ರಾಜಕಾರಣಿಗಳು, ಸಹಚರರ ಜೊತೆ ಮಲಗು ಎಂದು ಪೀಡಿಸುವ ಗಂಡ! 6 ಬಾರಿ ತಲಾಖ್, ಅಬಾರ್ಷನ್: ಪೊಲೀಸರ ಮೊರೆ ಹೋದ ಮಹಿಳೆ

ಬೆಂಗಳೂರಿನ ಬನಶಂಕರಿಯಲ್ಲಿ ಮಹಿಳೆಯೊಬ್ಬರು ತನ್ನ ಪತಿಯ ವಿರುದ್ಧವೇ, ಆತ ತನ್ನನ್ನು ರಾಜಕಾರಣಿಗಳ ಜೊತೆ ಮಲಗುವಂತೆ ಒತ್ತಾಯಿಸಿದ್ದಾನೆ ಮತ್ತು ಹಿಂಸೆ ನೀಡಿದ್ದಾನೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ. ಬಲವಂತದಿಂದ ಗರ್ಭಪಾತ ಮಾಡಿಸಿದ್ದು, ಕೊಲೆ ಬೆದರಿಕೆ ಹಾಗೂ ವರದಕ್ಷಿಣೆ ಕಿರುಕುಳದ ಆರೋಪಗಳನ್ನೂ ಮಾಡಿದ್ದು, ಬನಶಂಕರಿ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ.

ರಾಜಕಾರಣಿಗಳು, ಸಹಚರರ ಜೊತೆ ಮಲಗು ಎಂದು ಪೀಡಿಸುವ ಗಂಡ! 6 ಬಾರಿ ತಲಾಖ್, ಅಬಾರ್ಷನ್: ಪೊಲೀಸರ ಮೊರೆ ಹೋದ ಮಹಿಳೆ
ಸಂತ್ರಸ್ತೆ ಹಾಗೂ ಆರೋಪಿ ಯೂನಸ್ ಪಾಷಾ

Updated on: Jul 01, 2025 | 12:14 PM

ಬೆಂಗಳೂರು, ಜುಲೈ 1: ಗಂಡನಾದವನೇ ಹೆಂಡತಿಯನ್ನು ಬೇರೆಯವರ ಜತೆ ಮಲಗುವಂತೆ ಪೀಡಿಸಿದರೆ, ಅದಕ್ಕಾಗಿ ಹಿಂಸಿಸಿದರೆ ಮಹಿಳೆಯ ಸ್ಥಿತಿ ಹೇಗಾಗಬಹುದು! ಇಂಥದ್ದೊಂದು ವಿಲಕ್ಷಣ ಘಟನೆ ಬೆಂಗಳೂರಿನ (Bengaluru) ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ರಾಜಕಾರಣಿಗಳ ಜತೆ ಹಾಗೂ ಸಹಚಚರ ಒಟ್ಟಿಗೆ ಮಲಗುವಂತೆ ಒತ್ತಾಯಿಸುತ್ತಿದ್ದುದಲ್ಲದೆ, 6 ಬಾರಿ ತಲಾಖ್ (Talaq) ನೀಡಿದ ಮತ್ತು ಅಬಾರ್ಷನ್ ಮಾಡಿಸಿದ ಆರೋಪದಲ್ಲಿ ಪತಿಯ ವಿರುದ್ಧವೇ ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. ಜತೆಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪದಲ್ಲಿ ಅತ್ತೆ-ಮಾವನ ವಿರುದ್ಧವೂ ದೂರು ದಾಖಲಿಸಿದ್ದಾರೆ. ಸಂತ್ರಸ್ತೆ ನೀಡಿದ ದೂರಿನ ಆಧಾರದಲ್ಲಿ ಸದ್ಯ ಬನಶಂಕರಿ ಠಾಣೆ ಪೊಲೀಸರು ಎಫ್​ಐಆರ್ ದಾಖಲಿಸಿದ್ದಾರೆ.

ರಾಜಕಾರಣಿಗಳ ಜೊತೆ ಮಲಗೆಂದು ಒತ್ತಾಯ

ಸಂತ್ರಸ್ತೆಯು 25-6-2021 ರಂದು ಆರೋಪಿ ಯೂನಸ್ ಪಾಷಾನನ್ನು ವಿವಾಹವಾಗಿದ್ದರು. ಇದಾದ ಸುಮಾರು 4 ತಿಂಗಳ ನಂತರ ಆರೋಪಿಗಳಾದ ಯೂನಸ್ ಪಾಷಾ, ಆತನ ತಂದೆ ಚಿಂದ್ ಪಾಷಾ, ತಾಯಿ ಪಹೀನ್ ತಾಜ್ ಸೇರಿಕೊಂಡು ಸಂತ್ರಸ್ತೆಗೆ ಹಿಂಸೆ ನೀಡಲು ಆರಂಭಿಸಿದ್ದಾರೆ. ಈ ಮಧ್ಯೆ, ಸಂತ್ರಸ್ತೆಯು ಗರ್ಭವತಿಯಾಗಿದ್ದು, ಯೂನಸ್ ಪಾಷಾ ಆಕೆಯ ಹೊಟ್ಟೆಯ ಮೇಲೆ ಒದ್ದು ಹಲ್ಲೆ ಮಾಡಿದ್ದ. 17-12-2021 ರಂದು ಸಂತ್ರಸ್ತೆಯನ್ನು ಹೆದರಿಸಿ ಮತ್ತು ಒತ್ತಾಯಪಡಿಸಿ ಗರ್ಭಪಾತ ಮಾಡಿಸಿದ್ದಾನೆ ಎಂದು ಎಫ್​ಐಆರ್​​ನಲ್ಲಿ ಉಲ್ಲೇಖಿಸಲಾಗಿದೆ.

ಪತ್ನಿಯ ತಲೆಗೆ ಗನ್ ಇಟ್ಟು ಹೆದರಿಸುತ್ತಿದ್ದ ಆರೋಪಿ


ನಡವಳಿಕೆಗಳನ್ನು ಪ್ರಶ್ನಿಸಿದರೆ ಯೂನಸ್ ಪಾಷಾ ಆಯುಧಗಳನ್ನು ತೋರಿಸಿ ಬೆದರಿಕೆ ಹಾಕುತ್ತಿದ್ದ. ಪತ್ನಿಯ ತಲೆಗೆ ಗನ್ ಇಟ್ಟು ಹೆದರಿಸುತ್ತಿದ್ದ. ಅಷ್ಟೇ ಅಲ್ಲದೆ, ಸಂತ್ರಸ್ತೆಯ ತಂದೆ ಮತ್ತು ಕುಟುಂಬದವರನ್ನು ಕೊಲೆ ಮಾಡುವುದಾಗಿ
ಬೆದರಿಕೆ ಹಾಕುತ್ತಾ ಬರುತ್ತಿದ್ದ. 2023 ರಲ್ಲಿ ಸಂತ್ರಸ್ತೆ ಮೇಲೆ ಗಂಭೀರ ಹಲ್ಲೆ ಮಾಡಿದ್ದ ಎಂದು ಎಫ್​ಐಆರ್​​ನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ
ನೈಸ್ ರಸ್ತೆ ಟೋಲ್ ದರ ಹೆಚ್ಚಳ: ಇಲ್ಲಿದೆ ಪರಿಷ್ಕೃತ ದರ ಪಟ್ಟಿ
ಬೆಂಗಳೂರು: ವಿಕ್ಟೋರಿಯಾ ಆಸ್ಪತ್ರೆಯ ಬರ್ನಿಂಗ್ ವಾರ್ಡ್​ನಲ್ಲಿ ಅಗ್ನಿ ಅವಘಡ
ಕ್ಲೈಮ್ಯಾಕ್ಸ್‌ ಹಂತಕ್ಕೆ ಬಂದ ಬಿಜೆಪಿ ರಾಜ್ಯಾಧ್ಯಕ್ಷ ಘೋಷಣೆ
ಶಾಸಕರ ಮುನಿಸಿಗೆ ಮದ್ದರೆಯಲು ಸುರ್ಜೇವಾಲ ಸಂಧಾನ ಸೂತ್ರ

ರಾಜಕಾರಣಿಗಳು, ಸ್ಥಳೀಯ ರೌಡಿಗಳ ನಂಟು: ಪತ್ನಿಯ ಮಾರಾಟಕ್ಕೆ ಮುಂದಾಗಿದ್ದ ಪಾಷಾ!

ಯೂನಸ್ ಪಾಷಾಗೆ ರಾಜಕಾರಣಿಗಳು, ಸ್ಥಳೀಯ ರೌಡಿಗಳ ನಂಟು ಇದೆ. ಆರೋಪಿಯು ಸಂತ್ರಸ್ತೆಯನ್ನು ಆತನ ರಾಜಕಾರಣಿ ಸ್ನೇಹಿತನಿಗೆ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾನೆ ಎಂಬುದು ಕೆಲವು ತಿಂಗಳ ಹಿಂದೆ ತಿಳಿದು ಬಂದಿದೆ. ಇದರಿಂದ ಭಯಗೊಂಡ ಸಂತ್ರಸ್ತೆಯು ಕಳೆದ ಎರಡು ತಿಂಗಳುಗಳಿಂದ ಗಂಡನ ಮನೆ ಬಿಟ್ಟು ಬಂದು ತಾಯಿ ಮನೆಯಲ್ಲಿ ವಾಸವಿದ್ದಾರೆ ಎಂದು ಎಫ್​ಐಆರ್​​​ನಲ್ಲಿ ಉಲ್ಲೇಖವಾಗಿದೆ.

ಇದನ್ನೂ ಓದಿ: ಮುಸ್ಲಿಂ ವ್ಯಕ್ತಿ ಜೊತೆ ಲಿವಿಂಗ್ ಟುಗೆದರ್​​ನಲ್ಲಿದ್ದ ಆಶಾ ಬಿಬಿಎಂಪಿ ಕಸದ ಲಾರಿಯಲ್ಲಿ ಶವವಾಗಿ ಪತ್ತೆ!

2025 ರ ಜೂನ್ 4 ರಂದು ಸಂತ್ರಸ್ತೆಯು ಬಟ್ಟೆಗಳನ್ನು ವಾಪಸ್ ತರಲು ಪತಿಯ ಮನೆಗೆ ಹೋಗಿದ್ದಾಗ ಪಾಷಾ ಕೊಲೆ ಬೆದರಿಕೆ ಹಾಕಿದ್ದಾನೆ. ಸಂತ್ರಸ್ತೆಗೆ ಮಾತ್ರವಲ್ಲದೆ ಆಕೆಯ ತಾಯಿಗೂ ಕೊಲೆ ಬೆದರಿಕೆ ಹಾಕಿದ್ದಾನೆ. ಇದರಿಂದ ಮನನೊಂದ ಸಂತ್ರಸ್ತೆ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕಾಗಿ ಕೋರಿ ದೂರು ನೀಡಿದ್ದಾರೆ ಎಂದು ಬನಶಂಕರಿ ಠಾಣೆಯಲ್ಲಿ ದಾಖಲಾದ ಎಫ್​ಐಆರ್​​ನಲ್ಲಿ ಹೇಳಲಾಗಿದೆ.

ವರದಿ: ಪ್ರದೀಪ್ ಚಿಕ್ಕಾಟಿ, ಟಿವಿ9, ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:16 am, Tue, 1 July 25