AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಗ್ರಿಗೇಟರ್ ಕಂಪನಿಗಳಿಂದ ದುಪ್ಪಟ್ಟು ಹಣ ವಸೂಲಿ: ಪ್ರಯಾಣಿಕರ ಆಕ್ರೋಶ

ಬೆಂಗಳೂರಿನಲ್ಲಿ ಆನ್‌ಲೈನ್ ಆಟೋ ಅಗ್ರಿಗೇಟರ್ ಕಂಪನಿಗಳು ಅತಿಯಾದ ದರ ವಸೂಲಿ ಮಾಡುತ್ತಿರುವುದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ಹೆಚ್ಚಿನ ದರ ವಿಧಿಸಲಾಗುತ್ತಿದೆ. ಸಾರಿಗೆ ಇಲಾಖೆ ಈ ಬಗ್ಗೆ ಮೌನ ವಹಿಸಿರುವುದು ಟೀಕೆಗೆ ಗುರಿಯಾಗಿದೆ. ಪ್ರಯಾಣಿಕರು ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ.

ಅಗ್ರಿಗೇಟರ್ ಕಂಪನಿಗಳಿಂದ ದುಪ್ಪಟ್ಟು ಹಣ ವಸೂಲಿ: ಪ್ರಯಾಣಿಕರ ಆಕ್ರೋಶ
ಸಾಂದರ್ಭಿಕ ಚಿತ್ರ
Kiran Surya
| Updated By: ವಿವೇಕ ಬಿರಾದಾರ|

Updated on:Apr 25, 2025 | 7:54 AM

Share

ಬೆಂಗಳೂರು, ಏಪ್ರಿಲ್​ 25: ಆನ್​ಲೈನ್ ಅಗ್ರಿಗೇಟರ್ ಕಂಪನಿಗಳ (Online aggregator company) ವಸೂಲಿಗೆ ಪ್ರಯಾಣಿಕರು ಹೈರಾಣಾಗಿದ್ದಾರೆ. ಈ ವಿಚಾರ ಗೊತ್ತಿದ್ದರೂ, ಸಾರಿಗೆ ಇಲಾಖೆ (Department of  Transport) ಮಾತ್ರ ಮೌನಕ್ಕೆ ಶರಣಾಗಿದೆ. ರಾಜ್ಯದಲ್ಲಿ ಮುಂದಿನ ಆರು ವಾರದೊಳಗೆ ಬೈಕ್ ಟ್ಯಾಕ್ಸಿ ಕಾರ್ಯಚರಣೆಯನ್ನು ಸ್ಥಗಿತಗೊಳಿಸುವಂತೆ ಹೈಕೋರ್ಟ್ ಏಪ್ರಿಲ್ 2ರಂದು ಆದೇಶ ಹೊರಡಿಸಿತ್ತು. ಈ ಬೆನ್ನಲ್ಲೇ ಓಲಾ, ಊಬರ್ ಮತ್ತು ನಮ್ಮ ಯಾತ್ರಿಯಂತಹ ಅಗ್ರಿಗೇಟರ್ ಕಂಪನಿಗಳು ಪ್ರಯಾಣಿಕರಿಂದ ಹೆಚ್ಚಿನ ಹಣ ಪಡೆಯುತ್ತಿವೆ. ಆನ್​ಲೈನ್ ಸಂಸ್ಥೆಗಳು ಆಟೋ ಪ್ರಯಾಣ ದರವನ್ನು ಒನ್​ಟು ತ್ರಿಬಲ್ ಪಡೆಯುತ್ತಿದ್ದರೂ ಸಾರಿಗೆ ಇಲಾಖೆ ಮಾತ್ರ ಮೌನಕ್ಕೆ ಶರಣಾಗಿದ್ದು, ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.

ನಿಯಮದ ಪ್ರಕಾರ ಮೊದಲ ಎರಡು ಕಿಲೋ ಮೀಟರ್ 30 ರೂ. ಪಡೆಯಬೇಕು. ನಂತರ ಪ್ರತೀ ಕಿಲೋ ಮೀಟರ್​ಗೆ 15 ರೂಪಾಯಿ ಪಡೆಯಬೇಕು. ಉದಾಹರಣೆಗೆ, ಸೌಂತ್ ಎಂಡ್ ಟು ಯಡಿಯೂರು ಕೆರೆ (657 ಮೀಟರ್) ದೂರದ ಪ್ರಯಾಣಕ್ಕೆ ನಿಮಯದ ಪ್ರಕಾರ 30 ರೂ. ಪಡೆಯಬೇಕು. ಆದರೆ, 55 ರೂಪಾಯಿ ಪಡೆಯಲಾಗುತ್ತಿದೆ. ಮೆಜೆಸ್ಟಿಕ್​ನಿಂದ ರಾಜಾಜಿನಗರ (3.71 ಕಿ.ಮೀ) ದೂರದ ಪ್ರಯಾಣಕ್ಕೆ ನಿಯಮದ ಪ್ರಕಾರ 50-60 ರೂಪಾಯಿ ಪಡೆಯಬೇಕು. ಆದರೆ, 93 ರೂಪಾಯಿ ವಸೂಲಿ ಮಾಡಲಾಗುತ್ತಿದೆ. ಸೌತ್ ಎಂಡ್ ಸರ್ಕಲ್​ನಿಂದ ಮೆಜೆಸ್ಟಿಕ್​​ಗೆ (6.4 ಕಿ.ಮೀ) ದೂರದ ಪ್ರಯಾಣಕ್ಕೆ ನಿಯಮದ ಪ್ರಕಾರ 90-100 ರೂಪಾಯಿ ಪಡೆಯಬೇಕು ಆದರೆ, 125 ರೂಪಾಯಿ ಪಡೆಯಲಾಗುತ್ತಿದೆ.

ಇದನ್ನೂ ಓದಿ: ಐಫೋನ್‌, ಆಂಡ್ರಾಯ್ಡ್‌ಗಳಲ್ಲಿ ವಿಭಿನ್ನ ದರ ನಿಗದಿ; ಉಬರ್, ಓಲಾಗೆ ಸರ್ಕಾರದಿಂದ ನೋಟಿಸ್

ಇದನ್ನೂ ಓದಿ
Image
ಬೆಂಗಳೂರು: ಸೈಡ್ ಪಿಕಪ್ ಹೆಸ್ರರಲ್ಲಿ ಟ್ಯಾಕ್ಸಿ ಚಾಲಕರಿಗೆ ಕಿರುಕುಳ 
Image
ಬೈಕ್ ಟ್ಯಾಕ್ಸಿ ಕಾರ್ಯಾಚರಣೆ ಸ್ಥಗಿತಕ್ಕೆ ಹೈಕೋರ್ಟ್ ಆದೇಶ
Image
ಸರ್ಕಾರದಿಂದ ಸಹಕಾರಿ ಟ್ಯಾಕ್ಸಿ ಸರ್ವಿಸ್?
Image
Namma Yatri: ಬೆಂಗಳೂರು ಆಟೋ ಚಾಲಕರಿಂದ ರಾಜ್ಯೋತ್ಸವದ ಗಿಫ್ಟ್​: ಇಂದಿನಿಂದ ‘ನಮ್ಮ ಯಾತ್ರಿ’ ಆ್ಯಪ್ ಆರಂಭ

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಾರಿಗೆ ಇಲಾಖೆಯ ಅಡಿಷನಲ್ ಕಮೀಷನರ್ ಮಲ್ಲಿಕಾರ್ಜುನ ಮಾತನಾಡಿ, ಅಗ್ರಿಗೇಟರ್ ಕಂಪನಿಗಳು ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡಿದರೆ ಅಂತಹ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.

ಒಟ್ಟಿನಲ್ಲಿ ಸಾರಿಗೆ ಇಲಾಖೆ, ಮೋಟಾರ್ ವೆಹಿಕಲ್ ಕಾಯ್ದೆಯ ನಿಯಮವನ್ನು ಗಾಳಿಗೆ ತೂರಿ ಬೇಕಾಬಿಟ್ಟಿಯಾಗಿ ಹಣ ವಸೂಲಿ ಮಾಡುತ್ತಿರುವ ಅಗ್ರಿಗೇಟರ್ ಕಂಪನಿಗಳ ವಸೂಲಿಗೆ ಸಾರಿಗೆ ಇಲಾಖೆ ಬ್ರೇಕ್ ಹಾಕಲೇ ಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 7:51 am, Fri, 25 April 25