AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎರಡು ಬೆಕ್ಕುಗಳ ಮಿಲನ, ನಾಲ್ಕು ಮರಿ ಜನನ: ಮಾಲೀಕರ ಕಿತ್ತಾಟ ಜೋರಾದ ಬೆನ್ನಲ್ಲೇ ಪೊಲೀಸ್ ಎಂಟ್ರಿ!

ಬೆಂಗಳೂರಿನ ಶೇಷಾದ್ರಿಪುರದಲ್ಲಿ ಬೆಕ್ಕಿನ ಮರಿಗಳ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಭಾರಿ ಜಗಳ ನಡೆದಿದೆ. ಒಂದು ಮನೆಯ ಹೆಣ್ಣು ಬೆಕ್ಕು ಹಾಗೂ ಮತ್ತೊಂದು ಮನೆಯ ಗಂಡು ಬೆಕ್ಕಿನ ಸಂಪರ್ಕದಿಂದ ಮರಿಗಳು ಜನಿಸಿದ್ದು, ಇದರಿಂದ ವಿವಾದ ಭುಗಿಲೆದ್ದಿದೆ. ಜಗಳವು ತಾರಕಕ್ಕೇರಿ ಆಸಿಡ್ ದಾಳಿಯ ಬೆದರಿಕೆ ವರೆಗೆ ಹೋಗಿದ್ದು, ಕೊನೆಗೆ ಪೊಲೀಸರು ಮಧ್ಯಸ್ಥಿಕೆ ವಹಿಸಿ ಪರಿಸ್ಥಿತಿಯನ್ನು ಶಮನಗೊಳಿಸಿದ್ದಾರೆ.

ಎರಡು ಬೆಕ್ಕುಗಳ ಮಿಲನ, ನಾಲ್ಕು ಮರಿ ಜನನ: ಮಾಲೀಕರ ಕಿತ್ತಾಟ ಜೋರಾದ ಬೆನ್ನಲ್ಲೇ ಪೊಲೀಸ್ ಎಂಟ್ರಿ!
ಸಾಂದರ್ಭಿಕ ಚಿತ್ರImage Credit source: google Gemini
Shivaprasad B
| Edited By: |

Updated on: Apr 13, 2026 | 11:05 AM

Share

ಬೆಂಗಳೂರು, ಏಪ್ರಿಲ್ 13: ಅಕ್ಕಪಕ್ಕದ ಮನೆಗಳ ನಡುವೆ ಬೆಕ್ಕುಗಳ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆ ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದ ಘಟನೆ ಶೇಷಾದ್ರಿಪುರದಲ್ಲಿ (Bengaluru) ನಡೆದಿದೆ. ಒಂದು ಮನೆಯ ಹೆಣ್ಣು ಬೆಕ್ಕು ಹಾಗೂ ಪಕ್ಕದ ಮನೆಯ ಗಂಡು ಬೆಕ್ಕಿನ ನಡುವಿನ ಸಂಪರ್ಕದಿಂದ ನಾಲ್ಕು ಮರಿಗಳು ಜನಿಸಿದ್ದು, ಈ ವಿಚಾರವೇ ಎರಡು ಕುಟುಂಬಗಳ ನಡುವೆ ವಿವಾದಕ್ಕೆ ಕಾರಣವಾಗಿದೆ.

ಅತಿರೇಕಕ್ಕೆ ತಿರುಗಿದ ಗಲಾಟೆ

ತಮ್ಮ ಮನೆಯ ಹೆಣ್ಣು ಬೆಕ್ಕಿನ ಜೊತೆ ನಾಲ್ಕು ಮರಿಗಳೂ ಮನೆಗೆ ಸೇರಿರುವುದನ್ನು ಕಂಡ ಮಾಲೀಕರು ಪಕ್ಕದ ಮನೆಯವರೊಂದಿಗೆ ಜಗಳಕ್ಕಿಳಿದಿದ್ದಾರೆ. ಈ ಮರಿಗಳು ಗಂಡು ಬೆಕ್ಕಿನದ್ದೇ ಎಂದು ವಿವಾದಕ್ಕಿಳಿದ ಹೆಣ್ಣು ಬೆಕ್ಕಿನ ಮಾಲೀಕರು ಮರಿಗಳನ್ನು ಗಂಡು ಬೆಕ್ಕಿನ ಮನೆಯ ಮುಂದೆ ಬಿಸಾಡಿ ಜಗಳ ನಡೆಸಿದ್ದಾರೆ ಎನ್ನಲಾಗಿದೆ.ವಿವಾದದ ವೇಳೆ ಗಂಭೀರ ಆರೋಪಗಳೂ ಕೇಳಿಬಂದಿದ್ದು, ಹೆಣ್ಣು ಬೆಕ್ಕಿನ ಮನೆಯವರು ಆಕ್ರೋಶದಿಂದ ನಿಮ್ಮ ಮಕ್ಕಳಿಗೆ ಆಸಿಡ್ ಹಾಕುತ್ತೀನಿ ಎಂದು ಅತಿರೇಕದ ಮಾತನ್ನಾಡಿದ್ದಾರೆಂದು ಪಕ್ಕದ ಮನೆಯವರು ಆರೋಪಿಸಿದ್ದಾರೆ.

ಇದನ್ನೂ ಓದಿ ಹೆಂಡತಿಯನ್ನು ಕಂಡು ಬೊಗಳಿದ್ದಕ್ಕೆ ನಾಯಿಗೆ ಹಿಗ್ಗಾಮುಗ್ಗಾ ಥಳಿಸಿದ ವ್ಯಕ್ತಿ! ಸಿಸಿ ಕ್ಯಾಮೆರಾದಲ್ಲಿ ದೃಶ್ಯ ಸೆರೆ

ತಾಯಿಯಲ್ಲದೆ ಮರಿಗಳು ಅನಾಥ!

ಈ ಗಲಾಟೆಯ ನಡುವೆ ಮರಿಗಳು ತಾಯಿಯಿಂದ ದೂರವಾಗಿ ದಿಕ್ಕಾಪಾಲಾಗಿದ್ದು, ತಾಯಿ ಬೆಕ್ಕು ತನ್ನ ಮರಿಗಳನ್ನು ಹುಡುಕುತ್ತ ನರಳುತ್ತಿದೆ. ಪರಿಸ್ಥಿತಿ ಉದ್ವಿಗ್ನಗೊಂಡ ಹಿನ್ನೆಲೆ ಗಂಡು ಬೆಕ್ಕಿನ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಶೇಷಾದ್ರಿಪುರ ಪೊಲೀಸರು ಎರಡೂ ಪಕ್ಷಗಳನ್ನು ಸಮಾಧಾನಪಡಿಸಿ ಜಗಳವನ್ನು ಶಮನಗೊಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us