AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಡುಗೆಗೆ ಸಾಸಿವೆ, ಜೀರಿಗೆ ಬಳಸುವ ಮುನ್ನ ಎಚ್ಚರ: ಅದರಲ್ಲೂ ಕಲಬೆರಿಕೆ, ಬಣ್ಣ ಮಿಕ್ಸ್?

ಅಡುಗೆಗೆ ಮಸಾಲೆ ಪದಾರ್ಥಗಳು ತುಂಬಾನೆ ಮುಖ್ಯ. ಕೆಲವರು ಅಡುಗೆಗೆ ಮಸಾಲ ಪದಾರ್ಥಗಳನ್ನು ಹೆಚ್ಚಾಗಿ ಬಳಕೆ ಮಾಡುತ್ತಾರೆ. ಹೀಗಿರುವಾಗ, ಅನೇಕ ಮಸಾಲೆ ಪದಾರ್ಥಗಳಲ್ಲೂ ಕಲಬೆರೆಕೆ ಮಾಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಕುರಿತು ಮಾಹಿತಿ ಇಲ್ಲಿದೆ. ನಿರಂತರ ಆಹಾರ ಕಲಬೆರೆಕೆ ಹಿನ್ನೆಲೆಯಲ್ಲ ಸಿಟಿ ಜನರು ಕೂಡ ಬೇಸತ್ತು ಹೋಗಿದ್ದಾರೆ.

ಅಡುಗೆಗೆ ಸಾಸಿವೆ, ಜೀರಿಗೆ ಬಳಸುವ ಮುನ್ನ ಎಚ್ಚರ: ಅದರಲ್ಲೂ ಕಲಬೆರಿಕೆ, ಬಣ್ಣ ಮಿಕ್ಸ್?
ಸಾಸಿವೆ, ಜೀರಿಗೆ
Vinay Kashappanavar
| Edited By: |

Updated on:Apr 23, 2025 | 6:43 PM

Share

ಬೆಂಗಳೂರು, ಏಪ್ರಿಲ್​ 23: ಆಹಾರ ಇಲಾಖೆ (Food Department) ಈಗಾಗಲೇ ಜನಸಾಮಾನ್ಯರು ಸೇವಿಸುವ ಆಹಾರದ ಮೇಲೆ ಹದ್ದಿನ ಕಣ್ಣಿಟ್ಟಿದೆ. ಅನೇಕ ಆಹಾರ ಪದಾರ್ಥಗಳ (Food items) ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಪರೀಕ್ಷೆ ನಡೆಸುತ್ತಿದೆ. ಪರೀಕ್ಷಾ ವರದಿ ಆಧರಿಸಿ ಕಳಪೆ ಅಥವಾ ಕಲಬೆರಕೆ ಮಾಡುವವರ ವಿರುದ್ಧ ಕ್ರಮವನ್ನ ಕೈಗೊಳ್ಳುತ್ತಿದೆ. ಇಡ್ಲಿ, ಬಟಾಣಿ ಸೇರಿದಂತೆ ಅನೇಕ ತಿನಿಸುಗಳ ಬಳಿಕ, ಇದೀಗ ಮಸಾಲೆ ಪದಾರ್ಥಗಳ ಮೇಲೆ ಗಮನಹರಿಸಿದೆ.

ಜೀರಿಗೆಯಲ್ಲಿ ಕಲಬೆರೆಕೆ ಜೊತೆಗೆ ಬಣ್ಣ ಕೂಡ ಬಳಕೆ ಮಾಡಲಾಗುತ್ತಿದೆ ಎನ್ನಲಾಗಿದೆ. ಜೀರಿಗೆಗೆ ಬಣ್ಣದ ಕೋಟಿಂಗ್, ಅಥವಾ ಲೆಡ್ ಕ್ರೋಮೆಟ್ ಕೆಮಿಕಲ್ ಮಿಕ್ಸ್ ಮಾಡುವ ಸಾಧ್ಯತೆ ಇರುತ್ತೆ. ಇದರ ಜೊತೆಗೆ ಇದರ ವಾಲ್ಯೂಮ್ ಹೆಚ್ಚಳ ಮಾಡಲು, ಮರದ ಡಸ್ಟ್ ಹಾಗೂ ಕಸ ಮಣ್ಣು ಸೇರಿಸಲಾಗುತ್ತಿದೆ.

ಈ ಹಿನ್ನೆಲೆ ನಗರದಲ್ಲಿ‌ ಕಳಪೆ ಗುಣಮಟ್ಟದ ಜೀರಿಗೆ ಮಾರಾಟವಾಗುತ್ತಿದೆ ಎಂಬ ಮಾಹಿತಿ ದೊರೆತಿದೆ. ಇನ್ನು ಆಹಾರ ಪದಾರ್ಥಗಳಲ್ಲಿನ ಕಲಬೆರಕೆಯಿಂದ ಆರೋಗ್ಯದ ಮೇಲೆ ಗಂಭಿರ ಪರಿಣಾಮ ಬೀರುತತ್ತದೆ. ಹೀಗಾಗಿ, ಎಚ್ಚರವಹಿಸುವಂತೆ ಆಹಾರ ತಜ್ಞರು ಎಚ್ಚರಿಸಿದ್ದಾರೆ.

ಇದನ್ನೂ ಓದಿ
Image
ಹುಬ್ಬಳ್ಳಿಯಲ್ಲಿ ನಕಲಿ ಆಹಾರ ಇಲಾಖೆ ಅಧಿಕಾರಿಗಳ ಹಾವಳಿ: ಇಬ್ಬರ ಬಂಧನ
Image
ಲ್ಯಾಬ್ ವರದಿಯಲ್ಲಿ ಸ್ಫೋಟಕ ಅಂಶ ಪತ್ತೆ: ಬಟಾಣಿ ಬ್ಯಾನ್​ ಆಗುತ್ತಾ?
Image
ಇಡ್ಲಿ ಬಳಿಕ ಬಟಾಣಿಯಲ್ಲೂ ಆರೋಗ್ಯಕ್ಕೆ ಹಾನಿಕಾರಕ ಅಂಶ ಪತ್ತೆ: ಆರೋಗ್ಯ ಇಲಾಖೆ
Image
ಬೆಂಗಳೂರಿಗರಿಗೆ ಶಾಕಿಂಗ್ ಸುದ್ದಿ: ಇಡ್ಲಿ ತಿಂದರೂ ಬರಬಹುದು ಕ್ಯಾನ್ಸರ್‌!

ಇನ್ನು, ಈಗಾಗಲೇ ಬೆಂಗಳೂರಿನ ಅನೇಕ ಭಾಗಗಳಲ್ಲಿ ಸುಮಾರು 50ಕ್ಕೂ ಹೆಚ್ಚು ಕಡೆಗಳಿಂದ ಜೀರಿಗೆಯ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಈ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದು, ಇದ್ರ ವರದಿ ಕೆಲವೇ ದಿನಗಳಲ್ಲಿ ಬರಲಿದೆ. ಇದರಲ್ಲಿ ಏನೆಲ್ಲ ಅಂಶಗಳು ಸೇರಿದೆ ಎನ್ನುವುದನ್ನ ತಿಳಿದ ಬಳಿಕ ಕಲಬೆರೆಕೆ ಅಥವಾ ಬಣ್ಣದ ಕೋಟಿಂಗ್ ಮಾಡಲಾಗುತ್ತಿದಿಯಾ ಅನ್ನೋದ್ರ ಕುರಿತು ಕ್ರಮ ಕೈಗೊಳ್ಳಲು ಆಹಾರ ಇಲಾಖೆ ಪ್ಲಾನ್ ಮಾಡುತ್ತಿದೆ. ಇನ್ನು ರೆ.ನಿರಂತರ ಆಹಾರ ಕಲಬೆರೆಕೆ ಹಿನ್ನೆಲೆಯಲ್ಲ ಸಿಟಿ ಜನರು ಕೂಡ ಬೇಸತ್ತು ಹೋಗಿದ್ದಾ

ಇದನ್ನೂ ಓದಿ: ಪನ್ನೀರ್ ಪ್ರಿಯರಿಗೆ ಶಾಕಿಂಗ್ ಸುದ್ದಿ: ಆಹಾರ ಇಲಾಖೆ ಪರೀಕ್ಷೆ ವೇಳೆ ಬ್ಯಾಕ್ಟೀರಿಯಾ ಅಂಶ ಪತ್ತೆ

ಒಟ್ಟಿನಲ್ಲಿ ಜನರ ಆರೋಗ್ಯಕ್ಕೆ ಅನೇಕ ತಿನಿಸುಗಳ ಕೆಟ್ಟ ಪರಿಣಾಮ ಬೀರುತ್ತಿದ್ವು. ಇದೀಗ ಮಸಾಲೆ ಪದಾರ್ಥಗಳು ಕೂಡಾ ಇದೇ ಸಾಲಿಗೆ ಸೇರುತ್ತಾ ಇಲ್ವಾ ಅನ್ನೋದನ ವರದಿ ಬಂದ ಬಳಿಕ ತಿಳಿಯಲಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:37 pm, Wed, 23 April 25

Follow Us
ಕ್ಲಾಸ್ ರೂಂನಲ್ಲೇ ಶಿಕ್ಷಕನಿಗೆ ಹೊಡೆದ 10ನೇ ತರಗತಿ ವಿದ್ಯಾರ್ಥಿ!
ಕ್ಲಾಸ್ ರೂಂನಲ್ಲೇ ಶಿಕ್ಷಕನಿಗೆ ಹೊಡೆದ 10ನೇ ತರಗತಿ ವಿದ್ಯಾರ್ಥಿ!
ಆಗ್ರಾ-ಲಖನೌ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: ವಿಡಿಯೋ ವೈರಲ್
ಆಗ್ರಾ-ಲಖನೌ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: ವಿಡಿಯೋ ವೈರಲ್
ಪ್ರತಿದಿನ ಆಕೆ ಹಿಂಸೆ ನೀಡುತ್ತಾಳೆ ಎಂದ ಶಾಲೆ ಮುಖ್ಯ ಶಿಕ್ಷಕ
ಪ್ರತಿದಿನ ಆಕೆ ಹಿಂಸೆ ನೀಡುತ್ತಾಳೆ ಎಂದ ಶಾಲೆ ಮುಖ್ಯ ಶಿಕ್ಷಕ
ಹಾರ್ಮುಜ್ ಜಲಸಂಧಿ ಕ್ಲೋಸ್: ಪರ್ಷಿಯನ್ ಕೊಲ್ಲೀಲಿ ಸಿಲುಕಿದ ಭಾರತದ 37 ಹಡಗು
ಹಾರ್ಮುಜ್ ಜಲಸಂಧಿ ಕ್ಲೋಸ್: ಪರ್ಷಿಯನ್ ಕೊಲ್ಲೀಲಿ ಸಿಲುಕಿದ ಭಾರತದ 37 ಹಡಗು
ದಾವಣಗೆರೆ ಜಿಲ್ಲಾಧಿಕಾರಿ ನಿವಾಸಕ್ಕೆ ಬಾಂಬ್ ಬೆದರಿಕೆ
ದಾವಣಗೆರೆ ಜಿಲ್ಲಾಧಿಕಾರಿ ನಿವಾಸಕ್ಕೆ ಬಾಂಬ್ ಬೆದರಿಕೆ
ದಂಪತಿ ಜಗಳ ಶಾಲೆ ತನಕ:ಶಿಕ್ಷಕನಿಗಾಗಿ ಗಲಾಟೆ ಮಾಡಿದ ಪತ್ನಿ ಹೇಳಿದ್ದೇನು?
ದಂಪತಿ ಜಗಳ ಶಾಲೆ ತನಕ:ಶಿಕ್ಷಕನಿಗಾಗಿ ಗಲಾಟೆ ಮಾಡಿದ ಪತ್ನಿ ಹೇಳಿದ್ದೇನು?
ಹಾಲು ಮಾರುವ ಕೆಲಸ ಕೊಟ್ಟದ್ದಾರೆ: ಡಿ.ಕೆ.ಸುರೇಶ್
ಹಾಲು ಮಾರುವ ಕೆಲಸ ಕೊಟ್ಟದ್ದಾರೆ: ಡಿ.ಕೆ.ಸುರೇಶ್
ಡಿಕೆ, ನಾನು ಹಾಲು ಜೇನು ಇದ್ದಂತೆ ಎಂದ ಸಿದ್ದು ಹೇಳಿಕೆಗೆ ಜೋಶಿ ವ್ಯಂಗ್ಯ
ಡಿಕೆ, ನಾನು ಹಾಲು ಜೇನು ಇದ್ದಂತೆ ಎಂದ ಸಿದ್ದು ಹೇಳಿಕೆಗೆ ಜೋಶಿ ವ್ಯಂಗ್ಯ
ಶಾಲೆಗೆ ಬಂದು ಮುಖ್ಯಶಿಕ್ಷಕನ 2ನೇ ಪತ್ನಿ ಹೈಡ್ರಾಮಾ: ವಿದ್ಯಾರ್ಥಿಗಳು ಕಂಗಾಲು
ಶಾಲೆಗೆ ಬಂದು ಮುಖ್ಯಶಿಕ್ಷಕನ 2ನೇ ಪತ್ನಿ ಹೈಡ್ರಾಮಾ: ವಿದ್ಯಾರ್ಥಿಗಳು ಕಂಗಾಲು
ಜಮ್ಮು ಕಾಶ್ಮೀರ: ಕುಣಿದು ಕುಪ್ಪಳಿಸಿ ಹೋಳಿ ಆಚರಿಸಿದ ಸಿಆರ್​ಪಿಎಫ್ ಯೋಧರು!
ಜಮ್ಮು ಕಾಶ್ಮೀರ: ಕುಣಿದು ಕುಪ್ಪಳಿಸಿ ಹೋಳಿ ಆಚರಿಸಿದ ಸಿಆರ್​ಪಿಎಫ್ ಯೋಧರು!