AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೈಡ್ ಪಿಕಪ್ ಹೆಸರಲ್ಲಿ ಟ್ಯಾಕ್ಸಿ ಚಾಲಕರಿಗೆ ಕಿರುಕುಳ: 20ಕ್ಕೂ ಹೆಚ್ಚು ಟ್ಯಾಕ್ಸಿ ವಶಕ್ಕೆ ಪಡೆದ ಪೊಲೀಸರು

ಶ್ರೀರಾಮನವಮಿ ಹಬ್ಬದಂದು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟ್ಯಾಕ್ಸಿ ಚಾಲಕರ ನಡುವೆ ಜಗಳ ಏರ್ಪಟ್ಟಿತ್ತು. ಹೆಚ್ಚುವರಿ ಆದಾಯಕ್ಕಾಗಿ ಓಲಾ, ಉಬರ್ ಬದಲು ಇತರ ಆ್ಯಪ್‌ಗಳನ್ನು ಬಳಸಿದ್ದಕ್ಕೆ 20ಕ್ಕೂ ಹೆಚ್ಚು ಟ್ಯಾಕ್ಸಿಗಳನ್ನು ಸೀಜ್ ಮಾಡಲಾಗಿತ್ತು. ಪೊಲೀಸರ ಈ ನಡೆಗೆ ಚಾಲಕರಿಂದು ಭಾರೀ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸೈಡ್ ಪಿಕಪ್ ಹೆಸರಲ್ಲಿ ಟ್ಯಾಕ್ಸಿ ಚಾಲಕರಿಗೆ ಕಿರುಕುಳ: 20ಕ್ಕೂ ಹೆಚ್ಚು ಟ್ಯಾಕ್ಸಿ ವಶಕ್ಕೆ ಪಡೆದ ಪೊಲೀಸರು
ವಶಕ್ಕೆ ಪಡೆದಿದ್ದ ಟ್ಯಾಕ್ಸಿಗಳು
ನವೀನ್ ಕುಮಾರ್ ಟಿ
| Edited By: |

Updated on:Apr 07, 2025 | 8:08 AM

Share

ದೇವನಹಳ್ಳಿ, ಏಪ್ರಿಲ್​ 07: ನಿನ್ನೆ ಹೇಳಿ ಕೇಳಿ ಶ್ರೀರಾಮ ನವಮಿ (Sri Rama Navami). ಹಿಂದೂಗಳ ಪವಿತ್ರ ಹಬ್ಬ ಸಹ ಹೌದು. ಹೀಗಾಗೆ ಚಾಲಕರೆಲ್ಲಾ ಒಂದೆರೆಡು ಬಾಡಿಗೆ ಜಾಸ್ತಿ ಸಿಗುತ್ತೆ ಅಂತ ಏರ್ಪೋಟ್​ಗೆ ಬಂದಿದ್ದು ಪಿಕಪ್ ಮಾಡುವ ಭರದಲ್ಲಿದ್ದರು. ಆದರೆ ಅಷ್ಟರಲ್ಲೇ ಟ್ಯಾಕ್ಸಿ ಸಂಸ್ಥೆಗಳು ಮತ್ತು ಚಾಲಕರ ನಡುವೆ ಪಿಕಪ್ ವಿಚಾರಕ್ಕೆ ಕಿರಿಕ್ ಉಂಟಾಗಿದ್ದು, 20ಕ್ಕೂ ಅಧಿಕ ಟ್ಯಾಕ್ಸಿ ಚಾಲಕರು (Taxi drivers) ದಿನಪೂರ್ತಿ ಪೊಲೀಸ್ ಠಾಣೆ ಮುಂದೆ ಪರದಾಡಿರುವಂತಹ ಘಟನೆ ನಡೆದಿದೆ.

ಎರೆಡೆರಡು ಆ್ಯಪ್ಗಳಲ್ಲಿ ಕೆಲಸ? 

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತಾರಾಷ್ಟ್ರಿಯ ವಿಮಾನ ನಿಲ್ಥಾಣದಿಂದ ಶೇ 50 ಕ್ಕೂ ಅಧಿಕ ಪ್ರಯಾಣಿಕರು ಟ್ಯಾಕ್ಸಿಗಳಲ್ಲೇ ಪ್ರಯಾಣ ಮಾಡ್ತಿದ್ದು, ಹಬ್ಬ ಹರಿದಿನ ಸೇರಿದಂತೆ ವೀಕೆಂಡ್ ಬಂತ್ತು ಅಂದರೆ ಟ್ಯಾಕ್ಸಿಗಳಿಗೆ ಬೇಡಿಕೆ ಹೆಚ್ಚಾಗುತ್ತದೆ. ಹೀಗಾಗಿ ನಿನ್ನೆ ಶ್ರೀರಾಮ ನವಮಿ ಹಬ್ಬ ಇದೆ ಅಂತ ಕೆಲ ಚಾಲಕರು ಓಲಾ, ಉಬರ್ ಬಿಟ್ಟು ನಮ್ಮ ಯಾತ್ರಿ ಮತ್ತು ರಾಪಿಡೋ ಆ್ಯಪ್ ಮೂಲಕ ಪ್ರಯಾಣಿಕರನ್ನ ಪಿಕಪ್ ಮಾಡಿಕೊಳ್ಳುವುದಕ್ಕೆ ಬಂದಿದ್ರಂತೆ. ಹೀಗಾಗೆ ಎರೆಡೆರಡು ಆ್ಯಪ್ಗಳಲ್ಲಿ ಕೆಲಸ ಮಾಡುತ್ತೀರಾ ಅಂತ ಕೆಎಸ್‌ಟಿಡಿಸಿ ಸೇರಿದಂತೆ ಕೆಲ ಚಾಲಕರು ಕಿರಿಕ್ ಮಾಡಿದ್ದು, ಪ್ರಯಾಣಿಕರ ಪಿಕಪ್​ಗೆ ಬಂದ ಚಾಲಕರನ್ನ ಅಡ್ಡ ಹಾಕಿದ್ದರಂತೆ.

ಇದನ್ನೂ ಓದಿ: Karnataka Weather: ಏಪ್ರಿಲ್ 13ರವರೆಗೂ ಕರ್ನಾಟಕದ ಈ ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ

ಇದನ್ನೂ ಓದಿ
Image
ಮೆಟ್ರೋ ಕಂಬಗಳು, ಐತಿಹಾಸಿಕ ಕಟ್ಟಡಗಳಿಗೂ ದೀಪಾಲಂಕಾರ: ಡಿಕೆ ಶಿವಕುಮಾರ್
Image
ವಿಧಾನಸೌಧದ ಶಾಶ್ವತ ವರ್ಣರಂಜಿತ ದೀಪಾಲಂಕಾರ ನೋಡಿ
Image
ಯುವತಿಯ ಖಾಸಗಿ ಅಂಗ ಸ್ಪರ್ಶಿಸಿ ವಿಕೃತಿ, ಕೃತ್ಯದ ವಿಡಿಯೋ ವೈರಲ್​
Image
ಸಂಸದ ಸಾಗರ್ ಖಂಡ್ರೆ ಮನೆ ವಿದ್ಯುತ್ ಸಂಪರ್ಕ ಕಡಿತ ಮಾಡಿದ ವ್ಯಕ್ತಿ ಮೇಲೆ FIR

ಅಲ್ಲದೆ ಅಡ್ಡ ಹಾಕಿದ ಟ್ಯಾಕ್ಸಿ ಚಾಲಕರ ಕೀ ಗಳನ್ನ ಕಿತ್ತುಕೊಂಡು ಬಳಿಕ ಆ ಕೀಗಳನ್ನ ಪೊಲೀಸರ ವಶಕ್ಕೆ ನೀಡಿದ್ದು, 20ಕ್ಕೂ ಹೆಚ್ಚು ಟ್ಯಾಕ್ಸಿಗಳನ್ನ ಮೊನ್ನೆ ರಾತ್ರಿಯಿಂದ ನಿನ್ನೆ ಸಂಜೆವರೆಗೂ ಕೆಂಪೇಗೌಡ ಏರ್ಪೋಟ್ ನಲ್ಲೆ ಪೊಲೀಸರು ಸೀಜ್ ಮಾಡಿ ನಿಲ್ಲಿಸಿದ್ದಾರೆ ಅಂತ ಚಾಲಕರು ಆಕ್ರೋಶ ಹೊರ ಹಾಕಿದ್ದಾರೆ.

ನಿನ್ನೆ ಸಂಜೆಯಿಂದ ನೀವು ಅಕ್ರಮವಾಗಿ ಸೈಡ್ ಪಿಕಪ್ ಮಾಡಲು ಬಂದಿದ್ದೀರಾ ಅಂತ ಚಾಲಕರಿಗೆ ದಂಡವನ್ನು ಹಾಕದೆ, ಟ್ಯಾಕ್ಸಿಯನ್ನು ಬಿಡದೆ ಪೊಲೀಸರು ಟ್ಯಾಕ್ಸಿಗಳನ್ನ ನಿಲ್ಲಿಸಿಕೊಂಡಿದ್ದು, ಹಬ್ಬಕ್ಕೆ ಒಂದೆರಡು ಕಾಸು ಮಾಡಿಕೊಳ್ಳೋಣ ಅಂತ ಬಂದ ನಮಗೆ ಕಿರುಕುಳ ನೀಡ್ತಿದ್ದಾರೆ ಅಂತ ಚಾಲಕರು ಆಕ್ರೋಶ ಹೊರ ಹಾಕಿದ್ದಾರೆ.

ಟಿವಿ9 ನಲ್ಲಿ ವರದಿ ಪ್ರಸಾರ ಬೆನ್ನಲ್ಲೇ ಟ್ಯಾಕ್ಸಿ ಬಿಟ್ಟ ಪೊಲೀಸರು

ಅಲ್ಲದೆ ಏರ್ಪೋಟ್​ನ ಕೆಎಸ್ಟಿಡಿಸಿ ಚಾಲಕರು ಸೇರಿದಂತೆ ಬಿಐಎಎಲ್​ ಸಿಬ್ಬಂದಿ ಮಾತು ಕೇಳಿಕೊಂಡು ಪೊಲೀಸರು ನಮಗೆ ಕಿರುಕುಳ ನೀಡುತ್ತಿದ್ದು, ನಮಗೆ ನ್ಯಾಯ ಕೊಡಿಸಿ ಅಂತ ಚಾಲಕರು ಒತ್ತಾಯಿಸಿದರು. ಇನ್ನೂ ಈ ಕುರಿತು ಟಿವಿ9 ನಲ್ಲಿ ವರದಿ ಪ್ರಸಾರವಾಗ್ತಿದ್ದಂತೆ ಎಚ್ಚೆತ್ತ ಕೆಂಪೇಗೌಡ ಏರ್ಪೋಟ್ ಠಾಣೆ ಪೊಲೀಸರು ನಿಲ್ಲಿಸಿದ್ದ 20ಕ್ಕೂ ಅಧಿಕ ಕ್ಯಾಬ್​​ಗಳನ್ನ ಬಿಟ್ಟು ಕಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಹೆಚ್ಚುತ್ತಿದೆ ಚಿಕೂನ್ ಗುನ್ಯಾ, ಡೆಂಗ್ಯೂ: ಒಂದೇ ವಾರದಲ್ಲಿ 100ಕ್ಕೂ ಹೆಚ್ಚು ಪ್ರಕರಣ

ಹಬ್ಬದಂದು ಒಂದೆರಡು ಟ್ರಿಪ್ ಹೆಚ್ಚು ಮಾಡಿಕೊಳ್ಳೋಣ ಅಂತ ಏರ್ಪೋಟ್​ಗೆ ಬಂದ ಟ್ಯಾಕ್ಸಿ ಚಾಲಕರಿಗೆ ಕೆಲ ಚಾಲಕರು ಮಾಡಿದ ಎಡವಟ್ಟಿನಿಂದ ದಿನಪೂರ್ತಿ ಪರದಾಡುವಂತಾಗಿತ್ತು. ಇನ್ನೂ ಇತ್ತೀಚೆಗೆ ಕೆಂಪೇಗೌಡ ಏರ್ಪೋಟ್​ನಲ್ಲಿ ಸೈಡ್ ಪಿಕಪ್ ಚಾಲಕರ ಹಾವಳಿಯು ಹೆಚ್ಚಾಗಿದ್ದು, ಏರ್ಪೋಟ್ ಸಿಬ್ಬಂದಿ ಮತ್ತು ಪೊಲೀಸರು ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವ ಕೆಲಸ ಮಾಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:07 am, Mon, 7 April 25

Follow Us
Naveen Kumar
Naveen Kumar

ನವೀನ್ ಕುಮಾರ್ ಟಿ ಎಂಬ ನಾನು ಮೂಲತಃಹ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಿವಾಸಿಯಾಗಿದ್ದು ಕಳೆದ 9 ವರ್ಷಗಳಿಂದ ನಮ್ಮ ಹೆಮ್ಮೆಯ ಟಿವಿನೈನ್ ನ ದೇವನಹಳ್ಳಿ ಬೆಂಗಳೂರು ಗ್ರಾಮಾತರ ಜಿಲ್ಲಾ ವರದಿಗಾರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಎಂಎಸ್ಸಿ ಎಲೆಕ್ಟ್ರಾನಿಕ್ ಮೀಡಿಯಾ ವ್ಯಾಸಾಂಗ ಮಾಡಿರುವ ನಾನು ಪದವಿ ಮುಗಿಯುತ್ತಿದ್ದಂತೆ ಟಿವಿನೈನ್ ನಲ್ಲಿ ವರದಿಗಾರನಾಗಿ ಉದ್ಯೋಗಕ್ಕೆ ಸೇರಿದ್ದು ಆರು ತಿಂಗಳ ಕಾಲ ಮುಖ್ಯ ಕಛೇರಿಯಲ್ಲಿ ಕೆಲಸ ಮಾಡಿದ್ದೇನೆ. ಜೊತೆಗೆ ಸಂಸ್ಥೆ ನೀಡಿದ ಮಹತ್ವದ ವರದಿಗಾರನ ಉದ್ದೇಯನ್ನ ಪಡೆದು ಕಳೆದ 9 ವರ್ಷದಿಂದ ಸಿಲಿಕಾನ್ ಸಿಟಿ ಹೊರ ವಲಯದಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ದೊಡ್ಡಬಳ್ಳಾಪುರ ಹೊಸಕೋಟೆ ಮತ್ತು ನಗರ ಜಿಲ್ಲೆಯ ಯಲಹಂಕ ಭಾಗದ ಸುದ್ದಿಗಳನ್ನ ವರದಿ ಮಾಡುತ್ತಾ ವರದಿಗಾರನಾಗಿ ಕೆಲಸ ಮಾಡ್ತಿದ್ದೀನಿ. ಪ್ರಮುಖವಾಗಿ ದೇಶದ ಟಾಪ್ 3 ನಲ್ಲಿ ಹೆಸರು ಪಡೆದು ಹೆಸರುವಾಸಿಯಾಗಿರುವ ಕೆಂಪೇಗೌಡ ಅಂತರಾಷ್ಟ್ರಿಯಾ ವಿಮಾನ ನಿಲ್ಥಾಣದ ಪ್ರಮುಖ ಸುದ್ದಿಗಳು ರಾಜಕೀಯ ಹಾಗೂ ಸಿಲಿಕಾನ್ ಸಿಟಿ ಹೊರ ವಲಯದಲ್ಲಿ ನಡೆಯುವ ಕ್ರೈಂ ಸೇರಿದಂತೆ ಇತರೆ ಸುದ್ದಿಗಳನ್ನ ವರದಿ ಮಾಡುತ್ತಾ ಎಕ್ಸಕ್ಲೂಸಿವ್ ವರದಿಗಳನ್ನ ನೀಡುತ್ತಾ ಬಂದಿದ್ದೇನೆ.

Read More
ರಾಮಲಿಂಗಾರೆಡ್ಡಿ ನನಗೆ ತುಂಬಾ ಆತ್ಮೀಯರು, ಸಮಸ್ಯೆ ಬಗೆಹರಿಸುತ್ತೇನೆ: ಸಿಎಂ
ರಾಮಲಿಂಗಾರೆಡ್ಡಿ ನನಗೆ ತುಂಬಾ ಆತ್ಮೀಯರು, ಸಮಸ್ಯೆ ಬಗೆಹರಿಸುತ್ತೇನೆ: ಸಿಎಂ
Live: ಸಚಿವ ರಾಮಲಿಂಗಾ ರೆಡ್ಡಿ ಮಹತ್ವದ ಸುದ್ದಿಗೋಷ್ಠಿ ನೇರ ಪ್ರಸಾರ
Live: ಸಚಿವ ರಾಮಲಿಂಗಾ ರೆಡ್ಡಿ ಮಹತ್ವದ ಸುದ್ದಿಗೋಷ್ಠಿ ನೇರ ಪ್ರಸಾರ
‘ನಂಗೆ ನೀನು ಅಂದ್ರೆ ತುಂಬಾ ಇಷ್ಟ’; ಮನದಾಳದ ಮಾತು ಹೇಳಿದ ರಕ್ಷಿತಾ ಶೆಟ್ಟಿ
‘ನಂಗೆ ನೀನು ಅಂದ್ರೆ ತುಂಬಾ ಇಷ್ಟ’; ಮನದಾಳದ ಮಾತು ಹೇಳಿದ ರಕ್ಷಿತಾ ಶೆಟ್ಟಿ
ಮನೆಯ ಗೆಸ್ಟ್ ರೂಂ ಯಾವ ದಿಕ್ಕಿನಲ್ಲಿದ್ದರೆ ಉತ್ತಮ
ಮನೆಯ ಗೆಸ್ಟ್ ರೂಂ ಯಾವ ದಿಕ್ಕಿನಲ್ಲಿದ್ದರೆ ಉತ್ತಮ
ಇಂದು ಈ ರಾಶಿಯವರು ಹಣಕಾಸಿನ ವಿಷಯದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು!
ಇಂದು ಈ ರಾಶಿಯವರು ಹಣಕಾಸಿನ ವಿಷಯದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು!
‘ಬಾಸ್’ ಸಿನಿಮಾ ನಿರ್ದೇಶಕನಿಗೆ ವಾಣಿಜ್ಯ ಮಂಡಳಿ ನೋಟಿಸ್ ನೀಡಿದ್ದು ಯಾಕೆ?
‘ಬಾಸ್’ ಸಿನಿಮಾ ನಿರ್ದೇಶಕನಿಗೆ ವಾಣಿಜ್ಯ ಮಂಡಳಿ ನೋಟಿಸ್ ನೀಡಿದ್ದು ಯಾಕೆ?
ಡಿಕೆ ಶಿವಕುಮಾರ್ ಸಂಪುಟದ ಸಚಿವರಿಗೆ ಖಾತೆ ಹಂಚಿಕೆ:ಯಾರಿಗೆ ಯಾವ ಖಾತೆ?
ಡಿಕೆ ಶಿವಕುಮಾರ್ ಸಂಪುಟದ ಸಚಿವರಿಗೆ ಖಾತೆ ಹಂಚಿಕೆ:ಯಾರಿಗೆ ಯಾವ ಖಾತೆ?
ದರ್ಶನ್ ತಂಡದ ನೊಟೀಸ್​​ ಬಗ್ಗೆ ‘ಬಾಸ್’ ಸಿನಿಮಾ ತಂಡ ಮಾತು
ದರ್ಶನ್ ತಂಡದ ನೊಟೀಸ್​​ ಬಗ್ಗೆ ‘ಬಾಸ್’ ಸಿನಿಮಾ ತಂಡ ಮಾತು
ಜಿಲ್ಲೆಗಳ ಸಮಸ್ಯೆ ಪಟ್ಟಿ ಮಾಡಿ 25 ದಿನಗಳ ಒಳಗೆ ಕೊಡಿ: ಡಿಕೆಶಿ ಸೂಚನೆ
ಜಿಲ್ಲೆಗಳ ಸಮಸ್ಯೆ ಪಟ್ಟಿ ಮಾಡಿ 25 ದಿನಗಳ ಒಳಗೆ ಕೊಡಿ: ಡಿಕೆಶಿ ಸೂಚನೆ
ಸಿಎಂ ಆದ 2ನೇ ದಿನಕ್ಕೆ ರೌಡಿಗಳ ವಿರುದ್ಧ ಸಮರ ಸಾರಿದ ಡಿಕೆ ಶಿವಕುಮಾರ್!
ಸಿಎಂ ಆದ 2ನೇ ದಿನಕ್ಕೆ ರೌಡಿಗಳ ವಿರುದ್ಧ ಸಮರ ಸಾರಿದ ಡಿಕೆ ಶಿವಕುಮಾರ್!