ಪಿಐಎಲ್ ಸಲ್ಲಿಸುವಾಗ ಶುದ್ಧ ಹಸ್ತರಾಗಿರಬೇಕು; ಆದಿಯೋಗಿ ಪ್ರತಿಮೆ ಸ್ಥಾಪನೆ ವಿರುದ್ಧ ಸಲ್ಲಿಸಿದ್ದ ಪಿಐಎಲ್ ವಜಾಗೊಳಿಸಿದ ಹೈಕೋರ್ಟ್

ಮೂರು ಜನರ ವಿರುದ್ಧ ಕೇಸ್ ದಾಖಲಾದ ಹಿನ್ನಲೆ ಆದಿಯೋಗಿ ಪ್ರತಿಮೆ ಸ್ಥಾಪನೆ ವಿರುದ್ಧ ಸಲ್ಲಿಸಿದ್ದ ಪಿಐಎಲ್ ಅನ್ನು ಹೈಕೋರ್ಟ್ ವಜಾಗೊಳಿಸಿದ್ದು, ಉತ್ತಮ ಹಿನ್ನೆಲೆಯುಳ್ಳವರು ಅರ್ಜಿ ಸಲ್ಲಿಸಬಹುದು ಎಂದು ಮುಖ್ಯ ನ್ಯಾಯಾಧೀಶರು ಹೇಳಿದ್ದಾರೆ.

ಪಿಐಎಲ್ ಸಲ್ಲಿಸುವಾಗ ಶುದ್ಧ ಹಸ್ತರಾಗಿರಬೇಕು; ಆದಿಯೋಗಿ ಪ್ರತಿಮೆ ಸ್ಥಾಪನೆ ವಿರುದ್ಧ ಸಲ್ಲಿಸಿದ್ದ ಪಿಐಎಲ್ ವಜಾಗೊಳಿಸಿದ ಹೈಕೋರ್ಟ್
ಕರ್ನಾಟಕ ಹೈಕೋರ್ಟ್ (ಎಡ ಚಿತ್ರ) ಮತ್ತು ಆದಿಯೋಗಿ ಪ್ರತಿಮೆ (ಬಲ ಚಿತ್ರ)
Follow us
TV9 Web
| Updated By: Rakesh Nayak Manchi

Updated on:Feb 09, 2023 | 4:23 PM

ಬೆಂಗಳೂರು: ಮೂರು ಜನರ ವಿರುದ್ಧ ಕೇಸ್ ದಾಖಲಾದ ಹಿನ್ನಲೆ ಆದಿಯೋಗಿ ಪ್ರತಿಮೆ (Adiyogi statue) ಸ್ಥಾಪನೆ ವಿರುದ್ಧ ಸಲ್ಲಿಸಿದ್ದ ಪಿಐಎಲ್ ಅನ್ನು ಹೈಕೋರ್ಟ್ (Karnataka High Court) ವಜಾಗೊಳಿಸಿದ್ದು, ಉತ್ತಮ ಹಿನ್ನೆಲೆಯುಳ್ಳವರು ಅರ್ಜಿ ಸಲ್ಲಿಸಬಹುದು ಎಂದು ಮುಖ್ಯ ನ್ಯಾಯಾಧೀಶ ಪ್ರಸನ್ನ ಬಿ.ವರಾಳೆ (CJ Prasanna B. Varale) ಹೇಳಿದ್ದಾರೆ. ಪಿಐಎಲ್ ಅರ್ಜಿಯನ್ನು ಇಂದು ಹೈಕೋರ್ಟ್ ವಿಚಾರಣೆಗೆ ಕೈಗೆತ್ತಿಕೊಂಡಾಗ ವಾದ ಮಂಡಿಸಿದ ಇಶಾ ಫೌಂಡೇಶನ್ ಪರ ಹಿರಿಯ ವಕೀಲ ಉದಯ್ ಹೊಳ್ಳ, ಅರ್ಜಿದಾರರ ಕ್ರಿಮಿನಲ್ ಹಿನ್ನಲೆಯನ್ನು ಬಹಿರಂಗಪಡಿಸಿಲ್ಲ. ವಾಸ್ತವಾಂಶವನ್ನು ಮುಚ್ಚಿಟ್ಟು ಪಿಐಎಲ್ ಸಲ್ಲಿಸಿದ್ದಾರೆ. ಅರ್ಜಿದಾರರು ಪಿಐಎಲ್ ನಿಯಮಗಳನ್ನು ಪಾಲಿಸಿಲ್ಲವೆಂದು ಹೇಳಿದರು.

ಪ್ರತಿವಾದ ಮಂಡಿಸಿದ ಅರ್ಜಿದಾರರ ಪರ ವಕೀಲರು, ಚಳವಳಿಗಳ ಹಿನ್ನಲೆಯಲ್ಲಿ ಮೂರು ಜನರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದರು. ವಾದ ಪ್ರತಿವಾದ ಆಲಿಸಿದ ಮುಖ್ಯ ನ್ಯಾಯಾಧೀಶ ಪ್ರಸನ್ನ ಬಿ.ವರಾಳೆ, ತಪ್ಪು ಮಾಹಿತಿ ನೀಡಿ ಪಿಐಎಲ್ ಹಾಕುವ ಹಕ್ಕೆಲ್ಲಿದೆ ಎಂದು ಪ್ರಶ್ನಿಸಿದರು. ಮುಂದುವರೆದು ಮಾತನಾಡಿದ ಸಿಜೆ, ನ್ಯಾಯಾಲಯಕ್ಕೆ ಪಿಐಎಲ್ ಸಲ್ಲಿಸುವಾಗ ಶುದ್ಧ ಹಸ್ತರಾಗಿರಬೇಕು. ಬೇರೆಯವರ ಮೇಲೆ ಬೆರಳು ತೋರಿಸುವ ಮುನ್ನ ನೀವು ಸರಿಯಾಗಿರಬೇಕು. ಉದ್ದೇಶ ಮಾತ್ರವಲ್ಲ, ಮಾರ್ಗವೂ ಶುದ್ಧವಿರಬೇಕು ಎಂದು ಹೇಳಿ ಮಹಾತ್ಮ ಗಾಂಧಿ ಹೇಳಿಕೆ ಉಲ್ಲೇಖಿಸಿದರು. ನಂತರ ಉತ್ತಮ ಹಿನ್ನೆಲೆಯುಳ್ಳವರು ಅರ್ಜಿ ಸಲ್ಲಿಸಬಹುದು ಎಂದು ಸೂಚಿಸಿ ಕ್ಯಾತಪ್ಪ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾಗೊಳಿಸಿದರು.

ಈ ಹಿಂದೆ ವಿಚಾರಣೆ ನಡೆಸಿದ್ದ ಹೈಕೋರ್ಟ, ನಂದಿ ಬೆಟ್ಟದ ಬಳಿ ಆದಿಯೋಗಿ ಪ್ರತಿಮೆ ಅನಾವರಣಕ್ಕೆ ಅನುಮತಿ ನೀಡಿದ್ದ ಹೈಕೋರ್ಟ್, ಉಳಿದಂತೆ ಕಾಮಗಾರಿ ನಡೆಸದೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಹೊರಡಿಸಿದ್ದ ಆದೇಶವನ್ನು ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚಿಸಿತ್ತು. ಹೈಕೋರ್ಟ್ ಆದೇಶದಂತೆ ನಿಗದಿತ ಜನವರಿ 15ರಂದು ಪ್ರತಿಮೆ ಅನಾವರಣಗೊಳಿಸಲಾಗಿತ್ತು.

ಇದನ್ನು ಓದಿ: ಚಿಕ್ಕಬಳ್ಳಾಪುರ ಈಶ ಫೌಂಡೇಶನ್: 3 ದಿನಗಳ ಕಾಲ ಈಶ ಆದಿಯೋಗಿಯ ದಿವ್ಯದರ್ಶನ ಬಂದ್‌!

ಚಿಕ್ಕಬಳ್ಳಾಪುರದ ಕ್ಯಾತಪ್ಪ ಎಸ್‌ ಸೇರಿದಂತೆ ಮೂವರು ವ್ಯಕ್ತಿಗಳು ಪ್ರತಿಮೆ ಸ್ಥಾಪನೆ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರಣ್ಯ ಭೂಮಿಯನ್ನು ವಾಣಿಜ್ಯ ಉದ್ದೇಶಕ್ಕೆ ನಿಯಮ ಉಲ್ಲಂಘಿಸಿ ಒದಗಿಸಲಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದರು. ನಂದಿ ಬೆಟ್ಟ, ನರಸಿಂಗ ದೇವರ ಬೆಟ್ಟಗಳ ಸಾಲುಗಳು ಈ ಭಾಗದ ಜಲ ಮೂಲಗಳಾಗಿದೆ. ಇಲ್ಲಿ ಔಷಧ ಸಸ್ಯಗಳು ದಟ್ಟವಾಗಿವೆ. ಸಾಲು ಬೆಟ್ಟಗಳ ಮಧ್ಯಭಾಗದಲ್ಲಿ ಇಶಾ ಪ್ರತಿಷ್ಠಾನಕ್ಕೆ ಅರಣ್ಯ ಸೇರಿ ವಿವಿಧ ಕಾಯ್ದೆಗಳನ್ನು ಉಲ್ಲಂಘಿಸಿ ವಾಣಿಜ್ಯ ಉದೇಶಕ್ಕಾಗಿ ಸರಕಾರಿ ಭೂಮಿ ಮಂಜೂರು ಮಾಡಲಾಗಿದೆ ಎಂದು ಆರೋಪಿಸಿದ್ದರು.

ಈ ಪ್ರದೇಶವನ್ನು ಗ್ರೀನ್‌ ಬೆಲ್ಟ್‌ ಎಂದು ಘೋಷಣೆ ಮಾಡಲಾಗಿದ್ದು, ವಾಣಿಜ್ಯ ಚಟುವಟಿಕೆಗೆ ಅವಕಾಶವಿಲ್ಲ. ಆದರೂ ಸಾರ್ವಜನಿಕ ಬಳಕೆ ಉದ್ದೇಶದ ಹೆಸರಿನಲ್ಲಿ ಸರಕಾರದ ಎ-ಖರಾಬು ಮತ್ತು ಬಿ-ಖರಾಬು ಭೂಮಿಯನ್ನು ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳುವುದಕ್ಕಾಗಿ ಜಿಲ್ಲಾಡಳಿತ ಹಸ್ತಾಂತರ ಮಾಡಿದೆ. ಈ ಬಗ್ಗೆ ದೂರು ನೀಡಿದರೂ ದಾಖಲಿಸಿಕೊಂಡಿಲ್ಲ. ಹೀಗಾಗಿ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆದೇಶ ನೀಡಬೇಕು ಎಂದು ಮನವಿ ಮಾಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:22 pm, Thu, 9 February 23

ಸ್ಥಾನ ಉಳಿಸಿಕೊಳ್ಳಲು ಐಶ್ವರ್ಯಾ ಹೋರಾಟ; ಮಂಜುನೇ ಎದುರು ಹಾಕಿಕೊಂಡ್ರು
ಸ್ಥಾನ ಉಳಿಸಿಕೊಳ್ಳಲು ಐಶ್ವರ್ಯಾ ಹೋರಾಟ; ಮಂಜುನೇ ಎದುರು ಹಾಕಿಕೊಂಡ್ರು
ವೀಳ್ಯದೆಲೆ ಗಿಡ ಮನೆಯಲ್ಲಿ ಇದ್ದರೆ ಏನೆಲ್ಲಾ ಲಾಭವಾಗುತ್ತದೆ? ವಿಡಿಯೋ ನೋಡಿ
ವೀಳ್ಯದೆಲೆ ಗಿಡ ಮನೆಯಲ್ಲಿ ಇದ್ದರೆ ಏನೆಲ್ಲಾ ಲಾಭವಾಗುತ್ತದೆ? ವಿಡಿಯೋ ನೋಡಿ
ಸಣ್ಣ ವಿವಾದ, ಬೈಕ್ ಸವಾರನನ್ನು ಕಾರಿನ ಬಾನೆಟ್​ ಮೇಲೆ ಎಳೆದೊಯ್ದ ಚಾಲಕ
ಸಣ್ಣ ವಿವಾದ, ಬೈಕ್ ಸವಾರನನ್ನು ಕಾರಿನ ಬಾನೆಟ್​ ಮೇಲೆ ಎಳೆದೊಯ್ದ ಚಾಲಕ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಇಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಇಡೇರಲಿವೆ
ಬೆನ್ನಿಗೆ ವ್ಯಾಯಾಮ ನೀಡುವ ಯೋಗಾಸನ ಕಲಿಸಿದ ಶಿಲ್ಪಾ ಶೆಟ್ಟಿ; ವಿಡಿಯೋ ನೋಡಿ..
ಬೆನ್ನಿಗೆ ವ್ಯಾಯಾಮ ನೀಡುವ ಯೋಗಾಸನ ಕಲಿಸಿದ ಶಿಲ್ಪಾ ಶೆಟ್ಟಿ; ವಿಡಿಯೋ ನೋಡಿ..
ಜಗದಾಂಬಿಕಾ ಪಾಲ್​​ ಭೇಟಿಯಾದ ಯತ್ನಾಳ್​​ ಟೀಂ: ಏನೆಲ್ಲಾ ಚರ್ಚೆ ಆಯ್ತು?
ಜಗದಾಂಬಿಕಾ ಪಾಲ್​​ ಭೇಟಿಯಾದ ಯತ್ನಾಳ್​​ ಟೀಂ: ಏನೆಲ್ಲಾ ಚರ್ಚೆ ಆಯ್ತು?
ಮುಂಬೈನ ಬಾಂದ್ರಾದಲ್ಲಿ ಪೈಪ್‌ಲೈನ್ ಒಡೆದು 50 ಅಡಿ ಎತ್ತರಕ್ಕೆ ಹಾರಿದ ನೀರು
ಮುಂಬೈನ ಬಾಂದ್ರಾದಲ್ಲಿ ಪೈಪ್‌ಲೈನ್ ಒಡೆದು 50 ಅಡಿ ಎತ್ತರಕ್ಕೆ ಹಾರಿದ ನೀರು
ಎಟಿಎಂನಿಂದ ಹಣ ದೋಚಿದವ ಹೆಂಡತಿಗಾಗಿ ಎರಡು ಚಿನ್ನದ ಸರಗಳನ್ನು ಖರೀದಿಸಿದ
ಎಟಿಎಂನಿಂದ ಹಣ ದೋಚಿದವ ಹೆಂಡತಿಗಾಗಿ ಎರಡು ಚಿನ್ನದ ಸರಗಳನ್ನು ಖರೀದಿಸಿದ
ಧನರಾಜ್ ಮಿಮಿಕ್ರಿ ಕಲೆಗೆ ಭೇಷ್ ಎನ್ನಬೇಕು; ಬಿಗ್ ಬಾಸ್ ಮನೆಯ ಫನ್ನಿ ವಿಡಿಯೋ
ಧನರಾಜ್ ಮಿಮಿಕ್ರಿ ಕಲೆಗೆ ಭೇಷ್ ಎನ್ನಬೇಕು; ಬಿಗ್ ಬಾಸ್ ಮನೆಯ ಫನ್ನಿ ವಿಡಿಯೋ
ಮಂಗಳೂರಿನ ತಲಪಾಡಿಯಲ್ಲಿ ತಡೆಗೋಡೆ ಕುಸಿತ; ಸ್ಪೀಕರ್ ಯುಟಿ ಖಾದರ್ ಭೇಟಿ
ಮಂಗಳೂರಿನ ತಲಪಾಡಿಯಲ್ಲಿ ತಡೆಗೋಡೆ ಕುಸಿತ; ಸ್ಪೀಕರ್ ಯುಟಿ ಖಾದರ್ ಭೇಟಿ