ಬೆಂಗಳೂರಿನಲ್ಲಿ ಫುಡ್ ಫ್ಯಾಕ್ಟರಿಯೊಂದರಲ್ಲಿ ಬಾಯ್ಲರ್ ಸ್ಫೋಟ; ಓರ್ವ ಸಜೀವ ದಹನ, ನಾಲ್ವರಿಗೆ ಗಂಭೀರ ಗಾಯ

| Updated By: guruganesh bhat

Updated on: Aug 23, 2021 | 3:40 PM

ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಸಿಬ್ಬಂದಿಗಳು ನಿರತರಾಗಿದ್ದಾರೆ.

ಬೆಂಗಳೂರಿನಲ್ಲಿ ಫುಡ್ ಫ್ಯಾಕ್ಟರಿಯೊಂದರಲ್ಲಿ ಬಾಯ್ಲರ್ ಸ್ಫೋಟ;  ಓರ್ವ ಸಜೀವ ದಹನ, ನಾಲ್ವರಿಗೆ ಗಂಭೀರ ಗಾಯ
ಬಾಯ್ಲರ್ ಸ್ಫೋಟಗೊಂಡಿರುವ ಸ್ಥಳ
Follow us on

ಬೆಂಗಳೂರು: ಬಾಯ್ಲರ್ ಸ್ಫೋಟಿಸಿ ಓರ್ವ ವ್ಯಕ್ತಿ ಸಜೀವ ದಹನವಾದ ದುರ್ಘಟನೆ ಬೆಂಗಳೂರಿನ ಮಾಗಡಿ ರಸ್ತೆ ಅಂಜನ್ ಥಿಯೇಟರ್ ಬಳಿ ನಡೆದಿದೆ. ಇಲ್ಲಿಯ ಎಂ.ಎಂ.ಫುಡ್ ಫ್ಯಾಕ್ಟರಿಯಲ್ಲಿ ನಡೆದಿರುವ ಅವಘಡದಲ್ಲಿ ಓರ್ವ ಮೃತಪಟ್ಟಿದ್ದಲ್ಲದೇ ನಾಲ್ಕು ಜನರಿಗೆ ಗಂಭೀರ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಸಿಬ್ಬಂದಿಗಳು ನಿರತರಾಗಿದ್ದಾರೆ.

ಕಾಬೂಲ್ ಕಡಲೆ, ಚಿಪ್ಸ್ ಸೇರಿದಂತೆ ಸ್ನ್ಯಾಕ್ಸ್ ತಯಾರಿಕಾ ಫ್ಯಾಕ್ಟರಿಯಲ್ಲಿ ಘಟನೆ ನಡೆದಿದೆ. ಬಿಹಾರ, ತಮಿಳುನಾಡು ಮೂಲದವರು ಕೆಲಸ ಮಾಡುತ್ತಿದ್ದರು. ಅನಧಿಕೃತವಾಗಿ ಫುಡ್ ಫ್ಯಾಕ್ಟರಿ ನಡೆಸಲಾಗುತ್ತಿತ್ತು ಎಂಬ ದೂರು ಸಹ ಕೇಳಿಬಂದಿದೆ. ಈ ಕುರಿತು ಪ್ರತಿಕ್ರಿಯಿಸಿದ ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ್, ‘ಗಾಯಾಳುಗಳ ಹೇಳಿಕೆ ಪಡೆದು ಪ್ರಕರಣ ದಾಖಲಿಸಲಿದ್ದೇವೆ. ಘಟನೆಯಲ್ಲಿ ಇಬ್ಬರು ಮೃತಪಟ್ಟು, ಮೂವರಿಗೆ ಗಾಯವಾಗಿದೆ. ಜನವಸತಿ ಪ್ರದೇಶದಲ್ಲಿ ಫ್ಯಾಕ್ಟರಿಗೆ ಹೇಗೆ ಅನುಮತಿ ಕೊಟ್ಟರು ರಂಬ ಬಗ್ಗೆ ಸಂಬಂಧಿಸಿದ ಇಲಾಖೆಯವರೇ ಉತ್ತರಿಸಬೇಕು’ ಎಂದು ತಿಳಿಸಿದರು.

ಇದನ್ನೂ ಓದಿ: 

Burkina Faso: ಆಫ್ರಿಕಾ ಖಂಡದ ಪುಟ್ಟ ದೇಶ ಬುರ್ಕಿನಾ ಫಾಸೋದಲ್ಲಿ ಉಗ್ರರ ಉಪಟಳ; 80 ಜನರು ಬಲಿ: ಭಾರತಕ್ಕೂ ಈ ದೇಶಕ್ಕೂ ಏನು ಸಂಬಂಧ?

ಅಮೆರಿಕ ಕೆಂಡಾಮಂಡಲ: 2ನೇ ಮಹಾಯುದ್ಧದ ಐತಿಹಾಸಿಕ ಚಿತ್ರಕ್ಕೆ ತಾಲಿಬಾನ್ ಅಣಕ, ಬೈಡೆನ್ ರಾಜೀನಾಮೆಗೆ ಹೆಚ್ಚಾಯ್ತು ಒತ್ತಡ

(Bengaluru Cylinder blast One dead four people had serious injury)

Published On - 2:54 pm, Mon, 23 August 21