Bengaluru: ಹೊಂಡ ಮುಚ್ಚಲು ನಾಗರಿಕರ ಸಹಾಯಕ್ಕೆ ಬಂದ ಟ್ರಾಫಿಕ್ ಪೊಲೀಸರು, ಬೆಂಗಳೂರನ್ನು ಕೇಂದ್ರಾಡಳಿತ ಪ್ರದೇಶ ಮಾಡಿ ಪ್ರಧಾನಿಗೆ ಮನವಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Nov 25, 2022 | 3:29 PM

ಹೂಡಿಯಿಂದ ಅಯ್ಯಪ್ಪನಗರಕ್ಕೆ ಸಂಪರ್ಕ ಕಲ್ಪಿಸುವ ಪ್ರದೇಶದಲ್ಲಿ ರಸ್ತೆ ಅಗೆದಿದ್ದಾರೆ. ಈ ಬಗ್ಗೆ ಬಿಬಿಎಂಪಿಗೆ ತಿಳಿಸಿದರು ಯಾವುದೇ ಪ್ರಯೋಜನವಾಗಿಲ್ಲ, ಸಂಚಾರಿ ಪೊಲೀಸರ ಸಹಾಯದಿಂದ ಈ ಇದೀಗ ಗುಂಡಿನ್ನು ಮುಚ್ಚಿದ್ದಾರೆ. ಸಾರ್ವಜನಿಕರು ಬಿಬಿಎಂಪಿಯನ್ನು ಟ್ವೀಟ್ ಮೂಲಕ ತರಾಟೆಗೆ ತೆಗೆದುಕೊಂಡಿದ್ದು, ಬೆಂಗಳೂರನ್ನು ಕೇಂದ್ರಾಡಳಿತ ಪ್ರದೇಶ ಮಾಡಿ ಎಂದು ಪ್ರಧಾನಿಗೆ ಮನವಿ ಮಾಡಿದ್ದಾರೆ.

Bengaluru: ಹೊಂಡ ಮುಚ್ಚಲು ನಾಗರಿಕರ ಸಹಾಯಕ್ಕೆ ಬಂದ ಟ್ರಾಫಿಕ್ ಪೊಲೀಸರು, ಬೆಂಗಳೂರನ್ನು ಕೇಂದ್ರಾಡಳಿತ ಪ್ರದೇಶ ಮಾಡಿ ಪ್ರಧಾನಿಗೆ ಮನವಿ
Bengaluru
Follow us on

ಬೆಂಗಳೂರು: ಹೂಡಿಯಿಂದ ಅಯ್ಯಪ್ಪನಗರಕ್ಕೆ ಸಂಪರ್ಕ ಕಲ್ಪಿಸುವ ಪ್ರದೇಶದಲ್ಲಿ ರಸ್ತೆ ಅಗೆದಿದ್ದಾರೆ. ಈ ಅಗೆದಿರುವ ರಸ್ತೆಯ ಬಳಿ ಯಾವುದೇ ಎಚ್ಚರಿಕೆ ಸೂಚನೆಗಳ ಫಲಕವು ಇಲ್ಲ. ಇದನ್ನು ಕಂಡು ಅಯ್ಯಪ್ಪನಗರದ ನಿವಾಸಿಗಳು ಎಚ್ಚೆತ್ತುಕೊಂಡ ಇವರ ಜೊತೆಗೆ ಸೇರಿ ಬೆಂಗಳೂರು ಸಂಚಾರ ಪೊಲೀಸರು ಕೂಡ ಈ ಗುಂಡಿಯನ್ನು ಮುಚ್ಚಿದ್ದರೆ. ಯಾವುದೇ ಅನುಮತಿಯಿಲ್ಲದೆ ರಾತ್ರೋರಾತ್ರಿ ರಸ್ತೆಯನ್ನು ಅಗೆಯಲಾಗಿದೆ ಎಂದು ಸಂಚಾರ ಪೊಲೀಸರು ಹೇಳಿದರು. ನಗರದ ಜನರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಗೆ ಈ ಹೊಂಡವನ್ನು ಮುಚ್ಚುವಂತೆ ಮನವಿ ಮಾಡಿದ್ದಾರೆ, ಆದರೆ ಯಾವುದೇ ಉಪಯೋಗವಾಗಿಲ್ಲ ಎಂದು ಹೇಳಿದ್ದಾರೆ.

ಹೂಡಿಯಿಂದ ಅಯ್ಯಪ್ಪನಗರ ರಸ್ತೆಗೆ ಸಂಪರ್ಕ ಕಲ್ಪಿಸುವ ಪ್ರದೇಶದಲ್ಲಿ ನೌಕರರು ಹಾಗೂ ಮಕ್ಕಳು ಹೋಗುತ್ತಾರೆ. ಇದೀಗ ಇಲ್ಲಿಂದ ಯಾರು ಸಂಚಾರಿಸಬಾರದು ಎಂದು ಸಂಚಾರ ಸ್ಥಗಿತಗೊಳಿಸಿದ್ದಾರೆ. ದಯವಿಟ್ಟು ಅಯ್ಯಪ್ಪನಗರ ರಸ್ತೆಯಲ್ಲಿ ಸಂಚಾರಿಸಬಾರದು. ಯಾರೋ ಅನುಮತಿ ಇಲ್ಲದೇ ರಸ್ತೆ ಅಗೆದು ಹೀಗೆ ಬಿಟ್ಟಿದ್ದಾರೆ. ನಾವು ಅದನ್ನು ಮುಚ್ಚುತ್ತಿದ್ದೇವೆ ಅದಕ್ಕಾಗಿ ಸಮಯ ತೆಗೆದುಕೊಳ್ಳಬಹುದು ಸಾರ್ವಜನಿಕರು ಸಹಕರಿಸಬೇಕು ಎಂದು ಕೆಆರ್ ಪುರಂ ಸಂಚಾರ ಪೊಲೀಸರು ಟ್ವೀಟ್ ಮಾಡಿದ್ದಾರೆ.

ಯಾರಾದರೂ ಹೀಗೆ ಅಗೆದು ಹಾಗೆಯೇ ಬಿಡುವುದು ಹೇಗೆ? ಇದು ಇಡೀ ಪ್ರದೇಶದಲ್ಲಿ ಅವ್ಯವಸ್ಥೆಯನ್ನು ಸೃಷ್ಟಿಸಿದೆ ಇದನ್ನು ಮಾಡಿದವರ ಮೇಲೆ ಯಾವುದೇ ಕ್ರಮ ಇಲ್ಲವೇ? ಎಂದು ಟ್ವೀಟ್ ಬಳಕೆದಾರ ಕಾಮೆಂಟ್ ಮಾಡಿದ್ದಾರೆ. ರಸ್ತೆಯ ಅಗಲಕ್ಕೆ ಮಧ್ಯಭಾಗದಲ್ಲಿ ಹೊಂಡ ತೆಗೆದಿದ್ದಾರೆ, ಇದರಿಂದ ದ್ವಿಚಕ್ರ ವಾಹನಗಳಿಗೂ ಸಂಚರಿಸಲು ತೊಂದರೆಯಾಗಿದೆ. ಇದಲ್ಲದೆ, ನಗರದಲ್ಲಿ ಮಳೆಯಿಂದಾಗಿ ರಸ್ತೆ ಕೆಸರು ಮತ್ತು ಜಾರುವಂತೆ ರಸ್ತೆಯಾಗಿದೆ.

ಇದನ್ನು ಓದಿ: Poetry : ಅವಿತಕವಿತೆ ; ಅಮ್ಮ ಹಾರಿಕೊಂಡ ಬಾವಿಯ ನೀರು ಕುಡಿಯಬಹುದೆ? ಅಪ್ಪನಿಗೆ ಕೇಳಲಾಗುವುದಿಲ್ಲ

ಈ ಕೆಲಸವನ್ನು bbmp, bwssb ಅಥವಾ ಬೆಸ್ಕಾಂ ಮಾಡಿರಬಹುದು, ಈ ಬಗ್ಗೆ ನಮಗೆ ಖಚಿತವಿಲ್ಲ.ಈ ಅವ್ಯವಸ್ಥೆಗೆ ಯಾರು ಕಾರಣ ಎಂದು ಪತ್ತೆ ಮಾಡುತ್ತೇವೆ ಎಂದು ಸಂಚಾರ ಪೊಲೀಸರು ಹೇಳಿದ್ದಾರೆ. airtelindia, reliancejio ಮತ್ತು ACTFibernet ಈ ರೀತಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಆದರೆ, ಅವರು ರಾತ್ರಿ ಸಮಯದಲ್ಲಿ ಅಗೆಯುತ್ತಾರೆ. ಆದರೆ ಇದನ್ನು ಯಾರು ಮಾಡಿದ್ದು? StopDigging CMofKarnataka BBMPCOMM, ಎಂದು ಹ್ಯಾಸ್ ಟ್ಯಾಗ್ ಜೊತೆಗೆ ಸಿಟಿಜನ್ಸ್ ಮೂವ್‌ಮೆಂಟ್, ಈಸ್ಟ್ ಬೆಂಗಳೂರು ಎಂದು ಟ್ವೀಟ್ ಮಾಡಿದ್ದಾರೆ.

ಪೊಲೀಸರು ಕೂಡ ಈ ಕಾರ್ಯಕ್ಕೆ ಸಹಾಯ ಮಾಡಿದ್ದಾರೆ. ನಾವು ಬಿಬಿಎಂಪಿಗೆ ಕರೆ ಮಾಡಿದ್ರು ಯಾರೂ ನಮ್ಮ ಕರೆಗೆ ಸ್ಪಂದಿಸುತ್ತಿಲ್ಲ. ದಯವಿಟ್ಟು ಈ ಹಳ್ಳವನ್ನು ಮುಚ್ಚಲು ಯಾರನ್ನಾದರೂ ಕಳುಹಿಸಿ ಸರ್ ಎಂದು ಅವರು ಕೂಡ ಟ್ವೀಟ್ ಮಾಡಿದ್ದಾರೆ.

ಅಧಿಕಾರಿಗಳ ಈ ಕೆಲಸಕ್ಕೆ ಸಾಮಾಜಿಕ ಜಾಲತಾಣ ಬಳಕೆದಾರರು ಕಂಗಾಲಾಗಿದ್ದಾರೆ. ನಮ್ಮ ಪ್ರೀತಿಯ ಬೆಂಗಳೂರಿನ ಈ ದುರವಸ್ಥೆಯನ್ನು ನೋಡಿ ಬೇಸರವಾಯಿತು. ಟ್ರಾಫಿಕ್ ಪೊಲೀಸರ ಮಾತು ಕೇಳದ ಅಧಿಕಾರಿಗಳು ಇನ್ನೂ ನಾಗರಿಕರಾದ ನಮ್ಮ ಮಾತು ಕೇಳುತ್ತಾರಾ? ಎಂದು ಒಬ್ಬರು ಟ್ವೀಟ್ ಮಾಡಿದ್ದಾರೆ.

ಈ ಪ್ರದೇಶದಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದ್ದರಿಂದ ಪೊಲೀಸರು ಕೂಡ ಹೊಂಡ ಮುಚ್ಚಳು ಸಹಕಾರ ನೀಡಿದ್ದಾರೆ. ‘ಹೇಗೋ ನಾವು ಹೊಂಡಕ್ಕೆ  ಮಣ್ಣು ತುಂಬಿ ತಾತ್ಕಾಲಿಕವಾಗಿ ಮುಚ್ಚಿದ್ದೇವೆ. ಈ ರಸ್ತೆಯನ್ನು ಸಂಪೂರ್ಣವಾಗಿ ಮತ್ತು ಶಾಶ್ವತವಾಗಿ ಸರಿಪಡಿಸಲು ಸ್ವಲ್ಪ ಕಾಂಕ್ರೀಟ್ ಅಗತ್ಯವಿದೆ ಎಂದು ಇನ್ನೊಬ್ಬ ವ್ಯಕ್ತಿ ಟ್ವೀಟ್ ಮಾಡಿದ್ದಾರೆ.

ಕೆಆರ್ ಪುರಂ ಟ್ರಾಫಿಕ್ ಪೊಲೀಸ್ ಇಲಾಖೆಗೆ ಜನರು ಕೃತಜ್ಞತೆ ಸಲ್ಲಿಸಿ, ಬಿಬಿಎಂಪಿಯ ವೈರಾಗ್ಯವನ್ನು ಟೀಕಿಸಿದೆ. ಪ್ರತಿಯೊಬ್ಬ ಪೊಲೀಸ್ ಅಧಿಕಾರಿಗೂ ಧನ್ಯವಾದಗಳು ತಮ್ಮ ಕೆಲಸ ಬಿಟ್ಟು ಬಿಬಿಎಂಪಿ ಮಾಡಬೇಕಾದ ಕೆಲಸವನ್ನು ಮಾಡಿದ್ದಕ್ಕಾಗಿ ಅಪಾರ ಗೌರವ ಇದೆ. ಈ ಸಹಾಯವನ್ನು ಯಾವತ್ತೂ ಮರೆಯುವುದಿಲ್ಲ ಮತ್ತು ಸೋಮಾರಿ, ಭ್ರಷ್ಟ ಬಿಬಿಎಂಪಿಗೆ ಎಂದಿಗೂ ನಾವು ಹೋಗುವುದಿಲ್ಲ ಎಂದು ಟ್ವಿಟರ್ ಬಳಕೆದಾರರು ಬರೆದಿದ್ದಾರೆ.

ಆತ್ಮೀಯ @CMofKarnataka ಎಂದು ಹ್ಯಾಶ್ ಟ್ಯಾಗ್ ಬಳಸಿ ನಾಚಿಕೆಯಾಗಬೇಕು ನಿಮಗೆ!! ಪೊಲೀಸರ ಮಾತಿಗೂ ಸ್ಪಂದಿಸಲು BBMP ಯನ್ನು ದಿಕ್ಕಾರ. ಆತ್ಮೀಯ ಮೋದಿ ಅವರೇ ದಯವಿಟ್ಟು ಬೆಂಗಳೂರು ಅನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿ!!! ಆದ್ದರಿಂದ ನಾವು ನೇರವಾಗಿ ಪಿಎಂಒ ಮೂಲಕ ಈ ಕೆಲಸವನ್ನು ಮಾಡಬಹುದು, ನಮ್ಮ ಕರ್ನಾಟಕ ರಾಜಕಾರಣಿಗಳು ತುಂಬಾ ಪ್ರಾಮಾಣಿಕರು!! ಎಂದು ಟ್ವೀಟ್​ನಲ್ಲಿ ಒಬ್ಬರು ಬರೆದಿದ್ದಾರೆ.

 

 

Published On - 3:29 pm, Fri, 25 November 22