ನೂರಾರು ಕೋಟಿ ಬಿಡುಗಡೆಯಾಗಿದ್ದರೂ ಹಿಂದೂತ್ವ ಅಂಜೆಂಡಾದ ಬಿಜೆಪಿ ಸರ್ಕಾರ ಅಂಜನಾದ್ರಿ ಬೆಟ್ಟ ಅಭಿವೃದ್ದಿ ಮಾಡುವುದು ಯಾವಾಗ?
Anjanadri Betta: ಹಿಂದೂತ್ವದ ಅಂಜೆಂಡಾವನ್ನ ಇಟ್ಟುಕೊಂಡು ಚುನಾವಣೆಗೆ ಹೊರಟಿರೊ ಬಿಜೆಪಿ, ಅಂಜನಾದ್ರಿಯನ್ನ ಅಭಿವೃದ್ದಿ ಮಾಡಿದರೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಜೆಪಿಗೆ ಸಾಕಷ್ಟು ಸಹಾಯವಾಗುತ್ತೆ ಎನ್ನಲಾಗಿತ್ತು. ಆದ್ರೆ ಹಣ ಬಿಡುಗಡೆಯಾಗಿದ್ರು ಅಂಜನಾದ್ರಿಯಲ್ಲಿ ನಯಾಪೈಸೆ ಅಭಿವೃದ್ದಿ ಮಾಡಿಲ್ಲ.
ಅದೊಂದು ಐತಿಹಾಸಿಕ ಕ್ಷೇತ್ರಕ್ಕಾಗಿ ಕೇಸರಿ ಪಾಳಯ ಟೊಂಕ ಕಟ್ಟಿ ನಿಂತಿತ್ತು. ಅಲ್ಲದೇ ಖುದ್ದು ರಾಜ್ಯ ಸರ್ಕಾರವೇ 100 ಕೋಟಿ ಹಣವನ್ನ ಬಿಡುಗಡೆ ಮಾಡಿ ರಾಷ್ಟ್ರಮಟ್ಟದಲ್ಲಿ ಫೇಮಸ್ ಮಾಡೋಕೆ ಹೊರಟಿತ್ತು. ಆದ್ರೆ ಸ್ಥಳೀಯ ನಾಯಕರ ನಿರಾಸಕ್ತಿ, ಹಾಗೂ ನಿಷ್ಕಾಳಜಿಗೆ ಖುದ್ದು ಬಿಜೆಪಿ ಕಾರ್ಯಕರ್ತರೇ ಅಸಮಾಧಾನ ವ್ಯಕ್ತಪಡಿಸುವಂತಾಗಿದೆ.
ಹೌದು. ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟ ಸಧ್ಯ ರಾಷ್ಟ್ರಮಟ್ಟದಲ್ಲಿಯೇ ಚಿರಪರಿಚತವಾಗಿದೆ. ಪುರಾಣ ಪ್ರಸಿದ್ದ ಆಂಜನೇಯ (Anjaneya Swamy) ಜನಿಸಿದ ಪೂಣ್ಯಭೂಮಿ ಎಂದೇ ಪ್ರಸಿದ್ದವಾಗಿರೋ ಅಂಜನಾದ್ರಿ ಅಭಿವೃದ್ಧಿ (Renovation) ಮಾಡೋಕೆ ಸರ್ಕಾರ ಮುಂದೆ ಬಂದಿತ್ತು. ಕಳೆದ ಅಗಷ್ಟ್ ತಿಂಗಳಲ್ಲಿಯೇ ಅಂಜನಾದ್ರಿಗೆ ಭೇಟಿ ನೀಡಿದ್ದ ಸಿಎಂ ಬಸರಾಜ ಬೊಮ್ಮಾಯಿ (Basavaraj Bommai) ರಾಜ್ಯ ಸರ್ಕಾರದಿಂದ 100 ಕೋಟಿ ಹಣವನ್ನ ಬಿಡುಗಡೆ ಮಾಡಿದ್ದರು. ಅಲ್ಲದೇ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಕೂಡಾ 40 ಕೋಟಿಯನ್ನ ಬಿಡಗಡೆ ಮಾಡಲಾಗಿತ್ತು. ಇನ್ನೇನು ಅಂಜನಾದ್ರಿಯನ್ನ (Anjanadri Betta) ವಿಶ್ವಮಟ್ಟದಲ್ಲಿ ಅಭಿವೃದ್ಧಿ ಮಾಡಲಾಗುತ್ತೆ ಎಂದೇ ಭಾವಿಸಲಾಗಿತ್ತು.
ಯಾಕೆಂದ್ರೆ ಹಿಂದೂತ್ವದ ಅಂಜೆಂಡಾವನ್ನ ಇಟ್ಟುಕೊಂಡು ಚುನಾವಣೆಗೆ ಹೊರಟಿರೊ ಬಿಜೆಪಿ, ಅಂಜನಾದ್ರಿಯನ್ನ ಅಭಿವೃದ್ದಿ ಮಾಡಿದರೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಜೆಪಿಗೆ ಸಾಕಷ್ಟು ಸಹಾಯವಾಗುತ್ತೆ ಎನ್ನಲಾಗಿತ್ತು. ಆದ್ರೆ ಹಣ ಬಿಡುಗಡೆಯಾಗಿ ತಿಂಗಳೇ ಕಳೆಯುತ್ತಾ ಬಂದ್ರು ಅಂಜನಾದ್ರಿಯಲ್ಲಿ ನಯಾಪೈಸೆ ಅಭಿವೃದ್ದಿ ಮಾಡಿಲ್ಲ. ಅಷ್ಟೇ ಏಕೆ, ಜಿಲ್ಲಾ ಉಸ್ತುವಾರಿ ಸಚಿವರಾಗಿರೋ ಆನಂದ್ ಸಿಂಗ್ ಆ ಬಗ್ಗೆ ಉತ್ಸಾಹವನ್ನೇ ತೋರುತ್ತಿಲ್ಲ ಎನ್ನೋದು ಸ್ಥಳೀಯರ ಆರೋಪವಾಗಿದೆ. ಇದಕ್ಕೆ ಒಂದಷ್ಟು ಪ್ರತಿಕ್ರಿಯಿಸಿರೋ ಸಚಿವರು ಮುಂದಿನ ತಿಂಗಳು ಅಂಜನಾದ್ರಿ ಅಭಿವೃದ್ಧಿಗೆ ಚಾಲನೆ ನೀಡುತ್ತೇವೆ ಎನ್ನುತ್ತಿದ್ದಾರೆ.
Also read:
ಅಂಜನಾದ್ರಿ ಕ್ಷೇತ್ರ ಅಭಿವೃದ್ಧಿಗೆ 140 ಕೋಟಿ ರೂ. ಅನುದಾನ: ಸಿಎಂ ಬೊಮ್ಮಾಯಿ
ಇನ್ನು ಅಂಜನಾದ್ರಿಯನ್ನ ಆಯೋಧ್ಯೆಯ ಶ್ರೀರಾಮ ಮಂದಿರ ರೀತಿಯಲ್ಲಿ ಅಭಿವೃಧಿ ಮಾಡಬೇಕು ಎನ್ನೋದು ಇಲ್ಲಿನ ನಾಯಕರ ಆಸೆಯಾಗಿತ್ತು. ಆದ್ರೆ ಸರ್ಕಾರ ಹಣ ಬಿಡುಗಡೆ ಮಾಡಿದ್ರು, ಇಲ್ಲಿಯವರೆಗೆ ಭೂಸ್ವಾಧೀನದಂತಹ ಪ್ರಮುಖ ಕೆಲಸಗಳೇ ಆಗಿಲ್ಲ. ಯಾಕೆಂದ್ರೆ ಗಂಗಾವತಿ ತಾಲೂಕಿನಲ್ಲಿರೋ ಅಂಜನಾದ್ರಿ ಮೊದಲೇ ಗುಡ್ಡಗಾಡು ಪ್ರದೇಶ.
ಅಲ್ಲಿ ಸ್ವಲ್ಪ ರಸ್ತೆ ಅಗಲೀಕರಣ ಮಾಡೋಕೂ ಜಾಗವಿಲ್ಲ. ಅಷ್ಟು ಇಕ್ಕಟ್ಟಾದ ಪರಿಸ್ಥಿತಿ ಇದೆ. ಹೀಗಾಗಿ ಭೂಸ್ವಾಧೀನ ಕೆಲಸ ಅತೀ ಮುಖ್ಯವಾಗಿದೆ. ಆದ್ರೆ ಈ ಸಂಬಂಧ ಇಲ್ಲಿಯವರೆಗೆ ರೈತರೊಂದಿಗೆ ಸಭೆಯೇ ಆಗಿಲ್ಲ. ಈ ಮಧ್ಯೆ ಅಂಜನಾದ್ರಿ ಅಭಿವೃದ್ದಿ ಶಂಕುಸ್ಥಾಪನೆಗೆ ಮೋದಿ ಬರ್ತಾರೆ ಎನ್ನೋ ಮಾತು ಕೇಳಿಬಂದಿತ್ತು, ಆದ್ರೆ ಅದೆಲ್ಲವನ್ನೂ ಸಿಎಂ ನೋಡಿಕೊಳ್ತಾರೆ ಎನ್ನುತ್ತಿದ್ದಾರೆ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್.
ಒಟ್ನಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಅಂಜನಾದ್ರಿಯನ್ನ ಆಯೋಧ್ಯಗೆ ಹೋಲಿಸುತ್ತಿದ್ದಾರೆ. ಅಲ್ಲದೇ ರಾಮನ ಬಂಟ ಹನುಮ ಜನಿಸಿದ ಪವಿತ್ರ ಸ್ಥಳ ಅಂಜನಾದ್ರಿಯನ್ನ ಅಭಿವೃದ್ದಿ ಮಾಡೋಕೆ ಒತ್ತಾಯ ಕೇಳಿ ಬರುತ್ತಲೇ ಇದೆ. ಆದ್ರೆ ಅದ್ಯಾವಾಗ ಸರ್ಕಾರ ಅಭಿವೃದ್ಧಿ ಮಾಡುತ್ತೆ, ಅದ್ಯಾವಾಗ ಜನ ಸರ್ಕಾರ ಹೇಳಿದ್ದನ್ನ ಮಾಡಿದೆ ಅಂತಾರೆ ಎನ್ನೋದನ್ನ ಕಾದು ನೋಡಬೇಕು.
ವರದಿ: ದತ್ತಾತ್ರೇಯ ಪಾಟೀಲ್, ಟಿವಿ 9, ಕೊಪ್ಪಳ