ದಸರಾ ಮೆರವಣಿಗೆ ವೇಳೆ ಪುಂಡರ ಗ್ಯಾಂಗ್‌ಗಳಿಂದ ಅಟ್ಟಹಾಸ: ದೊಣ್ಣೆಗಳಿಂದ 2 ಗ್ಯಾಂಗ್ ಬಡಿದಾಟ
ಕಳೆದ ರಾತ್ರಿ 11 ಗಂಟೆ ವೇಳೆಗೆ ಬಸವೇಶ್ವರ ನಗರ ಮುನೇಶ್ವರ ದೇವಾಲಯ ಬಳಿ, ಪುಡಿ ರೌಡಿಗಳಿಂದ ದೀಪು ಎಂಬಾತನ ಮೇಲೆ ಹಲ್ಲೆ ಗ್ಯಾಂಗ್ ನಡೆಸಿದೆ. ಹಲ್ಲೆ ದೃಶ್ಯ ಸ್ಥಳೀಯ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿತ್ತು.
ಬೆಂಗಳೂರು: ದಸರಾ ಮೆರವಣಿಗೆ ವೇಳೆ ಪುಂಡರ ಗ್ಯಾಂಗ್‌ಗಳಿಂದ ಅಟ್ಟಹಾಸ ಮೆರೆದಿದ್ದು, ಪ್ರತ್ಯೇಕ 2 ಪ್ರಕರಣಗಳಲ್ಲಿ ದೊಣ್ಣೆಗಳಿಂದ 2 ಗ್ಯಾಂಗ್ ಬಡಿದಾಡಿಕೊಂಡಿರುವಂತಹ ಘಟನೆ ಬೆಂಗಳೂರಿನ ಪಶ್ಚಿಮ ವಿಭಾಗದ 2 ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪ್ರತ್ಯೇಕ ಎರಡು ಪ್ರಕರಣಗಳಲ್ಲಿ ಮೂವರಿಗೆ ಗಂಭೀರ ಗಾಯವಾಗಿದೆ. ಮಾಗಡಿ ರೋಡ್ ಠಾಣಾ ವ್ಯಾಪ್ತಿಯಲ್ಲಿ ದೀಪು ಮೇಲೆ ಹಲ್ಲೆ ಮಾಡಿ ಪುಂಡರ ಗ್ಯಾಂಗ್ ಪರಾರಿಯಾಗಿದೆ. ವಿಜಯನಗರ ಠಾಣಾ ವ್ಯಾಪ್ತಿಯಲ್ಲಿ ಇಬ್ಬರ ಮೇಲೆ ಹಲ್ಲೆಯಾಗಿದ್ದು, ಚೇತನ್ ಶೆಟ್ಟಿ, ಚೇತನ್ ಸೋಮಶೇಖರ್‌ಗೆ ಗಂಭೀರ ಗಾಯಗೊಂಡಿದ್ದಾರೆ. ಎರಡು ಘಟನೆಗಳೂ ಬಾರ್‌ಗಳ ಮುಂದೆ ನಡೆದಿವೆ. ಮಾಗಡಿ ರೋಡ್ ಠಾಣಾ ವ್ಯಾಪ್ತಿಯ ನವ್ಯಾ ಬಾರ್ ಹಾಗೂ ವಿಜಯನಗರದ ಎಂ.ಆರ್.ಗಾರ್ಡನ್ ಬಾರ್ ಬಳಿ ಘಟನೆ ನಡೆದಿದೆ. ಮಾಗಡಿ ರೋಡ್, ವಿಜಯನಗರ ಠಾಣೆಯಲ್ಲಿ ಪ್ರತ್ಯೇಕ ಕೇಸ್ ದಾಖಲಾಗಿದೆ.
ಕಳೆದ ರಾತ್ರಿ 11 ಗಂಟೆ ವೇಳೆಗೆ ಬಸವೇಶ್ವರ ನಗರ ಮುನೇಶ್ವರ ದೇವಾಲಯ ಬಳಿ, ಪುಡಿ ರೌಡಿಗಳಿಂದ ದೀಪು ಎಂಬಾತನ ಮೇಲೆ ಹಲ್ಲೆ ಗ್ಯಾಂಗ್ ನಡೆಸಿದೆ. ಹಲ್ಲೆ ದೃಶ್ಯ ಸ್ಥಳೀಯ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿತ್ತು. ಗಾಯಾಳು ದೀಪುಗೆ ಮುಂದುವರೆದ ಚಿಕಿತ್ಸೆ, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಕುಡಿದ ಮತ್ತಿನಲ್ಲಿ ಗ್ಯಾಂಗ್ ಹಲ್ಲೆ ನಡೆಸಿದೆ ಎನ್ನಲಾಗುತ್ತಿದೆ. ಸಿಸಿ ಕ್ಯಾಮರಾ ದೃಶ್ಯಾವಳಿ ಆಧರಿಸಿ ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.
ಗಣಪತಿ ವಿಸರ್ಜನೆ ವೇಳೆ ನೀರಿನಲ್ಲಿ ಮುಳುಗಿ ಇಬ್ಬರ ಸಾವು
ಹಾಸನ: ಗಣಪತಿ ವಿಸರ್ಜನೆ ವೇಳೆ ನೀರಿನಲ್ಲಿ ಮುಳುಗಿ ಇಬ್ಬರ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಅರಸೀಕೆರೆ ತಾಲೂಕಿನ ವಡಗೆರಹಳ್ಳಿಯಲ್ಲಿ ನಡೆದಿದೆ. ಪ್ರವೀಣ್(28), ರಾಜು(30) ಮೃತರು. ಗಣಪತಿ ವಿಸರ್ಜನೆ ವೇಳೆ ಕೆರೆಗೆ ಇಳಿದಿದ್ದ ಗ್ರಾಮದ ಹಲವರು, ಈಜು ಬಾರದ್ದರಿಂದ ಕೆರೆಯಲ್ಲಿ ಮುಳುಗಿ ಯುವಕರಿಬ್ಬರ ಸಾವನ್ನಪ್ಪಿದ್ದಾರೆ. ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.
ಎರಡು ಗ್ಯಾಂಗ್ ನಡುವೆ ಮಾರಾಮಾರಿ, ಇಬ್ಬರ ಬರ್ಬರ ಕೊಲೆ
ಬೆಳಗಾವಿ: ಎರಡು ಗ್ಯಾಂಗ್ ನಡುವೆ ಮಾರಾಮಾರಿ ಉಂಟಾಗಿದ್ದು ಇಬ್ಬರ ಬರ್ಬರ ಕೊಲೆ ಮಾಡಿರುವಂತಹ ಘಟನೆ ಬೆಳಗಾವಿ ತಾಲೂಕಿನ ಸುಳೇಭಾವಿ ಗ್ರಾಮದಲ್ಲಿ ನಡೆದಿದೆ. ಸುಳೇಭಾವಿ ಗ್ರಾಮದ ಪ್ರಕಾಶ್ ಹುಂಕ್ರಿಪಾಟೀಲ್(22), ಮಹೇಶ್ ಮುರಾರಿ(28) ಹತ್ಯೆಯಾದವರು. ಸ್ಥಳಕ್ಕೆ ಡಿಸಿಪಿ ರವೀಂದ್ರ ಗಡಾದಿ ಸೇರಿದಂತೆ ಪೊಲೀಸ್ ಅಧಿಕಾರಿಗಳ ಭೇಟಿ ನೀಡಿದರು. ಹಳೆ ವೈಷಮ್ಯ ಹಿನ್ನೆಲೆ ಎರಡು ಗ್ಯಾಂಗ್ ನಡುವೆ ಗಲಾಟೆ ನಡೆದಿದ್ದು, ಈ ವೇಳೆ ಇಬ್ಬರಿಗೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಮಾರಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.
ರಾತ್ರಿ ಮಲಗಿದ್ದ ವೇಳೆ ಕತ್ತು ಸೀಳಿ ವ್ಯಕ್ತಿಯ ಬರ್ಬರ ಹತ್ಯೆ
ರಾಯಚೂರು: ನಗರದಲ್ಲಿ ಮತ್ತೊಂದು ಕೊಲೆ ನಡೆದಿದೆ. ಜಿಲ್ಲೆಯ ಸಿರವಾರ ತಾಲೂಕಿನ ಮಲ್ಲಟ ಗ್ರಾಮದಲ್ಲಿ ರಾತ್ರಿ ಮಲಗಿದ್ದ ವೇಳೆ ಕತ್ತು ಸೀಳಿ ವ್ಯಕ್ತಿಯ ಬರ್ಬರ ಹತ್ಯೆ ಮಾಡಲಾಗಿದೆ. ಬಸವರಾಜ ಹೊನ್ನಪ್ಪ(37) ಕೊಲೆಯಾದ ವ್ಯಕ್ತಿ. ಹಂತಕರು ಚಾಕುವಿನಿಂದ ಹೊಟ್ಟೆ, ಕುತ್ತಿಗೆ ಭಾಗಕ್ಕೆ ಇರಿದು ಕೊಲೆ ಮಾಡಿದ್ದಾರೆ. ಅನೈತಿಕ ಸಂಬಂಧ ಹಿನ್ನೆಲೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಮಾರಕಾಸ್ತ್ರಗಳಿಂದ ಹೊಡೆದು ವ್ಯಕ್ತಿಯ ಬರ್ಬರ ಕೊಲೆ
ಕಲಬುರಗಿ: ಬಸಂತನಗರದಲ್ಲಿ ಹಣದ ವಿಚಾರಕ್ಕೆ ಸಂಬಂಧಿಗಳಿಂದಲೇ ಲಕ್ಷ್ಮೀಪುತ್ರ(45) ಎಂಬ ವ್ಯಕ್ತಿಯ ಕೊಲೆ ಮಾಡಲಾಗಿದೆ. ಹಣದ ವಿಚಾರಕ್ಕೆ ಲಕ್ಷ್ಮೀಪುತ್ರ ಪತ್ನಿಯ ಸಹೋದರ ಶಿವಕಾಂತ್ ಮತ್ತು ಪ್ರಶಾಂತ್ ಮಾರಕಾಸ್ತ್ರದಿಂದ ಹೊಡೆದು ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಲಕ್ಷ್ಮೀಪುತ್ರ ತನ್ನ ಪತ್ನಿಯ ಸಹೋದರರಿಗೆ 8 ಲಕ್ಷ ಹಣ ನೀಡಿದ್ದರು. ಕೊಟ್ಟ ಹಣವನ್ನು ವಾಪಾಸ್ ಕೇಳಿದಕ್ಕೆ ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:52 pm, Thu, 6 October 22