ಲ್ಯಾಬ್ ವರದಿಯಲ್ಲಿ ಸ್ಫೋಟಕ ಅಂಶ ಪತ್ತೆ: ಬಟಾಣಿ ಬ್ಯಾನ್ ಆಗುತ್ತಾ?
ಬೋರ್ ಆದ್ರೆ ಬಾಯಾಡಿಸೋಕೆ ಬಟಾಣಿ ಬೇಕೇ ಬೇಕು. ಕಟುಮ್ ಕುಟುಮ್ ಅಂತಾ ಕರಿದ ಬಟಾಣಿ ತಿಂತಿದ್ರೆ ಇನ್ನೂ ಬೇಕು ಅನ್ನಿಸುತ್ತೆ.. ಆದ್ರೆ, ಇದೀಗ ಇದೇ ಬಟಾಣಿ ಜೀವಕ್ಕೂ ಕುತ್ತು ತರಲಿದೆ. ಕೃತಕ ಕಲರ್ ಮಿಕ್ಸ್ ಮಾಡಿ ಬಟಾಣಿ ಬ್ಯಾನ್‌ಗೆ ಆಹಾರ ಇಲಾಖೆಯು ಸರ್ಕಾರಕ್ಕೆ ಶಿಫಾರಸು ಮಾಡಿದೆ. ಹಾಗಾದ್ರೆ, ಪ್ರಾಥಮಿಕ ಲ್ಯಾಬ್ ವರದಿಯಲ್ಲಿ ಬಟಾಣಿಯಲ್ಲಿ ಯಾವ ಅಂಶ ಪತ್ತೆಯಾಗಿದೆ ಎನ್ನುವ ವಿವರ ಇಲ್ಲಿದೆ.

ಬೆಂಗಳೂರು, (ಮಾರ್ಚ್ 09): ಇಡ್ಲಿ ಬೇಯಿಸಲು(Idli) ಪ್ಲಾಸ್ಟಿಕ್ ಹಾಳೆಗಳನ್ನು ಬಳಸುವುದರಿಂದ ಕ್ಯಾನ್ಸರ್ಕಾರಕ ಅಂಶ ಬಿಡುಗಡೆಯಾಗುತ್ತದೆ ಎಂದು ಪರೀಕ್ಷೆಯಲ್ಲಿ ದೃಢಪಟ್ಟಿದೆ. ಹೀಗಾಗಿ ಹೊಟೇಲ್, ಉಪಾಹಾರ ಮತ್ತು ತಿನಿಸು ಕೇಂದ್ರಗಳಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲಾಗುವುದು ಎಂದು ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಈಗಾಗಲೇ ಆದೇಶ ಹೊರಡಿಸಿದ್ದಾರೆ. ಇದರ ಬೆನ್ನಲ್ಲೇ ಇದೀಗ ಬಟಾಣಿಯಲ್ಲಿ(peas) ಕೃತಕ ಕಲಬೆರಕೆ ಅಂಶ ಪತ್ತೆಯಾಗಿದೆ. ಈಗಾಗಲೇ ಆಹಾರ ಇಲಾಖೆ ಆಯುಕ್ತ ಶ್ರೀನಿವಾಸ್ ಕಲರ್ ಬಳಕೆ ನಿಷೇಧದ ಬಗ್ಗೆ ಶಿಫಾರಸು ಮಾಡಿದ್ದಾರೆ.
ಹೌದು.. ಬಟಾಣಿಯಲ್ಲಿ ಕೃತಕ ಕಲಬೆರಕೆ ಅಂಶ ಪತ್ತೆಯಾಗಿದೆ. ಪ್ರಾಥಮಿಕ ಲ್ಯಾಬ್ ವರದಿಯಲ್ಲಿ ಸ್ಫೋಟಕ ಅಂಶ ಬಯಲಾಗಿದ್ದು, ಬ್ರಿಲಿಯಂಟ್ ಬ್ಲೂ, ಟೆಟಾರ್ಜಿನ್ ಅಂದ್ರೆ ಹಳದಿ ಬಣ್ಣವಿರುವ ರಾಸಾಯನಿಕ ಇರುವುದು ಪತ್ತೆಯಾಗಿದೆ. ಬಟಾಣಿಯಲ್ಲೂ ಕ್ಯಾನ್ಸರ್ ತರುವ ಅಂಶ ಬೆಳಕಿಗೆ ಬಂದಿದೆ. ಈಗಾಗಲೇ ಆಹಾರ ಇಲಾಖೆ ಆಯುಕ್ತ ಶ್ರೀನಿವಾಸ್ ಕಲರ್ ಬಳಕೆ ನಿಷೇಧದ ಬಗ್ಗೆ ಶಿಫಾರಸು ಮಾಡಿದ್ದಾರೆ.
ಇದನ್ನೂ ಓದಿ: ಇಡ್ಲಿ ಬಳಿಕ ಬಟಾಣಿಯಲ್ಲೂ ಆರೋಗ್ಯಕ್ಕೆ ಹಾನಿಕಾರಕ ಅಂಶ ಪತ್ತೆ: ಆರೋಗ್ಯ ಇಲಾಖೆ
ಆದ್ರೆ, ಮತ್ತೊಂದು ಸುತ್ತಿನ ಪರೀಕ್ಷೆ ಬಳಿಕ ಬಟಾಣಿಗೆ ಬಣ್ಣ ಬಳಕೆ ಬ್ಯಾನ್‌ಗೆ ಸಿದ್ಧತೆ ನಡೆಸಿದ್ದಾರೆ. ಮತ್ತೊಂದೆಡೆ ಕರಿದ ಬಟಾಣಿಯಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆಯಾದ್ರೂ, ಬೆಂಗಳೂರಲ್ಲಿ ಮಾತ್ರ ಕಲರ್ಫುಲ್ ಬಟಾಣಿ ಮಾರಾಟ ಮಾತ್ರ ನಿಂತಿಲ್ಲ. ಮೆಜೆಸ್ಟಿಕ್ನ ಅನೇಕ ಅಂಗಡಿಗಳಲ್ಲಿ ಬಟಾಣಿ ಮಾರಾಟ ಮಾಡುತ್ತಿರುವುದು ಟಿವಿ9 ರಿಯಾಲಿಟಿ ಚೆಕ್ನಲ್ಲಿ ಬಯಲಾಗಿದೆ.
ಕರಿದ ಬಟಾಣಿ ಬಹುತೇಕ ಟೈಮ್ ಪಾಸ್ ಆಹಾರವಾಗಿದೆ. ಶಾಲಾ, ಕಾಲೇಜುಗಳ ಬಳಿ ಸಣ್ಣ, ಸಣ್ಣ ಪ್ಲಾಸ್ಟಿಕ್ ಪಾಕೆಟ್‌ಗಳಲ್ಲಿ ಕರಿದ ಬಟಾಣಿ ಹೆಚ್ಚು ಮಾರಾಟ ಮಾಡಲಾಗುತ್ತದೆ. ಈ ಬಟಾಣಿಯನ್ನು ಮಕ್ಕಳು ಹೆಚ್ಚಾಗಿ ತಿನ್ನುತ್ತಿದ್ದಾರೆ. ಇನ್ನು ದೊಡ್ಡವರು ಸಹ ಟೈಮ್ ಪಾಸ್ಗೆ ಅಂತ ಈ ಬಟಾಣಿ ತಿನ್ನುತ್ತಾರೆ. ಇನ್ನು ಬಾರ್ಗಳಲ್ಲೂ ಸಹ ಎಣ್ಣೆ ಜೊತೆ ಸ್ನ್ಯಾಕ್ಸ್ ಅಂತ ಈ ಬಟಾಣಿ ಮಾರಾಟ ಮಾಡಲಾಗುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ