ಬೆಂಗಳೂರು: ನಗರದಲ್ಲಿ ಅಪರಾಧ ಪ್ರಕರಣಗಳು ನಿಯಂತ್ರದಲ್ಲಿವೆ. ಕಳೆದ ವರ್ಷಾ ದೊಡ್ಡ ಮಟ್ಟದ ಮೇಜರ್ ಕ್ರೈಂ ಗಳು ನಡೆದಿಲ್ಲ. ಆದರೆ ಒಂದಷ್ಟು ದೊಡ್ಡ ಮಟ್ಟದ ಪ್ರತಿಭಟನೆಗಳು ನಡೆದಿವೆ. 2019ಕ್ಕೆ ಹೋಲಿಸಿದರೆ ಕಳೆದ ವರ್ಷ ಅಪರಾಧ ಪ್ರಕರಣಗಳು ಕಡೆಮೆಯಾಗಿವೆ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ (pratap reddy) ತಿಳಿಸಿದರು. ಇಂದು (ಜ. 4) ನಗರದಲ್ಲಿ ಆಯೋಜಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮೊದಲನೆಯದಾಗಿ ಡಿಸೆಂಬರ್ 31ರ ರಾತ್ರಿ ನಗರ ಪೊಲೀಸರಿಂದ ವ್ಯಾಪಕವಾಗಿ ಬಂದೂಬಸ್ತ್ ಮಾಡಲಾಗಿದೆ. ಯಾವುದೆ ಅನಾಹುತ ಆಗದಿರುವ ರೀತಿಯಲ್ಲಿ ಕೆಲಸ ಮಾಡಿದ್ದಾರೆ. ಇದಕ್ಕೆ ಸಾರ್ವಜನಿಕರ ಸಹಕಾರ ತುಂಬಾ ದೊಡ್ಡದಾಗಿತ್ತು ಎಂದರು.
ರಾಜ್ಯೋತ್ಸವ, ಜಿ 20, ಪ್ರಧಾನ ಮಂತ್ರಿಗಳ ಭದ್ರತೆ, ಈದ್ಗಾ ಮೈದಾನ ಭದ್ರತೆ ಸೇರಿ ಹಲವಾರು ಭದ್ರತೆಗಳನ್ನು ಮಾಡಲಾಗಿದೆ. ಸಂಚಾರ ವಿಭಾಗದಲ್ಲಿ ಸಹ ಸಾಕಷ್ಟು ಶ್ರವ ವಹಿಸಿ ಕೆಲಸ ಮಾಡಲಾಗಿದೆ. ಸೇಫ್ ಸಿಟಿ ಪ್ರಾಜೆಕ್ಟ್ ಅಡಿಯಲ್ಲಿ ಕ್ಯಾಮರಗಳು ಅಳವಡಿಕೆ ಮಾಡಲಾಗಿದೆ. ಪೇಸ್ ಒನ್ ಕೆಲಸ ಬಹುತೇಕ ಮುಗಿದಿದೆ. ಹಿಜಾಬ್, ವಿದ್ಯಾರ್ಥಿ, ಕಾರ್ಮಿಕರು ಹಾಗೂ ರೈತ ಸಂಘದ ಸಂಸ್ಥೆಗಳಿಂದ ಸುಮಾರು 500 ಹೆಚ್ಚು ಪ್ರತಿಭಟನೆಗಳು ನಡೆದಿದೆ. ನಗರಕ್ಕೆ ಎಂಟು ಮೊಬೈಲ್ ಎಫ್ಎಸ್ಎಲ್ಗಳು ಕೆಲಸ ಮಾಡಿ ಸಾಕ್ಷಿಗಳನ್ನು ಕಲೆಹಾಕಲಾಗುತ್ತಿದೆ ಅದು ಮತ್ತಷ್ಟು ಕೆಲಸ ಮಾಡಲಾಗುತ್ತೆ ಎಂದು ತಿಳಿಸಿದರು.
ಇದನ್ನೂ ಓದಿ: ಹೋಟೆಲ್ಗಳಲ್ಲಿ ಸಿಸಿಕ್ಯಾಮೆರಾ ಕಡ್ಡಾಯ: ಹೊಟೇಲ್ ಮಾಲಿಕರಿಗೆ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಸೂಚನೆ
ಇನ್ನು ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣ ಏರಿಕೆ ಆಗಿದ್ದು, 2021ಕ್ಕೆ ಹೋಲಿಸಿದ್ರೆ 2022ರಲ್ಲಿ 30 ಪರ್ಸೆಂಟ್ ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಒಟ್ಟು 153 ಅತ್ಯಾಚಾರ ಕೇಸ್ ದಾಖಲಾಗಿದ್ದು, 153 ಅತ್ಯಾಚಾರ ಪ್ರಕರಣ ಪೈಕಿ 149 ಕೇಸ್ ಲವ್, ಮದುವೆ, ಲಿವ್ ಇನ್ ರಿಲೇಷನ್ಶಿಪ್ ಮತ್ತು ಸಂಬಂಧಿಕರಿಂದ ಕೃತ್ಯಗಳು ನಡೆದಿವೆ. ಇನ್ನುಳಿದ 4 ಅತ್ಯಾಚಾರ ಕೇಸ್ನ ಆರೋಪಿಗಳನ್ನ ಬಂಧಿಸಿದ್ದೇವೆ. ನಗರದಲ್ಲಿ ಒಟ್ಟು 579 ಡ್ರಗ್ ಪೆಡ್ಲರ್ಸ್ ಬಂಧನ ಮಾಡಿದ್ದು, ಆರೋಪಿಗಳಿಂದ 3,746 ಕೆಜಿ ಗಾಂಜಾ, 167 ಕೆಜಿ ಡ್ರಗ್ಸ್, ಒಟ್ಟು 89.53 ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ. ನಗರದಲ್ಲಿ ವಾಹನ ಸವಾರರಿಂದ 179 ಕೋಟಿ ದಂಡ ವಸೂಲಿ ಮಾಡಲಾಗಿದೆ ಎಂದು ಪ್ರತಾಪ್ ರೆಡ್ಡಿ ಮಾಹಿತಿ ನೀಡಿದರು.
ಇನ್ನು ಪೊಲೀಸರಿಂದ ಹಣ ವಸೂಲಿ ವಿಚಾರವಾಗಿ ಅವರು ಪ್ರತಿಕ್ರಿಯೆ ನೀಡಿದ್ದು, ತಪ್ಪು ಮಾಡಿದವರ ವಿರುದ್ದ ಕ್ರಮ ಆಗೋದಕ್ಕೂ ಸಮಯ ಬೇಕಿದೆ. ಅಂತವರ ವಿರುದ್ದ ಖಂಡಿತ ಕ್ರಮವಾಗುತ್ತದೆ. ಮುಂದಿನ ವರ್ಷ ಸಹ ಇನ್ನೂ ಹೆಚ್ಚಿನ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತೇವೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.