ಬೆಂಗಳೂರು: ಮಹಿಳೆ ಜೊತೆ ಅಸಭ್ಯ ವರ್ತನೆ, ಲೈಂಗಿಕ ದೌರ್ಜನ್ಯ ಮಾಡಿದ್ದಾನೆ ಎಂದು ಸುಬ್ರಹ್ಮಣ್ಯ ನಗರ ಠಾಣೆಗೆ ಸಂತ್ರಸ್ತ ಮಹಿಳೆ ದೂರು ನೀಡಿದ್ದು, ಇದೀಗ ಆರೋಪಿ ಸತೀಶ್ ಎಂಬಾತನನ್ನ ವಶಕ್ಕೆ ಪಡೆಯಲಾಗಿದೆ. ನಿನ್ನೆ(ಫೆ.4) ಒರಾಯನ್ ಮಾಲ್ ಬಳಿಗೆ ಕರೆದಿದ್ದ ಆರೋಪಿ ಸತೀಶ್, ಈ ವೇಳೆ ಮಹಿಳೆಯ ಜೊತೆ ಅಸಭ್ಯ ವರ್ತನೆ ಹಾಗೂ ತನ್ನ ಮೈ ಕೈ ಮುಟ್ಟಿ ಲೈಂಗಿಕ ದೌರ್ಜನ್ಯ ಮಾಡಿದ್ದು, ಮಹಿಳೆಯ ಕೆಲ ಫೋಟೋ, ವಿಡಿಯೋಗಳು ಆರೋಪಿ ಮೊಬೈಲ್ನಲ್ಲಿ ಇದೆ. ಅದನ್ನ ಡಿಲೀಟ್ ಮಾಡಿಸುವಂತೆ ಜೊತೆಗೆ ನನ್ನ ಬಳಿ ಚಿನ್ನ, ಹಣ ಪಡೆದಿದ್ದು ವಾಪಸ್ ಕೊಡಿಸುವಂತೆ ದೂರು ಸುಬ್ರಹ್ಮಣ್ಯ ನಗರ ಠಾಣೆಗೆ ದೂರು ನೀಡಿದ್ದಾಳೆ. ಮಹಿಳೆ ದೂರಿನ ಮೇರೆಗೆ ಆರೋಪಿ ಸತೀಶ್ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.
ವಿದ್ಯುತ್ ಪ್ರವಹಿಸಿ ಇಬ್ಬರು ಕಾರ್ಮಿಕರು ದುರ್ಮರಣ
ಬೆಂಗಳೂರು: ವಿದ್ಯುತ್ ಪ್ರವಹಿಸಿ ತುಮಕೂರು ಜಿಲ್ಲೆಯ ಮಧುಗಿರಿ ಮೂಲದ ರಘು ಮತ್ತು ಅಸ್ಸಾಂ ಮೂಲದ ದಿಲೀಪ್ ಮೃತ ಪಟ್ಟಿರುವ ಘಟನೆ ನಗರದ ಕೋಣನಕುಂಟೆ ಬಳಿಯಿರುವ ಪ್ರೆಸ್ಟೀಜ್ ಗ್ರೂಪ್ ಅಪಾರ್ಟ್ಮೆಂಟ್ನಲ್ಲಿ ನಡೆದಿದೆ. ಅಪಾರ್ಟ್ಮೆಂಟ್ನಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು, ರಾತ್ರಿ ಪಾಳಿಯಲ್ಲಿ ಚರಂಡಿ ಒಳಗೆ ಕೆಲಸ ಮಾಡುತ್ತಿದ್ದಾಗ ವಿದ್ಯುತ್ ತಗುಲಿದ್ದು ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಸದ್ಯ ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ಇಬ್ಬರ ಶವಗಳನ್ನುಇರಿಸಲಾಗಿದ್ದು, ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಲುವೆಯಲ್ಲಿ ತೇಲಿಕೊಂಡು ಬಂದ ಅಪರಿಚಿತ ಮಹಿಳೆ ಶವ
ಕಲಬುರಗಿ: ಜಿಲ್ಲೆಯ ಜೇವರ್ಗಿ ತಾಲೂಕಿನ ಚಿಗರಳ್ಳಿ ಬಳಿಯಿರುವ ನೀರಾವರಿ ಕಾಲುವೆಯಲ್ಲಿ ನಿನ್ನೆ(ಫೆ.4) ಸಂಜೆ ಅಪರಿಚಿತ ಮಹಿಳೆಯ ಶವ ತೇಲಿಕೊಂಡು ಬಂದಿದೆ. ಅಂದಾಜು 30 ವರ್ಷದ ಮಹಿಳೆಯನ್ನು ಕುತ್ತಿಗೆಗೆ ಹಗ್ಗ ಬಿಗಿದು ಕೊಲೆ ಮಾಡಲಾಗಿದ್ದು, ಕೊಲೆಯಾದ ಮಹಿಳೆಯ ಗುರುತು ಇನ್ನು ಪತ್ತೆಯಾಗಿಲ್ಲ. ಈ ಕುರಿತು ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನೆಗಳ್ಳನ ಕೃತ್ಯಕ್ಕೆ ಸಾಥ್ ನೀಡಿದ್ದ ಗಿರವಿ ಅಂಗಡಿ ಮಾಲೀಕನ ಬಂಧನ
ಬೆಂಗಳೂರು: ಮನೆಗಳ್ಳತನ ಮಾಡುತಿದ್ದ ಆರೋಪಿ ಶ್ರೀನಿವಾಸ್ ಅಲಿಯಾಸ್ ಅಪ್ಪು ಎಂಬಾತನನ್ನು ಬಂಧಿಸಿದ್ದ ಪೊಲೀಸರು. ಈ ವೇಳೆ ಆರೋಪಿ 15 ಮನೆಗಳ್ಳತನ ಮಾಡಿರುವ ಬಗ್ಗೆ ಗೊತ್ತಾಗಿದೆ. ಬಳಿಕ ಆತ ಕದ್ದ ಚಿನ್ನ ಮಾರಿದ ಮೂಲವನ್ನ ಪೊಲೀಸರು ಹುಡುಕಿದ್ದು, ಚಿನ್ನದ ಅಂಗಡಿ ಹೊಂದಿದ್ದ ಭವರ್ ಲಾಲ್ ಎಂಬಾತನ ಬಳಿ ಕಳ್ಳ ಕದ್ದ ಚಿನ್ನವನ್ನ ಮಾರುತ್ತಿದ್ದನಂತೆ. ಈ ಕುರಿತು ತನಿಖೆಗೆ ಸಹಕರಿಸುವಂತೆ ಭವರ್ ಲಾಲ್ಗೆ ವಿವೇಕನಗರ ಪೊಲೀಸರು ಸೂಚಿಸಿದ್ದಾರೆ. ಆದರೆ ಪೊಲೀಸರ ವಿಚಾರಣೆಗೆ ಸ್ಪಂದಿಸದ ಭವರ್ ಲಾಲ್ನನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:23 am, Sun, 5 February 23