AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

NICE Road Toll Hike: ನೈಸ್ ರಸ್ತೆ ಟೋಲ್ ದರ ಹೆಚ್ಚಳ, ಇಂದಿನಿಂದಲೇ ಜಾರಿ, ಇಲ್ಲಿದೆ ಪರಿಷ್ಕೃತ ದರ ಪಟ್ಟಿ

ಬೆಂಗಳೂರು ನೈಸ್ ರಸ್ತೆ ಟೋಲ್ ದರ ಏರಿಕೆ: ರಾಜ್ಯದಲ್ಲಿ ಸಾಲು ಸಾಲು ಬೆಲೆ ಏರಿಕೆಯ ಪರಿಣಾಮ ಈಗಾಗಲೇ ಜನಸಾಮಾನ್ಯರು ಹೈರಾಣಾಗಿದ್ದಾರೆ. ಮಧ್ಯಮ ವರ್ಗದ ಜನರ ಹಿತಾಸಕ್ತಿ ಗಮನಿಸದೆ ಗಾಯದ ಮೇಲೆ ಬರೆ ಎಳೆಯಲಾಗುತ್ತಿದೆ. ಇದೀಗ ನೈಸ್ ರಸ್ತೆ ಬಳಸುವ ವಾಹನ ಸವಾರರಿಗೆ ಶಾಕ್ ಎದುರಾಗಿದೆ. ಇಂದಿನಿಂದಲೇ ಟೋಲ್ ದರ ದುಬಾರಿಯಾಗುತ್ತಿದೆ.

NICE Road Toll Hike: ನೈಸ್ ರಸ್ತೆ ಟೋಲ್ ದರ ಹೆಚ್ಚಳ, ಇಂದಿನಿಂದಲೇ ಜಾರಿ, ಇಲ್ಲಿದೆ ಪರಿಷ್ಕೃತ ದರ ಪಟ್ಟಿ
ನೈಸ್ ರಸ್ತೆ ಟೋಲ್
Ganapathi Sharma
|

Updated on:Jul 01, 2025 | 8:56 AM

Share

ಬೆಂಗಳೂರು, ಜುಲೈ 1: ಕರ್ನಾಟಕದಲ್ಲಿ ಮೇಲಿಂದ ಮೇಲೆ ಬೆಲೆ ಏರಿಕೆ ಆಗುತ್ತಿದ್ದು, ಬಡ ಹಾಗೂ ಮಧ್ಯಮ ವರ್ಗದ ಜನರು ಜೀವನ ನಡೆಸಲು ಒದ್ದಾಡುವಂತಾಗಿದೆ. ಇದೀಗ, ಲಕ್ಷಾಂತರ ವಾಹನಗಳ ಓಡಾಟಕ್ಕೆ ರಹದಾರಿಯಾಗಿರುವ ಬೆಂಗಳೂರಿನ ನೈಸ್ ರಸ್ತೆ (NICE Road) ಟೋಲ್ ದರ (NICE Road Toll Price Hike) ಮತ್ತೆ ಏರಿಕೆಯಾಗಿದೆ. ಈ ಕುರಿತಾಗಿ ಸಾರ್ವಜನಿಕ ಪ್ರಕಟಣೆ ಹೊರಡಿಸಿರುವ ನಂದಿ ಎಕನಾಮಿಕಲ್ ಕಾರಿಡಾರ್ ಎಂಟರ್​​ಪ್ರೈಸಸ್ (NICE), ಪರಿಷ್ಕೃತ ದರ ಮಂಗಳವಾರದಿಂದಲೇ (ಜುಲೈ 1) ಅನ್ವಯ ಆಗಲಿದೆ ಎಂದು ಹೇಳಿದೆ. ಕರ್ನಾಟಕ ಸರ್ಕಾರದ ಟೋಲ್ ರಿಯಾಯಿತಿ ಒಪ್ಪಂದ ಹಾಗೂ ಪಿಡಬ್ಲ್ಯುಡಿ 40 ಸಿಆರ್​ಎಂ 2008 ಅನ್ವಯ ಬಿಎಂಐಸಿ ಯೋಜನೆಯ ಫೇರಿಪೇರಲ್ ರಸ್ತೆ ಮತ್ತು ಲಿಂಕ್ ರಸ್ತೆಯ ಟೋಲ್ ದರಗಳನ್ನು ಜುಲೈ ಒಂದರಿಂದ ಪರಿಷ್ಕರಿಸಲಾಗುತ್ತಿದೆ ಎಂದು ಕಂಪನಿ ಹೇಳಿದೆ. ಈ ವಿಚಾರ ಈಗ ವಾಹನ ಸವಾರರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

ನಂದಿ ಏಕನಾಮಿಕಲ್ ಕಾರಿಡಾರ್ ಎಂಟರ್ಪ್ರೈಸಸ್ ಅಧೀನಕ್ಕೆ ಒಳಪಡುವ ಒಟ್ಟು 8 ಟೋಲ್ ಪ್ಲಾಜಾಗಳಲ್ಲೂ ದರ ಏರಿಕೆ ಅನ್ವಯ ಆಗಲಿದೆ. ಹೊಸೂರು ರಸ್ತೆ, ಬನ್ನೇರುಘಟ್ಟ ರಸ್ತೆ, ಕನಕಪುರ ರಸ್ತೆ, ಕ್ಲೋವರ್ ಲೀಫ್ ಜಂಕ್ಷನ್, ಮೈಸೂರು ರಸ್ತೆ, ತುಮಕೂರು ರಸ್ತೆ ಮತ್ತು ಲಿಂಕ್ ರಸ್ತೆಗಳನ್ನು ಬಳಕೆ ಮಾಡುವ ವಾಹನ ಸವಾರರಿಗೆ ಹೊಸ ಟೋಲ್ ದರದ ಬಿಸಿ ಮುಟ್ಟಲಿದೆ.

ನೈಸ್ ರಸ್ತೆಯಲ್ಲಿ ಬೈಕ್ ಸವಾರರು ಕೂಡ ಟೋಲ್ ಪಾವತಿ ಮಾಡುತ್ತಾ ಇದ್ದು, ದರ ಏರಿಕೆಗೆ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ
Image
ಬೆಂಗಳೂರು: ವಿಕ್ಟೋರಿಯಾ ಆಸ್ಪತ್ರೆಯ ಬರ್ನಿಂಗ್ ವಾರ್ಡ್​ನಲ್ಲಿ ಅಗ್ನಿ ಅವಘಡ
Image
ಕ್ಲೈಮ್ಯಾಕ್ಸ್‌ ಹಂತಕ್ಕೆ ಬಂದ ಬಿಜೆಪಿ ರಾಜ್ಯಾಧ್ಯಕ್ಷ ಘೋಷಣೆ
Image
ಶಾಸಕರ ಮುನಿಸಿಗೆ ಮದ್ದರೆಯಲು ಸುರ್ಜೇವಾಲ ಸಂಧಾನ ಸೂತ್ರ
Image
ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಾಂಬ್​ ಬೆದರಿಕೆ: ಭದ್ರತೆ ಹೆಚ್ಚಳ

ನೈಸ್ ರಸ್ತೆ ಟೋಲ್ ದರ ಶೇ 15 ರವರೆಗೆ ಏರಿಕೆ

ಒಟ್ಟಾರೆಯಾಗಿ ಸರಾಸರಿ ಶೇ 15 ರ ವರೆಗೆ ಟೋಲ್ ಶುಲ್ಕ ಹೆಚ್ಚಳ ಆಗುತ್ತಿದೆ. ದರ ಏರಿಕೆ ವೇಳೆ ಜನಸಾಮಾನ್ಯರ ಹಿತಾಸಕ್ತಿ ಕಡೆಗಣಿಸಲಾಗಿದೆ ಎಂದು ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೈಸ್ ಟೋಲ್ ದರ ಪಟ್ಟಿ

ತುಮಕೂರು ರಸ್ತೆಗೆ (ಹಳೆ ದರ – ಹೊಸ ದರ ರೂ.ಗಳಲ್ಲಿ)

  • ಕಾರು – 215 – 233
  • ಬೈಕ್ – 70 – 78
  • ಬಸ್ – 570 – 650

ಕನಕಪುರ ರಸ್ತೆಗೆ (ಹಳೆ ದರ – ಹೊಸ ದರ ರೂ.ಗಳಲ್ಲಿ)

  • ಕಾರು – 105 – 110
  • ಬೈಕ್ – 30 – 33
  • ಬಸ್ – 260 – 295

ಬನ್ನೇರುಘಟ್ಟ ರಸ್ತೆಗೆ (ಹಳೆ ದರ – ಹೊಸ ದರ ರೂ.ಗಳಲ್ಲಿ)

  • ಕಾರು – 150 – 158
  • ಬೈಕ್ – 45 – 48
  • ಬಸ್ – 395 – 450

ಹೊಸೂರು ರಸ್ತೆಗೆ (ಹಳೆ ದರ – ಹೊಸ ದರ ರೂ.ಗಳಲ್ಲಿ)

  • ಕಾರು – 210 – 223
  • ಬೈಕ್ – 70 – 78
  • ಬಸ್ – 568 – 645

ಇದನ್ನೂ ಓದಿ: 22ರ ವಿದ್ಯಾರ್ಥಿಗೆ ಸಿಕ್ತು 52 ಲಕ್ಷ ರೂ. ಸ್ಯಾಲರಿ ಪ್ಯಾಕೇಜ್ ಉದ್ಯೋಗ ​: ಇದು ಬೆಂಗಳೂರು ಎಂಐಟಿ​ ಸಾಧನೆ

ಟೋಲ್ ದರ ಏರಿಕೆಯ ಬಿಸಿ ಇಂದಿನಿಂದಲೇ ಜನರಿಗೆ ತಟ್ಟಲಿದ್ದು, ಹಠಾತ್ ಶುಲ್ಕ ಹೆಚ್ಚಳಕ್ಕೆ ಭಾರಿ ಪ್ರತಿರೋಧ ಎದುರಾಗುವ ಸಾಧ್ಯತೆ ಇದೆ. ಸರ್ಕಾರ ಇದಕ್ಕೆ ಹೇಗೆ ಸ್ಪಂದಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.

ವರದಿ: ಲಕ್ಷ್ಮಿ ನರಸಿಂಹ, ‘ಟಿವಿ9’, ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:48 am, Tue, 1 July 25

ಟೀಂ ಇಂಡಿಯಾಕ್ಕೆ ಗೌತಮ್ ಗಂಭೀರ್ ಮನೆಯಲ್ಲಿ ಆತಿಥ್ಯ
ಟೀಂ ಇಂಡಿಯಾಕ್ಕೆ ಗೌತಮ್ ಗಂಭೀರ್ ಮನೆಯಲ್ಲಿ ಆತಿಥ್ಯ
ಜನರನ್ನು ಕಂಗಾಲಾಗಿಸಿದ ಬೃಹತ್ ಹೆಬ್ಬಾವನ್ನು ಹಿಡಿದ ಟ್ರಾಫಿಕ್ ಪೊಲೀಸ್!
ಜನರನ್ನು ಕಂಗಾಲಾಗಿಸಿದ ಬೃಹತ್ ಹೆಬ್ಬಾವನ್ನು ಹಿಡಿದ ಟ್ರಾಫಿಕ್ ಪೊಲೀಸ್!
ಕಾನ್ಪುರದಲ್ಲಿ 2 ಸ್ಕೂಟರ್‌ಗಳಲ್ಲಿ ಸ್ಫೋಟ; 6 ಜನರಿಗೆ ಗಾಯ
ಕಾನ್ಪುರದಲ್ಲಿ 2 ಸ್ಕೂಟರ್‌ಗಳಲ್ಲಿ ಸ್ಫೋಟ; 6 ಜನರಿಗೆ ಗಾಯ
ಚಾಕುವಿನಿಂದ ಇರಿದು ಪತ್ನಿ ಹತ್ಯೆಗೈದ ಪತಿ: ಅಪ್ಪನ ಅಸಲಿ ಬಣ್ಣ ಬಿಚ್ಚಿಟ್ಟ ಮಗ
ಚಾಕುವಿನಿಂದ ಇರಿದು ಪತ್ನಿ ಹತ್ಯೆಗೈದ ಪತಿ: ಅಪ್ಪನ ಅಸಲಿ ಬಣ್ಣ ಬಿಚ್ಚಿಟ್ಟ ಮಗ
ಅಮಿತ್ ಶಾ ಅವರನ್ನು ನಂಬಬೇಡಿ; ಮೋದಿಗೆ ಸಿಎಂ ಮಮತಾ ಬ್ಯಾನರ್ಜಿ ಎಚ್ಚರಿಕೆ
ಅಮಿತ್ ಶಾ ಅವರನ್ನು ನಂಬಬೇಡಿ; ಮೋದಿಗೆ ಸಿಎಂ ಮಮತಾ ಬ್ಯಾನರ್ಜಿ ಎಚ್ಚರಿಕೆ
ಬಿಗ್ ಬಾಸ್ ಸ್ಥಗಿತ ಆಗಲು ಜಾಲಿವುಡ್ ಸ್ಟುಡಿಯೋ ಮಾಡಿದ ಮುಖ್ಯ ತಪ್ಪು ಏನು?
ಬಿಗ್ ಬಾಸ್ ಸ್ಥಗಿತ ಆಗಲು ಜಾಲಿವುಡ್ ಸ್ಟುಡಿಯೋ ಮಾಡಿದ ಮುಖ್ಯ ತಪ್ಪು ಏನು?
ಲಿಂಗಾಯತ ಪ್ರತ್ಯೇಕ ಧರ್ಮ ಬೇಡಿಕೆ: ಸಚಿವ ದರ್ಶನಾಪುರ ಏನಂದ್ರು?
ಲಿಂಗಾಯತ ಪ್ರತ್ಯೇಕ ಧರ್ಮ ಬೇಡಿಕೆ: ಸಚಿವ ದರ್ಶನಾಪುರ ಏನಂದ್ರು?
ಸಿಸಿ , ಓಸಿ ಪಡೆಯದೇ ಮನೆ ಕಟ್ಟಿದವರಿಗೆ ಗುಡ್ ನ್ಯೂಸ್
ಸಿಸಿ , ಓಸಿ ಪಡೆಯದೇ ಮನೆ ಕಟ್ಟಿದವರಿಗೆ ಗುಡ್ ನ್ಯೂಸ್
BBK: ಕನ್ನಡಪರ ಹೋರಾಟಗಾರರಿಂದ 15 ಲಕ್ಷ ರೂ. ಡಿಮ್ಯಾಂಡ್; ಸಂಬರಗಿ ಆರೋಪ
BBK: ಕನ್ನಡಪರ ಹೋರಾಟಗಾರರಿಂದ 15 ಲಕ್ಷ ರೂ. ಡಿಮ್ಯಾಂಡ್; ಸಂಬರಗಿ ಆರೋಪ
ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟಿಸಿದ ಪ್ರಧಾನಿ ಮೋದಿ
ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟಿಸಿದ ಪ್ರಧಾನಿ ಮೋದಿ