ನಿಮ್ಮ ಮನವಿ ನನಗೆ ತಲುಪಿದೆ, ನಿಮ್ಮ ಕಳಕಳಿಯನ್ನ ಪ್ರಶಂಸಿಸುತ್ತೇನೆ: ರಾಹುಲ್ ಗಾಂಧಿ ಪತ್ರಕ್ಕೆ ಸ್ಪಂದಿಸಿದ ಸಿಎಂ ಬೊಮ್ಮಾಯಿ
ನಾಗರಹೊಳೆ ಸಂರಕ್ಷಿತ ಕಾಡಿನಲ್ಲಿ ಗಾಯಾಳು ಮರಿ ಆನೆಯನ್ನು ಕಂಡು ರಾಹುಲ್ ಗಾಂಧಿ ಮರುಗಿದ್ದು, ಸಿಎಂ ಬೊಮ್ಮಾಯಿಗೆ ಪತ್ರ ಬರೆದಿದ್ದರು. ಈಗ ಆ ಪತ್ರಕ್ಕೆ ಸಿಎಂ ಬೊಮ್ಮಾಯಿಗೆ ಮರು ಪತ್ರ ಬರೆದಿದ್ದಾರೆ.
ಬೆಂಗಳೂರು: ನಿಮ್ಮ ಮನವಿ ನನಗೆ ತಲುಪಿದೆ, ನಿಮ್ಮ ಕಳಕಳಿಯನ್ನ ಪ್ರಶಂಸಿಸುತ್ತೇನೆ. ಈಗಾಗಲೇ ಅಧಿಕಾರಿಗಳು ಮರಿ ಆನೆಗೆ ಸೂಕ್ತ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ರಾಹುಲ್‌ಗಾಂಧಿ (Rahul Gandhi) ಮನವಿ ಪತ್ರಕ್ಕೆ ಸಿಎಂ ಬೊಮ್ಮಾಯಿ ಸ್ಪಂದಿಸಿದ್ದಾರೆ. ಕ್ರೂರ ಪ್ರಾಣಿಗಳ ದಾಳಿಗೆ ಒಳಗಾಗಿ ಮರಿ ಆನೆಗೆ ಗಾಯವಾಗಿದೆ. ಗಾಯಾಳು ಮರಿ ಆನೆ ಸದ್ಯ ತಾಯಿಯ ಹಾಲಿನ ಆರೈಕೆಯಲ್ಲಿದೆ. ಈ ಹಂತದಲ್ಲಿ ತಾಯಿಯನ್ನು ಬೇರ್ಪಡಿಸಿ ಚಿಕಿತ್ಸೆ ನೀಡುವುದು ಕಷ್ಟ. ಅಗತ್ಯ ಚಿಕಿತ್ಸೆ ನೀಡಿ ಆರೈಕೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿರುವೆ. ತಾಯಿ ಜತೆ ಮರಿ ಆನೆಯನ್ನು ತೀವ್ರ ನಿಗಾವಹಿಸಿ ನೋಡಿಕೊಳುತ್ತಿದ್ದಾರೆ. ನಾಗರಹೊಳೆ ಸಂರಕ್ಷಿತ ಕಾಡಿನಲ್ಲಿ ಗಾಯಾಳು ಮರಿ ಆನೆ ನೋಡಿದ್ದರು. ಮರಿ ಆನೆ ಕಾಪಾಡಿ ಅಂತಾ ನಿನ್ನೆ ಸಿಎಂಗೆ ರಾಹುಲ್ ಪತ್ರ ಬರೆದಿದ್ದರು. ಜೊತೆಗೆ ಟ್ವಿಟರ್‌ನಲ್ಲೂ ಆನೆ ಫೋಟೋ ಪೋಸ್ಟ್ ಮಾಡಿದ್ದರು.
ಆನೆ ನರಳಾಟ ಕಂಡು ಮರುಗಿದ ರಾಹುಲ್:
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ ಜೋಡೊ ಯಾತ್ರೆಗೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಕೂಡ ಸಾಥ್ ನೀಡಿದ್ದರು. ಭಾರತ ಜೋಡೊ ಯಾತ್ರೆಯನ್ನು 2 ದಿನಗಳ ಕಾಲ ಮೊಟಕುಗೊಳಸಲಾಗಿತ್ತು. ರಾಹುಲ್ ಮತ್ತು ಸೋನಿಯಾ ಗಾಂಧಿ ಸೆ.04, 5ರಂದು ವಿಶ್ರಾಂತಿಯಲ್ಲಿದ್ದರು. ಈ ವೇಳೆ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ನಾಗರಹೊಳೆ ಹುಲಿ ಸಂರಕ್ಷಿತ ಅಭಯಾರಣ್ಯದಲ್ಲಿ ಸಫಾರಿ ಮಾಡಿದ್ದಾರೆ.
ಈ ವೇಳೆ ಮರಿ ಆನೆ ಗಾಯವಾಗಿದ್ದನ್ನು ಕಂಡಿದ್ದಾರೆ. ಈ ಸಂಬಂಧ ರಾಹುಲ್ ಗಾಂಧಿ ಮರಿ ಆನೆ ಕಾಪಾಡಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ. “ನಾಗರಹೊಳೆ ಹುಲಿ ಸಂರಕ್ಷಿತ ಕಾಡಿನಲ್ಲಿ ಆನೆ ನೋಡಿದೆ. ತಾಯಿ ಆನೆ ಜೊತೆಗೆ ಗಾಯಗೊಂಡ ಮರಿ ಆನೆಯ ನರಳಾಟವನ್ನು ಕಂಡೆ. ನಾನು, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಭೇಟಿ ವೇಳೆ ಸೊಂಡಿಲು ಹಾಗೂ ಬಾಲದ ಭಾಗದ ಗಾಯದಿಂದ ಮರಿ ಆನೆ ನರಳಾಡುತ್ತಿತ್ತು. ಕಾಡಿನಲ್ಲಿ ನರಳಿತ್ತಿರುವ ಮರಿ ಆನೆಗೆ ತುರ್ತಾಗಿ ಚಿಕಿತ್ಸೆ ಅಗತ್ಯ ಇದೆ. ನೀವು ಸಹಾನುಭೂತಿ ಮನೋಭಾವನೆಯಿಂದ ಮರಿ ಆನೆ ಉಳಿಸಬೇಕು ಸೂಕ್ತ ಚಿಕಿತ್ಸೆ ಸಿಕ್ಕರೆ ಮರಿ ಆನೆ ಉಳಿಯುತ್ತೆ.ಸಕಾಲದಲ್ಲಿ ನೆರವಾಗಿ ಮರಿ ಆನೆ ಜೀವ ಉಳಿಸುತ್ತೀರೆಂದು ನಂಬಿದ್ದೇನೆ ” ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ಕುರಿತು ರಾಹುಲ್ ಗಾಂಧಿ ಟ್ವಿಟರ್ನಲ್ಲಿ ಆನೆ ಫೋಟೋ ಪೋಸ್ಟ್ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:10 pm, Thu, 6 October 22