ಸಾಲು ಸಾಲು ರಜೆ: ಊರುಗಳತ್ತ ಮುಖ ಮಾಡಿದ ಸಿಟಿ ಜನ: ಬೆಂಗಳೂರಿನಾದ್ಯಂತ ಫುಲ್​ ಟ್ರಾಫಿಕ್ ಜಾಮ್

| Updated By: ಗಂಗಾಧರ​ ಬ. ಸಾಬೋಜಿ

Updated on: Sep 27, 2023 | 9:07 PM

ನಾಳೆ ಈದ್ ಮಿಲಾದ್, ನಾಡಿದ್ದು ಕರ್ನಾಟಕ ಬಂದ್​ಗೆ ಕರೆ ಮತ್ತು ಕೆಲವು ಖಾಸಗಿ ಕಂಪನಿಗಳಿಗೆ ಶನಿವಾರ, ಭಾನುವಾರ ಸೇರಿದಂತೆ ಸಾಲು ಸಾಲು ರಜೆಗಳಿರುವುದರಿಂದ ಸಿಟಿ ಜನ ತಮ್ಮ ತಮ್ಮ ಊರುಗಳತ್ತ ಮುಖಮಾಡುತ್ತಿದ್ದಾರೆ. ಹಿಗಾಗಿ ಬೆಂಗಳೂರು ನಗರದಾದ್ಯಂತ ಟ್ರಾಫಿಕ್ ಜಾಮ್ ಉಂಟಾಗಿದ್ದು, ಸವಾರರು ಪರದಾಡುವಂತಾಗಿದೆ.

ಬೆಂಗಳೂರು, ಸೆಪ್ಟೆಂಬರ್​ 27: ಕಾವೇರಿ ನದಿ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ಹೋರಾಟಗಾರ ವಾಟಾಳ್​ ನಾಜರಾಜ್​ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಸೆಪ್ಟೆಂಬರ್​ 29 ರಂದು ಕರ್ನಾಟಕ ಬಂದ್​ಗೆ ಕರೆ ನೀಡಿದೆ. ಜೊತೆಗೆ ಸೆ. 28 ರಂದು ಈದ್ ಮಿಲಾದ್​​ ಮತ್ತು ಅಕ್ಟೋಬರ್​​ 2 ಗಾಂಧಿ ಜಯಂತಿ ಹಿನ್ನೆಲೆ ಸಾಲು ಸಾಲು ರಜೆ (holidays) ಗಳಿರುವುದರಿಂದ ಸಿಟಿ ಜನ ತಮ್ಮ ತಮ್ಮ ಊರುಗಳತ್ತ ಮುಖಮಾಡುತ್ತಿದ್ದಾರೆ. ಬೆಂಗಳೂರು ನಗರದಾದ್ಯಂತ ಟ್ರಾಫಿಕ್ ಜಾಮ್ ಉಂಟಾಗಿದ್ದು, ಸವಾರರು ಪರದಾಡುವಂತಾಗಿದೆ.

ನಾಳೆ ಈದ್ ಮಿಲಾದ್ ರಜೆ, ನಾಡಿದ್ದು ಕರ್ನಾಟಕ ಬಂದ್​ಗೆ ಕರೆ ಮತ್ತು ಕೆಲವು ಖಾಸಗಿ ಕಂಪನಿಗಳಿಗೆ ಶನಿವಾರ ರಜೆ, ಭಾನುವಾರ ಮಾಮೂಲಿ ರಜೆಗಳಿದ್ದು, ಒಮ್ಮೆಲೆ ನೂರಾರು ಜನ ರಸ್ತೆಗೆ ಬಂದಿದ್ದರಿಂದ ಕಾರ್ಪೊರೇಷನ್ ವೃತ್ತದಿಂದ ಮೆಜೆಸ್ಟಿಕ್ ಮಾರ್ಗದಲ್ಲಿ ಫುಲ್​ ಟ್ರಾಫಿಕ್ ಜಾಮ್ ಉಂಟಾಗಿದೆ. ಇದರಿಂದ ಬೆಂಗಳೂರಿನ ಪ್ರತಿ ರಸ್ತೆಯಲ್ಲೂ ಸಂಚಾರ ಮಂದಗತಿಯಲ್ಲಿ ಸಾಗಿದೆ.

ಸಾರ್ವಜನಿಕರಿಗೆ ವಾಟಾಳ್ ನಾಗರಾಜ್​ ಮನವಿ

ಕರ್ನಾಟಕ ಬಂದ್​ಗೆ ಎಲ್ಲರೂ ಸಹಕಾರ ನೀಡಬೇಕು. ಹೋಟೆಲ್​, ಶಾಪಿಂಗ್ ಮಾಲ್​ಗಳು, ಅಂಗಡಿಗಳು ಬಂದ್​​​ ಮಾಡಬೇಕು ಎಂದು ತೆರೆದ ವಾಹನದಲ್ಲಿ ಬೀದಿ ಬೀದಿಗೆ ತೆರಳಿ ಲೌಡ್​ ಸ್ಪೀಕರ್​ ಮೂಲಕ ಜನರಿಗೆ ಹೋರಾಟಗಾರ ವಾಟಾಳ್ ನಾಗರಾಜ್​ ಇಂದು​ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಕಾವೇರಿ‌ ಹೋರಾಟಕ್ಕಿಳಿದ ಪ್ರತಿಭಟನಾಕಾರರಿಗೆ ಶಾಕ್: ಕಕಜವೇ ರಾಜ್ಯಾಧ್ಯಕ್ಷ ರಮೇಶ್ ಗೌಡ ವಿರುದ್ಧ ಎಫ್​ಐಆರ್

ಈ ಬಂದ್ ಒಂದು ಜಿಲ್ಲೆಗೆ ಮಾತ್ರ ಸೀಮಿತಲ್ಲ, ಕರ್ನಾಟಕದಾದ್ಯಂತ ಬಂದ್​ ನಡೆಯಲಿದೆ. ಟೋಲ್​, ರೈಲು, ಹೆದ್ದಾರಿ, ವಿಮಾನ ಹಾರಾಟ ಬಂದ್ ಆಗಲಿದೆ. ಟೌನ್​ಹಾಲ್​ನಿಂದ ಫ್ರೀಡಂ ಪಾರ್ಕ್​ವರೆಗೆ ಪ್ರತಿಭಟನಾ ರ‍್ಯಾಲಿ ನಡೆಯಲಿದೆ ಎಂದಿದ್ದಾರೆ.

ಕರ್ನಾಟಕ ಬಂದ್​ ದಿನ ಏನೇನಿರಲ್ಲ?

  • ಓಲಾ ಮತ್ತು ಉಬರ್ ಸೇವೆಗಳು
  • ಆಟೋರಿಕ್ಷಾಗಳು
  • ಕಾರ್ಮಿಕ ಆಧಾರಿತ ಕೆಲಸಗಳು
  • ಟ್ರಕ್ ಸಾರಿಗೆ
  • ಮಾರುಕಟ್ಟೆಗಳು
  • ಬೀದಿ ವ್ಯಾಪಾರಿಗಳು
  • ಹೋಟೆಲ್‌ಗಳು
  • ಚಿತ್ರಮಂದಿರಗಳು
  • ಮಾಲ್‌ಗಳು
  • ಖಾಸಗಿ ಬಸ್ಸುಗಳು
  • ಬೇಕರಿಗಳು

ಕರ್ನಾಟಕ ಬಂದ್ ದಿನ ಏನೇನಿರುತ್ತವೆ?

  • ಆಸ್ಪತ್ರೆ
  • ಔಷಧಾಲಯಗಳು
  • ಆಂಬ್ಯುಲೆನ್ಸ್ ಸೇವೆಗಳು
  • ಮೆಟ್ರೋ ಸೇವೆ
  • ಹಾಲಿನ ಪಾರ್ಲರ್‌ಗಳು

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:57 pm, Wed, 27 September 23