ಬೆಂಗಳೂರು, ಸೆಪ್ಟೆಂಬರ್ 9: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಗುಂಡಿ ಗಂಡಾಂತರ ತಪ್ಪುತ್ತಿಲ್ಲ. ಡೈರಿ ಸರ್ಕಲ್ ರಸ್ತೆಯಲ್ಲಿ ಸ್ವಲ್ಪ ಯಾಮಾರಿದರೂ ಅಪಘಾತಗಳಾಗುತ್ತಿವೆ. ಕೋರಮಂಗಲ ಕಡೆಯಿಂದ ಡೈರಿ ಸರ್ಕಲ್‌ಗೆ ಬರುವ ರಸ್ತೆಯಲ್ಲಿ ಜಲಮಂಡಳಿ ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿಯಿಂದ ಶೇ 70ರಷ್ಟು ರಸ್ತೆ ಬಂದ್ ಆಗಿದ್ದು, ಇನ್ನುಳಿದ ಶೇ 30ರಷ್ಟು ರಸ್ತೆಯಲ್ಲಿ ಜನರು ಓಡಾಡುತ್ತಿದ್ದಾರೆ. ಇರುವ ಶೇ 30 ರಷ್ಟು ರಸ್ತೆಯಲ್ಲಿ ಕೂಡ ಯಾವುದು ಚರಂಡಿ ಯಾವುದು ರಸ್ತೆ ಎಂಬ ಅನುಮಾನ ಬರುವ ಹಾಗಿದ್ದು, ಸಾರ್ವಜನಿಕರ ಓಡಾಟಕ್ಕೆ ತೊಂದರೆ ಆಗುತ್ತಿದೆ.
ರಸ್ತೆಯುದ್ದಕ್ಕೂ ಮುರಿದು ಬಿದ್ದ ಸ್ಲಾಬ್ಗಳ ಮೇಲೆ ವಾಹನ ಸವಾರರ ಓಡಾಟದಿಂದಾಗಿ ಪ್ರತಿದಿನ ಒಂದಿಲ್ಲೊಂದು ಅಪಘಾತಗಳು ಸಂಭವಿಸುತ್ತಿವೆ. ಬಂದರೆ ನೀರು ನಿಂತು ತೊಂದರೆ ಆಗುತ್ತದೆ. ಅತ್ತ ಫುಟ್ ಪಾತ್ ಕೂಡ ಕೆಟ್ಟು ಹೋಗಿದೆ. ಮಾತೆತ್ತಿದರೆ ಸರ್ಕಾರ ಬ್ರ್ಯಾಂಡ್ ಬೆಂಗಳೂರು ಎಂದು ಹೇಳುತ್ತದೆ, ಇಲ್ಲಿ ನಿತ್ಯ ಭಯದಲ್ಲೇ ಸಂಚಾರ ಮಾಡುವಂತಾಗಿದೆ ಎಂದು ವಾಹನ ಸವಾರರು, ಸಾರ್ವಜನಿಕರು ಆಗ್ರಹಿಸಿದ್ದಾರೆ. ಆದಷ್ಟು ಬೇಗನೆ ಕಾಮಗಾರಿ ಮುಗಿಸಿ ಸಾರ್ವಜನಿಕರ ಓಡಾಟಕ್ಕೆ ಅನಕೂಲ ಮಾಡು ಕೊಡುವಂತೆ ಆಗ್ರಹಿಸುತ್ತಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಬೆಮಲ್ನಲ್ಲಿ ಸಿದ್ಧವಾಗ್ತಿದೆ ನಮ್ಮ ಮೆಟ್ರೋ ಚಾಲಕರಹಿತ ರೈಲು!
ಒಟ್ಟಿನಲ್ಲಿ ಒಂದೆಡೆ ಜಲಮಂಡಳಿ ಕಾಮಗಾರಿ ಮತ್ತೊಂದೆಡೆಗೆ ಪಾಲಿಕೆ ನಿರ್ಲಕ್ಷದಿಂದ ಸಾರ್ವಜನಿಕರು ಪರದಾಡುವಂತಾಗಿದ್ದು, ಇನ್ನಾದರೂ ಸಂಬಂಧಪಟ್ಟವರು ಎಚ್ಚೆತ್ತುಕೊಂಡು ಕಾಮಗಾರಿ ಮುಗಿಸಿ, ಅತ್ತ ಕಿತ್ತು ಹೋದ ಸ್ಲ್ಯಾಬ್ ಅಳವಡಿಸೋ ಮೂಲಕ ಸಾರ್ವಜನಿಕರ ಓಡಾಟಕ್ಕೆ ಅನಕೂಲ ಮಾಡಿಕೊಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ