ಬೆಂಗಳೂರು, ಡಿಸೆಂಬರ್ 25: ಕ್ರಿಸ್ಮಸ್ (Christmas) ಹಬ್ಬ ಹಿನ್ನೆಲೆಯಲ್ಲಿ ಬೆಂಗಳೂರಿನ (Bengaluru) ಚರ್ಚ್‌ಗಳಿಗೆ ಕ್ರೈಸ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಇದರಿಂದ ನಗರದ ಕೆಲವು ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಸುಗಮ ಸಂಚಾರಕ್ಕಾಗಿ ಕೆಲವು ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧ ಮತ್ತು ವಾಹನ ನಿಲುಗಡೆಯನ್ನು ನಿರ್ಬಂಧಿಸಿ ಬೆಂಗಳೂರು ಸಂಚಾರ ಪೊಲೀಸರು ಆದೇಶ ಹೊರಡಿಸಿದ್ದಾರೆ.
ರಿಚರ್ಡ್ ಪಾರ್ಕ್ ಹತ್ತಿರ ಡೇವಿಸ್ ರಸ್ತೆಯಲ್ಲಿರುವ ಹೋಲಿ ಗೋಸ್ಟ್ ಚರ್ಚ್ಗೆ ಬುಧವಾರ (ಡಿ.25) ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಲಿದ್ದಾರೆ. ಹೀಗಾಗಿ ಈ ಕೆಳಕಂಡ ರಸ್ತೆಯಲ್ಲಿ ಮಧ್ಯಾಹ್ನ 12 ಗಂಟೆವರೆಗೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ.
ಡೇವಿಸ್ ರಸ್ತೆಯಲ್ಲಿ ಜಾನ್ ಆರ್ಮ್ ಸ್ಟ್ರಾಂಗ್ ರಸ್ತೆ ಜಂಕ್ಷನ್‌ನಿಂದ ಕುಕ್ಸನ್ ರಸ್ತೆ ಜಂಕ್ಷನ್ ವರೆಗೆ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.
ಡೇವಿಸ್ ರಸ್ತೆ ಕಡೆಯಿಂದ ಹೆಚ್.ಎಂ ರಸ್ತೆ ಕಡೆಗೆ ಸಂಚರಿಸುವವರು ಡೇವಿಸ್ ರಸ್ತೆಯಲ್ಲಿ ಜಾನ್ ಆರ್ಮ್ ಸ್ಟ್ರಾಂಗ್ ರಸ್ತೆ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ನೇರವಾಗಿ ಸಾಗಿ ವಿವಿಯಾನಿ ರಸ್ತೆಯಲ್ಲಿ ಎಡತಿರುವು ಪಡೆದು ನೇರವಾಗಿ ಸಂಚರಿಸಿ ಕುಕ್ಸನ್ ರಸ್ತೆಯಲ್ಲಿ ಎಡತಿರುವು ಪಡೆದು ಡೇವಿಸ್ ರಸ್ತೆ ತಲುಪಿ ನಂತರ ಡೇವಿಸ್ ರಸ್ತೆಯಲ್ಲಿ ಸ್ಮೃತಿರುವು ಪಡೆದು ಹೆಚ್.ಎಂ ರಸ್ತೆ ಕಡೆಗೆ ಹೋಗಬಹುದಾಗಿದೆ.
ಇದನ್ನೂ ಓದಿ: Christmas Wishes 2024: ಕ್ರಿಸ್‌ಮಸ್ ಹಬ್ಬಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭಾಶಯಗಳು ಕೋರಲು ಇಲ್ಲಿದೆ ಸಂದೇಶಗಳು
ಡೇವಿಸ್ ರಸ್ತೆ, ಬಾಣಸವಾಡಿ ಮುಖ್ಯರಸ್ತೆ, ವೀಲ್ಡರ್ ರಸ್ತೆ, ಸೆಂಟ್ ಜಾನ್ಸ್ ಚರ್ಚ್ ರಸ್ತೆ, ಹೇನ್ ರಸ್ತೆ ಮತ್ತು ಪ್ರಾಮಿನೇಡ್ ರಸ್ತೆಯಲ್ಲಿ ಎಲ್ಲಾ ರೀತಿ ರೀತಿಯ ವಾಹನಗಳ ಪಾರ್ಕಿಂಗ್ ಅನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.
ಮನಾಕ್ಷಿ ಕೋಯಿಲ್ ಸ್ಟ್ರೀಟ್ (ಶಿವಾಜಿ ಸರ್ಕಲ್‌ನಿಂದ ಓ.ಪಿ.ಹೆಚ್. ರಸ್ತೆಯವರೆಗೆ), ಸೆಂಟ್ರಲ್ ಸ್ಟ್ರೀಟ್ ರಸ್ತೆ (ಸೆಂಟ್ರಲ್ ಸ್ಟ್ರೀಟ್ ಜಂಕ್ಷನ್‌ನಿಂದ ಜ್ಯೋತಿ ಕೆಫೆ ಜಂಕ್ಷನ್‌ವರೆಗೆ), ಸೆಂಟ್ರಲ್ ಸ್ಪೀಟ್ ರಸ್ತೆ (ಜ್ಯೋತಿ ಕೆಫೆ ಜಂಕ್ಷನ್‌ನಿಂದ ಸಲೆಕ್ಟ್ ಹೋಟೆಲ್‌ವರೆಗೆ) ಮತ್ತು ನರೋನಾ ರಸ್ತೆ (ಚರ್ಚ್ ನರೋನಾ ರಸ್ತೆಯಿಂದ ಆರ್.ಎಂ.ಎಸ್ ಜಂಕ್ಷನ್ ವರೆಗೆ) ವಾಹನ ನಿಲುಗಡೆ ನಿಷೇಧಿಸಲಾಗಿದೆ.
ಶಿವಾಜಿನಗರ ಬಿ.ಎಂ.ಟಿ.ಸಿ ಬಸ್ ನಿಲ್ದಾಣ 1ನೇ ಮತ್ತು 2ನೇ ಮಹಡಿ
ಫಿನಿಕ್ಸ್ ಮಾಲ್, ವಿಆರ್ ಮಾಲ್ ಮತ್ತು ನೆಕ್ಸಸ್ ಶಾಂತಿನಿಕೇತನ ಬಳಿಯ ಐ.ಟಿ.ಪಿ.ಎಲ್ ರಸ್ತೆ ಬಿ ನಾರಾಯಣಪುರ ಶೆಲ್ ಪೆಟ್ರೋಲ್ ಬಂಕ್‌ನಿಂದ ಗರುಡಚಾರ್ ಪಾಳ್ಯ ಡೆಕಾತ್ಸಾನ್ ವರೆಗೆ ರಸ್ತೆಯ ಎರಡೂ ಬದಿಯಲ್ಲಿ. ಐ.ಟಿ.ಪಿ.ಎಲ್ ರಸ್ತೆ ಮೆಡಿಕವರ್ ಆಸ್ಪತ್ರೆಯಿಂದ ಬಿಗ್‌ಬಹಾರ್ ಜಂಕ್ಷನ್‌ವರೆಗೂ ಎರಡೂ ಕಡೆಗಳಲ್ಲಿ ಇಂದಿನಿಂದ (ಡಿ.25) ಶನಿವಾರ (ಡಿ.28) ಮಧ್ಯಾಹ್ನ 12:00 ಗಂಟೆಯಿಂದ ರಾತ್ರಿ 11:00 ಗಂಟೆಯವರೆಗೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ.
ಫಿನಿಕ್ಸ್ ಮಾಲ್‌ಗೆ ಬರುವವರಿಗೆ ಐ.ಟಿ.ಪಿ.ಎಲ್ ಮುಖ್ಯರಸ್ತೆಯ ಬೆಸ್ಕಾಂ ಕಛೇರಿ ಬಳಿ ಡ್ರಾಪ್ ಆಫ್ ಪಾಯಿಂಟ್ ಮತ್ತು ಲೌರಿ ಜಂಕ್ಷನ್ ಬಳಿ ಪಿಕ್ಅಪ್ ಪಾಯಿಂಟ್
ನೆಕ್ಸಸ್ ಶಾಂತಿನಿಕೇತನ್ ಮಾಲ್‌ಗೆ ಬರುವವರಿಗೆ ರಾಜಪಾಳ್ಯ ಬಳಿ ಡ್ರಾಪ್ ಆಫ್ ಪಾಯಿಂಟ್ ಹಾಗೂ ಆಸ್ಪರ್ ಆಸ್ಪತ್ರೆ ಬಳಿ ಪಿಕ್ ಅಪ್ ಪಾಯಿಂಟ್.
ಹೂಡಿ ಕಡೆಯಿಂದ ಫಿನಿಕ್ಸ್ ಮಾಲ್‌ಗೆ ಬರುವ ವಾಹನಗಳು ಕಡ್ಡಾಯವಾಗಿ ಕಾಮಧೇನು ನಗರ ಬಳಿ ಯು ಟರ್ನ್ ಪಡೆದು, ಶೆಲ್ ಪೆಟ್ರೊಲ್ ಬಂಕ್ ಬಳಿ ಎಡ ತಿರುವು ಪಡೆದು ರೈಲ್ವೇ ಪ್ಯಾರಲಲ್ ರಸ್ತೆಯಲ್ಲಿ ಸಂಚರಿಸಿ ಫಿನಿಕ್ಸ್ ಮಾಲ್ ಹಿಂಭಾಗ ಗೇಟ್ ಮೂಲಕ ಫಿನಿಕ್ಸ್ ಮಾಲ್ ಪ್ರವೇಶಿಸಿವುದು.
ಕೆ.ಆರ್.ಪುರ ರೈಲು ನಿಲ್ದಾಣದ ಕಡೆಯಿಂದ ಮಾಲ್‌ಗೆ ಬರುವ ವಾಹನಗಳು ಕಡ್ಡಾಯವಾಗಿ ಶೆಲ್ ಪೆಟ್ರೋಲ್ ಬಂಕ್ ಬಳಿ ಎಡತಿರುವು ಪಡೆದು ರೈಲ್ವೇ ಪ್ಯಾರಲಲ್ ರಸ್ತೆಯಲ್ಲಿ ಸಂಚರಿಸಿ ಫಿನಿಕ್ಸ್ ಮಾಲ್ ಹಿಂಭಾಗ ಗೇಟ್ ಮೂಲಕ ಫಿನಿಕ್ಸ್ ಮಾಲ್ ಪ್ರವೇಶಿಸಿವುದು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿBengaluru Christmas Traffic Restrictions: Church Services and Parking Updates in Kannada