ಕಾಲ್​ ಕನ್ವರ್ಟ್ ಅಡ್ಡೆಗಳ ಮೇಲೆ ಸಿಸಿಬಿ ದಾಳಿ: ಕೇರಳ ಮೂಲದ ವ್ಯಕ್ತಿಯ ಬಂಧನ

| Updated By: ಗಂಗಾಧರ​ ಬ. ಸಾಬೋಜಿ

Updated on: Jun 22, 2022 | 2:06 PM

58 ಸಿಮ್ ಬಾಕ್ಸ್​ಗಳ ಮೂಲಕ 2,144 ಸಿಮ್ ಬಳಸಿ ಕಾಲ್ ಕನ್ವರ್ಟ್ ಮಾಡಲಾಗುತ್ತಿತ್ತು. ಎಲೆಕ್ಟ್ರಾನಿಕ್ ಡಿವೈಸ್ ಬಳಸಿ ಲೋಕಲ್ ಕಾಲ್ ಆಗಿ ಕನ್ವರ್ಟ್ ಮಾಡಲಾಗುತ್ತಿತ್ತು. ಬೆಂಗಳೂರಿನ ನಾಲ್ಕು ಸ್ಥಳಗಳಲ್ಲಿ ಆರೋಪಿ ಸಿಮ್ ಬಾಕ್ಸ್ ಇಟ್ಟಿದ್ದ.

ಕಾಲ್​ ಕನ್ವರ್ಟ್ ಅಡ್ಡೆಗಳ ಮೇಲೆ ಸಿಸಿಬಿ ದಾಳಿ: ಕೇರಳ ಮೂಲದ ವ್ಯಕ್ತಿಯ ಬಂಧನ
ಕಾಲ್​ ಕನ್ವರ್ಟ್ ಅಡ್ಡೆಗಳ ಮೇಲೆ ಸಿಸಿಬಿ ದಾಳಿ: ಕೇರಳ ಮೂಲದ ವ್ಯಕ್ತಿಯ ಬಂಧನ
Follow us on

ಬೆಂಗಳೂರು: ಮಿಲಿಟರಿ‌ ಇಂಟಲಿಜೆನ್ಸ್ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ, ಅಂತರರಾಷ್ಟ್ರೀಯ ಕರೆಗಳನ್ನು ಲೋಕಲ್ ಕರೆಗಳಿಗೆ ಕನ್ವರ್ಟ್ (Call Convertion Gang) ಮಾಡುತ್ತಿದ್ದ ಅಡ್ಡೆ ಮೇಲೆ ದಾಳಿ ಮಾಡಲಾಗಿದೆ. ಕಾಲ್​ಗಳನ್ನ ಸಿಮ್ ಬಾಕ್ಸ್ ಮೂಲಕ ಲೋಕಲ್ ಕಾಲ್​ಗಳಾಗಿ ಕನ್ವರ್ಟ್ ಮಾಡುತ್ತಿದ್ದ ಗ್ಯಾಂಗ್​ನ್ನ ಬಂಧಿಸಲಾಗಿದೆ ಎಂದು ಅಪರಾಧ ವಿಭಾಗ ಜಂಟಿ‌ಪೊಲೀಸ್ ಆಯುಕ್ತ ರಮಣ್ ಗುಪ್ತಾ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಹೇಳಿಕೆ ನೀಡಿದರು.

ಕೇರಳ ವಯನಾಡ್ ಮೂಲದ ಶರಾಫುದ್ದೀನ್(41) ಬಂಧಿತ ಆರೋಪಿ. 58 ಸಿಮ್ ಬಾಕ್ಸ್​ಗಳ ಮೂಲಕ 2,144 ಸಿಮ್ ಬಳಸಿ ಕಾಲ್ ಕನ್ವರ್ಟ್ ಮಾಡಲಾಗುತ್ತಿತ್ತು. ಎಲೆಕ್ಟ್ರಾನಿಕ್ ಡಿವೈಸ್ ಬಳಸಿ ಲೋಕಲ್ ಕಾಲ್ ಆಗಿ ಕನ್ವರ್ಟ್ ಮಾಡಲಾಗುತ್ತಿತ್ತು. ಬೆಂಗಳೂರಿನ ನಾಲ್ಕು ಸ್ಥಳಗಳಲ್ಲಿ ಆರೋಪಿ ಸಿಮ್ ಬಾಕ್ಸ್ ಇಟ್ಟಿದ್ದ. ಭುವನೇಶ್ವರಿನಗರ, ಚಿಕ್ಕಸಂದ್ರ, ಸಿದ್ದೇಶ್ವರ ಲೇಔಟ್ ಸೇರಿದಂತೆ ನಾಲ್ಕು ಕಡೆ ಸಿಮ್ ಬಾಕ್ಸ್ ಇಟ್ಟು ಡೀಲ್ ಮಾಡಲಾಗುತ್ತಿತ್ತು. ರೇಡ್ ಮಾಡಿ, 58 ಸಿಮ್ ಬಾಕ್ಸ್ ಮತ್ತು 2144 ಎಲೆಕ್ಟ್ರಾನಿಕ್ ಡಿವೈಸ್ ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಸಿಸಿಬಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ಇದನ್ನೂ ಓದಿ: ಚುನಾವಣೆ ಸಿದ್ಧತೆ ಆರಂಭಿಸಿದ ಬಿಜೆಪಿ: ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್‌ ಭದ್ರಕೋಟೆಗೆ ಲಗ್ಗೆ ಹಾಕಲು ಬಿಜೆಪಿ ಪ್ರಯತ್ನ

ನೆರೆ ರಾಜ್ಯಗಳಿಂದ ಸಿಮ್​​ಗಳನ್ನ ಪಡೆದುಕೊಂಡಿರುವ ಸಾಧ್ಯತೆ ಇದೆ. ಗ್ಲೋಬಲ್ ಕಾಲ್​ಗಳನ್ನ ಲೋಕನ್ ನೆಟ್ ವರ್ಕ್ ಕಾಲ್ ಗಳನ್ನಾಗಿ ಕನ್ವರ್ಟ್ ಮಾಡುತ್ತಿದ್ದರು. ಯಾವುದೇ ಪರವಾನಗಿ ಪಡೆದುಕೊಳ್ಳದೆ ಸೆಟ್ ಅಪ್ ಮಾಡಿಕೊಂಡಿದ್ದರು. ಮಿಲಿಟರಿ ಇಂಟೆಲಿಜೆನ್ಸ್​ಗೆ ಲೋಕಲ್ ಕಾಲ್ಸ್ ಜತೆಗೆ ವಿದೇಶಿ‌ ಕರೆ ಕನೆಕ್ಟ್ ಆಗಿರೋದರ ಮಾಹಿತಿ ಸಿಕ್ಕಿದೆ. ಕೂಡಲೇ ಸಿಸಿಬಿಗೆ ಮಾಹಿತಿ ನೀಡಿದ್ದು, ಆ ಮಾಹಿತಿ ಆಧರಿಸಿ ಕಾರ್ಯಚರಣೆ ನಡೆಸಿ ಓರ್ವ ಪ್ರಮುಖ ಆರೋಪಿಯನ್ನು ವಶಕ್ಕೆ ಪಡೆದಿದ್ದೇವೆ. ಘಟನೆ ಸಂಬಂಧ ತನಿಖೆ ಮುಂದುವರೆದಿದೆ ಎಂದು ಅಪರಾಧ ವಿಭಾಗ ಜಂಟಿ‌ಪೊಲೀಸ್ ಆಯುಕ್ತ ರಮಣ್ ಗುಪ್ತಾ ಹೇಳಿದರು.

ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.