ಬೆಂಗಳೂರು, ಮಾ.15: ನಗರದಲ್ಲಿ (Bengaluru) ದ್ವಿಚಕ್ರ ವಾಹನ ಸವಾರರು ವ್ಹೀಲಿಂಗ್ (Wheeling) ಮಾಡುತ್ತಿರುವ ಪ್ರಕರಣ ಅಲ್ಲೊಂದು ಇಲ್ಲೊಂದು ನಡೆಯುತ್ತಲೇ ಇದೆ. ಪೊಲೀಸರು ಎಷ್ಟೇ ಕ್ರಮ ಕೈಗೊಂಡರೂ ವ್ಹೀಲಿಂಗ್ ಪ್ರಕರಣಕ್ಕೆ ಯುವಕ ಹುಚ್ಚಾಟಕ್ಕೆ ಲಗಾಮು ಹಾಕಲು ಆಗುತ್ತಿಲ್ಲ. ಇದೀಗ, ಹೊಸೂರು ಹೆದ್ದಾರಿಯ ಚಂದಾಪುರ ಜಂಕ್ಷನ್ ಯುವಕನೊಬ್ಬ ಮಾಡಿದ ಅಪಾಯಕಾರಿ ದ್ವಿಚಕ್ರ ವಾಹನದ ವ್ಹೀಲಿಂಗ್ ವಿಡಿಯೋ ವೈರಲ್ ಆಗುತ್ತಿದೆ.
ಹೊಸೂರು ರಾಷ್ಟ್ರೀಯ ಹೆದ್ದಾರಿಯ ಚಂದಾಪುರ ಜಂಕ್ಷನ್ ಬಳಿ ಮಾರ್ಚ್ 13 ರಂದು ಬೆಳಿಗ್ಗೆ 9:50 ರ ಸುಮಾರಿಗೆ ಈ ಅಪಾಯಕಾರಿ ವ್ಹೀಲಿಂಗ್ ನಡೆಸಲಾಗಿದೆ. ವ್ಹೀಲಿಂಗ್ಗಾಗಿ ಸವಾರನು ನಂಬರ್ ಪ್ಲೇಟ್ ಇಲ್ಲದ ದ್ವಿಚಕ್ರ ವಾಹನ ಬಳಕೆ ಮಾಡಿದ್ದಾನೆ. ವ್ಹೀಲಿಂಗ್ ವೇಳೆ ಆತನ ಇತರೆ ಸ್ನೇಹಿತರು ಬೈಕ್ ಮೂಲಕ ಹಿಂಬಾಲಿಸಿ ವಿಡಿಯೋ ಚಿತ್ರೀಕರಿಸಿದ್ದಾರೆ. ಇದರ ದೃಶ್ಯವನ್ನು ಸಾರ್ವಜನಿಕರೊಬ್ಬರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ.
ಬಳಿಕ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ಟ್ಯಾಗ್ ಮಾಡಲಾಗಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಪೊಲೀಸರು, ಈ ಪ್ರಕರಣ ಗಮನಿಸುವಂತೆ ಬೆಂಗಳೂರು ಗ್ರಾಮಾಂತರದ ಎಸ್ಪಿಗೆ ಟ್ಯಾಗ್ ಮಾಡಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಹೆದ್ದಾರಿಯಲ್ಲಿ ವೀಲಿಂಗ್ ಮಾಡ್ತಿದ್ದ 6ಜನ ಪುಂಡರ ಬಂಧನ; 13 ಬೈಕ್ ಜಪ್ತಿ
ವೀಡಿಯೊವನ್ನು ಮಾರ್ಚ್ 14 ರಂದು ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈವರೆಗೆ 72 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಕೆಲವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. “ಇಂತಹ ಪ್ರಕರಣಗಳು ಬೆಂಗಳೂರಿನಾದ್ಯಂತ ಕಾರ್ಯನಿರ್ವಹಿಸುತ್ತಿವೆ. ಹುಷಾರಾಗಿರಿ ಮತ್ತು ದೂರವಿರಿ” ಎಂದು ವ್ಯಕ್ತಿಯೊಬ್ಬರು ಪೋಸ್ಟ್ ಮಾಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ್ದಾನೆ.
This dangerous stunt was performed today on 13 March 2024 around 9:50 AM near Chandapura Junction on Hosur national Highway. The rider who performed the stunt was riding a two wheeler without number plate, and his friends who followed the bike and shot the video. Their vehicle… pic.twitter.com/nCZOqMAskm
— ThirdEye (@3rdEyeDude) March 14, 2024
ಇದೇ ಸ್ಕೂಟರ್ ಮತ್ತು ಅದೇ ರೀತಿ ಕಾಣುವ ವ್ಯಕ್ತಿ ಅದೇ ಚಂದಾಪುರ ಜಂಕ್ಷನ್‌ನಲ್ಲಿ ನನ್ನ ಕಾರಿಗೆ ಡಿಕ್ಕಿ ಹೊಡೆದ್ದಾಗಿ ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಇಂತಹ ಘಟನೆ ನಿಲ್ಲದಿರುವುದು ಬೇಸರ ತಂದಿದೆ. ಎಸ್ಪಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ದಯವಿಟ್ಟು ಕ್ರಮ ಕೈಗೊಳ್ಳಿ,” ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ