Ramanagara: ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆ; ವಿದ್ಯಾರ್ಥಿಗಳಿಂದ ಪ್ರತಿಭಟನೆ
ರಾಮನಗರ ಟೌನ್ನಲ್ಲಿರುವ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಉಪನ್ಯಾಸಕರಿಲ್ಲವೆಂದು ವಿದ್ಯಾರ್ಥಿಗಳಿಂದ ಪ್ರತಿಭಟನೆ ನಡೆಸಲಾಗಿದೆ.
ರಾಮನಗರ: ಜಿಲ್ಲೆಯ ಟೌನ್ನಲ್ಲಿರುವ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಉಪನ್ಯಾಸಕರಿಲ್ಲ ಎಂದು ವಿದ್ಯಾರ್ಥಿಗಳು ಕಾಲೇಜು ಎದುರುಗಡೆ ಪ್ರತಿಭಟನೆ ನಡೆಸಿದ್ದಾರೆ. ಸುಮಾರು 300 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಇರುವ ಪಾಲಿಟೆಕ್ನಿಕ್ ಕಾಲೇಜು ಇದಾಗಿದ್ದು, ಪಾಠ ಮಾಡಲು ಉಪನ್ಯಾಸಕರಿಲ್ಲದೆ ಗೋಳಾಡುವಂತಾಗಿದೆ. ಇನ್ನು ವರ್ಗಾವಣೆ ಆಗಿರುವ ಉಪನ್ಯಾಸಕರ ಜಾಗಕ್ಕೆ ಇವರೆಗೂ ಯಾರನ್ನು ನೇಮಕ ಮಾಡಿಲ್ಲ, ಇದರಿಂದ ಬೇಸತ್ತ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.
ಕಳೆದ ಐದಾರು ತಿಂಗಳಿಂದ ಪಾಠ ಮಾಡಲು ಉಪನ್ಯಾಸಕರಿಲ್ಲ, ಈ ಕುರಿತು ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಶೈಕ್ಷಣಿಕ ವರ್ಷಕ್ಕೆ ತೊಂದರೆಯಾಗುತ್ತಿದೆ. ನಮ್ಮ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದ್ದಾರೆ.
ಆಯುರ್ವೇದ ಚಿಕಿತ್ಸೆ ನೀಡುವುದಾಗಿ ವಂಚಿಸುತ್ತಿದ್ದ ರಾಜಸ್ಥಾನ ಮೂಲದ ನಕಲಿ ವೈದ್ಯನ ಬಂಧನ
ಬೆಂಗಳೂರು: ಆಯುರ್ವೇದ ಚಿಕಿತ್ಸೆ ನೀಡುವುದಾಗಿ ಸಾರ್ವಜನಿಕರಿಗೆ ವಂಚಿಸುತ್ತಿದ್ದ ರಾಜಸ್ಥಾನ ಮೂಲದ ಮೊಹಮ್ಮದ್ ಸಮೀನ್ನ್ನು ಬಂಧಿಸಿದ ವಿಲ್ಸನ್ ಗಾರ್ಡನ್ ಪೊಲೀಸರು, ಬಂಧಿತನಿಂದ 4 ಕಾರು, 3 ಬೈಕ್, 3.50 ಲಕ್ಷ ನಗದು ಜಪ್ತಿ ಮಾಡಿದ್ದಾರೆ.
ಪಂಕಜ್ ಎಂಬುವವರು ತಮ್ಮ ತಾಯಿ ಕಾಲಿನ ನೋವಿನಿಂದ ಬಳಲುತ್ತಿದ್ದು, ಚಿಕಿತ್ಸೆ ಕೊಡಿಸಲು ಆರೋಪಿ ಮೊಹಮ್ಮದ್ ಸಮೀನ್ ಬಳಿ ಕರೆದುಕೊಂಡು ಹೋಗಿದ್ದಾರೆ. ಇತ ನಾನು ಆರ್ಯುವೇದ ವೈದ್ಯನೆಂದು ಹೇಳಿ ನಿಮ್ಮ ತಾಯಿಯ ಕಾಲಿನಲ್ಲಿ ಕೀವು ತುಂಬಿಕೊಂಡಿದೆ. ಅದನ್ನು ಚಿಕಿತ್ಸೆ ನೀಡಿ ಸರಿ ಮಾಡ್ತೀನಿ ಎಂದು, ಒಂದು ಡ್ರಾಫ್ ಕೀವನ್ನ ತೆಗೆಯಲು ನಾಲ್ಕು ಸಾವಿರದಂತೆ 8 ಲಕ್ಷ ಹಣ ಪೀಕಿದ್ದಾನೆ. ಅಸಲಿಗೆ ಯಾವುದೇ ಚಿಕಿತ್ಸೆ ನೀಡದೇ ಹಣ ಪಡೆದು ಎಸ್ಕೇಪ್ ಆಗಿದ್ದ ಇತ ನಂತರ ನೆಲಮಂಗಲದ ರಸ್ತೆ ಬದಿಯಲ್ಲಿ ಆಯುರ್ವೇದ ಚಿಕಿತ್ಸೆ ಹೆಸರಲ್ಲಿ ಶೆಡ್ ಹಾಕಿಕೊಂಡಿದ್ದ.
ಈ ಘಟನೆ ಸಂಬಂಧ ಪಂಕಜ್ ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪಂಕಜ್ ನೀಡಿದ ದೂರಿನನ್ವಯ ನಕಲಿ ಆಯುರ್ವೇದ ವೈದ್ಯ ಮೊಹಮ್ಮದ್ ಸಮೀನ್ನ್ನು ಪೊಲೀಸರು ಬಂಧಸಿದ್ದಾರೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ