Bengaluru News: ಬೆಂಗಳೂರಿನಲ್ಲಿ ರಸ್ತೆ ಗುಂಡಿಗೆ ಬಿದ್ದು ಆಟೋ ಪಲ್ಟಿ

| Updated By: Rakesh Nayak Manchi

Updated on: Jan 03, 2023 | 12:50 PM

ಬೆಂಗಳೂರಿನಲ್ಲಿ ರಸ್ತೆಗುಂಡಿಗಳಿಂದಾಗಿ ಅಲ್ಲಲ್ಲಿ ಅವಾಂತರಗಳು ಸೃಷ್ಟಿಯಾಗುತ್ತಲೇ ಇವೆ. ಇದೀಗ ರಸ್ತೆ ಗುಂಡಿಗೆ ಬಿದ್ದ ಆಟೋವೊಂದು ಪಲ್ಟಿಯಾದ ಘಟನೆ ನಗರದಲ್ಲಿ ನಡೆದಿದೆ.

Bengaluru News: ಬೆಂಗಳೂರಿನಲ್ಲಿ ರಸ್ತೆ ಗುಂಡಿಗೆ ಬಿದ್ದು ಆಟೋ ಪಲ್ಟಿ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ನಗರದಲ್ಲಿನ ರಸ್ತೆ ಗುಂಡಿಗಳಿಂದಾಗಿ (Road pothole) ವಾಹನ ಸವಾರರು ಸಂಕಷ್ಟಕ್ಕೆ ಸಿಲುಕಿತ್ತಿದ್ದರೂ, ಜೀವ ಹಾನಿಯಾಗುತ್ತಿದ್ದರೂ ಬಿಬಿಎಂಪಿ (BBMP) ಮಾತ್ರ ಸಂಪೂರ್ಣವಾಗಿ ರಸ್ತೆ ಗುಂಡಿಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ಅನುವುಮಾಡಿಕೊಡುವಲ್ಲಿ ವಿಫಲಗೊಂಡಿದೆ. ರಸ್ತೆ ಮಧ್ಯೆ ಇದ್ದ ಗುಂಡಿಗೆ ಬಿದ್ದ ಆಟೋವೊಂದು ಪಲ್ಟಿ (Auto overturns)ಯಾದ ಘಟನೆ ನಗರದ ಬನ್ನೇರುಘಟ್ಟ ಹಾಗೂ ಅಂಜನಪುರ ರಸ್ತೆಯಲ್ಲಿ ನಡೆದಿದೆ. ಜನವರಿ 2ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಅಂಜನಪುರದ‌ 80 ಫೀಟ್ ರಸ್ತೆಯಲ್ಲಿ ಆಟೋ ಪಲ್ಟಿಯಾಗಿದೆ. ರಸ್ತೆಗೆ ಬಿದ್ದ ಆಟೋ ಚಾಲಕನನ್ನು ಸಾರ್ವಜನಿಕರು ಕೂಡಲೇ ಮೇಲಕ್ಕೆತ್ತಿದ್ದು, ಅದೃಷ್ಟವಶಾತ್ ಯಾವುದೇ‌ ಪ್ರಾಣ ಹಾನಿ ಸಂಭವಿಸಿಲ್ಲ.

ಇದನ್ನೂ ಓದಿ: ನೂರಾರು ಕೋಟಿ ಬಿಡುಗಡೆಯಾಗಿದ್ದರೂ ಹಿಂದೂತ್ವ ಅಂಜೆಂಡಾದ ಬಿಜೆಪಿ ಸರ್ಕಾರ ಅಂಜನಾದ್ರಿ ಬೆಟ್ಟ ಅಭಿವೃದ್ದಿ ಮಾಡುವುದು ಯಾವಾಗ?

ದೇಗುಲದ ಬೀಗ ಮುರಿದ ಹುಂಡಿಯ ಹಣ ಕಳವು

ನೆಲಮಂಗಲ: ವೈಕುಂಠ ಏಕಾದಶಿ ರಾತ್ರಿಯಂದೇ ದೇವಾಲಯದ ಬೀಗ ಮುರಿದು ಹುಂಡಿಯಲ್ಲಿದ್ದ ಹಣ ಕಳವು (Temple Hundi Theft) ಮಾಡಿದ ಘಟನೆ ಚಿಕ್ಕಬಾಣಾವರದ ಸಂತೆ ಬೀದಿಯ ಶ್ರೀಚನ್ನಕೇಶವಸ್ವಾಮಿ ದೇವಾಲಯ (Sri Channakeshavaswamy Temple)ದಲ್ಲಿ ನಡೆದಿದೆ. ದೇವಸ್ಥಾನದ ಹುಂಡಿಯಲ್ಲಿದ್ದ ಸುಮಾರು 80 ಸಾವಿರದಿಂದ 1 ಲಕ್ಷದ ಹಣ ಕಳವು ಮಾಡಲಾಗಿದ್ದು, ಮಾಹಿತಿ ಆಧರಿಸಿ ಸ್ಥಳಕ್ಕೆ ಭೇಟಿ ನೀಡಿದ ಸೋಲದೇವನಹಳ್ಳಿ ಠಾಣಾ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.

ನೆಲಮಂಗಲ ನಗರದಲ್ಲಿ ಹಾಡುಹಗಲೇ ಮನೆಗಳ್ಳತನ

ನೆಲಮಂಗಲ: ಹಾಡುಹಗಲೇ ಮನೆಗಳ್ಳತನ ನಡೆಸಿದ ಘಟನೆ ನಗರದ ವೀವರ್ಸ್ ಕಾಲೋನಿಯಲ್ಲಿ ನಡೆದಿದೆ. ಮನೆ ಹೊರಗೆ ಬೀಗದ ಕೀ ಇಟ್ಟಿದ್ದ ಸ್ಥಳ ನೋಡಿಕೊಂಡ ಖದೀಮರು ಮನೆ ಬೀಗ ತಗೆದು ಬೀರುವಿನಲ್ಲಿದ್ದ ಸುಮಾರು 1.5 ಲಕ್ಷ ನಗದು, 50 ಸಾವಿರ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ರೂಪ ರಾಮಮೂರ್ತಿ ಎಂಬವರು ಕುಟುಂಬ ಸಹಿತ ಪ್ರವಾಸಕ್ಕೆ ತೆರಳಿದ್ದರು. ಬೀಗದ ಕೀ ಇಟ್ಟ ಸ್ಥಳಗಮನಿಸಿದ ಕಳ್ಳರು ನಿನ್ನೆ ಮನೆಗೆ ನುಗ್ಗಿ ಕಳ್ಳತನ ಮಾಡಿದ್ದು, ಇಂದು ಮುಂಜಾನೆ ಪ್ರಕರಣ ಬೆಳಕಿಗೆ ಬಂದಿದೆ. ಸ್ಥಳಕ್ಕೆ ನೆಲಮಂಗಲ ಟೌನ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:35 pm, Tue, 3 January 23