AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಟೋಲ್ ಮಾರ್ಗ ತಪ್ಪಿಸಿದ್ದಕ್ಕೆ ಪ್ರಶ್ನಿಸಿದ ವಿದ್ಯಾರ್ಥಿನಿ ಮೇಲೆ ಹಲ್ಲೆ ಮಾಡಿದ ಕ್ಯಾಬ್ ಚಾಲಕ

ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಟೋಲ್ ತಪ್ಪಿಸಿದ ವಿಚಾರವಾಗಿ ಕ್ಯಾಬ್ ಚಾಲಕನೊಬ್ಬ 19 ವರ್ಷದ ವಿದ್ಯಾರ್ಥಿನಿ ಮೇಲೆ ಹಲ್ಲೆ ನಡೆಸಿದ್ದಾನೆ. ಅಕ್ಟೋಬರ್ 20ರಂದು ನಡೆದ ಈ ಘಟನೆಯಲ್ಲಿ ಆರೋಪಿ ಅಜಾಸ್ ಪಿ.ಎಸ್.ನನ್ನು ಪೊಲೀಸರು ಬಂಧಿಸಿದ್ದಾರೆ. ಟೋಲ್‌ಗೆ ಮುಂಗಡ ಹಣ ಪಾವತಿಸಿದ್ದರೂ ಚಾಲಕ ರಸ್ತೆ ತಪ್ಪಿಸಿದಾಗ ಪ್ರಶ್ನಿಸಿದ ವಿದ್ಯಾರ್ಥಿನಿಯ ಮೇಲೆ ಆತ ಹಲ್ಲೆ ನಡೆಸಿದ್ದಾನೆ. ಘಟನೆ ವೇಳೆ ಚಾಲಕ ಮದ್ಯಪಾನ ಮಾಡಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ.

ಬೆಂಗಳೂರು: ಟೋಲ್ ಮಾರ್ಗ ತಪ್ಪಿಸಿದ್ದಕ್ಕೆ ಪ್ರಶ್ನಿಸಿದ ವಿದ್ಯಾರ್ಥಿನಿ ಮೇಲೆ ಹಲ್ಲೆ ಮಾಡಿದ ಕ್ಯಾಬ್ ಚಾಲಕ
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on:Oct 25, 2025 | 2:24 PM

Share

ಬೆಂಗಳೂರು , ಅ.25: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Kempegowda airport) ಟೋಲ್ ಮಾರ್ಗ ತಪ್ಪಿಸಿದ ವಿಚಾರವಾಗಿ ಕ್ಯಾಬ್ ಚಾಲಕ ವಿದ್ಯಾರ್ಥಿನಿ ಮೇಲೆ ಹಲ್ಲೆ ನಡೆಸಿದ್ದಾನೆ. 19 ವರ್ಷದ ಕಾಲೇಜು ವಿದ್ಯಾರ್ಥಿನಿಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಕ್ಯಾಬ್ ಚಾಲಕನನ್ನು ಇಂದು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಅಕ್ಟೋಬರ್ 20 ರಂದು ಈ ಘಟನೆ ನಡೆದಿದೆ. ಆರೋಪಿಯನ್ನು ಕೇರಳದ ತ್ರಿಶೂರ್ ಮೂಲದ ಅಜಾಸ್ ಪಿ.ಎಸ್ (31) ಎಂದು ಗುರುತಿಸಲಾಗಿದ್ದು, ಆತನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಇನ್ನು ಹಲ್ಲೆಗೊಳಗಾದ ವಿದ್ಯಾರ್ಥಿನಿಯ ಚಿಕ್ಕಪ್ಪ ಈ ಬಗ್ಗೆ ದೂರು ನೀಡಿದ್ದಾರೆ, ಅವರ ದೂರಿನ ಪ್ರಕಾರ, ನಮ್ಮ ಮಗಳು ಪಶ್ಚಿಮ ಬಂಗಾಳದವಳಾಗಿದ್ದು, ಬೆಂಗಳೂರಿನ ಖಾಸಗಿ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆಯುತ್ತಿರುವ ವಿದ್ಯಾರ್ಥಿನಿ, ಆಕೆ ವಿಮಾನ ನಿಲ್ದಾಣಕ್ಕೆ ಬರಲು ಆನ್‌ಲೈನ್ ಅಗ್ರಿಗೇಟರ್ ಮೂಲಕ ಕ್ಯಾಬ್ ಬುಕ್ ಮಾಡಿದ್ದಾಳೆ. ಕ್ಯಾಬ್​​​​ ಡ್ರೈಬರ್​​​​ಗೆ ಟೋಲ್​​​​​ ಹಣವನ್ನು ಕೂಡ ಮುಂಚಿತವಾಗಿ ಪೇ ಮಾಡಿದ್ದಾಳೆ. ಅದರೂ ಟೋಲ್​​​ ತಪ್ಪಿಸಿದ್ದಾನೆ. ಈ ಬಗ್ಗೆ ಆಕೆ ಪ್ರಶ್ನಿಸಿದ್ದು, ಚಾಲಕ ಸರಿಯಾದ ವಿವರಣೆ ನೀಡಿಲ್ಲ ಎಂದು ಕೋಪಗೊಂಡ ವಿದ್ಯಾರ್ಥಿನಿ ಕಾರು ನಿಲ್ಲಿಸುವಂತೆ ಹೇಳಿದ್ದಾಳೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಮಹಿಳೆಯ ಖಾಸಗಿ ಫೋಟೋಗಳನ್ನ ಹರಿಬಿಡೋದಾಗಿ ಬ್ಲ್ಯಾಕ್​ಮೇಲ್ ; ಮೂವರ ವಿರುದ್ಧ ಕೇಸ್ ದಾಖಲು

ನಂತರ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದು, ವಿದ್ಯಾರ್ಥಿನಿ ಕೆಳಗಿಳಿದು ಮತ್ತೊಂದು ಕ್ಯಾಬ್ ಬುಕ್ ಮಾಡಿದ್ದಾಳೆ. ಮತ್ತೊಂದು ಕ್ಯಾಬ್​​ ಹತ್ತಲು ಮುಂದಾದ ವೇಳೆ ಆತ ವಿದ್ಯಾರ್ಥಿನಿ ಮೇಲೆ ಹಲ್ಲೆ ಮಾಡಿದ್ದಾನೆ. ವಿದ್ಯಾರ್ಥಿನಿ ತನ್ನ ಎಲ್ಲ ವಸ್ತುಗಳನ್ನು ಅಲ್ಲೇ ಬಿಟ್ಟು ಹೋಗಿದ್ದಾಳೆ. ಹಲ್ಲೆ ಮಾಡಿದ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ದೂರಿನ ಆಧಾರದ ಮೇಲೆ, ಭಾರತೀಯ ನ್ಯಾಯ ಸಂಹಿತಾದ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಸ್ವಯಂಪ್ರೇರಣೆಯಿಂದ ನೋವುಂಟುಮಾಡುವುದು, ಕ್ರಿಮಿನಲ್ ಬೆದರಿಕೆ ಮತ್ತು ತಪ್ಪು ಸಂಯಮ ಸೇರಿದಂತೆ ಇತರ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಇದೀಗ ಆತನನ್ನು ಬಂಧಿಸಲಾಗಿದೆ. ಇದೀಗ ತನಿಖೆಯಲ್ಲಿ ಘಟನೆಯ ಎರಡು ದಿನದ ಮೊದಲು ಚಾಲಕ ಕೇರಳದಿಂದ ಬೆಂಗಳೂರಿಗೆ ಬಂದಿದ್ದನು, ಇನ್ನು ವಿದ್ಯಾರ್ಥಿನಿಯ ಬುಕಿಂಗ್​​ ಸ್ವೀಕರಿಸಿದಾಗ ಮದ್ಯಪಾನ ಸೇವನೆ ಮಾಡಿದ್ದ ಎಂದು ತನಿಖೆಯಲ್ಲಿ ತಿಳಿಸಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:21 pm, Sat, 25 October 25