Bengaluru Crime: ಕಾನೂನುಬಾಹಿರ ಚಟುವಟಿಕೆ; ಒಂದೇ ತಿಂಗಳಲ್ಲಿ ಬೆಂಗಳೂರಿನಲ್ಲಿ 563 ಮಂದಿ ಬಂಧನ

|

Updated on: May 08, 2024 | 7:54 AM

ಬೆಂಗಳೂರು ನಗರದಲ್ಲಿ ಅಪರಾಧ ಕೃತ್ಯಗಳು ದಿನೇದಿನೆ ಹೆಚ್ಚಾಗುತ್ತಿದ್ದು, ಮಾದಕ ದ್ರವ್ಯ, ಜೂಜು, ಬೆಟ್ಟಿಂಗ್ ಸೇರಿದಂತೆ ವಿವಿಧ ಕಾನೂನುಬಾಹಿರ ಚಟುವಟಿಕೆಗಳಿಗೆ ಸಂಬಂಧಿಸಿ 563 ಜನರನ್ನು ಏಪ್ರಿಲ್‌ನಲ್ಲಿ ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಯಾವೆಲ್ಲ ಪ್ರಕರಣಗಳಲ್ಲಿ ಎಷ್ಟು ಮಂದಿ ಅರೆಸ್ಟ್ ಆಗಿದ್ದಾರೆ ಎಂಬ ವಿವರ ಇಲ್ಲಿದೆ.

Bengaluru Crime: ಕಾನೂನುಬಾಹಿರ ಚಟುವಟಿಕೆ; ಒಂದೇ ತಿಂಗಳಲ್ಲಿ ಬೆಂಗಳೂರಿನಲ್ಲಿ 563 ಮಂದಿ ಬಂಧನ
ಕಾನೂನುಬಾಹಿರ ಚಟುವಟಿಕೆ; ಒಂದೇ ತಿಂಗಳಲ್ಲಿ ಬೆಂಗಳೂರಿನಲ್ಲಿ 563 ಮಂದಿ ಬಂಧನ
Follow us on

ಬೆಂಗಳೂರು, ಮೇ 8: ಏಪ್ರಿಲ್‌ನಲ್ಲಿ ಬೆಂಗಳೂರು ಪೊಲೀಸರು (Bengaluru Police) ಮಾದಕ ದ್ರವ್ಯ, ಜೂಜು, ಬೆಟ್ಟಿಂಗ್ ಸೇರಿದಂತೆ ವಿವಿಧ ಕಾನೂನುಬಾಹಿರ ಚಟುವಟಿಕೆಗಳಿಗೆ (Illegal Activities) ಸಂಬಂಧಿಸಿದಂತೆ 563 ಜನರನ್ನು ಬಂಧಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ತಿಂಗಳಿನಲ್ಲಿ ಒಟ್ಟು 182 ಪ್ರಕರಣಗಳು ದಾಖಲಾಗಿದ್ದು, ಅತಿ ಹೆಚ್ಚು (48) ಜೂಜಾಟಕ್ಕೆ ಸಂಬಂಧಿಸಿದ್ದಾಗಿವೆ. ನಂತರದ ಸ್ಥಾನದಲ್ಲಿ ಮಾದಕ ದ್ರವ್ಯಗಳ (NDPS) ನಿಷೇಧ ಕಾಯ್ದೆಯಡಿ ದಾಖಲಿಸಿದ ಪ್ರಕರಣಗಳು (41), ಮತ್ತು ಕ್ರಿಕೆಟ್ ಬೆಟ್ಟಿಂಗ್ (25) ಪ್ರಕರಣಗಳು ಸೇರಿವೆ.

ಎನ್‌ಡಿಪಿಎಸ್ ಪ್ರಕರಣಗಳಲ್ಲಿ ಎಂಟು ವಿದೇಶಿ ಪ್ರಜೆಗಳು ಸೇರಿದಂತೆ 51 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತನಿಖಾಧಿಕಾರಿಗಳು 131.325 ಕೆಜಿ ಗಾಂಜಾ, 1.245 ಕೆಜಿ ಕೊಕೇನ್, 6.275 ಕೆಜಿ ಎಂಡಿಎಂಎ, 0.066 ಗ್ರಾಂ ಚರಸ್ ಮತ್ತು 109 ಎಕ್ಸ್‌ಟಸಿ ಮಾತ್ರೆಗಳನ್ನು ವಶಪಡಿಸಿಕೊಂಡಿದ್ದಾರೆ.

ವಿದ್ಯಾರ್ಥಿಯ ಚಿನ್ನದ ಸರ ಕದ್ದಿದ್ದ ಆಟೋ ಚಾಲಕ ಅರೆಸ್ಟ್

20 ವರ್ಷದ ಕಾಲೇಜು ವಿದ್ಯಾರ್ಥಿಯೊಬ್ಬರಿಂದ ಚಿನ್ನದ ಸರ ಮತ್ತು ಉಂಗುರ ಕಳವು ಮಾಡಿದ ಆಟೋರಿಕ್ಷಾ ಚಾಲಕನನ್ನು ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಪತ್ತೆಹಚ್ಚಿ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಈಶಾನ್ಯ ಬೆಂಗಳೂರಿನ ಎಂಎಸ್ ಪಾಳ್ಯದಲ್ಲಿ ವಾಸವಾಗಿರುವ ಆಟೋ ಚಾಲಕ ಸಾದಿಕ್ ಅಲಿಯಾಸ್ ಅನಿಲ್ ಎಂಬಾತನನ್ನು ಎಚ್‌ಎಎಲ್ ಪೊಲೀಸರು ಬಂಧಿಸಿದ್ದಾರೆ. ಸಾದಿಕ್ ವಿದ್ಯಾರ್ಥಿಯ ಬ್ಯಾಗನ್ನು ಕದ್ದು ಬಳಿಕ ಆಕೆಯನ್ನು ಬಸ್ ನಿಲ್ದಾಣಕ್ಕೆ ಬಿಟ್ಟು ಹೋಗಿದ್ದ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಡಬಲ್ ಮರ್ಡರ್; ಗಂಡ, ಮಕ್ಕಳನ್ನು ಬಿಟ್ಟು ತನ್ನ ಜೊತೆಗಿದ್ದ ಪ್ರಿಯತಮೆಯನ್ನೇ ಕೊಂದ ಪ್ರಿಯಕರ

ವಿದ್ಯಾರ್ಥಿ ಮನೆಯಿಂದ ಓಡಿಹೋಗಿದ್ದ. ಈ ಬಗ್ಗೆ ವಿದ್ಯಾರ್ಥಿಯ ತಾಯಿ ಎಚ್‌ಎಎಲ್ ಠಾಣೆಯಲ್ಲಿ ಎಪ್ರಿಲ್ 4 ರಂದು, ನಾಪತ್ತೆ ದೂರು ದಾಖಲಿಸಿದ್ದರು. ಮಗ ತನ್ನ ಸ್ನೇಹಿತರೊಂದಿಗೆ ಹೆಚ್ಚು ಸಮಯ ಕಳೆದಿದ್ದಕ್ಕಾಗಿ ಬೈದಿದ್ದಕ್ಕೆ ಮನೆಯಿಂದ ಓಡಿಹೋಗಿದ್ದಾನೆ ಎಂದು ಅವರು ದೂರಿನಲ್ಲಿ ತಿಳಿಸಿದ್ದರು. ಪೊಲೀಸರು ನಂತರ ತನಿಖೆ ನಡೆಸಿ ವಿದ್ಯಾರ್ಥಿಯನ್ನು ಒಡಿಶಾದ ಪುರಿ ಜಗನ್ನಾಥ ದೇವಾಲಯದಲ್ಲಿ ಪತ್ತೆಹಚ್ಚಿದ್ದರು. ಮಹಿಳೆ ನೀಡಿದ ಮತ್ತೊಂದು ದೂರಿನಲ್ಲಿ, ಆಟೋ ಚಾಲಕ ಬಾಲಕನ ಬಳಿ ಇದ್ದ ಬ್ಯಾಗ್ ಅಪಹರಿಸಿದ್ದಾನೆ ಎಂದು ಉಲ್ಲೇಖಿಸಲಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ