Kannada News Karnataka Bengaluru Bengaluru Bandh Private transport drivers to gather at Majestic through protest march from 7 directions of the city demanding fulfilment of their demands
ಬೆಂಗಳೂರು ಬಂದ್: ಖಾಸಗಿ ಸಾರಿಗೆ ಸಂಘಟನೆಗಳಿಂದ ಇಂದು ಸಪ್ತ ದಿಗ್ಬಂಧನ, ರ್ಯಾಲಿ ಸಾಗುವ ಮಾರ್ಗಗಳು ಹೀಗಿವೆ
ಶಕ್ತಿ ಯೋಜನೆ ಸ್ಥಗಿತ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಖಾಸಗಿ ಸಾರಿಗೆ ಸಂಘಟನೆಗಳು ಇಂದು ಬೆಂಗಳೂರು ಬಂದ್ಗೆ ಕರೆ ಕೊಟ್ಟಿವೆ. ಅದರಂತೆ, ಚಾಲಕರು ಹಾಗೂ ಮಾಲೀಕರು ನಗರ ಏಳು ದಿಕ್ಕುಗಳಿಂದ ಪ್ರತಿಭಟನಾ ರ್ಯಾಲಿ ಮೂಲಕ ಮೆಜೆಸ್ಟಿಕ್ಗೆ ಬರಲಿದ್ದಾರೆ. ಸದ್ಯ ಖಾಸಗಿ ಸಾರಿಗೆ ಸಂಘಟನೆಗಳಿಂದ ಸದಸ್ಯರಿಗೆ ರೂಟ್ ಮ್ಯಾಪ್ ತಲುಪಿದೆ.
ಬೆಂಗಳೂರು, ಸೆ.11: ವಿವಿಧ ಬೇಡಿಕೆಗಳನ್ನು ಈಡೇರಿಸದೇ ಆಟ ಆಡುತ್ತಿರುವ ಸಾರಿಗೆ ಇಲಾಖೆ ವಿರುದ್ಧ ಖಾಸಗಿ ಸಾರಿಗೆ ಸಂಘಟನೆ ಸಿಡಿಮಿಡಿಗೊಂಡಿದೆ. ಸರ್ಕಾರಕ್ಕೆ ಮನವಿ ಮಾಡಿ ಸಾಕಾಗಿದೆ, ಹೀಗಾಗಿ ಇಂದು ಬಂದ್ (Bengaluru Bandh)ಮಾಡುತ್ತಿದ್ದೇವೆ ಎಂದು ಹಲವು ಚಾಲಕರ ಒಕ್ಕೂಟ ಹೇಳಿವೆ. ಆ ಮೂಲಕ ರಾಜ್ಯ ಸರ್ಕಾರಕ್ಕೆ ಖಾಸಗಿ ಸಾರಿಗೆ ಸಂಘಟನೆಗಳು ಸೆಡ್ಡು ಹೊಡೆಯಲು ಸಿದ್ಧವಾಗಿವೆ.
ಸರ್ಕಾರದ ವಿರುದ್ಧ ಸಿಡಿದೆದ್ದ ಖಾಸಗಿ ಸಾರಿಗೆ ಸಂಘಟನೆಗಳಿಂದ ಇಂದು ಸಪ್ತ ದಿಕ್ಕುಗಳಿಂದ ಮೆರವಣಿಗೆ ಮೂಲಕ ಮೆಜೆಸ್ಟಿಕ್ಗೆ ಆಗಮಿಸಿ ದಿಗ್ಬಂಧನ ಹಾಕಲಿದ್ದಾರೆ. ಆಟೋ ಚಾಲಕರಿಗೆ ಕ್ಯಾಬ್ ಚಾಲಕರು, ಶಾಲಾ ವಾಹನಗಳ ಚಾಲಕರು ಕೂಡ ಸಾತ್ ನೀಡಲಿದ್ದಾರೆ.
ನೆಲಮಂಗಲ, ಕೆಂಗೇರಿ, ವೈಟ್ ಫೀಲ್ಡ್, ಕೆ ಆರ್ ಪುರ, ಆನೇಕಲ್ ಭಾಗದಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸರ್ಕಲ್ ಬಳಿ ಆಗಮಿಸಲಿದ್ದಾರೆ. ಈಗಾಗಲೇ ಖಾಸಗಿ ಸಾರಿಗೆ ಸಂಘಟನೆಗಳಿಂದ ಸದಸ್ಯರಿಗೆ ರೂಟ್ ಮ್ಯಾಪ್ ತಲುಪಿದೆ.
ಮೊದಲನೇ ಮಾರ್ಗ
ಬೆಳಗ್ಗೆ 7 ಗಂಟೆಗೆ ಸರಿಯಾಗಿ ಪೀಣ್ಯ ಇಂಡಸ್ಟ್ರಿಯಲ್ ಮೆಟ್ರೋ ಇಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸರ್ಕಲ್ಗೆ ಎಂಟ್ರಿ
ರ್ಯಾಲಿ ಸಾಗುವ ಮಾರ್ಗ
ಪೀಣ್ಯ ಎಸ್ ಆರ್ ಎಸ್ ಸಿಗ್ನಲ್ ಇಂದ ಗೊರಗುಂಟೆಪಾಳ್ಯ
ಯಶವಂತಪುರ ರೈಲ್ವೆ ನಿಲ್ದಾಣ
ಒರಾಯನ್ ಮಾಲ್
ರಾಜಾಜಿನಗರ 1 ಬ್ಲಾಕ್ ಸಿಗ್ನಲ್
ನವರಂಗ್ ಥಿಯೇಟರ್
ಡಾII ರಾಜಕುಮಾರ್ ರಸ್ತೆ
ಸುಜಾತಾ ಥಿಯೇಟರ್
ಓಕಳಿಪುರ
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸರ್ಕಲ್ ಮಾರ್ಗದಲ್ಲಿ ಸಾಗಿ ಬರುವ ರ್ಯಾಲಿ
ರ್ಯಾಲಿಯ ಎರಡನೇ ಮಾರ್ಗ
ಬೆಳಗ್ಗೆ 7:00ಗೆ ಯಲಹಂಕ ಪೊಲೀಸ್ ಸ್ಟೇಷನ್ನಿಂದ ರ್ಯಾಲಿ ಆರಂಭ
ಯಲಹಂಕ ಪೊಲೀಸ್ ಸ್ಟೇಷನ್ ಇಂದ ಹೊರಡುವ ರ್ಯಾಲಿ ಬ್ಯಾಟರಾಯನಪುರದತ್ತ ಸಾಗುತ್ತೆ