ಬಿಬಿಎಂಪಿಯ ಈಜುಕೊಳ ಪ್ರವೇಶ ದರ ಏರಿಕೆ: ಬೆಂಗಳೂರಿನ ಜನರಿಗೆ ಮತ್ತೊಂದು ಶಾಕ್​

ಬೆಂಗಳೂರಿನ ಬಿಬಿಎಂಪಿ ಈಜುಕೊಳಗಳಲ್ಲಿ ದರ ಏರಿಕೆಯಿಂದ ಪೋಷಕರು ಆಕ್ರೋಶಗೊಂಡಿದ್ದಾರೆ. ಮಕ್ಕಳಿಗೂ ವಯಸ್ಕರಿಗೂ ಒಂದೇ ದರ ವಿಧಿಸುತ್ತಿರುವುದು ಮತ್ತು ಬೋರ್ಡ್‌ನಲ್ಲಿರುವ ದರಕ್ಕಿಂತ ಹೆಚ್ಚು ವಸೂಲಿ ಮಾಡುತ್ತಿರುವುದು ಪ್ರಮುಖ ಆಕ್ಷೇಪಕ್ಕೆ ಕಾರಣವಾಗಿದೆ. ಬೇಸಿಗೆ ರಜೆಯಲ್ಲಿ ಮಕ್ಕಳು ಈಜುಕೊಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ತೆರಳುತ್ತಿರುವುದನ್ನು ಬಂಡವಾಳ ಮಾಡಿಕೊಂಡು ಹೆಚ್ಚುವರಿ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಬಿಬಿಎಂಪಿಯ ಈಜುಕೊಳ ಪ್ರವೇಶ ದರ ಏರಿಕೆ: ಬೆಂಗಳೂರಿನ ಜನರಿಗೆ ಮತ್ತೊಂದು ಶಾಕ್​
ಈಜುಕೊಳ
Updated By: ವಿವೇಕ ಬಿರಾದಾರ

Updated on: Apr 27, 2025 | 9:58 PM

ಬೆಂಗಳೂರು, ಏಪ್ರಿಲ್​ 27: ಕಸ, ಪಾರ್ಕಿಂಗ್ ಶುಲ್ಕ ವಿಧಿಸುವ ಮೂಲಕ ಬೆಂಗಳೂರು (Bengaluru) ಜನರಿಗೆ ಶಾಕ್ ಕೊಟ್ಟಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP), ಇದೀಗ ಈಜುಕೊಳ (Swimming pool) ಪ್ರವೇಶ ದರ ಏರಿಕೆ ಬಿಸಿ ಮುಟ್ಟಿಸಲು ಹೊರಟಿದೆ. ಬಿಬಿಎಂಪಿಯ ಈಜುಕೊಳಗಳಲ್ಲಿ ವಯಸ್ಕರು ಹಾಗೂ ಮಕ್ಕಳಿಗೆ ಪ್ರತ್ಯೇಕ ದರ ನಿಗದಿಮಾಡಲಾಗಿದೆ. ಆದರೆ, ಇದೀಗ ಹಲವೆಡೆ ಮಕ್ಕಳು ಮತ್ತು ದೊಡ್ಡವರಿಗೆ ಒಂದೇ ರೀತಿಯ ದರದಲ್ಲಿ ಟಿಕೆಟ್ ಕೊಡುತ್ತಿರುವುದು ಪೋಷಕರ ಅಸಮಾಧಾನಕ್ಕೆ ಕಾರಣವಾಗಿದೆ. ಬೇಸಿಗೆ ಅಂತ ಈಜುಕೊಳದತ್ತ ತೆರಳುತ್ತಿದ್ದ ಮಕ್ಕಳಿಗೆ ಇದೀಗ ದರ ಏರಿಕೆಯ ಬಿಸಿ ತಟ್ಟುತ್ತಿದೆ.

ಬೇಸಿಗೆ ರಜೆ ಆರಂಭವಾಗಿರುವುದರಿಂದ ತಣ್ಣಗೆ ಕೆಲಕಾಲ ಈಜುಕೊಳದಲ್ಲಿ ಈಜಾಡಿ ಬರೋಣ ಅಂತ ಹೊರಡುವ ಮಕ್ಕಳಿಗೆ ಇದೀಗ ದರ ಏರಿಕೆಯ ಬಿಸಿ ತಟ್ಟುತ್ತಿದೆ. ಸದ್ಯ ಪಾಲಿಕೆಯ ಈಜುಕೊಳಗಳಲ್ಲಿ 10 ವರ್ಷದ ಒಳಗಿನ ಮಕ್ಕಳಿಗೆ 35 ರೂಪಾಯಿ ಹಾಗೂ ವಯಸ್ಕರಿಗೆ 50 ರೂಪಾಯಿ ಅಂತ ದರ ನಿಗದಿ ಮಾಡಿ ಬೋರ್ಡ್ ಕೂಡ ಹಾಕಲಾಗಿದೆ. ಆದರೆ, ಇದೀಗ ಮಕ್ಕಳಿಗೂ ದೊಡ್ಡವರಷ್ಟೇ ಹಣ ಪಡೆಯುತ್ತಿರುವುದು ಪೋಷಕರ ಸಿಟ್ಟಿಗೆ ಕಾರಣವಾಗಿದೆ.

ಇನ್ನು, ಸಣ್ಣವರಿಗೆ ಮತ್ತು ದೊಡ್ಡವರಿಗೆ ಈಜುಕೊಳದಲ್ಲಿ ಈ ಮೊದಲು ಕಡಿಮೆ ದರ ಇತ್ತು. ಅರ್ಧದಿಂದ ಒಂದು ಗಂಟೆವರೆಗಿನ ಸಮಯಕ್ಕೆ ಈಜುಕೊಳಕ್ಕೆ ನಿಗಿದಿಪಡಿಸಿದ್ದ ದರವನ್ನು ಇದೀಗ ಬೇಕಾ ಬಿಟ್ಟಿಯಾಗಿ ಹೆಚ್ಚಿಸಲಾಗಿದೆ. ಇತ್ತ ಬಿಬಿಎಂಪಿಯ ವ್ಯಾಪ್ತಿಯಲ್ಲಿ ಸುಮಾರು 13 ಈಜುಕೊಳಗಳಿದ್ದು ಬಹುತೇಕ ಈಜುಕೊಳಗಳಲ್ಲಿ ಬೋರ್ಡ್​ನಲ್ಲಿ ಬರೆದಿರುವ ದರಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಇದನ್ನೂ ಓದಿ
ಬೆಸ್ಕಾಂಗೆ ಹೈಕೋರ್ಟ್​​ ತರಾಟೆ​: ಸ್ಮಾರ್ಟ್ ಮೀಟರ್​ ಶುಲ್ಕಕ್ಕೆ ತಡೆ!
ಅಗ್ರಿಗೇಟರ್ ಕಂಪನಿಗಳಿಂದದುಪ್ಪಟ್ಟು ಹಣ ವಸೂಲಿ: ಪ್ರಯಾಣಿಕರ ಆಕ್ರೋಶ
ಅಡುಗೆಗೆ ಸಾಸಿವೆ, ಜೀರಿಗೆ ಬಳಸುವ ಮುನ್ನ ಎಚ್ಚರ: ಅದರಲ್ಲೂ ಕಲಬೆರಿಕೆ?
ಮೊದಲ ಬಾರಿಗೆ ಬೆಂಗಳೂರಿನಲ್ಲಿ ಬಿಎಂಟಿಸಿ ಎಸಿ ಎಲೆಕ್ಟ್ರಿಕ್ ಬಸ್ ಸಂಚಾರ

ಬೇಸಿಗೆ ರಜೆ ಇರುವುದರಿಂದ ಈಜುಕೊಳಕ್ಕೆ ಬರುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ಬಂಡವಾಳ ಮಾಡಿಕೊಂಡ ಪಾಲಿಕೆ ಸಿಬ್ಬಂದಿ ದುಪ್ಪಟ್ಟು ಹಣ ಪಡೆಯುತ್ತಿರವುದು ಬೇಸಿಗೆ ರಜೆ ಮಜಾ ಅನುಭವಿಸಬೇಕಿದ್ದ ಮಕ್ಕಳಿಗೆ ನಿರಾಸೆ ತಂದಿಟ್ಟಿದೆ.

ಸದ್ಯ ಮಹಾಲಕ್ಷ್ಮೀ ಬಡಾವಣೆ, ವಿಜಯಗರ ಸೇರಿದಂತೆ ವಿವಿಧ ಕಡೆಗಳಲ್ಲಿ ಈಜುಕೊಳಕ್ಕೆ ಭೇಟಿ ನೀಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬೇಸಿಗೆ ರಜೆ ಇರುವುದರಿಂದ ಮಕ್ಕಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಈಜುಕೊಳಗಳತ್ತ ಆಕರ್ಷಿತರಾಗುತ್ತಿದ್ದಾರೆ. ಆದರೆ, ಕೇವಲ 40 ನಿಮಿಷ ಸಮಯಕ್ಕೆ ನಿಗದಿಪಡಿಸಿರುವ ದರಕ್ಕಿಂತ ಹೆಚ್ಚಿನ ದರ ಪಡೆಯುತ್ತಿರುವುದು ಪೋಷಕರ ಅಸಮಾಧಾನಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಸೀಟ್ ಬ್ಲಾಕಿಂಗ್ ತಡೆಗೆ KEA ಹೊಸ ನಿಯಮ: 3 ವರ್ಷ ಬ್ಯಾನ್​

ಇತ್ತ ದುಪ್ಪಟ್ಟು ಹಣ ವಸೂಲಿ ಮಾಡಿದರೆ ಕ್ರಮ ಕೈಗೊಳ್ಳುತ್ತೇವೆ ಅಂತ ಎಚ್ಚರಿಸಿದ್ದ ಪಾಲಿಕೆ, ಇದೀಗ ಬೇಕಾಬಿಟ್ಟಿ ದರ ವಸೂಲಿ ಮಾಡುತ್ತಿದ್ದರೂ ಕಣ್ಮುಚ್ಚಿ ಕುಳಿತಿದ್ದು, ಸದ್ಯ ಪಾಲಿಕೆ ಇನ್ನಾದರೂ ಎಚ್ಚೆತ್ತುಕೊಳ್ಳುತ್ತ ಕಾದುನೋಡಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:56 pm, Sun, 27 April 25