Bengaluru News: ಮತ್ತೆ ಯಥಾಸ್ಥಿತಿಗೆ ಬಂದ BMTC VOLVO ಟಿಕೆಟ್ ದರ; ಹೀಗಿದೆ ಟಿಕೆಟ್ ದರಗಳು
ಕೊರೋನಾ ಹಿನ್ನಲೆಯಲ್ಲಿ ಟಿಕೆಟ್ ದರ ಕಡಿಮೆ ಮಾಡಿ ಪ್ರಯಾಣಿಕರಿಗೆ ಸಿಹಿ ಸುದ್ದಿ ಕೊಟ್ಟಿದ್ದ BMTC, ಇದೀಗ ಇಂಧಿನ ಬೆಲೆ ಏರಿಕೆ ಹಿನ್ನಲೆ ಮತ್ತೆ ಹಳೆಯ ಟಿಕೆಟ್ ದರ ಜಾರಿ ಮಾಡಿದೆ.

ಬೆಂಗಳೂರು: ಕೊರೋನಾ ಮಹಾಮಾರಿ ಸೋಂಕು (Covid-19) ವ್ಯಾಪಕವಾಗಿ ಹರಡಿದ್ದರಿಂದ ಇದರ ನಿಗ್ರಹಕ್ಕೆ ಜಾರಿ ಮಾಡಿದ್ದ ಕಠಿಣ ನಿಯಮ (Covid Guidelines)ಗಳು ಜನಸಾಮಾನ್ಯರ ಆರ್ಥಿಕ ಸ್ಥಿತಿಗತಿ ಕುಸಿದಿತ್ತು. ಹೀಗಾಗಿ ಇಂತಹ ಜನರ ಅನುಕೂಲಕ್ಕಾಗಿ BMTC ವೋಲ್ವೋ ಟಿಕೆಟ್ ದರ (BMTC Volvo ticket price)ವನ್ನು ಕಡಿತಗೊಳಿಸಲಾಗಿತ್ತು. ಇದೀಗ ಇಂಧನ ಬೆಲೆ (Fuel Price) ಹೆಚ್ಚಾದ ಹಿನ್ನಲೆ ಮೊದಲಿನ ಟಿಕೆಟ್ ದರವನ್ನೇ ಮತ್ತೆ ಜಾರಿ ಮಾಡಿದೆ.
2021ರ ಡಿಸೆಂಬರ್ 15ರಂದು ವಜ್ರ ಬಸ್ ಟಿಕೆಟ್ ದರ ಕಡಿಮೆ ಮಾಡಿ ಆದೇಶಿಸಲಾಗಿತ್ತು. ಇದೀಗ ಇಂದಿನಿಂದ ಬಿಎಂಟಿಸಿ ವೋಲ್ವೋ ಬಸ್ಗಳ ಟಿಕೆಟ್ ದರ ಯಥಾಸ್ಥಿತಿಗೆ ಮರಳಿದ್ದು, ಇಂಧಿನ ಬೆಲೆ ಏರಿಕೆ ಹಿನ್ನಲೆ ನಿಗಮವು ಮತ್ತೆ ಹಳೆಯ ಟಿಕೆಟ್ ದರವನ್ನೇ ಜಾರಿ ಮಾಡಿದೆ. ಅಂದು ಶೇ 34 ರಷ್ಟು ಟೆಕೆಟ್ ದರ ಕಡಿತಗೊಳಿಸಿತ್ತು. ಹಾಗಿದ್ದರೆ ಈಗ ಬಸ್ ಟಿಕೆಟ್ ದರ ಎಷ್ಟಿದೆ? ಇಲ್ಲಿದೆ ನೋಡಿ.
ಬಿಎಂಟಿಸಿ ವೋಲ್ವೋ ಬಸ್ ಟಿಕೆಟ್ ದರ
ಸಾಮಾನ್ಯ ದರ 20 ರೂಪಾಯಿ (19 ರೂ. + 1 ರೂ. GST) ರಿಂದ 25 ರೂಪಾಯಿ (23.81 ರೂ. + 1.19 ರೂ. GST)ಕ್ಕೆ ಏರಿಕೆ ಮಾಡಲಾಗಿದೆ. ಮಾಸಿಕ ಪಾಸ್ ದರ 1500 ರೂಪಾಯಿ (1428 ರೂ. + 72 ರೂ. GST) ರಿಂದ 1800 ರೂಪಾಯಿ (1714.29 ರೂ. + 85.71 ರೂ. GST) ಕ್ಕೆ ಏರಿಕೆ ಮಾಡಲಾಗಿದೆ. ದೈನಿಕ ಪಾಸ್ ದರ 100 ರೂಪಾಯಿ (95 ರೂ. + 5 ರೂ. GST) ರಿಂದ 120 ರೂಪಾಯಿ (114.29 ರೂ. + 5.21 ರೂ. GST) ಕ್ಕೆ ಏರಿಕೆ ಮಾಡಲಾಗಿದೆ.
ಇದನ್ನೂ ಓದಿ: ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್ವೇಯಿಂದ ಎರಡೂವರೆ ಗಂಟೆ ಪ್ರಯಾಣದ ಸಮಯ ಉಳಿಯಲಿದೆ; ಕೇಂದ್ರ ಸಚಿವ ನಿತಿನ್ ಗಡ್ಕರಿ ಮಾಹಿತಿ
ಇತ್ತೀಚೆಗಷ್ಟೇ ಹೆಚ್ಚುತ್ತಿರುವ ಇಂಧನ ಬೆಲೆಯ ಹಿನ್ನಲೆ, ಮಾಸಿಕ ಪಾಸ್, ದಿನದ ಪಾಸ್ ಹಾಗೂ ದಿನದ ಟಿಕೆಟ್ ದರವನ್ನ ಹೆಚ್ಚಿಸುವ ಮೂಲಕ ಬಿಎಂಟಿಸಿ ಪ್ರಯಾಣಿಕರಿಗೆ ಶಾಕ್ ನೀಡಿತ್ತು. ಹೊಸ ವರ್ಷದ ಮೊದಲ ವಾರದಿಂದಲೇ ಬಿಎಂಟಿಸಿ ಪ್ರಯಾಣಿಕರಿಗೆ ನಿರಾಸೆ ಮೂಡಿಸಿದ್ದು, ಬಿಎಂಟಿಸಿ ಸಂಸ್ಥೆಯ ಆರ್ಥಿಕ ನಷ್ಟ ಸರಿದೂಗಿಸಲು ಈ ತೀರ್ಮಾನ ಕೈಗೊಳ್ಳಲಾಗಿತ್ತು, ಇದರ ಜೊತೆಗೆ ಮಾಸಿಕ ಪಾಸ್ ತೆಗೆದುಕೊಂಡವರಿಗೆ ಮತ್ತೊಂದು ಶಾಕ್ ನೀಡಿತ್ತು. ಸಾಮಾನ್ಯ ಪಾಸ್ ಹಾಗೂ ಹಿರಿಯ ನಾಗರಿಕರ ಪಾಸ್ ಪಡೆದವರು ಭಾನುವಾರ ಪಾಸ್ ಬಳಸಿ ಉಚಿತ ಪ್ರಯಾಣ ಮಾಡುವಂತಿಲ್ಲ ಎಂದು ಹೇಳಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:11 pm, Thu, 5 January 23