ಬೆಂಗಳೂರು: ಪೊಲೀಸರೆಂದು ಹೇಳಿಕೊಂಡು 6 ಲಕ್ಷ ನಗದು, ಚಿನ್ನದ ಬಿಸ್ಕತ್​​ ದರೋಡೆ ಮಾಡಿದ ಗ್ಯಾಂಗ್

ಬ್ಯಾಗ್ ಪರಿಶೀಲಿಸಬೇಕು ನಾವು ಪೊಲೀಸ್ ಎಂದು ಸುರೇಂದ್ರರನ್ನು ಬಸ್ ನಿಂದ ಇಳಿಸಿದ್ದಾರೆ. ಬಳಿಕ ಬಿಳಿಕಾರ್ ನಲ್ಲಿ ಕೊಂಚ ದೂರ ಕರೆದೊಯ್ದು ಬ್ಯಾಗ್ ನಲ್ಲಿದ್ದ ಚಿನ್ನದ ಬಿಸ್ಕೆಟ್ ಹಾಗೂ 6 ಲಕ್ಷ ನಗದು ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಬೆಂಗಳೂರು: ಪೊಲೀಸರೆಂದು ಹೇಳಿಕೊಂಡು 6 ಲಕ್ಷ ನಗದು, ಚಿನ್ನದ ಬಿಸ್ಕತ್​​ ದರೋಡೆ ಮಾಡಿದ ಗ್ಯಾಂಗ್
ಚಿನ್ನ (ಸಾಂದರ್ಭಿಕ ಚಿತ್ರ)
Edited By:

Updated on: Feb 10, 2023 | 7:26 AM

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಿನಿಮೀಯ ಸ್ಟೈಲ್​ನಲ್ಲಿ ಪೊಲೀಸರು ಎಂದು ಹೇಳಿಕೊಂಡು ಫೀಲ್ಡ್​ಗೆ ಇಳಿದ ಖದೀಮರು ಚಿನ್ನದ ವ್ಯಾಪಾರಿಯಿಂದ 6 ಲಕ್ಷ ನಗದು, ಚಿನ್ನದ ಬಿಸ್ಕತ್​​ ದರೋಡೆ ಮಾಡಿರುವ ಘಟನೆ ನಡೆದಿದೆ. ನಕಲಿ ಪೊಲೀಸರ ಚಲಾಕಿತನ ಕಂಡು ಅಸಲಿ ಪೊಲೀಸರೇ ಶಾಕ್ ಆಗಿದ್ದಾರೆ.

ಇದೇ ಫೆಬ್ರವರಿ ತಿಂಗಳ 7ರಂದು ಪೊಲೀಸರ ವೇಶದಲ್ಲಿ ಬಂದ ಮೂವರು ಖದೀಮರು ತಮಿಳುನಾಡು ಮೂಲದ ಚಿನ್ನದ ವ್ಯಾಪಾರಿ ಉಪೇಂದ್ರನಾಥ್ ಎಂಬುವವರ ಬಳಿ ಕೆಲಸಕ್ಕಿದ್ದ ಸುರೇಂದ್ರ ಎಂಬುವವರ ಬಳಿ ಇದ್ದ ಹಣ, ಚಿನ್ನ ಕಿತ್ತುಕೊಂಡು ಪರಾರಿಯಾಗಿದ್ದಾರೆ. ನಾವು ಪೊಲೀಸರು ಎಂದು ಸುರೇಂದ್ರರಿಗೆ ಪರಿಚಯ ಮಾಡಿಕೊಂಡು ಅವರ ಬಳಿ ಇದ್ದ ಹಣ, ಚಿನ್ನವನ್ನು ಎಗರಿಸಿದ್ದಾರೆ.

ಚಿನ್ನ ಹಾಗೂ ನಗದು ತೆಗೆದುಕೊಂಡು ಸುರೇಂದ್ರ ಮಾಲೀಕನ ಸೂಚನೆ ಮೇರೆಗೆ ಶಿವಮೊಗ್ಗಕ್ಕೆ ತೆರಳಿದ್ದರು. ಬಳಿಕ ಆಭರಣ ನೀಡಿ ಚಿನ್ನದ ಬಿಸ್ಕತ್ ಪಡೆದು ಬೆಂಗಳೂರಿಗೆ ಬಂದಿದ್ದರು. ನಂತರ ಸ್ಯಾಟಲೈಟ್​​ ನಿಲ್ದಾಣದಲ್ಲಿ ತಮಿಳುನಾಡು ಬಸ್​​ಗೆ ಕಾದು ಕುಳಿತಿದ್ದರು. ಈ ವೇಳೆ ಪೊಲೀಸರು ಎಂದೇಳಿಕೊಂಡು ಬಂದವರು ಬ್ಯಾಗ್ ಪರಿಶೀಲಿಸಬೇಕು ನಾವು ಪೊಲೀಸ್ ಎಂದು ಸುರೇಂದ್ರರನ್ನು ಬಸ್ ನಿಂದ ಇಳಿಸಿದ್ದಾರೆ. ಬಳಿಕ ಬಿಳಿಕಾರ್ ನಲ್ಲಿ ಕೊಂಚ ದೂರ ಕರೆದೊಯ್ದು ಬ್ಯಾಗ್ ನಲ್ಲಿದ್ದ ಚಿನ್ನದ ಬಿಸ್ಕೆಟ್ ಹಾಗೂ 6 ಲಕ್ಷ ನಗದು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಚಿನ್ನದ ಬಿಸ್ಕತ್​, 6 ಲಕ್ಷ ನಗದು ಕಿತ್ತುಕೊಂಡು ಮೂವರು ಪರಾರಿಯಾಗಿದ್ದಾರೆ. ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Online Fraud: ಗಂಡನ ಮಾತು ಕೇಳದೆ ಆನ್​​ಲೈನ್ ಆ್ಯಪ್​ನಲ್ಲಿ ಲಕ್ಷಗಟ್ಟಲೇ ಹಣ ಹೂಡಿ ಮೋಸ ಹೋಗಿರುವ ಮಹಿಳಾ ಟೆಕ್ಕಿ, ಕಾಣೆಯಾಗಿದ್ದಾರೆ!

ಮೆಡಿಕಲ್ ಶಾಪ್​​ನಲ್ಲಿ 3.7 ಲಕ್ಷ ಹಣ ಕದ್ದು ಪರಾರಿ

ಕಲಬುರಗಿ: ಚಿಂಚೋಳಿ ಪಟ್ಟಣದ ಮೆಡಿಕಲ್ ಶಾಪ್​​ನಲ್ಲಿ 3.7 ಲಕ್ಷ ಹಣ ಕದ್ದು ಖದೀಮರು ಪರಾರಿಯಾಗಿದ್ದಾರೆ. ಮೆಡಿಕಲ್ ಶಾಪ್​ನಲ್ಲಿ ಹಣ ಕದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದೇ ಪೆಬ್ರವರಿ 9 ರಂದು ನಸುಕಿನ ಜಾವ ನಾಲ್ಕು ಗಂಟೆ ಸಮಯದಲ್ಲಿ ಮೆಡಿಕಲ್ ಶಾಪ್ ಶೆಟರ್ ಮುರಿದು ಒಳ ನುಗ್ಗಿ ಕಳ್ಳತನ ಮಾಡಲಾಗಿದೆ. ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:26 am, Fri, 10 February 23