ಬೆಂಗಳೂರು ಕಂಟೋನ್ಮೆಂಟ್​ ರೈಲು ನಿಲ್ದಾಣದ 2 ಪ್ಲಾಟ್​ಫಾರ್ಮ್ 92 ದಿನ ಬಂದ್: 44 ರೈಲುಗಳಿಗಿಲ್ಲ ನಿಲುಗಡೆ, ಇಲ್ಲಿದೆ ವಿವರ

|

Updated on: Sep 09, 2024 | 9:52 AM

ಬೆಂಗಳೂರಿನ ರೈಲು ಪ್ರಯಾಣಿಕರ ಪ್ರಯಾಣದ ಯೋಜನೆಯಲ್ಲಿ ಮುಂದಿನ ಕೆಲವು ದಿನಗಳ ಕಾಲ ತುಸು ವ್ಯತ್ಯಯವಾಗಬಹುದು. ಇದಕ್ಕೆ ಕಾರಣ ಬೆಂಗಳೂರು ಕಂಟೋನ್ಮೆಂಟ್ ರೈಲು ನಿಲ್ದಾಣದ ಪ್ಲಾಟ್​ಫಾರ್ಮ್ 2 ಹಾಗೂ 3ರಲ್ಲಿ ನಡೆಯಲಿರುವ ಕಾಮಗಾರಿ. ಪರಿಣಾಮವಾಗಿ 92 ದಿನಗಳ ಕಾಲ 42 ರೈಲುಗಳು ಇಲ್ಲಿ ನಿಲುಗಡೆ ಹೊಂದಿರುವುದಿಲ್ಲ. ಯಾವಾಗಿನಿಂದ ನಿಲುಗಡೆ ರದ್ದು? ಯಾವೆಲ್ಲರ ರೈಲುಗಳ ನಿಲುಗಡೆ ರದ್ದು ಎಂಬ ವಿವರ ಇಲ್ಲಿದೆ.

ಬೆಂಗಳೂರು ಕಂಟೋನ್ಮೆಂಟ್​ ರೈಲು ನಿಲ್ದಾಣದ 2 ಪ್ಲಾಟ್​ಫಾರ್ಮ್ 92 ದಿನ ಬಂದ್: 44 ರೈಲುಗಳಿಗಿಲ್ಲ ನಿಲುಗಡೆ, ಇಲ್ಲಿದೆ ವಿವರ
ಬೆಂಗಳೂರು ಕಂಟೋನ್ಮೆಂಟ್​ ರೈಲು ನಿಲ್ದಾಣದ 2 ಪ್ಲಾಟ್​ಫಾರ್ಮ್ 92 ದಿನ ಬಂದ್
Image Credit source: India Rail info
Follow us on

ಬೆಂಗಳೂರು, ಸೆಪ್ಟೆಂಬರ್ 9: ಬೆಂಗಳೂರು ಕಂಟೋನ್ಮೆಂಟ್ (ಬಿಎನ್‌ಸಿ) ರೈಲು ನಿಲ್ದಾಣದ ಎರಡು ಪ್ಲಾಟ್​ಫಾರ್ಮ್​​ಗಳಲ್ಲಿ ಸೆಪ್ಟೆಂಬರ್ 20 ರಿಂದ ಡಿಸೆಂಬರ್ 20 ರವರೆಗೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿರುವುದರಿಂದ, ನಿಲ್ದಾಣವು ಭಾಗಶಃ ಕಾರ್ಯಾಚರಣೆ ನಡೆಸಲಿದೆ. ಪ್ಲಾಟ್‌ಫಾರ್ಮ್ 2 ಮತ್ತು 3 ಸೆಪ್ಟೆಂಬರ್ 20ರಿಂದ 92 ದಿನಗಳ ಅವಧಿಗೆ ಬಂದ್ ಆಗಿರಲಿದೆ. ಹೀಗಾಗಿ ಇವುಗಳ ಮೂಲಕ ತೆರಳುವ ಸುಮಾರು 44 ರೈಲುಗಳ ನಿಲುಗಡೆ ರದ್ದಾಗಲಿದೆ. ಈ ಬಗ್ಗೆ ದಕ್ಷಿಣ ರೈಲ್ವೆ ಪ್ರಕಟಣೆ ಮೂಲಕ ಮಾಹಿತಿ ನೀಡಿದೆ.

  1. ರೈಲು ಸಂಖ್ಯೆ 22135 ಮೈಸೂರು – ರೇಣಿಗುಂಟಾ ವೀಕ್ಲಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಜೋಲಾರ್‌ಪೇಟೆ, ಕಟಪಾಡಿ ಮೂಲಕ 23.00 ಗಂಟೆಗೆ ಮೈಸೂರಿನಿಂದ ಸೆಪ್ಟೆಂಬರ್ 20, 27, ಅಕ್ಟೋಬರ್ 04, 11, 18, 25, ನವೆಂಬರ್ 01, 08, 15, 22, 29, ಡಿಸೆಂಬರ್ 6 ಮತ್ತು 13 ರಂದು 23.00 ಗಂಟೆಗೆ ಹೊರಡುತ್ತಿದ್ದು, ಇವುಗಳಿಗೆ ಕಂಟೋನ್ಮೆಂಟ್​ ನಿಲ್ದಾಣದಲ್ಲಿ ನಿಲುಗಡೆ ಇರವುದಿಲ್ಲ.
  2. ರೈಲು ಸಂಖ್ಯೆ 12028 ಕೆಎಸ್ಆರ್ ಬೆಂಗಳೂರು – ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ ಶತಾಬ್ಧಿ ಎಕ್ಸ್‌ಪ್ರೆಸ್ ಕೆಎಸ್‌ಆರ್ ಬೆಂಗಳೂರು ರೈಲಿಗೂ ಕಂಟೋನ್ಮೆಂಟ್​ ನಿಲ್ದಾಣದಲ್ಲಿ ನಿಲುಗಡೆ ಇರುವುದಿಲ್ಲ.
  3. ರೈಲು ಸಂಖ್ಯೆ. 12677 ಕೆಎಸ್​ಆರ್ ಬೆಂಗಳೂರು – ಎರ್ನಾಕುಲಂ ಎಕ್ಸ್‌ಪ್ರೆಸ್ 20ನೇ ಸೆಪ್ಟೆಂಬರ್‌ನಿಂದ 20ನೇ ಡಿಸೆಂಬರ್ ವರೆಗೆ ಕೆಎಸ್​ಆರ್ ಬೆಂಗಳೂರಿನಿಂದ 06.10 ಗಂಟೆಗೆ ಹೊರಡಲಿದೆ.
  4. ರೈಲು ಸಂಖ್ಯೆ 12608 ಕೆಆರ್ ಬೆಂಗಳೂರು – ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ ಲಾಲ್‌ಬಾಗ್ ಎಕ್ಸ್‌ಪ್ರೆಸ್ ಕೆಎಸ್‌ಆರ್ ಬೆಂಗಳೂರಿನಿಂದ 06.20 ಗಂಟೆಗೆ ಹೊರಡಲಿದೆ.
  5. ರೈಲು ಸಂಖ್ಯೆ 12610 ಮೈಸೂರು – ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ 20 ನೇ ಸೆಪ್ಟೆಂಬರ್‌ನಿಂದ 20 ನೇ ಡಿಸೆಂಬರ್ ವರೆಗೆ 5.00 ಗಂಟೆಗೆ ಮೈಸೂರಿನಿಂದ ಹೊರಡುತ್ತದೆ.
  6. ರೈಲು ಸಂಖ್ಯೆ 06551 ಕೆಎಸ್​ಆರ್​ ಬೆಂಗಳೂರು – ಜೋಲಾರ್‌ಪೇಟ್ಟೈ ಮೆಮು ಪ್ಯಾಸೆಂಜರ್ 2024 ರ ಸೆಪ್ಟೆಂಬರ್ 20 ರಿಂದ 20 ನೇ ಡಿಸೆಂಬರ್ ವರೆಗೆ 08.45 ಗಂಟೆಗೆ ಕೆಎಸ್​ಆರ್​​ ಬೆಂಗಳೂರಿನಿಂದ ಹೊರಡಲಿದೆ.
  7. ರೈಲು ಸಂಖ್ಯೆ 12578 ಮೈಸೂರು – ದರ್ಭಾಂಗ ಬಾಗ್ಮತಿ ವೀಕ್ಲಿ ಎಕ್ಸ್‌ಪ್ರೆಸ್ ಜೋಲಾರ್‌ಪೇಟ್ಟೈ, ಕಟ್ಪಾಡಿ, ಅರಕ್ಕೋಣಂ, ಪೆರಂಬೂರ್ ಮೂಲಕ 20, 27 ಸೆಪ್ಟೆಂಬರ್, 04, 11, 18, 25, 20 ಅಕ್ಟೋಬರ್, 1, 8, 22, 29ನೇ ನವೆಂಬರ್ 06ನೇ, 13ನೇ ಮತ್ತು 20ನೇ ಡಿಸೆಂಬರ್ ರಂದು 10.30 ಗಂಟೆಗೆ ಮೈಸೂರಿನಿಂದ ಹೊರಡಲಿದೆ.
  8. ರೈಲು ಸಂಖ್ಯೆ 22626 ಕೆಎಸ್ಆರ್ ಬೆಂಗಳೂರು – ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ ಡಬಲ್ ಡೆಕ್ಕರ್ ಎಕ್ಸ್‌ಪ್ರೆಸ್ ಸೆಪ್ಟೆಂಬರ್ 20 ರಿಂದ ಡಿಸೆಂಬರ್ 20 ರವರೆಗೆ ಕೆಎಸ್‌ಆರ್ ಬೆಂಗಳೂರಿನಿಂದ 13.30 ಗಂಟೆಗೆ ಹೊರಡಲಿದೆ.
  9. ರೈಲು ಸಂಖ್ಯೆ 12640 ಎಸ್‌ಎಂವಿಟಿ ಬೆಂಗಳೂರು ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ ಬೃಂದಾವನ ಎಕ್ಸ್‌ಪ್ರೆಸ್ ಸೆಪ್ಟೆಂಬರ್ 20 ರಿಂದ ಡಿಸೆಂಬರ್ 20, 2024 ರವರೆಗೆ ಎಸ್‌ಎಂವಿಟಿ ಬೆಂಗಳೂರಿನಿಂದ 15.10 ಗಂಟೆಗೆ ಹೊರಡಲಿದೆ.
  10. ರೈಲು ಸಂಖ್ಯೆ 11014 ಕೊಯಮತ್ತೂರು – ಲೋಕಮಾನ್ಯ ತಿಲಕ್ ಎಕ್ಸ್‌ಪ್ರೆಸ್ 20ನೇ ಸೆಪ್ಟೆಂಬರ್‌ನಿಂದ 20ನೇ ಡಿಸೆಂಬರ್ ರವರೆಗೆ 8.50 ಗಂಟೆಗೆ ಕೊಯಮತ್ತೂರಿನಿಂದ ಹೊರಡಲಿದೆ.

ಇವುಗಳೂ ಸೇರಿದಂತೆ ಒಟ್ಟು 44 ರೈಲುಗಳ ಸಂಚಾರದಲ್ಲಿ ಬದಲಾವಣೆಯಾಗಿದೆ. ಹೆಚ್ಚಿವುಗಳಿಗೆ ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣದಲ್ಲಿ ನಿಲುಗಡೆ ರದ್ದಾಗಿದ್ದರೆ, . ಪ್ಲಾಟ್‌ಫಾರ್ಮ್ 2 ಮತ್ತು 3 ರಿಂದಲೇ ಹೊರಡುವ ರೈಲುಗಳು ಇತರ ನಿಲ್ದಾಣಗಳಿಂದ ಹೊರಡಲಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ