ಮೊಪೆಡ್ನಲ್ಲಿ ಬಂದು ಹಾಡಹಗಲೇ ಲಾಂಗು-ಮಚ್ಚು ತೋರಿಸಿ ಮಹಿಳೆ ಬಳಿ ಸುಲಿಗೆ; ದೃಶ್ಯ ಸಿಸಿ ಟಿವಿಯಲ್ಲಿ ಸೆರೆ
ರಸ್ತೆಯಲ್ಲಿ ಮಹಿಳೆ ನಡೆದು ಹೋಗ್ತಿದ್ದರು. ಈ ವೇಳೆ ಏಕಾಏಕಿ ಬೈಕ್ ನಲ್ಲಿ ಬಂದ ಸುಲಿಗೆಕೋರರು ಕೈಯಲ್ಲಿ ಮಚ್ಚಿಡಿದು ಮಹಿಳೆಯ ಕತ್ತಿನಲ್ಲಿದ್ದ ಚಿನ್ನದ ಸರವನ್ನ ಎಗರಿಸಿ ಎಸ್ಕೇಪ್ ಆಗಿದ್ದಾರೆ. ಸುಲಿಗೆಕೋರರ ಕೃತ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ(Bengaluru) ಹಾಡುಹಗಲೇ ಲಾಂಗು-ಮಚ್ಚು ಹಿಡಿದು ಮಹಿಳೆಯನ್ನ ಸುಲಿಗೆ(Robbery) ಮಾಡಿದ ಘಟನೆ ನಡೆದಿದೆ. ಮೊಪೆಡ್ನಲ್ಲಿ ಬಂದ ಮೂವರು ಸುಲಿಗೆಕೋರರು ಹಾಡುಹಗಲೇ ಯಾವುದೇ ಭಯವಿಲ್ಲದೆ ಲಾಂಗು-ಮಚ್ಚು ತೋರಿಸಿ ಮಹಿಳೆಯನ್ನ ದೋಚಿ ಪರಾರಿಯಾಗಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ರಸ್ತೆಯಲ್ಲಿ ಮಹಿಳೆ ನಡೆದು ಹೋಗ್ತಿದ್ದರು. ಈ ವೇಳೆ ಏಕಾಏಕಿ ಬೈಕ್ ನಲ್ಲಿ ಬಂದ ಸುಲಿಗೆಕೋರರು ಕೈಯಲ್ಲಿ ಮಚ್ಚಿಡಿದು ಮಹಿಳೆಯ ಕತ್ತಿನಲ್ಲಿದ್ದ ಚಿನ್ನದ ಸರವನ್ನ ಎಗರಿಸಿ ಎಸ್ಕೇಪ್ ಆಗಿದ್ದಾರೆ. ಸುಲಿಗೆಕೋರರ ಕೃತ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಸದ್ಯ, ಘಟನೆ ಸಂಬಂಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್ ಗಳ ಕಳವು ಮಾಡಿ, ಸರಗಳ್ಳತನ ಮಾಡ್ತಿದ್ದ ಆರೋಪಿಗಳ ಬಂಧನ ಇನ್ನು ನಗರದಲ್ಲಿ ಬೈಕ್, ಸರಗಳ್ಳತನ ಮಾಡುತ್ತಿದ್ದ ಅವಿನಾಶ್, ಸುನಿಲ್ನನ್ನು ಬ್ಯಾಟರಾಯನಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 11 ಲಕ್ಷ ರೂಪಾಯಿ ಮೌಲ್ಯದ 10 ದ್ವಿಚಕ್ರ ವಾಹನ, 125 ಗ್ರಾಂ ಮಾಂಗಲ್ಯ ಸರ ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಬ್ಯಾಟರಾಯನ ಪುರ, ಕಾಮಾಕ್ಷಿ ಪಾಳ್ಯ, ಜೆಜೆನಗರ, ಗಿರಿನಗರ, ಬಸವನ ಗುಡಿ, ಮಾದನಾಯಕನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನಗಳ ಕಳವು ಮಾಡ್ತಿದ್ದರು. ಆರ್.ಆರ್. ನಗರ ಠಾಣಾ ವ್ಯಾಪ್ತಿಯಲ್ಲಿ ಎರಡು ಸರಗಳ್ಳತನ ಮಾಡಿದ್ದ ಆರೋಪಿಗಳು ಸದ್ಯ ಅರೆಸ್ಟ್ ಆಗಿದ್ದಾರೆ. ಇದನ್ನೂ ಓದಿ: Shocking: ಬಸ್ ನಿಲ್ದಾಣ ಬಳಿಗೆ ಹಳ್ಳದಲ್ಲಿ ತೇಲಿ ಬಂದ 4 ನವಜಾತ ಶಿಶುಗಳ ಮೃತದೇಹ