ಬೆಂಗಳೂರು: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (BESCOM) ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದ ಮಾಹಿತಿಯ ಪ್ರಕಾರ, ಬೆಂಗಳೂರು ನಗರದಲ್ಲಿ ಶುಕ್ರವಾರ, ಶನಿವಾರ ಮತ್ತು ಭಾನುವಾರದಂದು, ಅಂದರೆ ಅಕ್ಟೋಬರ್ 7, 8 ಮತ್ತು 9 ರಂದು ಕೆಲವು ವಿದ್ಯುತ್ ಕಡಿತ (Power cuts) ಉಂಟಾಗಲಿದೆ. ಅಂಡರ್ ಗ್ರೌಂಡ್ ಕೇಬಲ್ ಕಾಮಗಾರಿಗಳಿಗೆ 11 ಕಿಲೋವೋಲ್ಟ್ (ಕೆವಿ) , ಫೀಡರ್ ನಿರ್ವಹಣೆ ಕೆಲಸಗಳು, ಜಂಗಲ್ ಕಟಿಂಗ್, ಹೆಚ್ಚುವರಿ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳನ್ನು ಒದಗಿಸುವುದು, ತ್ರೈಮಾಸಿಕ ನಿರ್ವಹಣಾ ಕೆಲಸ ಮತ್ತು ಅಸ್ತಿತ್ವದಲ್ಲಿರುವ ಉಪಕರಣಗಳ ಸ್ಥಿತಿಯನ್ನು ಪರಿಶೀಲಿಸುವುದು ಇತ್ಯಾದಿ ಕೆಲಸವನ್ನು ವಿದ್ಯುತ್ ಮಂಡಳಿ ಮಾಡಲಿದೆ. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಕೆಪಿಟಿಸಿಎಲ್ ಶುಕ್ರವಾರ ಈ ಕೆಲವು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಿದ್ದು, ಬೆಸ್ಕಾಂ ಶನಿವಾರ ಮತ್ತು ಭಾನುವಾರ ಒಂದೆರಡು ವಿಭಾಗಗಳಲ್ಲಿ ಕಾರ್ಯನಿರ್ವಹಿಸಲಿದೆ. ವಾರಾಂತ್ಯದಲ್ಲಿ ಹೆಚ್ಚಿನ ಕೆಲಸಗಳನ್ನು ನಿಗದಿಪಡಿಸಲಾಗಿದೆ.
ಈ ಕಡಿತ ಬೆಳಿಗ್ಗೆ 10 ರಿಂದ ಸಂಜೆ 4 ರ ನಡುವೆ ಸಂಭವಿಸಬಹುದು.
ಎಲ್ಲೆಲ್ಲಿ ವಿದ್ಯುತ್ ಕಡಿತ?
ಅಕ್ಟೋಬರ್ 7, ಶುಕ್ರವಾರ
ಬೆಸ್ಕಾಂ ವಿಭಾಗ- ರಾಮನಗರ ಮತ್ತು ಕುಣಿಗಲ್
ಕೆಟಿಪಿಸಿಎಲ್ ವಿಭಾಗ- ಕೆ.ಬಿ ಕ್ರಾಸ್ ಮತ್ತು ದಾವಣಗೆರೆ
ಕೂಟಗಲ್ಲು ಮತ್ತು ಕುಣಮುಂಡ್ನಹಳ್ಳಿ ಸುತ್ತಮುತ್ತಲಿನ ಪ್ರದೇಶಗಳು, 66/11 ಕೆವಿ ಬೇವೂರು ಲೈನ್, 66/11 ಕೆವಿ ದಶಾವರ, 66/11 ಕೆವಿ ಸಂಕಲಗೆರೆ, 66 ಕೆವಿ ಸೌರ ವಿದ್ಯುತ್ ಸ್ಥಾವರ, ಚೌಡನಕುಪ್ಪೆ, ತಾವರೆಕೆರೆ ಜಿಲ್ಲಾಪಂಚಾಯತ್ ಗ್ರಾಮ, ಕಾಡಜ್ಜಿ, ಬೇತೂರು ಬಸವನಾಳು, ನಾಗರಕಟ್ಟೆ ಮತ್ತಿತರ ಗ್ರಾಮಗಳು, ಸವಳಂಗ, ಕೊಡ್ತಾಳು, ಚಿನ್ನಿಕಟ್ಟೆ, ಮಾದಾಪುರ, ಜಯನಗರ, ಕ್ಯಾತಿನಕೊಪ್ಪ, ಮುಸೇನಾಳ್, ಮಾಚಿಗೊಂಡನಹಳ್ಳಿ.
ಅಕ್ಟೋಬರ್ 8, ಶನಿವಾರ
ಬಿಡದಿ ಉಪವಿಭಾಗದಡಿ ಕಾಮಗಾರಿ ನಡೆಯುವುದರಿಂದ ಬೆಸ್ಕಾಂ ವಿಭಾಗದ ರಾಮನಗರದಲ್ಲಿ ವಿದ್ಯುತ್ ಇರುವುದಿಲ್ಲ. ಇನ್ನುಳಿದಂತೆ ಬಿಲ್ಲೆಕೆಂಪನಹಳ್ಳಿ, ಮಾರುತಿನಗರ, ಬೀಮೇನಹಳ್ಳಿ, ನಿಂಗಯ್ಯನದೊಡ್ಡಿ, ರಂಗೇಗೌಡನದೊಡ್ಡಿ, ಲಕ್ಷ್ಮೀಸಾಗರದಲ್ಲಿ ವಿದ್ಯುತ್ ಕಡಿತ ಆಗಲಿದೆ.
ಅಕ್ಟೋಬರ್ 9, ಭಾನುವಾರ
ಬಿಡದಿ ಉಪವಿಭಾಗ ಕಾಮಗಾರಿ ನಡೆಸುವುದರಿಂದ ಬೆಸ್ಕಾಂ ವಿಭಾಗದಡಿಯಲ್ಲಿ ರಾಮನಗರದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಕೆಐಎಡಿಬಿ 1ನೇ ಹಂತದ ಕೈಗಾರಿಕಾ ಪ್ರದೇಶದಲ್ಲೂ ವಿದ್ಯುತ್ ಇರುವುದಿಲ್ಲ.