ಬೆಂಗಳೂರು, ಡಿಸೆಂಬರ್ 31: ಈ ವರ್ಷ (2023) ಆರಂಭದಿಂದಲೇ ಬೆಂಗಳೂರು ನಗರ ಪೊಲೀಸರು (Bengaluru City Police) ಡ್ರಗ್ಸ್ (Drugs) ಜಾಲದ ವಿರುದ್ಧ ಸಮರ ಸಾರಿದ್ದಾರೆ. 2023ರಲ್ಲಿ ಒಟ್ಟು ಇದುವರೆಗೆ ನೂರು ಕೋಟಿಗೂ ಹೆಚ್ಚು ಮೌಲ್ಯದ ಡ್ರಗ್ಸ್ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರಂಭದ ಎಂಟು ತಿಂಗಳಿನಲ್ಲಿ 40 ಕೋಟಿ ಮೌಲ್ಯದ ಡ್ರಗ್ಸ್ ಸಿಕ್ಕಿರೇ, ಕೊನೆಯ ಕೇವಲ ನಾಲ್ಕು ತಿಂಗಳಲ್ಲಿ 60 ಕೋಟಿ ಮೌಲ್ಯದ ಡ್ರಗ್ಸ್ ಪತ್ತೆ ಮಾಡಲಾಗಿದೆ. ಇದುವರೆಗೆ ಮೂರು ಸಾವಿರ ಡ್ರಗ್ಸ್ ಪೆಡ್ಲರ್ಸ್ಗಳನ್ನು ಅರೆಸ್ಟ್ ಮಾಡಲಾಗಿದೆ.
ವಿದೇಶಿ ಡ್ರಗ್ಸ್ ಪೆಡ್ಲರ್ಸ್ ನಗರದಲ್ಲಿ ದೊಡ್ಡ ಪ್ರಮಾಣದಲ್ಲಿ ಮಾದಕ ವಸ್ತು ಸರಬರಾಜು ಮಾಡಿದ್ದಾರೆ. ಈ ವರ್ಷ ಪ್ರತಿ ತಿಂಗಳು ಸರಾಸರಿ ಐದು ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಲಾಗಿದೆ. ಕಳೆದ ನಾಲ್ಕು ತಿಂಗಳಲ್ಲಿ ಸರಾಸರಿ ಹದಿನೈದು ಕೋಟಿ ಮೌಲ್ಯದ ಡ್ರಗ್ಸ್ ಪತ್ತೆಯಾಗಿದೆ.
ಇದನ್ನೂ ಓದಿ: ಬೆಂಗಳೂರು: ರೈಲಿನಲ್ಲಿ ಸಾಗಿಸುತ್ತಿದ್ದ 60 ಕೆಜಿ ಗಾಂಜಾ ವಶ, 7 ಜನರ ಬಂಧನ
ಇನ್ನು ಹೊಸ ವರ್ಷಕ್ಕೆ ಡ್ರಗ್ಸ್ ಮಾರಟ ಹೆಚ್ಚಾಗುವ ಸಾಧ್ಯತೆ ಇದ್ದು, ಇದನ್ನು ತಡೆಗಟ್ಟಲು ಸಿಸಿಬಿ ಪೊಲೀಸರು ಈಗಾಗಲೇ ಕಾರ್ಯಾಚರಣೆಗೆ ಇಳಿದಿದ್ದಾರೆ. ಹೊಸ ವರ್ಷ ನಿಮಿತ್ಯ ಡ್ರಗ್ಸ್ ಶೇಖರಣೆ ಮಾಡಲಾಗಿರುವ ಅಡ್ಡೆಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ