ಜೀವನದ ಕಠಿಣ ಕ್ಷಣ: ಚರ್ಚ್ ಸ್ಟ್ರೀಟ್​​ನಲ್ಲಿ ಕಂಡ ಅದ್ಭುತ ದೃಶ್ಯ, ಕಲಿಕೆಗಾಗಿ ಈ ಹುಡುಗಿಯ ಹೋರಾಟ ನೋಡಿ

ಬೆಂಗಳೂರಿನ ಚರ್ಚ್ ಸ್ಟ್ರೀಟ್‌ನಲ್ಲಿ ಕ್ರಿಸ್‌ಮಸ್ ವಸ್ತುಗಳನ್ನು ಮಾರಾಟ ಮಾಡುತ್ತಲೇ ಓದುತ್ತಿರುವ ವಿದ್ಯಾರ್ಥಿನಿಯ ಫೋಟೋವೊಂದು ವೈರಲ್ ಆಗಿದೆ. ಕಠಿಣ ಶ್ರಮ ಹಾಗೂ ಶಿಕ್ಷಣದ ಮಹತ್ವವನ್ನು ಸಾರುವ ಈ ಘಟನೆ ನೆಟ್ಟಿಗರ ಮನ ಗೆದ್ದಿದೆ. ಬಡತನ, ಪರಿಸ್ಥಿತಿಗಳು ಶಿಕ್ಷಣಕ್ಕೆ ಎಂದಿಗೂ ಅಡ್ಡಿಯಾಗಲಾರದು ಎಂಬ ಸಂದೇಶವನ್ನು ಈ ಯುವತಿ ನೀಡಿದ್ದಾಳೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಪೋಸ್ಟ್​​​ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಜೀವನದ ಕಠಿಣ ಕ್ಷಣ: ಚರ್ಚ್ ಸ್ಟ್ರೀಟ್​​ನಲ್ಲಿ ಕಂಡ ಅದ್ಭುತ ದೃಶ್ಯ, ಕಲಿಕೆಗಾಗಿ ಈ ಹುಡುಗಿಯ ಹೋರಾಟ ನೋಡಿ
ವೈರಲ್​ ಪೋಸ್ಟ್

Updated on: Dec 29, 2025 | 1:07 PM

ಬೆಂಗಳೂರು, ಡಿ.29; ಬೆಂಗಳೂರಿನಲ್ಲೊಂದು ಹೃದಯಸ್ಪರ್ಶಿ ಘಟನೊಂದು ನಡೆದಿದೆ. ಇದೀಗ ಸೋಶಿಯಲ್​​​ ಮೀಡಿಯಾದಲ್ಲಿ ಈ ಪೋಸ್ಟ್​​ ಭಾರೀ ಸದ್ದು ಮಾಡುತ್ತಿದೆ. ವಿದ್ಯೆ ಎಂಬುದಕ್ಕೆ ಶ್ರೀಮಂತ, ಬಡವ, ಮನೆ, ಶಾಲೆ ಎಂಬ ತಾರತಮ್ಯವಿಲ್ಲ. ಶ್ರಮ, ಪ್ರಯತ್ನ, ಛಲ ಇದ್ದರೆ ಸಾಕು, ಯಾರು ಬೇಕಾದರೂ ಕಲಿಯಬಹುದು. ಇದೀಗ ಇಲ್ಲಿ ವೈರಲ್​ ಆಗಿರುವ ಪೋಸ್ಟ್​​ ಇದೇ ನೀತಿ ಪಾಠವನ್ನು ಹೇಳುತ್ತದೆ. ಬೆಂಗಳೂರಿನ ಜನನಿಬಿಡ ಪ್ರದೇಶವಾದ ಚರ್ಚ್ ಸ್ಟ್ರೀಟ್‌ನಲ್ಲಿ (Bengaluru Church Street) ಕ್ರಿಸ್‌ಮಸ್ ವಸ್ತುಗಳನ್ನು ಮಾರಾಟ ಮಾಡುತ್ತ, ಓದುತ್ತಿರುವ ಫೋಟೋ ಭಾರೀ ವೈರಲ್​​ ಆಗಿದೆ. ಇದು ನೆಟ್ಟಿಗರ ಮನಸ್ಸು ಕೂಡ ಗೆದ್ದಿದೆ. ಅಭಿನವ್ ಎಂಬುವವರು ಈ ಪೋಸ್ಟ್​​​ನ್ನು ಎಕ್ಸ್​​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಚರ್ಚ್ ಸ್ಟ್ರೀಟ್‌ನಲ್ಲಿ ಯುವತಿಯೊಬ್ಬಳು ಕ್ರಿಸ್‌ಮಸ್ ವಸ್ತುಗಳನ್ನು ಮಾರಾಟ ಮಾಡುತ್ತ, ಹೋಮ್​​​​​ ವರ್ಕ್​​​ ಮಾಡುವುದನ್ನು ಅಭಿನವ್ ತಮ್ಮ ಪೋಸ್ಟ್​​​ನಲ್ಲಿ ಹೇಳಿಕೊಂಡಿದ್ದಾರೆ. “ಕಠಿಣ ಶ್ರಮದ ಜತೆಗೆ ಶಿಕ್ಷಣ” ಎಂಬ ಶೀರ್ಷಿಕೆಯನ್ನು ಈ ಪೋಸ್ಟ್​​ಗೆ ನೀಡಿದ್ದಾರೆ. ಪೋಸ್ಟ್ 19,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದ್ದು, ಲಕ್ಷಕ್ಕೂ ಹೆಚ್ಚು ಜನ ಕಮೆಂಟ್​​ ಮಾಡಿದ್ದಾರೆ. ಈ ಹುಡುಗಿಯ ಅಚಲವಾದ ಕಲಿಕೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಯೋಗಿ ಬುಲ್ಡೋಜರ್ ರಾಜ್ ಜತೆ ಹೋಲಿಕೆ ಬೇಡ: ಕೋಗಿಲು ಶೆಡ್​ಗಳ ತೆರವು ವಿಚಾರದಲ್ಲಿ ಕಾಂಗ್ರೆಸ್ ಬೆಂಬಲಕ್ಕೆ ನಿಂತ ಮುಸ್ಲಿಂ ಲೀಗ್

ವೈರಲ್​​ ಪೋಸ್ಟ್​​ ಇಲ್ಲಿದೆ ನೋಡಿ:


ನೆಟ್ಟಿಗರು ಈ ಪೋಸ್ಟ್​ ಬಗ್ಗೆ ಕಮೆಂಟ್​​ ಮಾಡಿದ್ದಾರೆ. ಅವಳಂತಹ ಮಕ್ಕಳು ಜೀವನ ಸಾಗಿಸಲು ಏನನ್ನೂ ಮಾರಾಟ ಮಾಡಬೇಕಾಗಿಲ್ಲ ಎಂದು ಒಬ್ಬರು ಕಮೆಂಟ್​ ಮಾಡಿದ್ದಾರೆ. ಆ ಹುಡುಗಿಗೆ ಖಂಡಿತ ನಾನು ಸಹಾಯ ಮಾಡುತ್ತೇನೆ.  ಅವಳ ಶಿಕ್ಷಣದ ಹೋರಾಟಕ್ಕೆ ನನ್ನ ಬೆಂಬಲ ಇದೆ ಎಂದು ಮತ್ತೊಬ್ಬರು ಹೇಳಿದ್ದಾರೆ. ನಿಮ್ಮಲ್ಲಿ ಇರುವುದನ್ನು ಬಿಟ್ಟು, ನಿಮಗೆ ದೇವರು ನೀಡಿದ ಈ ಜೀವನಕ್ಕೆ ಧನ್ಯವಾದ ಹೇಳಿಕೆ. ಏಕೆಂದರೆ ನಿಮಗೆ ಶ್ರಮದ ಅನುಭವ ಇರುತ್ತದೆ ಎಂದು ಮತ್ತೊಬ್ಬರು ಹೇಳಿದ್ದಾರೆ. ಕೆಲವೊಂದು ಜನರಿಗೆ ಈ ಜೀವನದಲ್ಲಿ ಅನ್ಯಾಯವಾಗಿದೆ. ಆದರೆ ದೇವರಿಗೆ ಒಂದು ಧನ್ಯವಾದ ಹೇಳಿ ಏಕೆಂದರೆ ಅವರು ನಿಮಗೆ ಇಂತಹ ಅದ್ಭುತ ಜ್ಞಾನ ನೀಡಿದ್ದಾನೆ ಎಂದು ಮತ್ತೊಬ್ಬರು ಹೇಳಿದ್ದಾರ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:58 pm, Mon, 29 December 25