ಅಂಜನಾದ್ರಿ ಕ್ಷೇತ್ರ ಅಭಿವೃದ್ಧಿಗೆ 140 ಕೋಟಿ ರೂ. ಅನುದಾನ: ಸಿಎಂ ಬೊಮ್ಮಾಯಿ
ಅಂಜನಾದ್ರಿ ಬೆಟ್ಟದ ರಸ್ತೆಗಳ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಜಿಲ್ಲೆಯನ್ನು ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರ ಬದ್ಧ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಕೊಪ್ಪಳ: ಅಂಜನಾದ್ರಿ ಕ್ಷೇತ್ರ ಅಭಿವೃದ್ಧಿಗೆ (development) 140 ಕೋಟಿ ಅನುದಾನ ನೀಡಿದ್ದೇವೆ. ಅಂಜನಾದ್ರಿ ಬೆಟ್ಟದ ರಸ್ತೆಗಳ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಜಿಲ್ಲೆಯನ್ನು ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರ ಬದ್ಧ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ರಾಜ್ಯದಲ್ಲಿ 8 ಸಾವಿರ ಶಾಲಾ ಕೊಠಡಿ ನಿರ್ಮಾಣ ಮಾಡುತ್ತಿದ್ದೇವೆ. ಎಸ್ಸಿ, ಎಸ್ಟಿ ಸಮುದಾಯದ ಮೀಸಲಾತಿ ಪ್ರಮಾಣ ಹೆಚ್ಚಿಸಿದ್ದೇವೆ. SC, ST ಸಮುದಾಯದ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ. 5 ಲಕ್ಷ ಯುವಕರು, ಯುವತಿಯರಿಗೆ ಉದ್ಯೋಗ ನೀಡುತ್ತೇವೆ. ರೈತರು, ಕೂಲಿಕಾರ್ಮಿಕರು, ಮೀನುಗಾರರ ಮಕ್ಕಳಿಗೆ ವಿದ್ಯಾನಿಧಿ ನೀಡಲಾಗುವುದು. ಧ್ವನಿ ಇಲ್ಲದವರು, ಬಡವರು, ಅವಕಾಶ ವಂಚಿತರಿಗೆ ಅವಕಾಶ ನೀಡುವುದು. ನಮ್ಮ ಸರ್ಕಾರದ ಅವಧಿಯಲ್ಲಿ ಸರ್ವರಿಗೂ ಅವಕಾಶ ನೀಡಿದ್ದೇವೆ. ಮುಂದಿನ ದಿನಗಳಲ್ಲಿ ಸ್ಟೀಲ್ ಉತ್ಪಾದನಾ ಕೇಂದ್ರವಾಗಿ ಅಭಿವೃದ್ಧಿ ಮಾಡಲಾಗುವುದು. ಕೊಪ್ಪಳದಲ್ಲಿ ಹೊಸದಾಗಿ ಏರ್ಪೋರ್ಟ್, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡುತ್ತೇವೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರನ್ನು ಹಾಡಿ ಹೊಗಳಿದ ಸಿಎಂ ಬೊಮ್ಮಾಯಿ
ಮುಂದಿನ ವಿಧಾನಸಭೆ ಗಾಳಿ ಬಿಜೆಪಿ ಪರವಾಗಿದೆ ಎನ್ನುವುದಕ್ಕೆ ಇಷ್ಟು ಪ್ರಮಾಣದಲ್ಲಿ ನೀವೆಲ್ಲಾ ಸೇರಿದ್ದೀರಿ. ಬಿಜೆಪಿ ಹಿರಿಯ ನಾಯಕ ಬಿ. ಎಸ್ ಯಡಿಯೂರಪ್ಪ ಆಶಿರ್ವಾದ ಶ್ರೀರಕ್ಷೆ. ರಾಜ್ಯದಲ್ಲಿ ಬಿಜೆಪಿಯನ್ನ ಬೆಳೆಸುತ್ತಾ ಬಂದಿದೆ. ಹಳ್ಳಿಹಳ್ಳಿಯಲ್ಲಿ ಜನ ಬಿಜೆಪಿ ಪರ ನಿಲ್ಲಲು ಬಿಎಸ್ ವೈ ಅವರು ಕಾರಣ. ರಾಜಕೀಯದಲ್ಲಿ ಹೊಸ ಯುಗ ಶುರುವಾಗಿದೆ. ಗುಜರಾತ್ನಲ್ಲಿ ಮೋದಿ ಸಿಎಂ ಆದ್ಮೇಲೆ ಸಕಾರಾತ್ಮಕಗಳ ಮೇಲೆಯೇ ಬಿಜೆಪಿ ಗೆದ್ದಿದೆ. 35 ವರ್ಷಗಳಲ್ಲಿ ಬಿಜೆಪಿ ಹಂತ ಹಂತವಾಗಿ ಬೆಳೆದು ನಿಂತಿದೆ. ಅದಕ್ಕೆ ಯಡಿಯೂರಪ್ಪ ಅವರ ಪರಿಶ್ರಮ ಮರೆಯುವಂತಿಲ್ಲ ಎಂದು ಸಿಎಂ ಬೊಮ್ಮಾಯಿ ಹಾಡಿ ಹೊಗಳಿದರು.
ಇದನ್ನೂ ಓದಿ: ರಾಜ್ಯದಲ್ಲಿ ಪಕ್ಷ ಕಟ್ಟಿದ ಪ್ರಮುಖರಲ್ಲಿ ಒಬ್ಬರಾದ ನನ್ನನ್ನು ಕಡೆಗಣಿಸುವ ಪ್ರಶ್ನೆಯೇ ಬರುವುದಿಲ್ಲ: ಬಿಎಸ್ವೈ
ಕಾಂಗ್ರೆಸ್ ಈ ಭಾರೀ ಧೂಳಿಪಟವಾಗುತ್ತೆ
ಕಾಂಗ್ರೆಸ್ ಈ ಭಾರೀ ಧೂಳಿಪಟವಾಗುತ್ತೆ. ಒಳ ಮೀಸಲಾತಿ ಬಗ್ಗೆ ನಾನು ಕ್ಯಾಬಿನೆಟ್ ಉಪ ಸಮೀತಿ ರಚನೆ ಮಾಡಿದ್ದೆ. ಅದಕ್ಕೆ ಸಿದ್ದರಾಮಣ್ಣ ಕಣ್ಣೋರೆಸೋ ತಂತ್ರ ಅಂದ್ರು. ಆದರೆ ಅವರು ಅಧಿಕಾರದಲ್ಲಿದ್ದಾಗ ಅವರ ಪರ ನಿಲ್ಲಲಿಲ್ಲ. ಈ ವಿಚಾರ ಗೊತ್ತಾಗತ್ತೆ ಅಂತ ಇತ್ತೀಚೆಗೆ ಕಾರ್ಯಕ್ರಮದಲ್ಲಿ ಬರೀ ದೀಪ ಹಚ್ಚಿ ವಾಪಸ್ ಬಂದಿದ್ದಾರೆ. ಬಿಜೆಪಿ ಈಗ ಐದು ಕೆಜಿ ಅಕ್ಕಿ ಕೊಡುತ್ತಿದೆ. ನಾನು ಏಳು ಕೆಜಿ ಕೊಟ್ಟಿದ್ದೆ ಅಂದ್ರು. ಆದರೆ ಮೋದಿ ಅವರ ಅಕ್ಕಿ, ಚೀಲ ಸಿದ್ಧರಾಮಣ್ಣಂದು. ಅದಕ್ಕೆ ಅವರ ಫೋಟೋ.
ಎಸ್ಸಿ/ಎಸ್ಟಿ ಜನಾಂಗಕ್ಕೆ ಮೀಸಲಾತಿ ಹೆಚ್ಚಳ
ಈ ನೆಲದಲ್ಲಿ ನಿಂತು ಯಾರಾದರೂ ಸುಳ್ಳು ಹೇಳಿದರೆ ಶಾಪ ತಟ್ಟುತ್ತೆ. ಕೃಷ್ಣೆ ಮೇಲೆ ಆಣೆ ಅಂದ್ರಿ. ಆದರೆ ಏನು ಮಾಡಲಿಲ್ಲ. ಬಿಎಸ್ ವೈ ಆಶಿರ್ವಾದದೊಂದಿಗೆ ನಾವೂ ಎಲ್ಲವನ್ನೂ ಮಾಡಿದ್ದೇವೆ. ಆಲಮಟ್ಟಿಯಿಂದ ಕೊಪ್ಪಳಕ್ಕೆ ನೀರು ಹರಿಸುತ್ತೇವೆ. ಮಾರ್ಚ್ನಲ್ಲಿ ನೀರು ಹರಿಸುತ್ತೇವೆ. ನೀರಾವರಿ ಯೋಜನೆಗಳನ್ನ ಯಡಿಯೂರಪ್ಪ ಅವರು ಸಿಎಂ ಇದ್ದಾಗ, ನಾನು ನೀರಾವರಿ ಮಂತ್ರಿ ಆಗಿದ್ದಾಗ ಶುರು ಮಾಡಿದ್ದೇವೆ. ಅಂಜನಾದ್ರಿ ಅಭಿವೃದ್ಧಿ ಪಡಿಸುತ್ತೇವೆ. ನಿಗದಿತ ಸಮಯದಲ್ಲಿ ಎಲ್ಲವನ್ನೂ ಮಾಡುತ್ತೇವೆ. 8 ಸಾವಿರ ಶಾಲಾ ಕೊಠಡಿ ಕಟ್ಟಿಸಿದ್ದೇವೆ. ಎಸ್ಸಿ/ಎಸ್ಟಿ ಜನಾಂಗಕ್ಕೆ ಮೀಸಲಾತಿ ಹೆಚ್ಚಿಸಿದ್ದೇವೆ. ಗ್ರಾಮೀಣ ಪ್ರದೇಶಗಳಲ್ಲಿ ನಾಯಕ ಯೋಜನೆ ಮಾಡುತ್ತಿದ್ದೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:54 pm, Thu, 15 December 22