Bengaluru Metro: ಆಗಸ್ಟ್‌ ವೇಳೆಗೆ ಬೆನ್ನಿಗನಹಳ್ಳಿ-ಚಲ್ಲಘಟ್ಟ ಮೆಟ್ರೋ ನೇರಳೆ ಲೈನ್ ಸಂಪೂರ್ಣ

|

Updated on: Jun 23, 2023 | 11:51 AM

Bengaluru news: ಮದ್ರಾಸ್ ರಸ್ತೆಯ ಬೆನ್ನಿಗನಹಳ್ಳಿ ಮತ್ತು ಮೈಸೂರು ರಸ್ತೆಯ ಚಲ್ಲಘಟ್ಟದಲ್ಲಿ ನಿರ್ಮಾಣ ಹಂತದಲ್ಲಿರುವ ನಮ್ಮ ಮೆಟ್ರೋ ನೇರಳೆ ಮಾರ್ಗ ಆಗಸ್ಟ್ ವೇಳೆಗೆ ಪೂರ್ಣಗೊಳಿಸಲು ಕಾಮಗಾರಿಗೆ ಮತ್ತಷ್ಟು ವೇಗ ನೀಡಲಾಗಿದೆ.

Bengaluru Metro: ಆಗಸ್ಟ್‌ ವೇಳೆಗೆ ಬೆನ್ನಿಗನಹಳ್ಳಿ-ಚಲ್ಲಘಟ್ಟ ಮೆಟ್ರೋ ನೇರಳೆ ಲೈನ್ ಸಂಪೂರ್ಣ
ಆಗಸ್ಟ್‌ ವೇಳೆಗೆ ಬೆನ್ನಿಗನಹಳ್ಳಿ-ಚಲ್ಲಘಟ್ಟ ಮೆಟ್ರೋ ನೇರಳೆ ಲೈನ್ ಸಂಪೂರ್ಣ
Image Credit source: IANS
Follow us on

ಬೆಂಗಳೂರು: ನಗರದ ಹಳೆಯ ಮದ್ರಾಸ್ ರಸ್ತೆಯ ಬೆನ್ನಿಗನಹಳ್ಳಿ ಮತ್ತು ಮೈಸೂರು ರಸ್ತೆಯ ಚಲ್ಲಘಟ್ಟದಲ್ಲಿ ನಿರ್ಮಾಣ ಹಂತದಲ್ಲಿರುವ ನಮ್ಮ ಮೆಟ್ರೋ (Namma Metro) ನೇರಳೆ ಮಾರ್ಗ ಆಗಸ್ಟ್ ವೇಳೆಗೆ ಪೂರ್ಣಗೊಳಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು (BMRCL) ಕಾಮಗಾರಿಗೆ ಮತ್ತಷ್ಟು ವೇಗ ನೀಡಿದೆ. ಈ ಮಾರ್ಗವು ಜುಲೈ ತಿಂಗಳಲ್ಲಿ ಪೂರ್ಣಗೊಳ್ಳಬೇಕಿತ್ತು. ಆದರೆ ತಾಂತ್ರಿಕ ಕಾರಣಗಳಿಂದ ಕಾಮಗಾರಿಗಳನ್ನು ಮುಂದೂಡಲಾಗಿತ್ತು.

ಆದಾಗ್ಯೂ, 4 ಕಿ.ಮೀ.ಗೂ ಅಧಿಕ ಉದ್ದದ ಎರಡು ಬಾಕಿ ಇರುವ ವಿಸ್ತರಣೆ ಕಾಮಗಾರಿಯನ್ನು ಈಗ ತ್ವರಿತಗತಿಯಲ್ಲಿ ಮಾಡಲಾಗುತ್ತಿದೆ. ಈ ನೇರಳೆ ಮಾರ್ಗವು ಚಲ್ಲಘಟ್ಟವನ್ನು ವೈಟ್‌ಫೀಲ್ಡ್ (ಕಾಡುಗೋಡಿ) ನೊಂದಿಗೆ ಸಂಪರ್ಕಿಸಲಿದ್ದು, ಸುಮಾರು 43.5-ಕಿಮೀ ಉದ್ದದ ಮಾರ್ಗವಾಗಿದೆ. ನಗರದ ಪೂರ್ವ ಮತ್ತು ಪಶ್ಚಿಮ ಭಾಗಗಳ ನಡುವಿನ ಪ್ರಯಾಣವನ್ನು ಇನ್ನಷ್ಟು ಸುಲಭವಾಗಲಿದೆ.

ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕೆಆರ್ ಪುರಂನಿಂದ ವೈಟ್‌ಫೀಲ್ಡ್ ವರೆಗಿನ ವಿಸ್ತರಣೆಯ ಒಂದು ಭಾಗವನ್ನು ಉದ್ಘಾಟಿಸಿದ್ದರು. ಬೆನ್ನಿಗನಹಳ್ಳಿಯಲ್ಲಿ ಕಾಮಗಾರಿ ಬಾಕಿ ಇರುವ ಕಾರಣ ಬೈಯಪ್ಪನಹಳ್ಳಿ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲು ಸಾಧ್ಯವಾಗಿಲ್ಲ. ಕೆಂಗೇರಿ ಮತ್ತು ಚಲ್ಲಘಟ್ಟ ನಿಲ್ದಾಣಗಳ ನಡುವೆ ಕಾಮಗಾರಿ ಬಾಕಿ ಇತ್ತು.

ಇದನ್ನೂ ಓದಿ: Bengaluru: ಮೆಟ್ರೋ ಪಿಲ್ಲರ್ ಕುಸಿದು ತಾಯಿ, ಮಗನ ದುರ್ಮರಣ ಪ್ರಕರಣ: ಚಾರ್ಜ್ ಶೀಟ್ ಸಲ್ಲಿಸಿದ ಪೊಲೀಸರು

ಚಲ್ಲಘಟ್ಟ ನಡುವಿನ ಕಾಮಗಾರಿಗಳು ಮುಕ್ತಾಯದ ಹಂತ ತಲುಪಿದ್ದು, ಶೀಘ್ರದಲ್ಲೇ ಪ್ರಾಯೋಗಿಕ ಚಾಲನೆಗಳು ಪ್ರಾರಂಭವಾಗಲಿವೆ ಎಂದು BMRCL ಎಂಡಿ ಅಂಜುಮ್ ಪರ್ವೇಜ್ಕೆಂಗೇರಿ ಅವರು ಸುದ್ದಿ ಸಂಸ್ಥೆ ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದ್ದಾರೆ. ”ಬೆನ್ನಿಗನಹಳ್ಳಿ ನಿಲ್ದಾಣದ ಮುಂಭಾಗ ಕಾಮಗಾರಿಗೆ ಹೆಚ್ಚು ಸಮಯ ಹಿಡಿಯುತ್ತದೆ, ಹಳೆ ಮದ್ರಾಸ್ ರಸ್ತೆಯಲ್ಲಿ ನಿಲ್ದಾಣ ನಿರ್ಮಾಣವಾಗಿರುವುದರಿಂದ ಕಾಮಗಾರಿ ನಡೆಸಲು ಮೆಟ್ರೊ ನಿಲ್ದಾಣದ ಬಳಿ ಸಂಚಾರ ಮಾರ್ಗ ಬದಲಿಸುವ ಅಗತ್ಯವಿದ್ದು, ಇದಕ್ಕೆ ಅನುಮತಿ ಸಿಕ್ಕಿದೆ. ಪ್ರಯೋಗಾರ್ಥ ಕೆಆರ್ ಪುರಂ ಮತ್ತು ಬೈಯಪ್ಪನಹಳ್ಳಿ ನಿಲ್ದಾಣಗಳ ನಡುವೆ ಜುಲೈ ಮಧ್ಯದ ವೇಳೆಗೆ ಪ್ರಾರಂಭವಾಗಲಿದೆ.

ಚಲ್ಲಘಟ್ಟ ಮತ್ತು ವೈಟ್‌ಫೀಲ್ಡ್ (ಕಾಡುಗೋಡಿ) ನಡುವೆ ಪ್ರಯಾಣಿಸಲು ಸರಿಸುಮಾರು 1 ಗಂಟೆ 40 ನಿಮಿಷಗಳು ತೆಗೆದುಕೊಳ್ಳುತ್ತದೆ ಎಂದು ಪರ್ವೇಜ್ ಹೇಳಿದ್ದಾರೆ. ಬಸ್ ಅಥವಾ ಕ್ಯಾಬ್ ಮೂಲಕ ಅದೇ ದೂರವನ್ನು ಕ್ರಮಿಸಲು ಸಾಮಾನ್ಯವಾಗಿ ಗರಿಷ್ಠ ಸಮಯದಲ್ಲಿ ಎರಡು ಗಂಟೆಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಪರ್ಪಲ್ ಲೈನ್ ಸಂಪೂರ್ಣವಾಗಿ ಕಾರ್ಯಾರಂಭಗೊಂಡಾಗ ದಿನಕ್ಕೆ ಕನಿಷ್ಠ 70,000 ಪ್ರಯಾಣಿಕರು ಪ್ರಯಾಣಿಸುವ ನಿರೀಕ್ಷೆ ಹೊಂದಿದ್ದೇವೆ ಎಂದು ಪರ್ವೇಜ್ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:10 am, Fri, 23 June 23