿದೆ.
  • ವಾಹನಗಳ ಮೇಲೆ ನಿರಂತರವಾಗಿ ನಿಗಾಯಿಡಲು ವಾಹನದ ಸ್ಥಳ ಸೂಚಿಸುವ ವ್ಯವಸ್ಥೆ ಒದಗಿಸಲಾಗಿದೆ.

ಇದನ್ನೂ ಓದಿ: ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್: ಕರ್ನಾಟಕದ ಈ ಭಾಗದಿಂದ ಸಿಕಂದರಾಬಾದ್, ಹೈದರಾಬಾದ್​ಗೆ ವಿಶೇಷ ರೈಲು

  • ಹಿರಿಯ ನಾಗರೀಕರು, ವಿಕಲಾಂಗ ವ್ಯಕ್ತಿಗಳು ಹಾಗೂ ಗಾಲಿ ಕುರ್ಚಿ ಪ್ರಯಾಣಿಕರು ಸುಲಭವಾಗಿ ಮತ್ತು ಸುರಕ್ಷಿತವಾಗಿ ಬಸ್​​​ ಒಳ ಬರಲು ಮತ್ತು ಹೊರ ಹೋಗಲು ಅನುಕೂಲವಾಗುವಂತೆ, ಬಸ್​​ನ ಎಡಭಾಗ ಬಾಗುವ ವ್ಯವಸ್ಥೆಯನ್ನು ಹೊಂದಿರುತ್ತದೆ.
  • ಅನಿವಾರ್ಯ ಸಂದರ್ಭಗಳಲ್ಲಿ ಪ್ರಯಾಣಿಕರು ನಿಲುಗಡೆ ಕೋರಲು ನಿಲುಗಡೆ ಬಟನ್​ಗಳನ್ನು ಒದಗಿಸಲಾಗಿದೆ.
  • ಮುಂದೆ ಮತ್ತು ಮಧ್ಯದಲ್ಲಿ ಸ್ವಯಂಚಾಲಿತ ಬಾಗಿಲುಗಳನ್ನು ಒದಗಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 12:27 pm, Fri, 11 July 25