ಬಿಬಿಎಂಪಿ ಗೋವಿಂದರಾಜನಗರ ಉಪ ವಿಭಾಗದ ಇಬ್ಬರು ಅಧಿಕಾರಿಗಳಿಗೆ ತಲಾ 4 ವರ್ಷ ಜೈಲು
2017ರಲ್ಲಿ ಲಂಚ ಸ್ವೀಕರಿಸುವ ವೇಳೆ ಎಸಿಬಿ ಬಲೆಗೆ ಬಿದ್ದಿದ್ದ ಬಿಬಿಎಂಪಿ ಗೋವಿಂದರಾಜನಗರದ ಉಪ ವಿಭಾಗದ ಇಬ್ಬರು ಅಧಿಕಾರಿಗಳಿಗೆ ಕೋರ್ಟ್ ತಲಾ 4 ವರ್ಷ ಜೈಲು ವಿಧಿಸಿದೆ.
ಬೆಂಗಳೂರು: ಬಿಬಿಎಂಪಿ(BBMP) ಗೋವಿಂದರಾಜನಗರ ಉಪ ವಿಭಾಗದ ಇಬ್ಬರು ಅಧಿಕಾರಿಗಳು ತಲಾ ನಾಲ್ಕು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ಕಾಮಗಾರಿ ಬಿಲ್‌ಗೆ ಅನುಮೋದನೆ ನೀಡಲು ಲಂಚಕ್ಕೆ (Bribe) ಬೇಡಿಕೆ ಇಟ್ಟಿದ್ದ ಬಿಬಿಎಂಪಿಯ ಗೋವಿಂದರಾಜನಗರದ ಉಪ ವಿಭಾಗದ ಎಇಇ ಶ್ರೀನಿವಾಸ್ ಹಾಗೂ ವರ್ಕ್ ಇನ್ಸ್ ಪೆಕ್ಟರ್ ವೈ.ವಿ.ಸೋಮಶೇಖರಯ್ಯಗೂ 4 ವರ್ಷ ಜೈಲು ಶಿಕ್ಷೆ ವಿಧಿಸಿ ಬೆಂಗಳೂರಿನ ಸಿಸಿಹೆಚ್ 24 ರ ವಿಶೇಷ ಕೋರ್ಟ್ ಇಂದು(ಜನವರಿ 05) ಆದೇಶ ಹೊರಡಿಸಿದೆ.
2017ರಲ್ಲಿ ಬಿಬಿಎಂಪಿ ಗೋವಿಂದರಾಜನಗರದ ಉಪ ವಿಭಾಗದ ವರ್ಕ್ ಇನ್ಸ್ಪೆಕ್ಟರ್ ವೈ.ವಿ.ಸೋಮಶೇಖರಯ್ಯ ಹಾಗೂ ಎಇಇ ಶ್ರೀನಿವಾಸ್ ಅವರು ಕಾಮಗಾರಿ ಬಿಲ್ ಅನುಮೋದಿಸಲು 30 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದು, 15 ಸಾವಿರ ಹಣ ಪಡೆದು ಬಾಕಿ ಹಣ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದಿದ್ದರು.
ಭ್ರಷ್ಟಾಚಾರ ತಡೆ ಕಾಯ್ದೆ ಸೆಕ್ಷನ್ 7, 12ರಡಿ ಆರೋಪ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ 4 ವರ್ಷ ಕಠಿಣ ಶಿಕ್ಷೆ ವಿಧಿಸಿ ನ್ಯಾ.ಕೆ.ಲಕ್ಷ್ಮೀನಾರಾಯಣ ಭಟ್ ತೀರ್ಪು ನೀಡಿದ್ದಾರೆ.
Published On - 2:47 pm, Thu, 5 January 23