AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಡಬಲ್ ಮರ್ಡರ್; ಗಂಡ, ಮಕ್ಕಳನ್ನು ಬಿಟ್ಟು ತನ್ನ ಜೊತೆಗಿದ್ದ ಪ್ರಿಯತಮೆಯನ್ನೇ ಕೊಂದ ಪ್ರಿಯಕರ

ಬೆಂಗಳೂರಿನಲ್ಲಿ ನಿನ್ನೆ ಒಂದೇ ದಿನ ಎರಡು ಕೊಲೆಗಳು ನಡೆದಿವೆ. ಬೆಂಗಳೂರಿನ ಸುಂಕದಕಟ್ಟೆ ಬಳಿ ಪ್ರಿಯಕರನೇ ಮಹಿಳೆಯ ಬರ್ಬರ ಹತ್ಯೆ ಮಾಡಿ ಪರಾರಿಯಾಗಿದ್ದಾನೆ. ಪೊಲೀಸರು ಆರೋಪಿಗಾಗಿ ಹುಡುಕಾಡುತ್ತಿದ್ದಾರೆ. ಮತ್ತೊಂದೆಡೆ ಬಾನಸವಾಡಿಯಲ್ಲಿ ಮಾಜಿ ರೌಡಿ ಶೀಟರ್​ನನ್ನು ಅಟ್ಟಾಡಿಸಿ ಕೊಚ್ಚಿ ಕೊಲೆ ಮಾಡಲಾಗಿದೆ.

ಬೆಂಗಳೂರಿನಲ್ಲಿ ಡಬಲ್ ಮರ್ಡರ್; ಗಂಡ, ಮಕ್ಕಳನ್ನು ಬಿಟ್ಟು ತನ್ನ ಜೊತೆಗಿದ್ದ ಪ್ರಿಯತಮೆಯನ್ನೇ ಕೊಂದ ಪ್ರಿಯಕರ
ಸುಂಕದಕಟ್ಟೆ ಬಳಿ ಮಹಿಳೆ ಕೊಲೆ
ರಾಚಪ್ಪಾಜಿ ನಾಯ್ಕ್
| Edited By: |

Updated on:May 08, 2024 | 7:21 AM

Share

ಬೆಂಗಳೂರು, ಮೇ.08: ಸಿಲಿಕಾನ್ ಸಿಟಿ ಬೆಂಗಳೂರು (Bengaluru) ನಿನ್ನೆ ಎರಡು ಕೊಲೆಗೆ (Murder) ಸಾಕ್ಷಿಯಾಗಿದೆ. ಒಂದು ಕಡೆ ಮಾಜಿ ರೌಡಿಶೀಟರ್ ನನ್ನ ಅಟ್ಟಾಡಿಸಿ ಬರ್ಬರವಾಗಿ ಹತ್ಯೆ ಮಾಡಿದ್ರೆ, ಮತ್ತೊಂದೆಡೆ ಗಂಡ ಬಿಟ್ಟು ಬಾಯ್ ಫ್ರೆಂಡ್ ಜೊತೆಗೆ ಬಣ್ಣದ ನಗರಿಗೆ ಬಂದು ಬದುಕು ಕಟ್ಟಿಕೊಂಡ ಮಹಿಳೆ ಪ್ರಿಯಕರನ ಕೈನಿಂದಲೇ ಹೆಣವಾಗಿ ಹೋಗಿದ್ದಾಳೆ.

ಪ್ರಿಯರನಿಂದಲೇ ಹೆಣವಾದಳು ಪ್ರೇಯಸಿ

ವಿದ್ಯಾ ಎಂಬ 30 ವರ್ಷದ ಮಹಿಳೆ ರಾಮನಗರ ಜಿಲ್ಲೆಯ ಮಾಗಡಿ ಸಮೀಪದ ಹೊಸದೊಡ್ಡಿ ನಿವಾಸಿ. ಮದುವೆಯಾಗಿ ಇಬ್ಬರು ಮಕ್ಕಳಿದ್ದರೂ 4 ವರ್ಷದ ಹಿಂದೆ ಗಂಡ ಬಿಟ್ಟು ತನ್ನದೇ ಊರಿನ ಶಾಂತಕುಮಾರ್ ಎಂಬುವವರ ಜೊತೆಗೆ ಪ್ರೀತಿ ಹುಟ್ಟಿ ಬೆಂಗಳೂರಿಗೆ ಬಂದು ಕಾಮಾಕ್ಷಿಪಾಳ್ಯದಲ್ಲಿ ನೆಲೆಸಿದ್ದಳು. ಕೆಲ ದಿನಗಳಿಂದ ಇಬ್ಬರ ಮಧ್ಯೆ ಮನಸ್ತಾಪವೂ ಉಂಟಾಗಿತ್ತು. ಹೀಗಾಗಿ ವಿದ್ಯಾ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡ್ತಾ ಪ್ರತ್ಯೇಕವಾಗಿ ಮನೆ ಮಾಡಿಕೊಂಡು ಸುಂಕದಕಟ್ಟೆಯ ಸೊಲ್ಲಾಪುರಂ ಲೇಔಟ್​ನಲ್ಲಿ ವಾಸವಿದ್ಳು. ಇದು ಅದ್ಯಾಕೊ ಶಾಂತಕುಮಾರ್ ಗೆ ಈಕೆ ಮತ್ತೊಬ್ಬನ ಜೊತೆಗೆ ಸಲುಗೆ ಬೆಳೆಸಿಕೊಂಡಿದ್ದಾಳೆ ಅನ್ನೋ ಅನುಮಾನ ಮೂಡಿತ್ತು. ಹಾಗಾಗಿ ವಿದ್ಯಾಳನ್ನು ಭೇಟಿಯಾಗಿ ರಾತ್ರಿ 9.30 ಕ್ಕೆ ವಿದ್ಯಾ ಹಾಗೂ ಶಾಂತಕುಮಾರ್ ಇಬ್ಬರೂ ಬಾಡಿಗೆ ಮನೆಗೆ ಬಂದಿದ್ದು ಶಾಂತಕುಮಾರ್ ಚಾಕುವಿನಿಂದ ಇರಿದು ಹತ್ಯೆ ಮಾಡಿ ಪರಾರಿ ಆಗಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರೊ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.

ಇದನ್ನೂ ಓದಿ: ಹಾಸನ: ರೌಡಿಶೀಟರ್ ಮಾಸ್ತಿಗೌಡ ಕೊಂದಿದ್ದ 9 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ: ಕೋರ್ಟ್ ಆದೇಶ

ಮಾಜಿ ರೌಡಿಶೀಟರ್ ಅಟ್ಟಾಡಿಸಿ ಬರ್ಬರ ಹತ್ಯೆ

ನಿನ್ನೆ ಸಂಜೆ 7.30 ರ ಸಮಯ. ಬಾಣಸವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಾಜಿ ರೌಡಿ ಶೀಟರ್ ಕಾರ್ತಿಕೇಯನ್ ನನ್ನ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಲಾಂಗು ಮಚ್ಚುಗಳಿಂದ ಕೊಚ್ಚಿ ಕೊಂದಿದ್ದಾರೆ. ಅಷ್ಟಕ್ಕೂ ಈ ಕಾರ್ತಿಕೇಯನ್ ಹಲವು ವರ್ಷಗಳಿಂದ ರೌಡಿಶೀಟರ್ ಆಗಿದ್ದವನು. ಇತ್ತೀಚೆಗಷ್ಟೇ ರೌಡಿಶೀಟರ್ ಕ್ಲೋಸ್ ಮಾಡಿಸಿಕೊಂಡಿದ್ದ. ವಿವಾದಿತ ಜಾಗಗಳಿಗೆ ಬೇಲಿ ಹಾಕುವ ಕೆಲಸ ಮಾಡುತ್ತಿದ್ದ. ರಿಯಲ್ ಎಸ್ಟೇಟ್ ದಂಧೆಯಲ್ಲಿ ತೊಡಗಿಕೊಂಡಿದ್ದ. ಇದೇ ವೇಳೆ ಮೈಕಲ್ ಮಂಜ ಹಾಗೂ ಸಹಚರರ ವಿರೋಧ ಕಟ್ಟಿಕೊಂಡಿದ್ದ. ಕೆಲವರಿಗೆ ಗನ್ ತೋರಿಸಿ ಬೆದರಿಕೆ ಹಾಕುತ್ತಿದ್ದ ಆರೋಪವೂ ಇತ್ತು. ಫ್ರೆಂಡ್ಸ್ ಗಳ ಬಳಿ ಲೈಸೆನ್ಸ್ ಇರೋ ಗನ್ ಪಡೆದುಕೊಂಡು ಬೆದರಿಕೆ ಹಾಕುತ್ತಿದ್ದ. ಇದರಿಂದ ರೋಸಿಹೋಗಿದ್ದ ಮೈಕಲ್ ಮಂಜು ಅಂಡ್ ಗ್ಯಾಂಗ್ ಪ್ಲಾನ್ ಮಾಡಿ ಅಟ್ಟಾಡಿಸಿ ಚಾಕು ಹಾಗೂ ಲಾಂಗ್ ನಿಂದ ಹೊಡೆದು ಹತ್ಯೆ ಮಾಡಿದ್ದಾರೆ. ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು ತನಿಖೆ ಮುಂದುವರೆದಿದೆ.‌

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:01 am, Wed, 8 May 24