ಕೆಜಿಎಫ್​ 2 ಸಾಂಗ್​ ಬಳಕೆ: ಕಾಂಗ್ರೆಸ್​ ಟ್ವಿಟರ್ ಖಾತೆ​ಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸುವಂತೆ ಕೋರ್ಟ್​​ ಆದೇಶ

| Updated By: ವಿವೇಕ ಬಿರಾದಾರ

Updated on: Nov 07, 2022 | 9:17 PM

ಕೆಜಿಎಫ್-2 ಚಿತ್ರದ ಹಾಡನ್ನು ಅಕ್ರಮವಾಗಿ ಬಳಸಿಕೊಂಡ ಆರೋಪದಡಿ ಕಾಂಗ್ರೆಸ್​ ಪಕ್ಷದ ಟ್ವಿಟರ್ ಖಾತೆ​ಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸುವಂತೆ ಬೆಂಗಳೂರಿನ ನ್ಯಾಯಾಲಯ ಆದೇಶ ಹೊರಡಿಸಿದೆ.

ಕೆಜಿಎಫ್​ 2 ಸಾಂಗ್​ ಬಳಕೆ: ಕಾಂಗ್ರೆಸ್​  ಟ್ವಿಟರ್ ಖಾತೆ​ಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸುವಂತೆ  ಕೋರ್ಟ್​​  ಆದೇಶ
ಭಾರತ ಜೋಡೊ ಯಾತ್ರೆಯಲ್ಲಿ ಕೆಜಿಎಫ್ 2 ಚಿತ್ರಗೀತೆಯನ್ನು ದುರ್ಬಳಕೆ ಮಾಡಿಕೊಂಡಿರುವ ಆರೋಪ
Follow us on

ಬೆಂಗಳೂರು: ಕೆಜಿಎಫ್-2 (KGF-2) ಚಿತ್ರದ ಹಾಡನ್ನು ಅಕ್ರಮವಾಗಿ ಬಳಸಿಕೊಂಡು ಎಂಆರ್‌ಟಿ ಮ್ಯೂಸಿಕ್ ಕಂಪನಿಯ ಹಕ್ಕುಸ್ವಾಮ್ಯವನ್ನು ಉಲ್ಲಂಘಿಸಿದ ಆರೋಪದ ಮೇಲೆ ಕಾಂಗ್ರೆಸ್ (Congress) ಪಕ್ಷದ ಮತ್ತು ಭಾರತ್ ಜೋಡೋ ಯಾತ್ರೆಯ (Bharat jodo yatra) ಟ್ವಿಟರ್ (Twitter)​ ಖಾತೆಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸುವಂತೆ ಬೆಂಗಳೂರಿನ ನ್ಯಾಯಾಲಯವು ಟ್ವಿಟರ್‌ಗೆ ಸೂಚಿಸಿದೆ.

ಇತ್ತೀಚೆಗೆ ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆಗಾಗಿ ಕರ್ನಾಟಕಕ್ಕೆ ಬಂದಿದ್ದರು. ಅವರು ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಕಾಲ್ನಡಿಗೆಯಲ್ಲಿ ಸಾಗಿದ್ದರು. ಈ ವೇಳೆ ರಾಹುಲ್ ಗಾಂಧಿ ಅವರ ಕಾಲ್ನಡಿಗೆಯ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕಲಾಗಿತ್ತು. ಈ ವಿಡಿಯೋಗೆ ‘ಕೆಜಿಎಫ್ 2’ ಚಿತ್ರದ ಹಿಂದಿ ಗೀತೆ ‘ಸುಲ್ತಾನ್​..’ ಹಾಡನ್ನು ಬಳಕೆ ಮಾಡಲಾಗಿತ್ತು. ಈ ಕಾರಣಕ್ಕೆ ರಾಹುಲ್ ಗಾಂಧಿ ವಿರುದ್ಧ ಈ ಹಾಡಿನ ಹಿಂದಿ ಹಕ್ಕನ್ನು ಹೊಂದಿರುವ ಎಂಆರ್​​ಟಿ ಮ್ಯೂಸಿಕ್​ನವರು ಫೋರ್ಜರಿ ಪ್ರಕರಣ ದಾಖಲು ಮಾಡಿದ್ದರು. ಯಶವಂತಪುರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹೀಗಾಗಿ ರಾಹುಲ್ ಗಾಂಧಿ ಮಾತ್ರವಲ್ಲದೆ, ಜೈರಾಮ್ ರಮೇಶ್, ಸುಪ್ರಿಯಾ ವಿರುದ್ಧವೂ ಎಫ್ಐಆರ್ ದಾಖಲಾಗಿತ್ತು.

ಈ ಪ್ರಕರಣವನ್ನು ಬೆಂಗಳೂರಿನ ವಾಣಿಜ್ಯ ಕೋರ್ಟ್​ನಲ್ಲಿ ವಿಚಾರಣೆ ಮಾಡಲಾಗಿದೆ. ಈ ವೇಳೆ ದೂರುದಾರರು ನೀಡಿದ ದಾಖಲೆಗಳನ್ನು ಕೋರ್ಟ್​ ಪರಿಗಣಿಸಿದೆ. ಹೀಗಾಗಿ, ನವೆಂಬರ್ 21ರವರೆಗೆ ಕಾಂಗ್ರೆಸ್​ ಟ್ವಿಟರ್ ಖಾತೆಯನ್ನು ನಿರ್ಬಂಧಿಸುವಂತೆ ಕೋರ್ಟ್ ಸೂಚಿಸಿದೆ.

‘ಕೆಜಿಎಫ್ 2’ ಚಿತ್ರ ಸೂಪರ್ ಹಿಟ್ ಆಗಿದೆ. ಈ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಸಾವಿರಾರು ಕೋಟಿರೂಪಾಯಿ ಕಲೆಕ್ಷನ್ ಮಾಡಿದೆ. ಈ ಸಿನಿಮಾದ ಹಾಡುಗಳು ಕೂಡ ಸೂಪರ್ ಹಿಟ್ ಆಗಿದ್ದವು. ಈ ಚಿತ್ರದ ‘ಸುಲ್ತಾನ್​..’ ಹಾಡು ಸಾಕಷ್ಟು ರೀಲ್ಸ್​ಗಳಲ್ಲಿ ಬಳಕೆ ಆಗಿದೆ. ಈಗ ಇದೇ ಹಾಡನ್ನು ಬಳಕೆ ಮಾಡಿಕೊಂಡು ಕಾಂಗ್ರೆಸ್ ಸಂಕಷ್ಟಕ್ಕೆ ಸಿಲುಕಿದೆ.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್​ ಪ್ರತಿಕ್ರಿಯೆ

ಕಾಂಗ್ರೆಸ್ ಪಕ್ಷದ ಮತ್ತು ಭಾರತ್ ಜೋಡೋ ಯಾತ್ರೆಯ ಟ್ವಿಟರ್​​ ಖಾತೆ ನಿರ್ಭಂದಿಸುವಂತೆ ಬೆಂಗಳೂರು ನ್ಯಾಯಾಲಯ ಆದೇಶ ಹೊರಡಿಸಿದೆ. ಈ ಬಗ್ಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC)  ‘ ಟ್ವಿಟರ್​ ಖಾತೆಗಳನ್ನು ನಿರ್ಭಂದಿಸುವಂತೆ ಬೆಂಗಳೂರು ನ್ಯಾಯಾಲಯ  ಆದೇಶ ಹೊರಡಿಸಿದ್ದನ್ನು ನಾವು ಸಾಮಾಜಿಕ ಜಾಲತಾಣದಲ್ಲಿ ನೋಡಿದೇವು. ನಾವು ಯಾವುದೇ ವಿಚಾರಣೆಗೆ ಹಾಜರಾಗಲಿಲ್ಲ. ಮತ್ತು ಆದೇಶದ ಪ್ರತಿ ನಮಗೆ ಲಭ್ಯವಾಗಿಲ್ಲ. ಈ ಕುರಿತು ನಾವು ಕಾನೂನಾತ್ಮಕವಾಗಿ ಏನು ಪರಿಹಾರ ಕಂಡುಕೊಳ್ಳಬಹುದೆಂದು ಯೋಚಿಸುವತ್ತೇವೆ’ ಎಂದು ಟ್ವೀಟ್​ ಮಾಡಿದೆ.

ಬಿಜೆಪಿ ವಿರುದ್ಧ ಹರಿಹಾಯ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ 

ರಾಹುಲ್ ಗಾಂಧಿ ಭಾರತ್ ಜೋಡೊ ಯಾತ್ರೆಯಲ್ಲಿ ಕಾರ್ಯಕರ್ತರ ಜೊತೆ ಕಾಂಗ್ರೆಸ್​ ನಾಯಕ, ಸಂಸದ ರಾಹುಲ್ ಗಾಂಧಿ ಡ್ಯಾನ್ಸ್ ಮಾಡಿದ್ದರು. ಅದಕ್ಕೆ ಹಾಡು ಸೇರಿಸಿ ಟ್ವಿಟರ್​ನಲ್ಲಿ ಹಾಕಿದ್ದರು. ಇದನ್ನೇ ನೆಪ ಇಟ್ಟುಕೊಂಡ ಬಿಜೆಪಿ ನಾಯಕರು ಟ್ವಿಟರ್ ಖಾತೆಯನ್ನ ಸೀಜ್ ಮಾಡಿಸಿದ್ದಾರೆ.  ನಮ್ಮ  ಟ್ವಿಟರ್ ಆದರೂ ಬಂಧಿಸಿ ಅಥವಾ ನಮ್ಮ ನಾಯಕರನ್ನು ಜೈಲಿಗೆ ಹಾಕಿ. ಆದರೆ ಜನರ ಹೃದಯದಿಂದ ಜೈಲಿಗೆ ಹಾಕಲು ಆಗುವುದಿಲ್ಲ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಪ್ರಧಾನಮಂತ್ರಿ ಸ್ಥಾನವನ್ನು ತ್ಯಾಗ ಮಾಡಿದವರು. ತ್ಯಾಗ ಮಾಡಿದ ಪಕ್ಷದಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಭ್ರಷ್ಟ ಸರ್ಕಾರವನ್ನು ತೆಗೆಯಲು ನೀವೆಲ್ಲಾ ಮುಂದಾಗಬೇಕು ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ಮಾಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:25 pm, Mon, 7 November 22